ಈ ಬಸ್ ಡ್ರೈವರ್ ಎರಡು ಸೂಪರ್ ಕಾರುಗಳ ಒಡೆಯ

Written By:

ನಮ್ಮ ದೇಶದಲ್ಲಿ ಬಹುತೇಕ ಮಂದಿ ಜೀವನೋಪಯಕ್ಕೆ ಅನ್ಯ ದಾರಿಯಿಲ್ಲದೆ ಬಸ್ ಡ್ರೈವರ್ ವೃತ್ತಿಯನ್ನು ಸ್ವೀಕರಿಸುತ್ತಾರೆ. ಮಧ್ಯಮ ವರ್ಗದ ಕುಟುಂಬಕ್ಕೆ ವಿಭಾಗಕ್ಕೆ ಸೇರಿದ ಬಸ್ ಡ್ರೈವರ್ ಗಳು ದಿನವಿಡೀ ನಿಯಮಿತ ಸಂಬಳಕ್ಕೆ ಮಾತ್ರ ದುಡಿಯಬೇಕಾಗುತ್ತದೆ.

ಬಸ್ ಚಾಲನೆ ಮಾಡುವುದು ಅತ್ಯಂತ ಕಠಿಣ ಮತ್ತು ತ್ರಾಸದಾಯಕ ಕೆಲಸವಾಗಿರುವುದರಿಂದ ಅನೇಕ ಮಂದಿಗೆ ಕ್ರಮೇಣ ಆರೋಗ್ಯ ಸಮಸ್ಯೆಯೂ ಎದುರಾಗುತ್ತಿದೆ. ಇವೆಲ್ಲ ಭಾರತೀಯ ಚಾಲಕರ ದಯನೀಯ ಪರಿಸ್ಥಿತಿಯಾದರೆ ಅತ್ತ ಚೀನಾದಲ್ಲಿ ಸೂಪರ್ ಕಾರುಗಳನ್ನು ಓಡಿಸಿ ಐಷಾರಾಮಿ ಜೀವನ ನಡೆಸುತ್ತಿರುವ ಬಸ್ ಚಾಲಕನ ಬಗ್ಗೆ ವಿವರವನ್ನು ಕೊಡಲಿದ್ದೇವೆ.

ಈ ಬಸ್ ಡ್ರೈವರ್ ಎರಡು ಸೂಪರ್ ಕಾರುಗಳ ಒಡೆಯ

ಉತ್ತರ ಚೀನಾ ತೈಯೂವನ್ ಪ್ರಾಂತ್ಯದಲ್ಲಿ ಬಸ್ ಚಾಲಕನೋರ್ವರು ದೈನಂದಿನ ಕೆಲಸಕ್ಕಾಗಿ ಲಂಬೋರ್ಗಿನಿ ಸೂಪರ್ ಕಾರಿನಲ್ಲಿ ತೆರಳುತ್ತಿದ್ದಾರೆ.

ಈ ಬಸ್ ಡ್ರೈವರ್ ಎರಡು ಸೂಪರ್ ಕಾರುಗಳ ಒಡೆಯ

ಈತ ಕೇವಲ ಲಂಬೋರ್ಗಿನಿ ಗಲರ್ಡೊ ಸೂಪರ್ ಕಾರು ಮಾತ್ರವಲ್ಲದೆ ಅತಿ ದುಬಾರಿ ಆಡಿ ಆರ್8 ಸೂಪರ್ ಕಾರನ್ನು ಇಟ್ಟುಕೊಂಡಿದ್ದಾರೆ.

ಈ ಬಸ್ ಡ್ರೈವರ್ ಎರಡು ಸೂಪರ್ ಕಾರುಗಳ ಒಡೆಯ

ವಾಸ್ತವ ಸಂಗತಿಯೆಂದರೆ ಈತನಿಗೆ ಕೆಲಸದ ಅಗತ್ಯವೇ ಇಲ್ಲ. ಹಾಗಿರುವಾಗ ಯಾತಕ್ಕಾಗಿ ಈತ ಬಸ್ ಡ್ರೈವರ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಸ್ಥಳೀಯರಲ್ಲಿ ಗೊಂದಲಕ್ಕೆಕಾರಣವಾಗಿದೆ.

ಈ ಬಸ್ ಡ್ರೈವರ್ ಎರಡು ಸೂಪರ್ ಕಾರುಗಳ ಒಡೆಯ

ಏತನ್ಮಧ್ಯೆ ತಮ್ಮನ್ನು ತಾವು ಸಾಮಾನ್ಯ ನಾಗರಿಕ ಎಂದು ಬಿಂಬಿಸಲು ವ್ಯಕ್ತಿ ಇಷ್ಟಪಡುತ್ತಾರೆ. ಅಲ್ಲದೆ ಎಲ್ಲಿಂದ ಇಷ್ಟೊಂದು ದುಡ್ಡು ಬಂತೆಂಬುದನ್ನು ಬಯಲುಪಡಿಸಲು ನಿರಾಕರಿಸಿದ್ದಾರೆ.

ಈ ಬಸ್ ಡ್ರೈವರ್ ಎರಡು ಸೂಪರ್ ಕಾರುಗಳ ಒಡೆಯ

ಇನ್ನು ಕೆಲವು ಮಂದಿ ಈತನಿಗೆ ಕೆಲಸದ ಅಗತ್ಯವಿಲ್ಲದಿರುವುದಿಂದ ಉದ್ಯೋಗ ತೊರೆಯಲು ಬಯಸಿದ್ದು, ಇದು ಇತರರಿಗೆ ನೆರವಾಗಲಿದೆ ಎಂದಿದ್ದಾರೆ.

ಈ ಬಸ್ ಡ್ರೈವರ್ ಎರಡು ಸೂಪರ್ ಕಾರುಗಳ ಒಡೆಯ

ಏನೇ ಆದರೂ ಸೂಪರ್ ಕಾರುಗಳನ್ನು ತೊರೆದು ಬಸ್ ಓಡಿಸಲು ಬಯಸುವ ಈತನ ಸಜ್ಜನಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Bonkers Bus Driver Drives Lamborghini To Work, Also Owns An Audi
Story first published: Saturday, May 21, 2016, 11:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark