ಮೌಢ್ಯಕ್ಕಿಲ್ಲ ಬ್ರೇಕ್- ಒಂದೇ ಸಂಖ್ಯೆಯ 19 ಲಗ್ಷುರಿ ಕಾರುಗಳನ್ನು ಖರೀದಿಸಿದ ಛತ್ತೀಸ್‌ಗಢ ಸಿಎಂ

ಪ್ರತಿ ಸಂಸ್ಕೃತಿ, ಧರ್ಮ ಮತ್ತು ಪ್ರದೇಶದಲ್ಲಿ ತಮ್ಮದೇ ಆದ ಮೂಢನಂಬಿಕೆಗಳನ್ನು ಹೊಂದಿವೆ. ಅದರಲ್ಲೂ ಕೆಲವು ಮೂಢನಂಬಿಕೆಗಳಿಗೆ ವೈಜ್ಞಾನಿಕವಾಗಿ ವಿವರಣೆ ಇದ್ದರೂ, ಉಳಿದೆದ್ದಲ್ಲಾ ಅತ್ಯಂತ ಕ್ಷುಲ್ಲಕವಾಗಿವೆ.

By Praveen

ಭಾರತವು ಮೂಢನಂಬಿಕೆಗಳ ತಾಣ ಎಂಬ ಹಣೆ ಪಟ್ಟಿ ಅನಾದಿಕಾಲದಿಂದಲೂ ಇದೆ. ಇದು ಪ್ರತಿ ಸಂಸ್ಕೃತಿ, ಧರ್ಮ ಮತ್ತು ಪ್ರದೇಶದಲ್ಲಿ ತಮ್ಮದೇ ಆದ ಮೂಢನಂಬಿಕೆಗಳನ್ನು ಹೊಂದಿವೆ. ಅದರಲ್ಲೂ ಕೆಲವು ಮೂಢನಂಬಿಕೆಗಳಿಗೆ ವೈಜ್ಞಾನಿಕವಾಗಿ ವಿವರಣೆ ಇದ್ದರೂ, ಉಳಿದೆದ್ದಲ್ಲಾ ಅತ್ಯಂತ ಕ್ಷುಲ್ಲಕವಾಗಿವೆ.

ಮೌಢ್ಯಕ್ಕಿಲ್ಲ ಬ್ರೇಕ್- ಒಂದೇ ಸಂಖ್ಯೆಯ 19 ಲಗ್ಷುರಿ ಕಾರುಗಳ ಖರೀದಿ

ಆದ್ರೆ ಮೂಢನಂಬಿಕೆಗಳ ಹೆಸರಿನಲ್ಲಿ ಬಲಿಪಶುವಾಗುವ ಜನಸಾಮಾನ್ಯರಿಗೆ ಮಾದರಿಯಾಗಬೇಕಿದ್ದ ಮುಖ್ಯಮಂತ್ರಿಯೊಬ್ಬರು ಮೌಢ್ಯಕ್ಕೆ ಜೋತು ಬಿದ್ದಿರುವುದು ಸದ್ಯ ಚರ್ಚೆಗೆ ಕಾರಣವಾಗಿದ್ದು, ಒಂದೇ ಸಂಖ್ಯೆಯ 19 ಲಗ್ಷುರಿ ಕಾರುಗಳನ್ನು ಖರೀದಿ ಮಾಡಿದ್ದಾರೆ.

ಮೌಢ್ಯಕ್ಕಿಲ್ಲ ಬ್ರೇಕ್- ಒಂದೇ ಸಂಖ್ಯೆಯ 19 ಲಗ್ಷುರಿ ಕಾರುಗಳ ಖರೀದಿ

ಮೂಢನಂಬಿಕೆಗೆ ಇದು ಸ್ಪಷ್ಟ ನಿದರ್ಶನ ಎನ್ನಬಹುದೇನೋ, ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಇತ್ತೀಚೆಗೆ ಮಿಟ್ಸುಬಿಷಿ ಪಜೆರೊ ಎಸ್ ಯುವಿ 19 ಕಾರುಗಳನ್ನು ಖರೀದಿಸಿದ್ದು, ಅವುಗಳ ಸಂಖ್ಯೆಗಳೆಲ್ಲವೂ 004 ನಲ್ಲಿ ಕೊನೆಗೂಳ್ಳುತ್ತದೆ.

Recommended Video

Jeep Dealership Executives In Mumbai Beat Up Man Inside Showroom
ಮೌಢ್ಯಕ್ಕಿಲ್ಲ ಬ್ರೇಕ್- ಒಂದೇ ಸಂಖ್ಯೆಯ 19 ಲಗ್ಷುರಿ ಕಾರುಗಳ ಖರೀದಿ

ಮಾವೋವಾದಿಗಳ ಸಮಸ್ಯೆ ಹೆಚ್ಚಾಗಿರುವ ಕಾರಣ ಛತ್ತೀಸ್ ಗಢ ಮುಖ್ಯಮಂತ್ರಿ ಸ್ಟರ್ಡಿ ಎಸ್ ಯುವಿ ಕಾರುಗಳನ್ನು ಖರೀದಿಸಿದ್ದಾರೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು 19 ಸಂಖ್ಯೆ ಗೆಲುವಿನ ಸಂಕೇತವಾಗಿದ್ದು ಮೂಢನಂಬಿಕೆಯಿಂದ ಈ ಸಂಖ್ಯೆಯ ಕಾರುಗಳನ್ನು ಖರೀದಿಸಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಮೌಢ್ಯಕ್ಕಿಲ್ಲ ಬ್ರೇಕ್- ಒಂದೇ ಸಂಖ್ಯೆಯ 19 ಲಗ್ಷುರಿ ಕಾರುಗಳ ಖರೀದಿ

ಆದರೆ ಇದನ್ನು ನಿರಾಕರಿಸಿರುವ ಮುಖ್ಯಮಂತ್ರಿ ರಮಣ್ ಸಿಂಗ್, ಕಾರುಗಳ ನಂಬರ್ ಪ್ಲೇಟುಗಳನ್ನು ಆರ್ ಟಿಒ ಕಚೇರಿಗಳು ನಿರ್ಧರಿಸುತ್ತವೆಯೇ ಹೊರತು ನಾವಲ್ಲ. ನಮಗೆ ಸಿಕ್ಕಿರುವ ಸಂಖ್ಯೆಗಳೆಲ್ಲವು ಅದೃಷ್ಟದ ಸಂಖ್ಯೆಗಳಾಗಿವೆಯೇ ವಿನಃ ಇದರಲ್ಲಿ ಮ್ಯಾಜಿಕ್, ಮೂಢನಂಬಿಕೆಯೇನು ಇಲ್ಲ. ನಾನು ನನ್ನ ಜೀವನದಲ್ಲಿ ಮೂಢಾಚಾರಗಳನ್ನು ನಂಬುವುದಿಲ್ಲ ಎಂದಿದ್ದಾರೆ.

ಮೌಢ್ಯಕ್ಕಿಲ್ಲ ಬ್ರೇಕ್- ಒಂದೇ ಸಂಖ್ಯೆಯ 19 ಲಗ್ಷುರಿ ಕಾರುಗಳ ಖರೀದಿ

2003ರಿಂದ ರಮಣ್ ಸಿಂಗ್ ಅವರು ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ನ ಅಜಿತ್ ಜೋಗಿ ನಂತರ ರಮಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.

ಮೌಢ್ಯಕ್ಕಿಲ್ಲ ಬ್ರೇಕ್- ಒಂದೇ ಸಂಖ್ಯೆಯ 19 ಲಗ್ಷುರಿ ಕಾರುಗಳ ಖರೀದಿ

ಮೂಲಗಳ ಪ್ರಕಾರ ಖರೀದಿ ಮಾಡಲಾಗಿರುವ 19 ಪಜೆರೊ ಸೆಲೆಕ್ಟ್ ಪ್ಲಸ್ ಕಾರುಗಳು ರಮಣ್ ಸಿಂಗ್ ಅವರ ರಕ್ಷಣೆಗೆ ನಿಯೋಜನೆ ಮಾಡಲಾಗುತ್ತಿದ್ದು, ಒಂದೇ ಸಂಖ್ಯೆಯಲ್ಲಿ 19 ಕಾರುಗಳನ್ನು ಖರೀದಿಸಿರುವ ಪರ ವಿರೋಧಕ್ಕೆ ಕಾರಣವಾಗಿದೆ.

ಮೌಢ್ಯಕ್ಕಿಲ್ಲ ಬ್ರೇಕ್- ಒಂದೇ ಸಂಖ್ಯೆಯ 19 ಲಗ್ಷುರಿ ಕಾರುಗಳ ಖರೀದಿ

ಮಿಟ್ಸುಬಿಷಿ ಕಾರಿನ ತಾಂತ್ರಿಕ ಮಾಹಿತಿಗಳು ಹೀಗಿವೆ

ಪಜೆರೊ ಸ್ಪೋರ್ಟ್ ಸೀಮಿತ ಆವೃತ್ತಿಯ ಕ್ರೀಡಾ ಬಳಕೆಯ ವಾಹನಗಿಂತ ಹೆಚ್ಚು ಬದಲಾವಣೆ ಹೊಂದಿರುವ ಸೆಲೆಕ್ಟ್ ಪ್ಲಸ್ ಮಾದರಿಯೂ, ಎಂಜಿನ್ ತಾಂತ್ರಿಕತೆಯಲ್ಲೂ ಅಪ್ ಗ್ರೇಡ್ ಹೊಂದಿದೆ.

ಮೌಢ್ಯಕ್ಕಿಲ್ಲ ಬ್ರೇಕ್- ಒಂದೇ ಸಂಖ್ಯೆಯ 19 ಲಗ್ಷುರಿ ಕಾರುಗಳ ಖರೀದಿ

ಬೆಲೆ (ಮುಂಬೈ ಎಕ್ಸ್‌ಶೋರಂ ಪ್ರಕಾರ)

ಸೆಲೆಕ್ಟ್ ಪ್ಲಸ್ ಮಾದರಿ- ರೂ.30.50 ಲಕ್ಷ ಟು ವೀಲ್ಹ್ ಮಾದರಿ- ರೂ.30.95 ಲಕ್ಷ

ಮೌಢ್ಯಕ್ಕಿಲ್ಲ ಬ್ರೇಕ್- ಒಂದೇ ಸಂಖ್ಯೆಯ 19 ಲಗ್ಷುರಿ ಕಾರುಗಳ ಖರೀದಿ

ಸೆಲೆಕ್ಟ್ ಪ್ಲಸ್ ಆವೃತ್ತಿ ಮತ್ತೊಂದು ವಿಶೇಷ ಅಂದ್ರೆ, ಕೆಲವು ತುರ್ತು ಸಂದರ್ಭಗಳಲ್ಲಿ ಹಿಂದಿನ 2 ಚಕ್ರಗಳಿಗೆ ಮಾತ್ರ ಪೂರ್ಣ ಪ್ರಮಾಣದ ಶಕ್ತಿ ಒದಗಿಸಿ ವಾಹನ ಚಾಲನೆ ಮಾಡುವ ಅವಕಾಶವಿದ್ದು, 2.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಪಜೆರೊ ಸ್ಪೋರ್ಟ್ಸ್ ಸೆಲೆಕ್ಟ್ ಪ್ಲಸ್ ಆವೃತ್ತಿಯು, ಆಪ್ ರೋಡಿಂಗ್ ಪ್ರಿಯರನ್ನು ಸೆಳೆಯಲಿದೆ.

Most Read Articles

Kannada
English summary
Read in Kannada: Superstition At Its Height; This Chief Minister Bought 19 SUVs With Identical Numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X