ವಿಚಿತ್ರವಾದರೂ ಸತ್ಯ; ಹೆಲಿಕಾಪ್ಟರ್ ಮೂಲಕ ಮಗನ ಹಲ್ಲು ಕಿತ್ತೆಗೆದ ತಂದೆ!
ಮಕ್ಕಳಲ್ಲಿ ಅಲ್ಲಾಡುತ್ತಿರುವ ಹಲ್ಲನ್ನು ಕೀಳಲು ಸಡಿಲವಾದ ದಾರವನ್ನು ಬಳಕೆ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಹೆಲಿಕಾಪ್ಟರ್ ಮೂಲಕ ತನ್ನ ಮಗನ ಹಲ್ಲು ಕಿತ್ತೆಗೆದಿರುವುದು ವಿಚಿತ್ರವೆನಿಸಿದರೂ ಸತ್ಯವೆನಿಸಿದೆ.
ವೆರ್ಜಿನಿಯಾದ ವಾಣಿಜ್ಯ ಹೆಲಿಕಾಪ್ಟರ್ ಪೈಲಟ್ ಆಗಿರುವ ರಿಕ್ ರಹೀಂ ಎಂಬವರೇ ಇಂತಹದದೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಅಲ್ಲದೆ ಈ ಸಂಬಂಧ ರೋಚಕ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.

ಬಲಹೀನವಾದ ಮಕ್ಕಳ ಹಲ್ಲನ್ನು ಕಿತ್ತೆಗೆಯುವುದು ಅಷ್ಟು ದೊಡ್ಡ ಮಹಾನ್ ಕಾರ್ಯ ಅಲ್ಲ ಬಿಡಿ. ಹಾಗಿದ್ದರೂ ರಿಕ್ ರಹೀಂ ಅವರು ವಿನೂತನ ಮಾರ್ಗವನ್ನು ಅನುಸರಿಸಿದ್ದಾರೆ.

ಇದಕ್ಕೆ ಅಪ್ಪನಿಗೆ ಮಗನ ಪೂರ್ಣ ಬೆಂಬಲವೂ ದೊರಕಿತ್ತು. ಬೇರೆ ಯಾವ ವಿಮಾನ ಚಾಲಕನೂ ಯೋಚಿಸದ ವಿನೂತನ ಆಲೋಚನೆಯೊಂದಿಗೆ ರಹೀಂ ಮುಂದೆ ಬಂದಿದ್ದರು.

ಹಿಂದೆಲ್ಲ ಚಿಕ್ಕದಾದ ಡ್ರೋನ್ ವಿಮಾನಗಳಲ್ಲಿ ಮಕ್ಕಳ ಹಲ್ಲು ಕೀಳುವ ಘಟನೆಗಳು ನಡೆದು ಹೋಗಿವೆ. ಆದರೆ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಶಕ್ತಿಯ ಹೆಲಿಕಾಪ್ಟರನ್ನು ಬಳಕೆ ಮಾಡಲಾಗುತ್ತಿದೆ.

ಇದಕ್ಕಾಗಿ ಸ್ವಲ್ಪ ದೂರದಲ್ಲಿ ಮಗನನ್ನು ನಿಲ್ಲಿಸಿದ ಅಪ್ಪ ಮಗನ ಹಲ್ಲಿಗೆ ದಾರವನ್ನು ಕಟ್ಟಿದ್ದರು. ಬಳಿಕ ನಿಧಾನವಾಗಿ ಹೆಲಿಕಾಪ್ಟರನ್ನು ಚಾಲನೆ ಮಾಡಲು ತೊಡಗಿದ್ದರು.

ಹೆಲಿಕಾಪ್ಟರ್ ಫ್ಯಾನ್ ಶರವೇಗದಲ್ಲಿ ತಿರುಗಲು ಆರಂಭಿಸಿದಂತೆಯೇ ತೀವ್ರವಾದ ಗಾಳಿಯು ಬೀಸತೊಡಗಿತ್ತು. ಕ್ಷಣ ಮಾತ್ರದಲ್ಲಿ ಹೆಲಿಕಾಪ್ಟರ್ ಎಳೆದ ರಭಸಕ್ಕೆ ಹಲ್ಲು ಕಿತ್ತು ತೆಗೆಯಲಾಗಿದೆ.

ಹಲ್ಲು ಕಿತ್ತ ಬಳಿಕ ಮಗನ ಬಾಯಿಯಿಂದ ರಕ್ತ ಸುರಿಯಲಾರಂಭಿಸಿತ್ತು. ಆದರೂ ಮಗನ ಸಂತೋಷಕ್ಕೆ ಪಾರವೇ ಇರಲಿಲ್ಲ.

ಅಷ್ಟಕ್ಕೂ ಈ ದೈತ್ಯ ಹೆಲಿಕಾಪ್ಟರ್ 1,000 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯದ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.
ರೋಚಕ ವಿಡಿಯೋ ವೀಕ್ಷಿಸಿ


Click it and Unblock the Notifications








