ಸೆಲ್ಫಿ ಚಟಕ್ಕೆ ತನ್ನ ಪ್ರಾಣವನ್ನೇ ತೆತ್ತ ಚೀನಾ ಬಾಲಕಿ

Written By:

ಮೊಬೈಲ್ ಫೋನ್ ಗಳಲ್ಲಿ ಫೋಟೋ ಕ್ಲಿಕ್ಕಿಸುವ ಸೆಲ್ಫಿ ಜ್ವರ ಎಲ್ಲಿಯ ವರೆಗೆ ವ್ಯಾಪಿಸಿದೆಯೆಂದರೆ ಮುದುಕ-ಮುದುಕಿಯರನ್ನೇ ಇದು ಬಿಟ್ಟಿಲ್ಲ. ಇನ್ನು ಕೆಲವು ಬಾರಿ ಸಾಹಸಕ್ಕೆ ಮುಂದಾಗಿ ತಮ್ಮ ಜೀವವನ್ನೇ ಕಳೆದುಕೊಳ್ಳುವ ಅನೇಕ ಘಟನೆಗಳನ್ನು ನಾವು ಓದಿರುತ್ತೇವೆ.

ಇದಕ್ಕೀಗ ಹೊಸತೊಂದು ಸೇರ್ಪಡೆಯಾಗಿದ್ದು, ರೈಲು ಹಳಿಯ ಬದಿ ನಿಂತುಕೊಂಡು ಸೆಲ್ಫಿ ತೆಗೆಯಲು ಹೊರಟಿರುವ 19ರ ಹರೆಯದ ಚೀನಾ ಬಾಲಕಿಗೆ ರೈಲು ಢಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವ ದುರಂತ ಘಟನೆ ವರದಿಯಾಗಿದೆ.

ಸೆಲ್ಫಿ ಚಟಕ್ಕೆ ತನ್ನ ಪ್ರಾಣವನ್ನೇ ತೆತ್ತ ಚೀನಾ ಬಾಲಕಿ

ಚೀನಾದ ಫೋಶನ್ ನಗರದಲ್ಲಿ ಈ ಘಟನೆ ವರದಿಯಾಗಿದ್ದು, ಫೋಶನ್ ಪಾಲಿ ಟೆಕ್ನಿಕಲ್ ಕಾಲೇಜಿನ 19ರ ಹರೆಯದ ವಿದ್ಯಾರ್ಥಿನಿಯಾಗಿ ಮೃತ ದುರ್ದೈವಿಯಾಗಿದ್ದಾರೆ. ಈಕೆಯ ಹೆಸರು ಇನ್ನಷ್ಟೇ ತಿಳಿದು ಬರಬೇಕಿದೆ.

ಸೆಲ್ಫಿ ಚಟಕ್ಕೆ ತನ್ನ ಪ್ರಾಣವನ್ನೇ ತೆತ್ತ ಚೀನಾ ಬಾಲಕಿ

ಘಟನೆ ನಡೆದ 10 ನಿಮಿಷದ ಬಳಿಕವಷ್ಟೇ ಸಮೀಪದ ಆಸ್ಪೆತ್ರೆಯ ತುರ್ತು ಸಿಬ್ಬಂದಿಗಳು ತಲುಪಿದ್ದರು. ಆ ವೇಳೆಯಾಗುವಾಗ ತಲೆಗೆ ಗಂಭೀರ ಗಾಯ ಮಾಡಿಕೊಂಡಿರುವ ಬಾಲಕಿ ತೀವ್ರ ರಕ್ತಸ್ರಾವದಿಂದಾಗಿ ಪ್ರಾಣ ಕಳೆದುಕೊಂಡಿದ್ದರು.

ಸೆಲ್ಫಿ ಚಟಕ್ಕೆ ತನ್ನ ಪ್ರಾಣವನ್ನೇ ತೆತ್ತ ಚೀನಾ ಬಾಲಕಿ

ಬಲ್ಲ ಮೂಲಗಳ ಪ್ರಕಾರ, ಘಟನಾ ಸ್ಥಳದ 100 ಚದರ ಕೀ.ಮೀ. ವ್ಯಾಪ್ತಿಯಲ್ಲಿ ಗುಲಾಬಿ ಹೂವಿನ ತೋಟವಿದ್ದು, ಪ್ರವಾಸಿಗರನ್ನು ಅತಿ ಹೆಚ್ಚು ಆಕರ್ಷಿಸುತ್ತಿದೆ. ಇದೇ ಕಾರಣಕ್ಕಾಗಿ ಇಲ್ಲಿ ರೈಲ್ವೆ ಹಳಿಯ ಬಳಿಯಲ್ಲಿ ನಿಂತುಕೊಂಡು ಫೋಟೋ ಕ್ಲಿಕ್ಕಿಸುವುದು ಸರ್ವೇ ಸಾಮಾನ್ಯ ದೃಶ್ಯವಾಗಿದೆ.

ಸೆಲ್ಫಿ ಚಟಕ್ಕೆ ತನ್ನ ಪ್ರಾಣವನ್ನೇ ತೆತ್ತ ಚೀನಾ ಬಾಲಕಿ

ಸೆಲ್ಪಿ ಕ್ಲಿಕ್ಕಿಸುವ ತವಕದಲ್ಲಿದ್ದ ವಿದ್ಯಾರ್ಥಿನಿ, ಒಂದೇ ಫ್ರೇಮ್ ನಲ್ಲಿ ಹೂ ಮತ್ತು ರೈಲಿನ ಜೊತೆ ತನ್ನ ಚಿತ್ರವನ್ನು ಸೆರೆ ಹಿಡಿಯುವ ಭರದಲ್ಲಿ ರೈಲಿನ ಅಂಚಿಗೆ ಬಂದು ನಿಂತಿದ್ದರು.

ಸೆಲ್ಫಿ ಚಟಕ್ಕೆ ತನ್ನ ಪ್ರಾಣವನ್ನೇ ತೆತ್ತ ಚೀನಾ ಬಾಲಕಿ

ಪ್ರತ್ಯಕ್ಷದರ್ಶಿಗಳ ಪ್ರಕಾರ ಯುವತಿ ರೈಲಿನ ನಡುವೆ ಕೇವಲ 50 ಸೆಂಟಿ ಮೀಟರ್ ಗಳಷ್ಟೇ ಅಂತರವಿತ್ತು. ನೆರೆದಿದ್ದವರು ಎಚ್ಚರಿಸುವ ಪ್ರಯತ್ನ ಮಾಡಿದರೂ ಅವೆಲ್ಲದಕ್ಕೂ ಆಕೆ ಕಿವಿಗೂಡಲಿಲ್ಲ ಎಂಬುದು ತಿಳಿದು ಬಂದಿದೆ. ಒಟ್ಟಿನಲ್ಲಿ ಸೆಲ್ಪಿ ಚಟಕ್ಕೆ ಯುವತಿ ತನ್ನ ಪ್ರಾಣವನ್ನೇ ತೆರುವಂತಾಗಿದೆ.

Picture credit: CEN

Read more on ಅಪಘಾತ accident
English summary
China girl is killed in train accident while posing selfie
Story first published: Tuesday, April 12, 2016, 15:53 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark