ಎರಡು ಬೃಹತ್ ಟ್ರಕ್ ಗಳ ನಡುವೆ ಕಾರು ಅಪ್ಪಚ್ಚಿ; ಐವರ ದುರ್ಮರಣ

Written By:

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಅತ್ಯಂತ ಹೃದಯ ವಿದ್ರಾವಕ ಅಪಘಾತ ಪ್ರಸಂಗವೊಂದು ನಡೆದಿದ್ದು, ಮುಖಾಮುಖಿಯಾಗಿ ಬರುತ್ತಿದ್ದ ಎರಡು ಲಾರಿಗಳು ಕಾರೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿರುವ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಸಿಸಿಟಿವಿಯಲ್ಲಿ ಈ ಭೀಕರ ದೃಶ್ಯಗಳು ಸರೆಯಾಗಿದ್ದು, ಲಾರಿ ಅಪ್ಪಳಿಸಿದ ರಭಸಕ್ಕೆ ಕಾರು ಅಪ್ಪಚ್ಚಿಯಾಗಿದೆ. ಬಳಿಕ ತನಿಖೆ ಆರಂಭಿಸಿರುವ ಪೊಲೀಸರು ಮೃತರನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ಎರಡು ಬೃಹತ್ ಟ್ರಕ್ ಗಳ ನಡುವೆ ಕಾರು ಅಪ್ಪಚಿ; ಐವರ ದುರ್ಮರಣ

ಉನ್ನತ ಶಿಕ್ಷಣಕ್ಕಾಗಿ ಮಕ್ಕಳನ್ನು ಕಾಲೇಜಿಗೆ ಸೇರಿಸಲು ತೆರಳುತ್ತಿದ್ದ ಕಾರು ಸರ್ಕಲ್ ತಲುಪುತ್ತಿದ್ದಂತೆಯೇ ಬಲಕ್ಕೆ ತಿರುಗಲು ಯತ್ನಸಿತ್ತು.

ಎರಡು ಬೃಹತ್ ಟ್ರಕ್ ಗಳ ನಡುವೆ ಕಾರು ಅಪ್ಪಚಿ; ಐವರ ದುರ್ಮರಣ

ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಟ್ರಕ್ ಬಲಕ್ಕೆ ತಿರುಗಲು ಯತ್ನಿಸುತ್ತಿದ್ದ ಕಾರನ್ನು ಏಕಾಏಕಿ ತನ್ನ ರಭಸಕ್ಕೆ ಸೆಳೆದುಕೊಂಡಿತ್ತು.

ಎರಡು ಬೃಹತ್ ಟ್ರಕ್ ಗಳ ನಡುವೆ ಕಾರು ಅಪ್ಪಚಿ; ಐವರ ದುರ್ಮರಣ

ಇನ್ನೇನು ಕೆಲವೇ ಕ್ಷಣಗಳಲ್ಲಿ ಮುಂಭಾಗದಿಂದ ಬಂದ ಟ್ರಕ್ ಲಾರಿಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿತ್ತು.

ಎರಡು ಬೃಹತ್ ಟ್ರಕ್ ಗಳ ನಡುವೆ ಕಾರು ಅಪ್ಪಚಿ; ಐವರ ದುರ್ಮರಣ

ಈ ವೇಳೆಯಲ್ಲಿ ಮಧ್ಯದಲ್ಲಿ ಸಿಕ್ಕಿಯಾಗಿಕೊಂಡ ಕಾರು ಲಾರಿಗಳೆಡೆಯಲ್ಲಿ ಸಿಲುಕಿ ಅಪ್ಪಚ್ಚಿಯಾಗಿತ್ತು.

ಎರಡು ಬೃಹತ್ ಟ್ರಕ್ ಗಳ ನಡುವೆ ಕಾರು ಅಪ್ಪಚಿ; ಐವರ ದುರ್ಮರಣ

ಪ್ರತ್ಯಕ್ಷದರ್ಶಿಗಳ ಪ್ರಕಾರ ಶವಗಳು ಗುರುತು ಸಿಗದಷ್ಟು ವಿರೂಪಗೊಂಡಿದ್ದವು. ಸ್ಥಳದಲ್ಲಿ ರಕ್ತದ ಕೋಡಿ ಮಡು ಗಟ್ಟಿ ನಿಂತಿತ್ತು.

ಎರಡು ಬೃಹತ್ ಟ್ರಕ್ ಗಳ ನಡುವೆ ಕಾರು ಅಪ್ಪಚಿ; ಐವರ ದುರ್ಮರಣ

ಮೃತಪಟ್ಟವರನ್ನು ಪ್ರವೀಣ್ ಮತ್ತವರ ಪುತ್ರಿ ನಿಖಿತಾ, ಪುತ್ರ ಭರತ್, ಲಕ್ಷ್ಮಣ್ ಮತ್ತು ಮತ್ತವರ ಪುತ್ರ ಹರ್ಷಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಲಾರಿ ಚಾಲಕ ಸಹ ಗಂಭೀರ ಗಾಯಗೊಂಡಿದ್ದಾನೆ.

ಎರಡು ಬೃಹತ್ ಟ್ರಕ್ ಗಳ ನಡುವೆ ಕಾರು ಅಪ್ಪಚಿ; ಐವರ ದುರ್ಮರಣ

ಒಟ್ಟಿನಲ್ಲಿ ಹಲವಾರು ಕನಸುಗಳನ್ನು ಹೊತ್ತುಕೊಂಡು ಕಾರಿನಲ್ಲಿ ಸಾಗುತ್ತಿದ್ದ ಕುಟಂಬವು ಕರುಣಾಜನಕ ಅಂತ್ಯ ಕಂಡಿರುವುದು ಬೇಸರಕ್ಕೆ ಕಾರಣವಾಗಿದೆ.

ಭೀಕರ ಅಪಘಾತದ ವಿಡಿಯೋ ವೀಕ್ಷಿಸಲು ಕ್ಲಿಕ್ಕಿಸಿ

Read more on ಅಪಘಾತ accident
English summary
Car crushing between two trucks in horrific collision

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark