ಅಂಡರ್ ಪಾಸ್ ಒಳ ನುಗ್ಗುವ ವೇಳೆ ಸಂಭವಿಸಿದ ಬಸ್ ದುರಂತ

Written By:

ಫ್ರಾನ್ಸ್ ನಲ್ಲಿ ಸಂಭವಿಸಿರುವ ಪ್ರತ್ಯೇಕ ಅಪಘಾತ ಪ್ರಕರಣವೊಂದರಲ್ಲಿ ಪ್ರವಾಸಿ ಬಸ್ ವೊಂದು ಕಡಿಮೆ ಎತ್ತರದ ಅಂಡರ್ ಪಾಸ್ ಒಳಗಡೆ ನುಗ್ಗಿದ ವೇಳೆ ಸಂಭವಿಸಿದ ದುರಂತದಲ್ಲಿ 30ರಷ್ಟು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. ಈ ಪೈಕಿ ಆರು ಮಂದಿಯ ಪರಿಸ್ಥಿತಿ ಗಂಭೀರವಾಗಿದೆ.

ಉತ್ತರ ಫ್ರಾನ್ಸ್‌ನ ಲಿಲ್ಲೆ ಅಂಡರ್ ಪಾಸ್ ನಲ್ಲಿ ಭಾನುವಾರ ಘಟನೆ ನಡೆದಿದೆ. ತಕ್ಷಣ ನಡೆಸಿದ ರಕ್ಷಣಾ ಕಾರ್ಯಾಚರಣೆಯ ಪರಿಣಾಮ ಹೆಚ್ಚಿನ ಆಘಾತವನ್ನು ತಪ್ಪಿಸುವಂತಾಗಿದೆ.

ಅಂಡರ್ ಪಾಸ್ ಒಳ ನುಗ್ಗುವ ವೇಳೆ ಸಂಭವಿಸಿದ ಬಸ್ ದುರಂತ

ಬಹುತೇಕ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ ಕಡಿಮೆ ಎತ್ತರದ ಅಂಡರ್ ಪಾಸ್ ಒಳಗಡೆ ನುಗ್ಗಿತ್ತು. ಮೇಲ್ಪಾಗದಲ್ಲಿ ಹಾದು ಹೋಗುವ ಬ್ರಿಡ್ಜ್ ಕೆಳಗಡೆ ಅಂಡರ್ ಪಾಸ್ ಕಡಿಮೆ ಎತ್ತರವನ್ನು ಹೊಂದಿದೆ. ಇದನ್ನು ಅಂದಾಜಿಸುವಲ್ಲಿ ಚಾಲಕ ವಿಫಲವಾಗಿರುವುದು ಅಪಘಾತಕ್ಕೆ ಕಾರಣವಾಗಿದೆ.

ಅಂಡರ್ ಪಾಸ್ ಒಳ ನುಗ್ಗುವ ವೇಳೆ ಸಂಭವಿಸಿದ ಬಸ್ ದುರಂತ

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಬಸ್ಸಿನ ಮೇಲ್ಬಾಗ ಸಂಪೂರ್ಣವಾಗಿ ಹಾನಿಗೀಡಾಗಿದೆ. ಇದರಿಂದಲೇ ಅಪಘಾತದ ತೀವ್ರತೆಯನ್ನು ಮನಗಾಣಬಹುದಾಗಿದೆ.

ಅಂಡರ್ ಪಾಸ್ ಒಳ ನುಗ್ಗುವ ವೇಳೆ ಸಂಭವಿಸಿದ ಬಸ್ ದುರಂತ

ಘಟನೆಯನ್ನು ವಿವರಿಸಿರುವ ಪ್ರತ್ಯಕ್ಷದರ್ಶಿಯೋರ್ವರು, 'ನಾನು ನಿದ್ರಿಸುತ್ತಿದ್ದೆ. ಸಡನ್ ಆಗಿ ಭಾರಿ ಶಬ್ದ ಕೇಳಿಸತೊಡಗಿತು. ನೋಡುವಷ್ಟರಲ್ಲಿ ಬಸ್ಸಿನ ಗಾಜುಗಳು ಪುಡಿಯಾಗಿದ್ದವು. ಇತರರಲ್ಲಿ ರಕ್ತ ಹರಿಯುತ್ತಿತ್ತು' ಎಂದಿದ್ದಾರೆ.

ಅಂಡರ್ ಪಾಸ್ ಒಳ ನುಗ್ಗುವ ವೇಳೆ ಸಂಭವಿಸಿದ ಬಸ್ ದುರಂತ

59 ಮಂದಿ ಸಂಚರಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಚಾಲಕ ಜಿಪಿಎಸ್ ನೋಡಿಕೊಂಡು ಬಸ್ ಚಲಾಯಿಸುತ್ತಿದ್ದ. ಆದರೆ ಸೂರಂಗ ಮಾರ್ಗವನ್ನು ಅಂದಾಜಿಸುವಲ್ಲಿ ವಿಫಲವಾಗಿದ್ದಾನೆ.

ಅಂಡರ್ ಪಾಸ್ ಒಳ ನುಗ್ಗುವ ವೇಳೆ ಸಂಭವಿಸಿದ ಬಸ್ ದುರಂತ

ರಾತ್ರಿ ವೇಳೆ ಅಪಘಾತ ಸಂಭವಿಸಿತ್ತು. ಈ ಸಂದರ್ಭದಲ್ಲಿ ಎಲ್ಲ ಯಾತ್ರಿಕರು ನಿದ್ರಿಸುತ್ತಿದ್ದರು. ಹಾಗಾಗಿ ಏಕಾಏಕಿ ನಡೆದ ದುರಂತದಿಂದಾಗಿ ಗಲಿಬಿಲಿಗೊಂಡಿದ್ದಾರೆ.

ಅಂಡರ್ ಪಾಸ್ ಒಳ ನುಗ್ಗುವ ವೇಳೆ ಸಂಭವಿಸಿದ ಬಸ್ ದುರಂತ

ಪ್ರಸ್ತುತ ಬ್ರಿಡ್ಜ್ 2.6 ಮೀಟರ್ ಎತ್ತರವನ್ನಷ್ಟೇ ಹೊಂದಿದೆ. ಅಲ್ಲದೆ ಇದಕ್ಕಿಂತಲೂ ಎತ್ತರ ಹೊಂದಿರುವ ವಾಹನಗಳಿಗೆ ಪ್ರವೇಶವನ್ನು ನಿಷೇಧ ಮಾಡಲಾಗಿದೆ. ಆದರೆ ರಾತ್ರಿ ವೇಳೆಯಾಗಿರುವುದರಿಂದ ಚಾಲಕನಿಂದ ಇಂತಹದೊಂದು ಎಡವಟ್ಟು ಸಂಭವಿಸಿದೆ.

Read more on ಅಪಘಾತ accident
English summary
More than 30 people have been injured, six of them seriously, after a coach carrying Spanish students had its roof sheared off
Story first published: Monday, July 27, 2015, 16:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark