ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಪ್ರಪಂಚದಲ್ಲಿ ಕೆಲವು ದೇಶಗಳು ಕಚ್ಚಾ ತೈಲವನ್ನು ಉತ್ಪಾದಿಸುತ್ತವೆ. ಆದರೆ ಬಹುತೇಕ ದೇಶಗಳು ಕಚ್ಚಾ ತೈಲಕ್ಕಾಗಿ ಇತರ ದೇಶಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದು, ತಮ್ಮ ಇಂಧನ ಅಗತ್ಯದ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳುತ್ತವೆ. ಕಚ್ಚಾ ತೈಲವನ್ನು ಉತ್ಪಾದಿಸುವ ದೇಶಗಳಲ್ಲಿ ಇಂಧನದ ಬೆಲೆ, ಇಂಧನವನ್ನು ಆಮದು ಮಾಡಿಕೊಳ್ಳುವ ದೇಶಗಳಿಗಿಂತ ಕಡಿಮೆಯಿರುತ್ತದೆ.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಇಂಧನ ದರಗಳು ಹಲವು ಸಂಗತಿಗಳ ಮೇಲೆ ಅವಲಂಬಿತವಾಗಿರುತ್ತವೆ. ಇಂಧನದ ಬೆಲೆಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ. ಜೊತೆಗೆ ಒಂದು ದೇಶದೊಳಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾಗುತ್ತವೆ. ಭಾರತವು ಹಲವು ದಶಕಗಳಿಂದ ಪ್ರಮುಖ ತೈಲ ಆಮದುದಾರ ದೇಶವಾಗಿದೆ. ಭಾರತವು ತನ್ನ ಇಂಧನ ಬೇಡಿಕೆಯನ್ನು ಪೂರೈಸಲು ಇತರ ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಆದರೆ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. ಇಂಧನದ ಬೆಲೆಗಳು ಸದ್ಯಕ್ಕೆ ಕಡಿಮೆಯಾಗುವ ಸಾಧ್ಯತೆಗಳಿಲ್ಲ. ಇಂಧನ ಬೆಲೆಗಳು ಭಾರತದಲ್ಲಿ ಮಾತ್ರ ದುಬಾರಿಯಾಗಿಲ್ಲ. ವಿಶ್ವದ ಹಲವು ದೇಶಗಳಲ್ಲಿ ಇಂಧನ ದರವು ಭಾರತಕ್ಕಿಂತ ಹೆಚ್ಚಾಗಿದೆ. ಹಾಗೆಯೇ ಹಲವು ದೇಶಗಳಲ್ಲಿ ಇಂಧನ ದರವು ಭಾರತದಲ್ಲಿರುವುದಕ್ಕಿಂತ ಕಡಿಮೆಯಾಗಿದೆ.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ವಿಶ್ವದ ಯಾವ ಯಾವ ದೇಶಗಳಲ್ಲಿ ಇಂಧನ ದರವು ಭಾರತಕ್ಕಿಂತ ಹೆಚ್ಚು ದುಬಾರಿಯಾಗಿದೆ ಹಾಗೂ ಅಗ್ಗವಾಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ವಿಶ್ವದ ಅತ್ಯಂತ ದುಬಾರಿ ಇಂಧನವನ್ನು ಹಾಂಗ್ ಕಾಂಗ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಹಾಂಗ್ ಕಾಂಗ್‌ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 2.56 ಡಾಲರ್ ಅಂದರೆ ಸುಮಾರು 192 ರೂಪಾಯಿಗಳಾಗಿದೆ.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಯುರೋಪಿಯನ್ ರಾಷ್ಟ್ರವಾದ ನೆದರ್‌ಲ್ಯಾಂಡ್ಸ್‌ನಲ್ಲಿ ಒಂದು ಲೀಟರ್‌ ಪೆಟ್ರೋಲ್ ಅನ್ನು 2.18 ಡಾಲರ್ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಭಾರತೀಯ ಕರೆನ್ಸಿ ಪ್ರಕಾರ ಇದರ ಮೌಲ್ಯವು ರೂ. 163 ಗಳಾಗಿದೆ. ಸೆಂಟ್ರಲ್ ಆಫ್ರಿಕಾ ಗಣರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 2.14 ಡಾಲರ್ ಅಂದರೆ ಸುಮಾರು 160 ರೂಪಾಯಿಗಳಾಗಿದೆ. ನಾರ್ವೆ, ಇಸ್ರೇಲ್, ಡೆನ್ಮಾರ್ಕ್, ಮೊನಾಕೊ, ಗ್ರೀಸ್, ಫಿನ್‌ಲ್ಯಾಂಡ್ ಹಾಗೂ ಐಸ್‌ಲ್ಯಾಂಡ್‌ ದೇಶಗಳು ವಿಶ್ವದಲ್ಲೇ ಅತಿ ಹೆಚ್ಚು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಹೊಂದಿವೆ.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಕಚ್ಚಾ ತೈಲ ಉತ್ಪಾದಿಸಿ ರಫ್ತು ಮಾಡುವ ವೆನೆಜುವೆಲಾದಲ್ಲಿ ಪೆಟ್ರೋಲ್ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಈ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 0.02 ಡಾಲರ್ ಅಂದರೆ ರೂ. 1.50 ಗಳಾಗಿದೆ. ಈ ಬೆಲೆ ಬೆಂಕಿಪೊಟ್ಟಣದ ಬೆಲೆಗಿಂತ ಅಗ್ಗವಾಗಿದೆ. ಇನ್ನು ಇರಾನ್ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 0.06 ಡಾಲರ್ ಅಂದರೆ ರೂ. 4.51 ಗಳಾಗಿದೆ.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಸದಾ ಕಾಲ ಸಂಘರ್ಷದಿಂದ ಸುದ್ದಿಯಾಗುವ ಸಿರಿಯಾ ದೇಶದಲ್ಲಿಯೂ ಇಂಧನ ಬೆಲೆ ಕಡಿಮೆ. ಸಿರಿಯಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.23 ಡಾಲರ್ ಅಂದರೆ ರೂ. 17 ಗಳಾಗಿದೆ. ಅಂಗೋಲಾ, ಅಲ್ಜೀರಿಯಾ, ಕುವೈತ್, ನೈಜೀರಿಯಾ, ತುರ್ಕಮೆನಿಸ್ತಾನ್, ಕಝಾಕಿಸ್ತಾನ್ ಹಾಗೂ ಇಥಿಯೋಪಿಯಾದಂತಹ ದೇಶಗಳಲ್ಲಿ ಇಂಧನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಈ ದೇಶಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 0.50 ಡಾಲರ್ ಗಿಂತ ಕಡಿಮೆ ಅಂದರೆ 35 ರೂಪಾಯಿಗಳು. ಪ್ರಪಂಚದ ಹೆಚ್ಚಿನ ದೇಶಗಳಂತೆ ಭಾರತದಲ್ಲಿ ಇಂಧನ ದರಗಳು ವಿವಿಧ ತೆರಿಗೆ ಹಾಗೂ ಸುಂಕಗಳಿಗೆ ಒಳಪಟ್ಟಿರುತ್ತವೆ. ಈ ತೆರಿಗೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪ್ರಮುಖ ಆದಾಯದ ಮೂಲಗಳಾಗಿವೆ. ಭಾರತವು ತನ್ನ ಬಹುಪಾಲು ತೈಲ ಅಗತ್ಯಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತಲೇ ಇವೆ. ಇಂಧನಗಳ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಹೈರಣಾಗಿದ್ದಾರೆ. ಭಾರತದ ಬಹುತೇಕ ಎಲ್ಲಾ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 110 ಗಳ ಗಡಿ ದಾಟಿದೆ. ಇನ್ನು ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 100 ರ ಗಡಿ ದಾಟಿದೆ.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾರತದಲ್ಲಿ ಇಂಧನಗಳ (ಪೆಟ್ರೋಲ್ ಹಾಗೂ ಡೀಸೆಲ್) ಬೆಲೆಯನ್ನು ದಿನ ನಿತ್ಯ ಪರಿಷ್ಕರಿಸುತ್ತವೆ. ಈ ಬೆಲೆಗಳನ್ನು ಅಂತರ್ ರಾಷ್ಟ್ರೀಯ ಕಚ್ಚಾ ತೈಲ ಬೆಲೆ ಹಾಗೂ ರೂಪಾಯಿ ಡಾಲರ್ ವಿನಿಮಯ ದರಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಹೊಸ ತೈಲ ಬೆಲೆಗಳು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಜಾರಿಗೆ ಬರುತ್ತವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೆಪ್ಟೆಂಬರ್ 24 ರಿಂದ ಡೀಸೆಲ್ ಬೆಲೆಯನ್ನು ಹಾಗೂ ಸೆಪ್ಟೆಂಬರ್ 28 ರಿಂದ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸುತ್ತಿವೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿರುವುದರಿಂದ ಇವುಗಳ ಬೆಲೆ ಹೆಚ್ಚಾಗುತ್ತಿದೆ. ಇದಲ್ಲದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿಸುವ ಇತರ ಅಂಶಗಳಲ್ಲಿ ರಾಜ್ಯ ಸರ್ಕಾರಗಳು ವಿಧಿಸುವ ವ್ಯಾಟ್, ಡೀಲರ್ ಕಮಿಷನ್, ಸರಕು ಶುಲ್ಕ ಇತ್ಯಾದಿಗಳು ಸೇರಿವೆ.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಕಳೆದ ಎರಡು ವರ್ಷಗಳಿಂದ ಇಂಧನದ ಮೇಲಿನ ಅಬಕಾರಿ ಸುಂಕ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಸಹ ಇಂಧನಗಳ ಬೆಲೆ ನಿರಂತರ ಏರಿಕೆಗೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಈ ಕಾರಣದಿಂದಾಗಿ ಮೊದಲ ಬಾರಿಗೆ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 100 ಗಳ ಗಡಿ ದಾಟಿತ್ತು.

ಅತಿ ಹೆಚ್ಚು ಹಾಗೂ ಅತಿ ಕಡಿಮೆ ಪೆಟ್ರೋಲ್ ದರ ಹೊಂದಿರುವ ದೇಶಗಳಿವು

ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಆದರೆ ಆದಾಯದ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯ ಸರ್ಕಾರಗಳು ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸುತ್ತಿವೆ. ಮತ್ತೊಂದೆಡೆ ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದಿಲ್ಲವೆಂದು ತಿಳಿಸಿದೆ.

Most Read Articles

Kannada
English summary
Countries with highest and lowest fuel prices in the world details
Story first published: Wednesday, October 27, 2021, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X