ಕಾರು ಪಾಠ: ಕಾರು ದೇಹ ಶೈಲಿಯಲ್ಲಿ ವಿಧಗಳೆಷ್ಟು?

Written By:

ಮಾರುಕಟ್ಟೆಗಳಲ್ಲಿ ಹಲವು ವಿಧದ ಚಿತ್ತಾಕರ್ಷಕ ಕಾರುಗಳು ನೋಡಸಿಗುತ್ತದೆ. ಈ ಬಗ್ಗೆ ಯಾವತ್ತಾದರೂ ಯೋಚನೆ ಮಾಡಿ ನೋಡಿರುವೀರಾ? ನಾವು ಪದೇ ಪದೇ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಎಂಬಿತ್ಯಾದಿ ಪದಗಳನ್ನು ಬಳಕೆ ಮಾಡುತ್ತಲೇ ಇದ್ದೇವೆ.

ಇವನ್ನೂ ಓದಿ: ಟಾಪ್ 10 ಕನ್ವರ್ಟಿಬಲ್ ಕಾರುಗಳು

ಅಂತರ್ಜಾಲ ಬಳಕೆದಾರರಾಗಿರುವ ತಮಗೆ ಈ ಬಗ್ಗೆ ಸ್ಪಷ್ಟ ಜ್ಞಾನವಿದೆಯೇ? ಇದೇ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಇಂದಿನ ಈ ಲೇಖನದಲ್ಲಿ ಕಾರು ಬೇಸಿಕ್ ಬಗೆಗಿನ ಪಾಠ ಹೇಳಿಕೊಡುವ ಪ್ರಯತ್ನ ಮಾಡಲಿದ್ದೇವೆ. ಕಾರಿನ ದೇಹ ಶೈಲಿಯ ಆಧಾರದಲ್ಲಿ ಅವುಗಳನ್ನು ವಿಂಗಡನೆ ಮಾಡಲಾಗಿರುತ್ತದೆ. ಇನ್ನು ಇದು ನಿರ್ದಿಷ್ಟ ರಾಷ್ಟ್ರಗಳಲ್ಲಿ ಸರಕಾರ ತೆರೆಗೆ ಹೇರುವ ನಿಟ್ಟಿನಲ್ಲಿ ಮಹತ್ವದೆನಿಸಿಕೊಳ್ಳುತ್ತದೆ.

ಕಾರು ದೇಹ ಶೈಲಿಯಲ್ಲಿ ವಿಧಗಳೆಷ್ಟು?

ಹಾಗೊಂದು ವೇಳೆ ಭವಿಷ್ಯದಲ್ಲಿ ನೀವು ಕಾರು ಖರೀದಿಗೆ ತೆರಳುವಾಗ ಕಾರನ್ನು ನೋಡಿದಾಕ್ಷಣ ಅದು ಯಾವ ವಿಭಾಗಕ್ಕೆ ಸೇರಿದ ಕಾರು ಎಂಬುದನ್ನು ಗುರುತಿಸಲು ಸಾಧ್ಯವಾಗಲಿದೆ. ಇದು ಕಾರು ಮೇಲಿನ ನಿಮ್ಮ ನೋಟವನ್ನೇ ಬದಲಾಯಿಸಲಿದೆ ಎಂಬುದರಲ್ಲಿ ಸಂದೇಹವೇ ಬೇಡ.

1. ಸೆಡಾನ್

1. ಸೆಡಾನ್

ಸಲೂನ್ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಸೆಡಾನ್, ಎ, ಬಿ, ಸಿಗಳೆಂಬ ಮೂರು ಸಂರಚನೆಗಳನ್ನು (configuration) ಪಡೆದಿರುತ್ತವೆ. ಅಂದರೆ ಇದು ಎಂಜಿನ್, ಪ್ರಯಾಣಿಕ ಹಾಗೂ ಕಾರ್ಗೊ (ಬೂಟ್) ಜಾಗವನ್ನು ಹೊಂದಿರುತ್ತದೆ. ಸೆಡಾನ್ ಪ್ರಯಾಣಿಕ ಕಾರು ಎರಡು ಸಾಲಿನ ಆಸನ ವ್ಯವಸ್ಥೆಯನ್ನು ಹೊಂದಿರುತ್ತದೆ. ಭಾರತದಲ್ಲಿ ಸೆಡಾನ್ ಕಾರುಗಳು ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

2. ಹ್ಯಾಚ್‌ಬ್ಯಾಕ್

2. ಹ್ಯಾಚ್‌ಬ್ಯಾಕ್

ಎರಡು ಅಥವಾ ಮೂರು ಬಾಕ್ಸ್ ವಿನ್ಯಾಸ ಹೊಂದಿರುವ ಹ್ಯಾಚ್‌ಬ್ಯಾಕ್ ಕಾರುಗಳ ಹಿಂದುಗಡೆ ಮೇಲಕ್ಕೆತ್ತಬಹುದಾದ ಡೋರ್ ಡಿಸೈನ್ ಪಡೆದಿರುತ್ತದೆ. ಇನ್ನು ಒಳಗಡೆ ಮಡಚಬಹುದಾದ ಹಿಂಬದಿ ಸೀಟು ಹೊಂದಿರುತ್ತದೆ. ಸೆಡಾನ್ ಕಾರಿಗೆ ಹೋಲಿಸಿದಾಗ ಹ್ಯಾಚ್‌ಬ್ಯಾಕ್‌ನಲ್ಲಿ ಬೂಟ್ ಸ್ಪೇಸ್‌ಗೆ ಪ್ರತ್ಯೇಕ ಜಾಗ ಇರುವುದಿಲ್ಲ. ಗ್ರಾಹಕರ ಕೈಗೆಟಕುವ ದರಗಳಲ್ಲಿ ಲಭ್ಯವಾಗಿರುವುದರಿಂದ ಭಾರತಲ್ಲೂ ಹ್ಯಾಚ್‌ಬ್ಯಾಕ್ ಕಾರುಗಳು ಅತಿ ಹೆಚ್ಚು ಜನಪ್ರಿಯತೆಯನ್ನು ಕಾಯ್ದುಕೊಂಡಿದೆ.

3. ಕ್ರೀಡಾ ಬಳಕೆಯ ವಾಹನ

3. ಕ್ರೀಡಾ ಬಳಕೆಯ ವಾಹನ

ಹೆಸರಲ್ಲೇ ಸೂಚಿಸಿರುವಂತೆಯೇ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಅಥವಾ ಸಬರ್ಬನ್ ಯುಟಿಲಿಟಿ ವಾಹನಗಳು ಆಫ್ ರೋಡ್ ತಂತ್ರಗಾರಿಕೆಯನ್ನು ಹೊಂದಿರುತ್ತದೆ. ಇದು ಟು ವೀಲ್ ಜೊತೆಗೆ ಫೋರ್ ವೀಲ್ ಚಾಲನಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಎಸ್‌ಯುವಿ ಕಾರುಗಳು ಹೆಚ್ಚಿನ ಗ್ರೌಂಡ್ ಕ್ಲಿಯರನ್ಸ್ ಹೊಂದಿರುತ್ತಿದ್ದು, ಪ್ರಯಾಣಿಕರಿಗೆ ಅದ್ಭುತ ಚಾಲನಾ ಅನುಭವ ನೀಡುತ್ತದೆ. ಇನ್ನು ಸೆಡಾನ್, ಹ್ಯಾಚ್‌ಬ್ಯಾಕ್ ಬಳಿಕ ಎಸ್‌ಯುವಿ ಕಾರುಗಳಿಗೆ ಭಾರತದಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ. ಸದ್ಯ ಎಸ್‌ಯುವಿಯಲ್ಲೇ ಕಾಂಪಾಕ್ಟ್ ಎಸ್‌ಯುವಿಗಳಂತಹ ಉಪ ವಿಭಾಗಗಳನ್ನು ನೋಡಬಹುದಾಗಿದೆ.

4. ಬಹು ಬಳಕೆಯ ವಾಹನ

4. ಬಹು ಬಳಕೆಯ ವಾಹನ

ಪೀಪಲ್ ಕ್ಯಾರಿಯರ್, ಪೀಪಲ್ ಮೂವರ್, ಮನಿವ್ಯಾನ್ ಹಾಗೂ ಮಲ್ಟಿ ಯುಟಿಲಿಟಿ ವಾಹನ ಎಂಬುದಾಗಿಯೂ ಕರೆಯಲ್ಪಡುವ ಎಂಪಿವಿ ಕಾರುಗಳ ಒಳಗಡೆ ವಿಶಾಲವಾದ ಸ್ಥಳಾವಕಾಶವಿದ್ದು, ಏಳು ಅಥವಾ ಅದಕ್ಕಿಂತಲೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಇದು ಒಂದು ಅಥವಾ ಎರಡು ಬಾಕ್ಸ್ ವಿನ್ಯಾಸವನ್ನು ಹೊಂದಿದ್ದು, ಸೆಡಾನ್, ಹ್ಯಾಚ್‌ಬ್ಯಾಕ್ ಹಾಗೂ ಸ್ಟೇಷನ್ ವ್ಯಾಗನ್‌ಕ್ಕಿಂತಲೂ ದೊಡ್ಡದಾಗಿರುತ್ತದೆ.

5. ಎಸ್ಟೇಟ್

5. ಎಸ್ಟೇಟ್

ಸ್ಟೇಷನ್ ವ್ಯಾಗನ್ ಎಂದು ಅರಿಯಲ್ಪಡುವ ಎಸ್ಟೇಟ್ ಕಾರುಗಳು ಸುಲಭವಾಗಿ ಸೆಡಾನ್ ಅಥವಾ ಸಲೂನ್ ಛಾವಣಿಯನ್ನು ಇನ್ನಷ್ಟು ಹಿಂದಕ್ಕೆ ವಿಸೃತಗೊಳಿಸಲಾಗಿದೆ ಎಂದು ವ್ಯಾಖ್ಯಾನಿಸಬಹುದು. ಇದರಲ್ಲಿ ಹೆಚ್ಚುವರಿ ಪ್ರಯಾಣಿಕ ಜಾಗ ಅಥವಾ ಸೀಟನ್ನು ಮಡಚುವ ಮೂಲಕ ಬೂಟ್ ಸ್ಪೇಸ್ ಲಭ್ಯವಾಗಲಿದೆ. ಭಾರತದಲ್ಲಿ ಎಸ್ಟೇಟ್ ಕಾರುಗಳನ್ನು ಹೆಚ್ಚು ಜನಪ್ರಿಯತೆ ಕಾಯ್ದುಕೊಂಡಿಲ್ಲ. ಸ್ಕೋಡಾ ಒಕ್ಟಾವಿಯಾ ಕಾಂಬಿ ಇದಕ್ಕೊಂದು ಉದಾಹರಣೆಯಾಗಿದೆ.

6. ಕ್ರಾಸೋವರ್

6. ಕ್ರಾಸೋವರ್

ಕ್ರಾಸೋವರ್ ಭಾರತದಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಕಾರು ಸೆಗ್ಮೆಂಟ್ ಆಗಿದೆ. ಇದು ಪ್ರಯಾಣಿಕ ಹ್ಯಾಚ್‌ಬ್ಯಾಕ್, ಸ್ಟೇಷನ್ ವ್ಯಾಗನ್ ಮತ್ತು ಕ್ರೀಡಾ ಬಳಕೆಯ ವಾಹನಗಳ ಸಂಯೋಜನೆಯಾಗಿದೆ. ಇದು ಹೆಚ್ಚಿನ ಗ್ರೌಂಡ್ ಕ್ಲಿಯರನ್ಸ್ ಹಾಗೂ ಆಲ್ ವೀಲ್ ಡ್ರೈವ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಲ್ಲದೆ ಕಡಿಮೆ ಆಫ್ ರೋಡ್ ಶೈಲಿಯಲ್ಲಿ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

7. ಕೂಪೆ

7. ಕೂಪೆ

ಟು ಡೋರ್ ದೇಹ ಶೈಲಿಯ ಕೂಪೆ ಕಾರುಗಳು ಶಾಶ್ವತವಾಗಿ ಲಗತ್ತಿಸಲಾದ ಮೇಲ್ಛಾವಣಿ ಪಡೆದುಕೊಂಡಿರುತ್ತದೆ. ಇದು ಸಲೂನ್ ಮಾದರಿಗಳ ಕ್ರೀಡಾ ಆವೃತ್ತಿಯಾಗಿದ್ದು, ಐಷಾರಾಮಿ ವಾಹನ ತಯಾರಕ ಸಂಸ್ಥೆಗಳು ಈ ವಿನ್ಯಾಸ ತಂತ್ರಗಾರಿಕೆಯನ್ನು ಹೆಚ್ಚಾಗಿ ಅನುಸರಿಸುತ್ತದೆ. ಫ್ರಾನ್ಸ್ ಕೂಪರ್ ಎಂಬ ಪದದಿಂದ ಆಗಮನವಾಗಿರುವ ಕೂಪೆ ಎಂಬುದರ ಅರ್ಥ ಕತ್ತರಿಸು ಎಂಬುದಾಗಿದೆ.

8. ಕನ್ವರ್ಟಿಬಲ್

8. ಕನ್ವರ್ಟಿಬಲ್

ಕ್ಯಾಬ್ರಿಯೊಲೆಟ್, ಕ್ಯಾಬ್ರಿಯೊ ಹಾಗೂ ರೋಡ್‌ಸ್ಟರ್ ಎಂಬ ಹೆಸರಿನಿಂದಲೂ ಅರಿಯಲ್ಪಡುವ ಕನ್ವರ್ಟಿಬಲ್ ಕಾರನ್ನು ಸುಲಭವಾಗಿ ಓಪನ್ ಟಾಪ್ ಎಂದು ಹೆಸರಿಸಬಹುದಾಗಿದೆ. ಇದು ಮಡಚಬಹುದಾದ ಸಾಫ್ಟ್ ರೂಫ್ ತಂತ್ರಗಾರಿಕೆಯನ್ನು ಹೊಂದಿರುತ್ತದೆ.

10. ಪಿಕಪ್

10. ಪಿಕಪ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಪಿಕಪ್ ಹಗುರ ವಾಹನವಾಗಿದ್ದು, ದೈನಂದಿನ ಬಳಕೆಗಾಗಿ ಬಳಕೆ ಮಾಡಲಾಗುತ್ತದೆ. ಇದರ ಹಿಂಬದಿಯಲ್ಲಿ ಓಪನ್ ಟಾಪ್ ಹೊಂದಿರುತ್ತಿದ್ದು ಸಾಮಾಗ್ರಿಗಳನ್ನು ಸುಲಭವಾಗಿ ಸಾಗಿಸಬಹುದಾಗಿದೆ. ಇದನ್ನು ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ವೈಯಕ್ತಿಕ ಅಗತ್ಯಗಳಿಗಾಗಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

 

Read in English: Car Body Styles Explained
English summary
Ever come across the terms ‘hatchback' or ‘sedan' and wondered what they mean? Well, those actually are descriptions of body styles of a car, or the type or form of vehicle design. In this short guide, we explain the different kinds of car designs out there.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more