ನೈಜ ಬುಗಾಟಿ ವೆರೋನ್ ಸೂಪರ್ ಕಾರನ್ನೇ ಮೀರಿಸಿದ ನಕಲಿ ಕಾರು!
ಕೋಟಿ ರುಪಾಯಿಗಟ್ಟಲೆ ಖರ್ಚು ಮಾಡುವಷ್ಟು ತಾಕತ್ತಿಲ್ಲವಾದ್ದಲ್ಲಿ ನಿಮ್ಮ ಸೂಪರ್ ಕಾರು ಕನಸನ್ನು ನನಸಾಗಿಸಲು ಏನು ಮಾಡುವೀರಾ ? ವಿದೇಶದಲ್ಲಿರುವಂತೆಯೇ ಭಾರತದ ವಾಹನ ಪ್ರೇಮಿಗಳು ಅನೇಕ ಮಾದರಿಗಳಿಗೆ ಹೊಸ ರೂಪವನ್ನು ಕಲ್ಪಿಸಿಕೊಟ್ಟಿದ್ದಾರೆ.
ಇಲ್ಲಿ ಸಂತ್ ಗುರ್ಮಿತ್ ರಾಮ್ ರಮೀಂ ಸಿಂಗ್ ಎಂಬ ವಾಹನ ಪ್ರೇಮಿಯೂ ಹಳೆಯ ಹೋಂಡಾ ಅಕಾರ್ಡ್ ಕಾರಿಗೆ ಹೊಸ ಟಚ್ ನೀಡಿದ್ದಾರೆ. ಇದು ನಿಜವಾಗ್ಲೂ ನೈಜ ಬುಗಾಟಿ ವೆರೋನ್ ಕಾರನ್ನೇ ಮೀರಿಸುವಂತಿದೆ.

ಕಲಾವಿದ ಕೂಡಾ ಆಗಿರುವ ಗರ್ಮಿತ್ ತಾವೇ ರಚನೆ, ನಿರ್ದೇಶನ ಮತ್ತು ಹಾಡು ಹಾಡಿರುವ 'ಮೆಸೆಂಜರ್ ಆಫ್ ಗಾಡ್' ಚಿತ್ರದಲ್ಲಿ ತಮ್ಮ ನಟನಾ ಕೌಶಲ್ಯವನ್ನು ಮೆರೆದಿದ್ದರು.

ಸಮಾಜ ಸುಧಾರಕ, ಬೋಧಕ, ಆಧ್ಯಾತ್ಮಿಕ ನಾಯಕ ಮತ್ತು ಕೊನೆಯಲ್ಲಿ ನಟನಾಗಿಯೂ ಸಾಧನೆ ಮೆರೆದಿರುವ 49ರ ಹರೆಯದ ಗುರ್ಮಿತ್ 1967ರಲ್ಲಿ ಜನನ ತಾಳಿದ್ದರು.

ಹರಿಯಾಣದ ಸಿರ್ಸಾ ಕೇಂದ್ರಿಕರಿಸಿ ಕಾರ್ಯ ನಿರ್ವಹಿಸುತ್ತಿರುವ ದೇರಾ ಸಚ್ಚಾ ಸೌದಾ ಎಂಬ ಲಾಭರಹಿತ ಆಧ್ಯಾತ್ಮಿಕ ಸಂಸ್ಥೆಯ ನಾಯಕರೂ ಆಗಿರುವ ಅವರು ನಿರಂತರ ಸಮಾಜ ಸೇವೆಯಲ್ಲಿ ಕಾರ್ಯನಿರತರಾಗಿದ್ದಾರೆ.

ವಾಹನಗಳ ಮೇಲೆಯೂ ತಮ್ಮ ಪ್ರೇಮವನ್ನು ಮೆರೆದಿರುವ ಸಂತ್ ಗುರ್ಮಿತ್ ರಾಮ್ ರಹೀಂ ಸಿಂಗ್, ಹಳೆಯ ಹೋಂಡಾ ಅಕಾರ್ಡ್ ಕಾರಿಗೆ ಹೊಸ ಜೀವ ತುಂಬವ ಮೂಲಕ ಬುಗಾಟಿ ವೆರೋನ್ ಸೂಪರ್ ಕಾರಿನ ಸಾಮತ್ಯೆಯ ರೂಪದಲ್ಲಿ ಪರಿವರ್ತಿಸಿದ್ದಾರೆ.

ಕಾರಿನ ಹೊರಮೈಯಲ್ಲಿ ಶೀಟ್ ಮೆಟಲ್ ಬಳಕೆ ಮಾಡುತ್ತಾ ಪರಿವರ್ತಿಸಲಾಗಿದೆ. ಹಾಗೆಯೇ ಸೂಪರ್ ಕಾರಿನ ಶೈಲಿಯನ್ನು ಕಾಪಾಡಿಕೊಳ್ಳಲಾಗಿದೆ.

ಜೋಡಿ ಬಣ್ಣವು ಇದರ ಪ್ರಮುಖ ಆಕರ್ಷಣೆಯಾಗಿದ್ದು, ಹಸಿರು ಜೊತೆಗೆ ಹಳದಿ ಬಣ್ಣಗಳ ಮಿಶ್ರಣವನ್ನು ನೀವಿಲ್ಲಿ ಕಾಣಬಹುದಾಗಿದೆ.

ಕಾರಿನೊಳಗೂ ಅಂದವಾದ ವಿನ್ಯಾಸ ನೀತಿಯನ್ನು ಅನುಸರಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಪರಿವರ್ತಿತ ಕಾರು ಆಗಿರುವ ಹೊರತಾಗಿಯೂ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಜೊತೆ ಎಬಿಎಸ್ ಜೊತೆ ಇಬಿಡಿ ಮುಂತಾದ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಇನ್ನುಳಿದಂತೆ ರಿಯರ್ ವ್ಯೂ ಮಿರರ್, ಲೆಥರ್ ಸೀಟು ಹೋದಿಕೆ, ಇಂಟೇಗ್ರೇಟಡ್ ಆಡಿಯೋ ಸಿಸ್ಟಂ ಜೊತೆ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಗಳನ್ನು ನೋಡಬಹುದಾಗಿದೆ.

ಕಾರಿನ ಹೊರಮೈಯಲ್ಲಿ ಔಟ್ ಸೈಡ್ ರಿಯರ್ ವ್ಯೂ ಮಿರರ್ ಸೌಲಭ್ಯಗಳಇರಲಿದೆ. ಹಾಗೆಯೇ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಬಹು ಕ್ರಿಯಾತ್ಮಕ ಅಲಾಯ್ ವೀಲ್ ಜೊತೆ ಕಡಿಮೆ ಎತ್ತರದ ಚಕ್ರಗಳನ್ನು ಜೋಡಣೆ ಮಾಡಲಾಗಿದೆ.

ಅಂದ ಹಾಗೆ ಪ್ರಸ್ತುತ ಕಾರು ಶಕ್ತಿಶಾಲಿ 3.5 ಲೀಟರ್ ಪೆಟ್ರೋಲ್ ವಿ6 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆದಿದೆ.

ಇವೆಲ್ಲದರ ಹೊರತಾಗಿ ಕಾರಿನ ಮುಂಭಾಗದಲ್ಲಿ ಹೃದಯ ಸ್ನೇಹ ಸೂಚಕವಾದ ಫ್ರಂಟ್ ಗ್ರಿಲ್ ಪ್ರಮುಖ ಆಕರ್ಷಣೆಯನ್ನು ಪಡೆದಿದೆ.


Click it and Unblock the Notifications








