1920-30ರ ದಶಕದ ಅತ್ಯಪೂರ್ವ ಕ್ಲಾಸಿಕ್ ವಾಹನ ಅಪಘಾತಗಳು

Written By:

ಆಟೋಮೊಬೈಲ್ ಉಗಮವಾಗಿರುವ ಸಮಯದಿಂದಲೇ ವಾಹನ ಅಪಘಾತಗಳು ಅವಿಭಾಜ್ಯ ಭಾಗವಾಗಿಬಿಟ್ಟಿದೆ. ತಂತ್ರಜ್ಞಾನವು ಎಷ್ಟೇ ಮುಂದುವರಿದರೂ ವಾಹನ ಅಪಘಾತಗಳು ಘಟಿಸುವುದನ್ನು ತಡೆಯುವುದು ಅಸಾಧ್ಯದ ಮಾತು ಎಂಬಂತಾಗಿದೆ. ಆಧುನಿಕ ಜಗತ್ತಿನಲ್ಲಿ ವಾಹನ ಅಪಘಾತ ಪ್ರಮಾಣವನ್ನು ಕಡಿಮೆ ಮಾಡಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆಗಿಳಿಯುವ ವಾಹನಗಳ ಸಂಖ್ಯೆಯಲ್ಲಿ ಉಂಟಾಗುತ್ತಿರುವ ವರ್ಧನೆಯೂ ಇದಕ್ಕಿರುವ ಕಾರಣವಾಗಿದೆ.

ಬಹಳ ಹಿಂದಿನಿಂದಲೂ ಅಪಘಾತಗಳು ನಡೆಯುತ್ತಿರುವುದಕ್ಕೆ ನಿದರ್ಶನಗಳಿವೆ. 1920ರಿಂದ 1930ರ ದಶಕದಲ್ಲಿ ನಡೆದ ಇಂತಹ ಅತ್ಯಪೂರ್ವ ವಾಹನ ಅವಘಡಗಳ ಚಿತ್ರಗಳ ಸಂಗ್ರಹವನ್ನು ಛಾಯಾಗ್ರಾಹಕ ಲೆಸ್ಲಿ ಜಾನ್ಸ್ ಹೊಂದಿದ್ದಾರೆ. 1917ರಿಂದ 1956ರ ವರೆಗೆ ಬೋಸ್ಟನ್-ಟ್ರಾವೆಲರ್ ಪತ್ರಿಕೆಯಲ್ಲಿ ದುಡಿದಿರುವ ಅವರು ರೋಚಕ ಚಿತ್ರಗಳನ್ನು ಸೆರೆ ಹಿಡಿದಿದ್ದರು.

ಏಳು ಟನ್ ಭಾರದ ಟ್ರಕ್ ಅಪಘಾತ

ಏಳು ಟನ್ ಭಾರದ ಟ್ರಕ್ ಅಪಘಾತ

ಬೋಸ್ಟನ್ ನಲ್ಲಿರುವ ವಾರೆನ್ ಅವೆನ್ಯೂ ಸೇತುವೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಏಳು ಟನ್ ಭಾರದ ಬೃಹತ್ ಟ್ರಕ್ ಗುಂಡಿಗೆ ಬಿದ್ದಿತ್ತು. ಸರಿಯಾದ ಸಮಯಕ್ಕೆ ಚಿತ್ರ ಸೆರೆ ಹಿಡಿದಿರುವ ಛಾಯಾಚಿತ್ರಗ್ರಾಹಕ ಲೆಸ್ಲಿಗೆ ಶ್ರೇಯಸ್ಸು ಸಲ್ಲುತ್ತದೆ.

ಕೂದಲೆಳೆಯ ಅಂತರದಲ್ಲಿ ಪಾರು

ಕೂದಲೆಳೆಯ ಅಂತರದಲ್ಲಿ ಪಾರು

ಇಲ್ಲಿ ಅಪಘಾತ ಹೇಗೆ ಸಂಭವಿಸಿದೆ ಎಂಬುದಕ್ಕೆ ಪುರಾವೆಗಳಿಲ್ಲ. ಆದರೆ ಗ್ಯಾರೇಜ್ ಕಟ್ಟಡವೊಂದರಲ್ಲಿ ಕೂದಳೆಲೆಯ ಅಂತರದಲ್ಲಿ ಪಾರಾಗಿರುವ ಟ್ರಕ್ ದೃಶ್ಯವನ್ನು ನೀವಿಲ್ಲಿ ಕಾಣಬಹುದಾಗಿದೆ. ಇಲ್ಲೂ ಲೆಸ್ಲಿ ತಮ್ಮ ಜಾಣತನ ಮೆರೆದಿದ್ದಾರೆ.

ಮಂಜು ನೀರಿನೊಳಗೆ ಕಾರು

ಮಂಜು ನೀರಿನೊಳಗೆ ಕಾರು

ಅನೇಕ ದುರಂತ ದೃಶ್ಯಗಳನ್ನು ಸೆರೆ ಹಿಡಿಯುವುದರಲ್ಲಿ ನಿಸ್ಸೀಮವೆನಿಸಿರುವ ಲೆಸ್ಲಿ ಬಹಳ ನಾಟಕೀಯ ರೀತಿಯಲ್ಲಿ ಮಂಜಿನಿಂದ ಆವೃತ್ತವಾಗಿರುವ ನೀರಿನೊಳಗೆ ನುಗ್ಗುತ್ತಿರುವ ಕಾರಿನ ಚಿತ್ರ ಸೆರೆ ಹಿಡಿದಿದ್ದರು. ಇಲ್ಲಿ ಪೊಲೀಸ್ ಕಾರನ್ನು ಹೊರ ತೆಗೆಯುವ ಪ್ರಯತ್ನದಲ್ಲಿದ್ದಾರೆ.

ನಜ್ಜುಗುಜ್ಜಾದ ಕಾರು

ನಜ್ಜುಗುಜ್ಜಾದ ಕಾರು

ಇಲ್ಲಿ ನಿಯಂತ್ರಣ ತಪ್ಪಿ ಮರವೊಂದಕ್ಕೆ ಢಿಕ್ಕಿಯಾದ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ತಮ್ಮ ಚಿತ್ರದಿಂದಲೇ ಅಪಘಾತ ನಡೆದಿರುವ ಹಿಂದಿನ ಕಾರಣಗಳನ್ನು ಚಿತ್ರಗಳ ಮೂಲಕವೇ ತಿಳಿಯಪಡಿಸಲು ಲೆಸ್ಲಿ ಯಶಸ್ವಿಯಾಗಿದ್ದಾರೆ.

ತಲೆಕೆಳಗಾದ ಕಾರು

ತಲೆಕೆಳಗಾದ ಕಾರು

ತೆಲೆ ಕೆಳಗಾಗಿ ಕೆರೆಗೆ ಧುಮುಕುತ್ತಿರುವ ಕಾರೊಂದರ ಅಪಘಾತದ ಚಿತ್ರಗಳನ್ನು ಸೆರೆ ಹಿಡಿದಿರುವ ಲೆಸ್ಲಿ ಛಾಯಾಗ್ರಾಹಣ ಕೌಶಲ್ಯಕ್ಕೆ ಮಗದೊಂದು ಉದಾಹರಣೆ ಇದಾಗಿದೆ. ನೀವು ಯಾವ ಕ್ಷೇತದಲ್ಲೇ ಆಗಿರಬಹುದು ಅರ್ಪಣಾ ಮನೋಭವದಿಂದ ದುಡಿದ್ದಲ್ಲಿ ಎತ್ತರಕ್ಕೆ ಬೆಳೆಯಬಹುದು ಎಂಬುದಕ್ಕೆ ಇದು ಮಾದರಿಯಾಗಿದೆ.

ನಿಯಂತ್ರಣ ತಪ್ಪಿದ ವಾಹನ

ನಿಯಂತ್ರಣ ತಪ್ಪಿದ ವಾಹನ

ಆಸ್ಪತ್ರೆಯೊಳಗೆ ರೋಗಿಯನ್ನು ಸಾಗಿಸುವ ಸಾಹಸಕ್ಕೆ ಮುಂದಾಗಿರುವ ವ್ಯಕ್ತಿಯೊರ್ವರು ನೇರವಾಗಿ ಮೆಟ್ಟಿಲುಗಳ ಮೇಲೆ ಕಾರನ್ನು ಹತ್ತಿಸುವ ಪ್ರಯತ್ನ ಮಾಡಿದ್ದರು. ಪರಿಣಾಮ ನಿಯಂತ್ರಣ ತಪ್ಪಿ ಭಾರಿ ಅಪಘಾತಕ್ಕೊಳಗಾಗಿತ್ತು.

ನೆಲಮಾಳಿಗೆಗೆ ನುಗ್ಗಿದ ವಾಹನ

ನೆಲಮಾಳಿಗೆಗೆ ನುಗ್ಗಿದ ವಾಹನ

1930ರಲ್ಲಿ ಬಿಡುವಿಲ್ಲದ ಪಟ್ಟಣ ಪ್ರದೇಶದಲ್ಲಿ ನಿಯಂತ್ರಣ ತಪ್ಪಿದ ವಾಹನವೊಂದು ನೇರವಾಗಿ ನೆಲಮಾಳಿಗೆಯೊಳಗೆ ನುಗ್ಗಿದೆ. ಇದನ್ನು ನೋಡಿದಾಗ ಚಾಲಕ ಬ್ರೇಕ್ ಬದಲಾಗಿ ಆಕ್ಸಿಲೇಟರ್ ಅದುಮಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸ್ನಾನಕ್ಕಿಳಿದ ಕಾರು

ಸ್ನಾನಕ್ಕಿಳಿದ ಕಾರು

ನಿಯಂತ್ರಣ ತಪ್ಪಿದ ಕಾರು ನೇರವಾಗಿ ನೀರಿಗೆ ಧುಮುಕ್ಕಿತ್ತು. ಕೆಲವೇ ಹೊತ್ತಿನಲ್ಲಿ ಪೊಲೀಸ್ ಮತ್ತು ರಕ್ಷಣಾ ತಂಡವು ಕಾರ್ಯಾಚರಣೆಯನ್ನು ಆರಂಭಿಸಿತ್ತು. ಈ ದೃಶ್ಯಗಳನ್ನು ಸೆರೆ ಹಿಡಿಯುವಲ್ಲಿ ಲೆಸ್ಲಿ ಯಶಸ್ವಿಯಾಗಿದ್ದಾರೆ.

ಅಂಚೆ ವಾಹನ ದುರಂತ

ಅಂಚೆ ವಾಹನ ದುರಂತ

ಅಮೆರಿಕದಲ್ಲಿ ಅಂಚೆ ವಾಹನಕ್ಕೆ ಎದುರಾಗಿರುವ ದುರಂತ ಘಟನೆಯಿದು. ಏನೋ ವಾಹನದ ನಿರ್ಮಾಣ ಗುಟಮಟ್ಟತೆ ಕಳಪೆ ಮಟ್ಟದಲ್ಲಿರುವುದರಿಂದಲೇ ಚಕ್ರಗಳು ಸಂಪೂರ್ಣವಾಗಿ ಕಳಚಿ ಹೋಗಲು ಕಾರಣವಾಗಿದೆ.

ಮಗದೊಂದು ರೋಚಕ ಅಪಘಾತ

ಮಗದೊಂದು ರೋಚಕ ಅಪಘಾತ

ತಮ್ಮ ಚಿತ್ರಗಳು ನೈಜತೆಯ ಸಂಕೇತವಾಗಿರಬೇಕು ಎಂಬುದು ಲೆಸ್ಲಿ ಬಯಕೆಯಾಗಿತ್ತು. ತಾವು ಸೆರೆ ಹಿಡಿದಿರುವ ಅಪಘಾತ ಚಿತ್ರಗಳ ಮೂಲಕ ಲೆಸ್ಲಿ ಇದನ್ನು ಸಾರಿದ್ದರು. ಫೈರ್ ಟ್ಯಾಂಕ್ ಮರು ತುಂಬಲು ಬಳಸುವ ಪ್ಲಗ್‌ಗೆ ಇಲ್ಲಿ ವಾಹನ ಢಿಕ್ಕಿಯಾಗಿ ನೀರು ಮೇಲಕ್ಕೆ ಚಿಮ್ಮುವ ರೋಚಕ ಚಿತ್ರಗಳನ್ನು ಲೆಸ್ಲಿ ಸೆರೆ ಹಿಡಿದಿದ್ದಾರೆ.

Read more on ಅಪಘಾತ accident
English summary
Classic Accidents From The Golden Era Of 1930s
Story first published: Friday, May 20, 2016, 10:25 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark