ಛೆ! ನಿಮ್ಮ ಬಳಿಯೂ ಸೂಪರ್ ಕಾರು ಇಲ್ಲವೇ?

Written By:

ಇಂದಿನ ಯುವ ಸಮೂಹವು 'ಐ ಲವ್ ಯೂ' ಎನ್ನುವುದಕ್ಕಿಂತಲೂ ಮೊದಲು 'ನನ್ನ ಜೊತೆ ಡೇಟಿಂಗ್ ಮಾಡ್ತೀಯಾ' ಎಂದು ಮುಲಾಜಿಲ್ಲದೆ ಪ್ರಶ್ನಿಸುತ್ತಾರೆ. ಇಲ್ಲಿ ನಿಜಕ್ಕೂ ಪ್ರೀತಿ, ಪ್ರೇಮದ ಭಾವನೆ ಹುಟ್ಟಿಕೊಳ್ಳುತ್ತದೆಯೋ ಎಂಬುದು ಆಮೇಲಿನ ವಿಷಯ. ಮೊದಲು ಡೇಟಿಂಗ್ ಮಾಡೋಣ ಆಮೇಲೆ ಎಲ್ಲವೂ ಸೈ ಎನಿಸಿದರೆ ಜೀವನ ಸಾಗಿಸೋಣ ಎಂಬುದು ಪರಮಾರ್ಥ.

ಅಷ್ಟಕ್ಕೂ ಡೇಟಿಂಗ್ ಎಂಬ ವಿದೇಶ ಸಂಸ್ಕೃತಿ ನಿಧಾನವಾಗಿ ಭಾರತದಲ್ಲೂ ಜನಪ್ರಿಯತೆ ಗಳಿಸತೊಡಗಿದೆ. ಗ್ರಾಮೀಣ ಪ್ರದೇಶಕ್ಕಿಂತಲೂ ನಗರಗಳಲ್ಲಿ ಇದರ ಪ್ರಭಾವ ಜಾಸ್ತಿ ಅಂತ ಹೇಳಬಹುದು. ಕನ್ನಡ ಪದಕೋಶದಲ್ಲಿ ಡೇಟಿಂಗ್ ಎಂಬ ಪದವನ್ನು ಹುಡುಕಿಕೊಂಡು ಸಾಗಿದರೆ ನಿಮಗೆ ನಿಖರ ಮಾಹಿತಿ ದೊರಕುವ ಸಾಧ್ಯತೆ ಕಡಿಮೆಯಾಗಿರುತ್ತದೆ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಇಲ್ಲಿ ಡೇಟಿಂಗ್ ಎಂಬುದು ಪರಸ್ಪರ ಒಬ್ಬರನೊಬ್ಬರನ್ನು ಅರ್ಥ ಮಾಡಿಕೊಳ್ಳುವ ಸಮಯ. ಆದರೆ ಇದು ದೇಹ ಸುಖ ಹಂಚಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗುತ್ತಿರುವುದು ವಿಪರ್ಯಾಸವೇ ಸರಿ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಹಾಗೆ ಹೀಗೆ ಒಂದು ಡೇಟಿಂಗ್ ಸುದ್ದಿ ವಾಹನೋದ್ಯಮದಲ್ಲಿ ಯಾಕೆ ಪ್ರಾಮುಖ್ಯ ಗಿಟ್ಟಿಸಿಕೊಳ್ಳುತ್ತಿದೆ ಎಂಬ ಕುತೂಹಲ ಭಾವನೆ ನಿಮ್ಮಲ್ಲಿ ಉಂಟಾಗಬಹುದು. ವಿನಾ ಕಾರಣ ನಾವಿದನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯವೇ ಇರಲಿಲ್ಲ ಅಲ್ಲವೇ?

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಹೌದು, ನಾವು ಹೇಳುತ್ತಿರುವ ಡೇಟಿಂಗ್ ಗೂ ನೀವು ಯೋಚಿಸುತ್ತಿರುವ ಡೇಟಿಂಗ್ ಗೂ ಸಾಮ್ಯತೆಯಿದೆ. ಇದಕ್ಕೂ ಮೊದಲು ಒಂದು ಪ್ರಶ್ನೆ ಕೇಳಲಿಚ್ಛಿಸುತ್ತೇವೆ. ನಿಮ್ಮ ಬಳಿ ಸೂಪರ್ ಕಾರು ಇದೆಯೇ?

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಇದೆ ಎಂಬುದು ನಿಮ್ಮ ಉತ್ತರವಾದ್ದಲ್ಲಿ ಖಂಡಿತವಾಗಿಯೂ ನೀವಿದನ್ನು ಓದಲೇಬೇಕು. ಇನ್ನು ಇಲ್ಲ ಎಂಬ ಉತ್ತರ ಕೊಟ್ಟರೆ ನಿಮಗೂ ಅವಕಾಶ ಇರುತ್ತೆ! ಏಕೆ ಗೊತ್ತಾ? ಮುಂದುವರಿಯಿರಿ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಬ್ರಿಟನ್ ನಲ್ಲಿ ಸೂಪರ್ ಕಾರು ಮಾಲಿಕರಿಗಾಗಿ ಡೇಟಿಂಗ್ ವೆಬ್ ಸೈಟ್ ವೊಂದನ್ನು ರಚಿಸಲಾಗಿದೆ. ಅದುವೇ ಸೂಪರ್ ಕಾರ್ ಡೇಟಿಂಗ್ ಡಾಟ್ ಕಾಮ್

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಇದನ್ನು ಕೇಳಿದ ನಿಮ್ಮಲ್ಲೂ ಛೆ ನನ್ನ ಬಳಿಯೂ ಸೂಪರ್ ಕಾರು ಇದ್ದಿದ್ದರೆ ? ಎಂಬ ಅತಿಯಾಸೆ ಉಂಟಾದಿತು.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಇಲ್ಲಿ ಸೂಪರ್ ಕಾರ್ ಡೇಟಿಂಗ್ ಡಾಟ್ ಕಾಮ್ ವೆಬ್ ಸೈಟ್ ಹುಟ್ಟು ಹಾಕಲು ಕಾರಣವೊಂದಿದೆ. ನಿಮ್ಮ ಬಳಿ ದುಡ್ಡಿದೆ, ಕಾರಿದೆ, ಐಷಾರಾಮಿ ಮನೆಯಿದೆ. ಇಷ್ಟೆಲ್ಲ ಇದ್ದರೂ ಜೀವನದಲ್ಲಿ ಏಕಾಂತವನ್ನು ಅನುಭವಿಸುತ್ತಿದ್ದೀರಾ?

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಹೌದು, ಇಂತಹದೊಂದು ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಸೂಪರ್ ಕಾರ್ ಡೇಟಿಂಗ್ ಡಾಟ್ ಕಾಮ್ ವೆಬ್ ಸೈಟ್ ರೂಪುಗೊಂಡಿದೆ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

33ರ ಹರೆಯದ ಸಂಗೀತ್ ಸೆಗರಮ್ ಎಂಬವರು ಸೂಪರ್ ಕಾರ್ ಡೇಟಿಂಗ್ ವೆಬ್ ಸೈಟ್ ಗೆ ಚಾಲನೆ ನೀಡಿದ್ದಾರೆ. ಇವರು ಭಾರತೀಯರು ಎಂಬುದು ಇಲ್ಲಿ ಗಮನಾರ್ಹ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

2013ನೇ ಇಸವಿಯಲ್ಲಿ ಸಂಗೀತ್ ಅವರ ಮನದಲ್ಲಿ ಇಂತಹದೊಂದು ಯೋಚನೆ ಹೊಳೆದಿತ್ತು. ಸ್ವತ: ಲಂಬೋರ್ಗಿನಿ ಮರ್ಸಿಯಲಾಗೊ ಎಲ್ ಪಿ640 ರೋಡ್ ಸ್ಟರ್ ಕಾರಿನ ಒಡೆಯರಾಗಿರುವ ಅವರು ವೆಬ್ ಸೈಟ್ ರೂಪಿಸಿದ್ದಾರೆ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಅವರ ಪ್ರಕಾರ ಶ್ರೀಮಂತ ಉದ್ಯಮಿಗಳ ಬಳಿ ಸೂಪರ್ ಕಾರುಗಳು ಇದ್ದರೂ ಬಿಡುವಿಲ್ಲದ ಕೆಲಸದಿಂದಾಗಿ ಡೇಟಿಂಗ್ ಮಾಡುವುದರಿಂದ ವಂಚಿತರಾಗುತ್ತಾರೆ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಪ್ರಸ್ತುತ ವೆಬ್ ಸೈಟ್ ಸೂಪರ್ ಕಾರು ಹಾಗೂ ಗರಿಷ್ಠ ನಿರ್ವಹಣೆಯ ಕಾರು ಮಾಲಿಕರಿಗೆ ತಮ್ಮ ಐಷಾರಾಮಿ ಜೀವನ ಶೈಲಿಯನ್ನು ಹಂಚಿಕೊಳ್ಳುವ ಅತ್ಯುತ್ತಮ ವೇದಿಕೆಯಾಗಿರಲಿದೆ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಸೂಪರ್ ಕಾರ್ ಡೇಟಿಂಗ್ ಡಾಟ್ ಕಾಮ್ ವೆಬ್ ಸೈಟ್ 2015 ಫೆಬ್ರವರಿ 21ರಂದು ಜಾಗತಿಕ ಜಾಗತಿಕ ಬಿಡುಗಡೆ ಕಂಡಿದೆ. ಆದರೆ ಸದ್ಯಕ್ಕೆ ಅಮೆರಿಕ, ಕೆನೆಡಾ ಹಾಗೂ ಚೀನಾ ದೇಶಗಳಲ್ಲಿ ಲಭ್ಯವಿರುವುದಿಲ್ಲ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಇನ್ನು 2020ರ ವೇಳೆಯಾಗುವ ಸೂಪರ್ ಕಾರು ಜೀವನ ಶೈಲಿಯ ವಿಶ್ವದ ಅಲ್ಟಿಮೇಟ್ ಒನ್ ಲೈನ್ ಡೇಟಿಂಗ್ ಹಾಗೂ ಸೋಷಿಯಲ್ ನೆಟ್ ವರ್ಕಿಂಗ್ ವೆಬ್ ಸೈಟ್ ಎನಿಸಿಕೊಳ್ಳುವ ಗುರಿ ಹೊಂದಿದೆ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಅಂತೆಯೇ ಸೂಪರ್ ಕಾರು ಮಾಲಿಕರಿಗಾಗಿ ವಿಶೇಷ ಕಾರ್ಯಕ್ರಮ, ಭೋಜನಕೂಟ, ಮೋಜಿನ ಸವಾರಿ ಮುಂತಾದ ಕಾರ್ಯಕ್ರಮಗಳನ್ನು ವೆಬ್ ಸೈಟ್ ಏರ್ಪಡಿಸುತ್ತಿದೆ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಅಷ್ಟೇ ಅಲ್ಲದೆ ಪ್ರಸ್ತುತ ವೆಬ್ ಸೈಟ್ ನಲ್ಲಿ ಈಗಾಗಲೇ ನಾಲ್ಕು ಟ್ರೇಡ್ ಮಾರ್ಕ್ ಗಳಿಗಾಗಿ ದಾಖಲಾತಿಯನ್ನು ಪಡೆದುಕೊಂಡಿದೆ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಸೂಪರ್ ಕಾರು ಜೀವನ ಶೈಲಿಯನ್ನು ಹೆಚ್ಚು ಅನುಕೂಲಕರ ಹಾಗೂ ಆನಂದಮಯವಾಗಿಸುವುದು ಈ ಡೇಟಿಂಗ್ ಹಾಗೂ ಸಾಮಾಜಿಕ ತಾಣದ ಉದ್ದೇಶವಾಗಿದೆ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಅಷ್ಟಕ್ಕೂ ನಿಮ್ಮ ಬಳಿ ಸೂಪರ್ ಕಾರು ಇಲ್ಲದಿದ್ದರೆ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಇದಕ್ಕೂ ಇಲ್ಲಿ ಅವಕಾಶ ಕೊಡಲಾಗಿದ್ದು ಫೈನ್ ಲಿವಿಂಗ್ ಕಂಪೇನಿಯನ್ ಎಂಬ ವಿಭಾಗದಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಹಾಗೆಯೇ ಸೂಪರ್ ಕಾರ್ ಡೇಟಿಂಗ್ (ಸೂಪರ್ ಕಾರ್ ಮಾಲಿಕರಿಗೆ), ಫೈನ್ ಲಿವಿಂಗ್ ಕಂಪೇನಿಯನ್ (ಸೂಪರ್ ಕಾರು ಇಲ್ಲದವರಿಗೆ), ಸೂಪರ್ ಕಾರ್ ಸರ್ಕಲ್ (ಸೂಪರ್ ಕಾರು ಮಾಲಿಕರಿಗೆ ಪ್ರೀಮಿಯಂ ಸೋಷಿಯಲ್ ನೆಟ್ ವರ್ಕಿಂಗ್ ಜಾಲ) ಎಂಬ ವಿಭಾಗಗಳಿರಲಿದೆ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಆದರೆ ಇವೆಲ್ಲವೂ ನಿಮಗೆ ಉಚಿತವಾಗಿ ದೊರಕವುದಿಲ್ಲ. ಬದಲಾಗಿ ದುಡ್ಡು ಪಾವತಿ ಮಾಡಬೇಕಾಗುತ್ತದೆ. ಆಗಲೇ ಶ್ರೀಮಂತರು ನಾವು ಇನ್ನು ಈ ಫೀಸ್ ಯಾವ ಲೆಕ್ಕ ಅಲ್ಲವೇ ?

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಒಟ್ಟಾರೆಯಾಗಿ ನಮ್ಮಲ್ಲಿ ಮೂಡುವ ಕಟ್ಟ ಕಡೆಯ ಪ್ರಶ್ನೆ ನಿಮ್ಮಲ್ಲಿ ಕೋಟಿ ಗಟ್ಟಲೆ ರುಪಾಯಿಗಳ ಸೂಪರ್ ಕಾರು ಇದ್ದರೆ ಮಾತ್ರ ಸಾಲದು. ಡೇಟಿಂಗ್ ಗಾಗಿ ಆ ಸೂಪರ್ ಕಾರನ್ನು ಇಷ್ಟಪಡುವ ಹುಡುಗಿಯ ಮನ ಸಳೆಯುವಲ್ಲಿಯೂ ನೀವು ಯಶಸ್ವಿಯಾಗಬೇಕು. ಇಲ್ಲವಾದ್ದಲ್ಲಿ ಎಲ್ಲವೂ ನಿಷ್ಪಪ್ರಯೋಜಕ.

ಸೂಪರ್ ಕಾರು ಮಾಲಿಕರಿಗೆ 'ಡೇಟಿಂಗ್' ವೆಬ್ ಸೈಟ್

ಇನ್ನು ಭಾರತದಲ್ಲೂ ಇಂತಹದೊಂದು ವೆಬ್ ಸೈಟ್ ನಿರ್ಮಾಣವಾದರೆ ಹೇಗಿರಬಹುದು? ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

English summary
Dating Website For Supercar Owners: Does India Need Something Like This or Is There Anything In India Like This?
Story first published: Wednesday, April 15, 2015, 17:20 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark