ವಡೋದರಾದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ರೈಲ್ವೆ ವಿಶ್ವವಿದ್ಯಾಲಯ

ಭಾರತೀಯ ರೈಲ್ವೆ ಇಲಾಖೆಯನ್ನು ಮತ್ತಷ್ಟು ಸುಧಾರಣೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಒಂದನ್ನು ಪ್ರಕಟಿಸಿದ್ದು, ವಡೋದರಾದಲ್ಲಿ ದೇಶದ ಮೊದಲ ರೈಲ್ವೆ ವಿಶ್ವವಿದ್ಯಾಲಯವನ್ನು ಆರಂಭಿಸಲು ಹಸಿರು ನಿಶಾನೆ ತೋರಿದೆ.

By Praveen

ದೇಶದ ಎಲ್ಲ ವರ್ಗಗಳನ್ನು ತನ್ನತ್ತ ಸೆಳೆದಿರುವ ಭಾರತೀಯ ರೈಲ್ವೆಗೆ ಇದೊಳ್ಳೆ ಸುದ್ದಿ ಎನ್ನಬಹುದು. ಇದಕ್ಕೆ ಕಾರಣ ನ್ಯಾಷನಲ್ ರೈಲ್ ಅಂಡ್ ಟ್ರಾನ್ಸ್ ಪೋರ್ಟ್ ಯೂನಿವರ್ಸಿಟಿ (ಎನ್ ಆರ್ ಟಿಯು) ಆರಂಭಿಸಲು ಕೇಂದ್ರ ಸಂಪುಟದಿಂದ ಒಪ್ಪಿಗೆ ಸಿಕ್ಕಿದೆ.

ವಡೋದರಾದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ರೈಲ್ವೆ ವಿಶ್ವವಿದ್ಯಾಲಯ

ಈ ಬಗ್ಗೆ ಸಚಿವ ಪಿಯೂಷ್ ಗೋಯಲ್ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ಫಲವಾದ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾದ ಅಡಿಯಲ್ಲಿ ಗುಜರಾತ್ ನ ವಡೋದರಾದಲ್ಲಿ ರಾಷ್ತ್ರೀಯ ರೈಲು ಹಾಗೂ ಸಂಚಾರ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಲಾಗುತ್ತಿದೆ ಎಂದಿದ್ದಾರೆ.

Recommended Video

Driverless Auto Rickshaw On Indian Highway
ವಡೋದರಾದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ರೈಲ್ವೆ ವಿಶ್ವವಿದ್ಯಾಲಯ

ಪ್ರಧಾನಿ ನರೇಂದ್ರ ಮೋದಿ ಕೂಡಾ ರೈಲ್ವೆ ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ ಅಭಿವೃದ್ಧಿಯಲ್ಲಿ ಆಸಕ್ತಿ ವಹಿಸಿದ್ದು, ಮೂರು ವರ್ಷದಿಂದ ಬಾಕಿಯಿದ್ದ ಮಹತ್ವದ ಯೋಜನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿದ್ದಾರೆ.

ವಡೋದರಾದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ರೈಲ್ವೆ ವಿಶ್ವವಿದ್ಯಾಲಯ

ಹೀಗಾಗಿ ರೈಲ್ವೆ ವಿಶ್ವವಿದ್ಯಾಲಯದ ಕನಸು ಇನ್ನು ಕೆಲವೇ ದಿನಗಳಲ್ಲಿ ನನಸಾಗಲಿದ್ದು, ಮುಂದಿನ ವರ್ಷದ ಜೂನ್ ನಿಂದ ಮೊದಲನೇ ಬ್ಯಾಚ್ ನ ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ ಎಂಬ ಮಾಹಿತಿಯನ್ನು ಸಚಿವ ಪಿಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.

ವಡೋದರಾದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ರೈಲ್ವೆ ವಿಶ್ವವಿದ್ಯಾಲಯ

ಇನ್ನು ಮಹತ್ವದ ಯೋಜನೆ ಬಗ್ಗೆ ಈ ಹಿಂದೆಯೇ ವಡೋದರಾ ವಿಮಾನ ನಿಲ್ದಾಣದ ನೂತನ ಟರ್ಮಿನಲ್‌ ಉದ್ಘಾಟಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು 'ಜಗತ್ತಿನಲ್ಲಿ ಅನೇಕ ಆವಿಷ್ಕಾರಗಳು ನಡೆದಿವೆ. ಆದರೆ ಭಾರತೀಯ ರೈಲ್ವೆ ಇಲಾಖೆ ಇನ್ನೂ ಹಳತಾಗಿಯೇ ಇದೆ. ಇದರಿಂದ ರೈಲ್ವೆ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಿದೆ' ಎಂದಿದ್ದರು.

ತಪ್ಪದೇ ಓದಿ-ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

ವಡೋದರಾದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ರೈಲ್ವೆ ವಿಶ್ವವಿದ್ಯಾಲಯ

ಹೊಸ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶ

ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆ ಸಾಕಷ್ಟ ಮಹತ್ವದ ಪಡೆದುಕೊಂಡಿದೆ. ಹೀಗಾಗಿ ಉಪಗ್ರಹ ಆಧಾರಿತ ಟ್ರ್ಯಾಕಿಂಗ್, ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಮತ್ತುಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿ ಉತ್ಪಾದಕತೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಕಲಿಸಲಾಗುತ್ತದೆ ಎಂಬ ಮಾಹಿತಿ ದೊರೆತಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on train ರೈಲು
English summary
Read in Kannada about Cabinet approves setting up of India's first rail university in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X