ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ಯುವ ಸಮುದಾಯವೊಂದು ತಮ್ಮ ಬೈಕ್‍‍ಗಳನ್ನು ತಡೆಹಿಡಿದ ಪೊಲೀಸರ ಕುರಿತು ಫೇಸ್‍‍ಬುಕ್‍ ಲೈವ್ ವೀಡಿಯೊ ಮಾಡಿದ್ದು, ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

By Rahul Ts

ಯುವ ಸಮುದಾಯವೊಂದು ತಮ್ಮ ಬೈಕ್‍‍ಗಳನ್ನು ತಡೆಹಿಡಿದ ಪೊಲೀಸರ ಕುರಿತು ಫೇಸ್‍‍ಬುಕ್‍ ಲೈವ್ ವೀಡಿಯೊ ಮಾಡಿದ್ದು, ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಸಲಿಗೆ ಪೊಲೀಸರು ಸುಮಾರು 40 ಬೈಕ್‍‍ಗಳನ್ನು ತಡೆಹಿಡಿಯಲು ಕಾರಣ ಏನು ಎಂಬುದರ ಬಗ್ಗೆ ಕೆಳಗಿನ ಸ್ಲೈಡರ್‌ಗಳನ್ನ ಓದಿ..

ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ಕೊಲ್ಕತ್ತಾ ಹೊರವಲಯದಲ್ಲಿ ಯುವ ಸಮುದಾಯವೊಂದು ಬೈಕ್‍‍ ರೇಸಿಂಗ್ ಮತ್ತು ವ್ಹೀಲಿಂಗ್ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಬೈಕ್‌ಗಳನ್ನು ತಡೆಹಿಡಿದಿರುವ ಪೊಲೀಸರು ಬೈಕ್ ಸವಾರರ ವಿರುದ್ಧ ಭಾರೀ ದಂಡ ಹಾಕಿದ್ದಾರೆ.

ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ವಾರದ ಕೊನೆಯಲ್ಲಿ ಕೊಲ್ಕತ್ತಾ ನಗರದ ಹೊರವಲಯ ಬಳಿ ಬರ್ಧಮನ್ ಎನ್‍‍ಹೆಚ್2 ಹೆದ್ದಾರಿಯಲ್ಲಿ ಬೈಕ್ ರೈಡರ್‍‍ಗಳು ತಮ್ಮ ಬೈಕ್‌ಗಳಲ್ಲಿ ರೇಸಿಂಗ್ ಮತ್ತು ವ್ಹೀಲಿಂಗ್ ನಡೆಸುತ್ತಿರುವ ವಿಷಯವನ್ನು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ವಾರಾಂತ್ಯದಲ್ಲಿ ಬೈಕರ್‍ ಮೀಟಪ್ ಅನ್ನು ಈ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ವಿಷಯ ತಿಳಿದ ಕೊಲ್ಕತ್ತಾ ಪೊಲೀಸರು ಇದನ್ನು ತಿಳಿದುಕೊಳ್ಳಲು ಹೋದ ಸಂದರ್ಭದಲ್ಲೇ ಸ್ಟಂಟ್ ಪ್ರದರ್ಶಿಸುತ್ತಿದ್ದಾಗ 40 ಕ್ಕೂ ಹೆಚ್ಚು ಬೈಕರ್‍‍ಗಳನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ.

ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ಸ್ ಹಾಗು ರೇಸಿಂಗ್ ಮಾಡುವಾಗ ಸಿಕ್ಕಿಕೊಂಡ ಬೈಕ್‍‍ಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಆ ಪಟ್ಟಿಯಲ್ಲಿ ಕವಾಸಕಿ ಜೆಡ್250, ಕವಾಸಕಿ ನಿಂಜಾ 650, ಕೆಟಿಎಮ್ ಆರ್‍‍ಸಿ390 ಮತ್ತು ಹೋಂಡಾ ಸಿಬಿಆರ್ 250ಆರ್ ಎಂಬ ಸೂಪರ್‍ ಬೈಕ್‍‍ಗಳಿದ್ದವು.

ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ಬರ್ಧಮಾನ್ ಪ್ರದೇಶದಲ್ಲಿ ಬೈಕು ರೇಸರ್‍‍ಗಳು ದಿನನಿತ್ಯದ ರೇಸಿಂಗ್ ಮತ್ತು ವ್ಹೀಲಿಂಗ್ ಮಾಡುತ್ತಿರುತ್ತಾರೆ ಎಂದು ಪೊಲೀಸರು ಹೇಳುತ್ತಾರೆ. ಬರ್ಧಮಾನ್ ವಿಶೇಷವಾಗಿ ವಾರಾಂತ್ಯದಲ್ಲಿ ರೇಸಿಂಗ್ ನಡೆಯುವ ಸ್ಥಳವಾಗಿ ಅಲ್ಲಿನ ಯುವಕರು ಬಳಸುತ್ತಾರೆ ಎನ್ನುವುದು ಬೈಕರ್‌ಗಳ ವಾದ.

ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ಆದ್ರೆ ಕೊಲ್ಕತ್ತಾ ಪೊಲೀಸರು ರಾಜ್ಯದ ವಿವಿಧ ಭಾಗಗಳಿಂದ ಬೈಕರ್ಸ್ ಸಭೆಗೆ ಹೋಗುತ್ತಿರುವವರನ್ನು ಸಹ ನಿಲ್ಲಿಸಿ ದಂಡ ವಿಧಿಸಿದ್ದಾರೆ. ಆದರೆ ಆ ರೈಡರ್ಸ್ ಗುಂಪಿನ ನಾಯಕರಾಗಿದ್ದ ಸ್ನೇಹಶಿಶ್ ಮೊಂಡಲ್ ಈ ಘಟನೆಯನ್ನು ತಮ್ಮ ಫೇಸ್‍‍ಬುಕ್‍‍ನಲ್ಲಿ ಲೈವ್ ವೀಡಿಯೊ ಮಾಡಿದ್ದಾರೆ.

ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ಸ್ನೇಹಶಿಶ್ ಮೊಂಡಲ್ ಪ್ರಕಾರ, ಅವರ ಗುಂಪಿನಲ್ಲಿದ್ದ ಎಲ್ಲಾ ಬೈಕರ್‍‍ಗಳು 70-80 ಕಿ.ಮೀ ವೇಗದಲ್ಲಿ ಸವಾರಿ ಮಾಡುತ್ತಿದ್ದರು. ಎಲ್ಲರೂ ಸರಿಯಾದ ಸುರಕ್ಷತೆಯ ಉಡುಪುಗಳನ್ನು ಧರಿಸಿದ್ದರು. ಆದರೆ ಸಮೂಹದಿಂದ ಬಂದ ಎಲ್ಲಾ 32 ಸವಾರರನ್ನು ಪೊಲೀಸರು ತಡೆದು ಪ್ರತಿಯೊಬ್ಬರ ಹತ್ತಿರ ರೂ. 2,000 ದಂಡವನ್ನು ಪಡೆದಿದ್ದಾರೆ.

ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ಇದಲ್ಲದೆ ಪೊಲೀಸರು ರೈಡರ್‍‍ಗಳ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅನ್ನು ಕೂಡಾ ಪಡೆದಿದ್ದು, ಒಟ್ಟು ರೂ. 32,000 ಸಾವಿರದ ದಂಡವನ್ನು ಪೊಲೀಸರು ವಸೂಲಿ ಮಾಡಿರುವುದರ ಬಗ್ಗೆ ಕೂಡಾ ಅವರು ಆ ಲೈವ್ ವೀಡಿಯೊನಲ್ಲಿ ಹೇಳಿಕೊಂಡಿದ್ದಾರೆ.

ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ರಾಜ್ಯದಲ್ಲಿನ ಈ ಪರಿಸ್ಥಿತಿಗೆ ಸಂಬಂಧಿಸಿದಂತೆ ಪೊಲೀಸರು ಇಂತಹ ಪ್ರಕಟಣೆಗಳ ಬಗ್ಗೆ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇಂತಹ ರೇಸರ್‍‍ಗಳ ಮೇಲೆ ಕಣ್ಣಿಡಲು ಹಲವಾರು ಸಿಸಿಟಿವಿ ಕ್ಯಾಮೆರಾಗಳಿಂದ ತುಣುಕನ್ನು ಬಳಸಲಾಗುವುದು. ಇದಲ್ಲದೆ ಪೊಲೀಸರು ಹೆದ್ದಾರಿಗಳಲ್ಲಿ ಕಾರ್ ರೇಸಿಂಗ್‍‍ನ ವರದಿಗಳನ್ನು ಕೂಡಾ ಸ್ವೀಕರಿಸಿದ್ದಾರೆ.

ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ಇದು ಕೊಲ್ಕತ್ತಾದಲ್ಲಿ ಮಾತ್ರವಲ್ಲ, ದೇಶದಾದ್ಯಂತ ಬೈಕರ್‍‍ಗಳು ಇಂತಹ ರೇಸಿಂಗ್, ವ್ಹೀಲಿಂಗ್ ಮತ್ತು ಸ್ಪೀಡಿಂಗ್ ಪ್ರದರ್ಶಿಸುವ ಮೂಲಕ ಇತರರ ಸಾವಿಗೆ ಕಾರಣರಾಗುತ್ತಿದ್ದಾರೆ. ಅವರು ಸಾಮಾನ್ಯವಾಗಿ ರಕ್ಷಣಾತ್ಮಕ ಮತ್ತು ಸುರಕ್ಷತೆಯ ಉಡುಪುಗಳನ್ನು ಧರಿಸುತ್ತಾರೆ ಆದರೆ ಕಾನೂನನ್ನು ಮುರಿಯಲು ಅವರಿಗೆ ಯಾವ ಹಕ್ಕು ಇಲ್ಲ.

Most Read Articles

Kannada
English summary
Cops fine bikers Rs 2,000 each who were riding to a meetup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X