ತಮ್ಮ ಹೊಸ ಬಹುಕೋಟಿ ಬೆಲೆಯ ಕಾರಿನಲ್ಲಿ ಕಾಣಿಸಿಕೊಂಡ ಕನ್ನಡತಿ ದೀಪಿಕಾ ಪಡುಕೋಣೆ

ಭಾರತದಲ್ಲಿನ ಸೆಲೆಬ್ರಿಟಿಗಳ ಬಗ್ಗೆ ಯೋಚಿಸಿದಾಗ, ಅವರು ಬಳಸುವ ಐಷಾರಾಮಿ ಕಾರುಗಳು ನಮ್ಮ ಮನಸ್ಸಿಗೆ ಬರುತ್ತದೆ. ಬಾಲಿವುಡ್ ಸೆಲಬ್ರಿಟಿಗಳು ಆಗಾಗ ತಮ್ಮ ದುಬಾರಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಒಂದೆರಡು ತಿಂಗಳ ಹಿಂದೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊಚ್ಚಹೊಸ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್600 ಖರೀದಿಸಿದರು. 2021ರಲ್ಲಿ ಅವರ ಪತಿ ರಣವೀರ್ ಸಿಂಗ್ ಇದೇ ಮಾದರಿಯ ಮರ್ಸಿಡಿಸ್ ಜಿಎಲ್ಎಸ್600 ಖರಿದಿಸಿದ್ದರು. ಇದೀಗ ಹೊಸ ಜಿಎಲ್ಎಸ್600 ಎಸ್‍ಯುವಿಯಲ್ಲಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡಿದ್ದಾರೆ.

ತಮ್ಮ ಹೊಸ ಬಹುಕೋಟಿ ಬೆಲೆಯ ಕಾರಿನಲ್ಲಿ ಕಾಣಿಸಿಕೊಂಡ ಕನ್ನಡತಿ ದೀಪಿಕಾ ಪಡುಕೋಣೆ

ಮರ್ಸಿಡಿಸ್-ಮೇಬ್ಯಾಕ್ ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿತು. ದೇಶಕ್ಕೆ ಆರಂಭದಲ್ಲಿ ನಿಗದಿಪಡಿಸಿದ ಎಲ್ಲಾ 50 ಯುನಿಟ್ ಗಳು ಮಾರಾಟವಾಗಿತ್ತು. ಈ ಕಾರಿನ ಮೂಲ ಬೆಲೆಯು ಯಾವುದೇ ಕಸ್ಟಮೈಸೇಶನ್ ಆಯ್ಕೆಗಳಿಲ್ಲದೆ ಎಕ್ಸ್ ಶೋ ರೂಂ ಪ್ರಕಾರ ರೂ,2.43 ಕೋಟಿ ಆಗಿದೆ.

ಕುತೂಹಲಕಾರಿಯಾಗಿ, ರಣವೀರ್ ಸಿಂಗ್ ಮತ್ತು ದೀಪಿಕಾ ಇಬ್ಬರೂ ಒಂದೇ ಕ್ಯಾವನ್‌ಸೈಟ್ ಬ್ಲೂ ಶೇಡ್‌ನಲ್ಲಿ ಅಲ್ಟ್ರಾ ಐಷಾರಾಮಿ ಎಸ್‌ಯುವಿ ಹೊಂದಿದ್ದಾರೆ. ಕುತೂಹಲಕಾರಿಯಾಗಿ, ರಣವೀರ್ ಸಿಂಗ್ ತಮ್ಮ 36 ನೇ ಹುಟ್ಟುಹಬ್ಬದಂದು ಹೊಸ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್60 ಎ‍ಯುವಿಯನ್ನು ಖರೀದಿಸಿದರು. ಈ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್600 ಎಸ್‍ಯುವಿಯು ಒಂದೇ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ.

ತಮ್ಮ ಹೊಸ ಬಹುಕೋಟಿ ಬೆಲೆಯ ಕಾರಿನಲ್ಲಿ ಕಾಣಿಸಿಕೊಂಡ ಕನ್ನಡತಿ ದೀಪಿಕಾ

ಇನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ತವರು ಬೆಂಗಳೂರು ಆಗಿದೆ. ಬೆಂಗಳೂರಿನಲ್ಲೇ ಶಾಲಾ ಶಿಕ್ಷಣವನ್ನೂ ಮಾಡಿದ್ದಾರೆ. ದೀಪಿಕಾ ಓದಿದ್ದು ಬೆಂಗಳೂರಿನ ಸೋಫಿಯಾ ಹೈಸ್ಕೂಲಿನಲ್ಲಿ. ನಂತರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಓದಿದ್ದಾರೆ. ದೀಪಿಕಾ ಪಡುಕೋಣೆ ಅವರು 2006 ರಲ್ಲಿ ಕನ್ನಡ ಚಲನಚಿತ್ರ 'ಐಶ್ವರ್ಯ' ನಟಿಯಾಗಿ ಮಿಂಚಿದರು. ನಂತರ, 2007 ರಲ್ಲಿ, ಅವರು 'ಓಂ ಶಾಂತಿ ಓಂ' ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರದಲ್ಲೇ ಶಾರುಖ್ ಖಾನ್ ಅವರ ನಟಿಯಾಗುವ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದರು.

ಮರ್ಸಿಡಿಸ್-ಮೇಬ್ಯಾಕ್ ಸಿಬಿಯು ಆಮದು ಮತ್ತು ಈ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಅಂತ್ಯದವರೆಗೆ ಮಾರಾಟವಾಗಿದೆ, ಏಕೆಂದರೆ ದೇಶಕ್ಕೆ ನಿಯೋಜಿಸಲಾದ ಎಲ್ಲಾ ಯುನಿಟ್ ಗಳನ್ನು 2023 ರವರೆಗೆ ಮಾರಾಟವಾಗುತ್ತವೆ. ಗ್ರಾಹಕರ ಬೇಡಿಕೆಯೆಂತೆ 4 ಸೀಟರ್ ಅಥವಾ 5 ಸೀಟರ್ ಮಾದರಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ಸರಣಿ ಕಾರುಗಳಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ. ಇದರ ಒಳಗೆ ಮತ್ತು ಹೊರಗೆ ಬೆಸ್ಪೋಕ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎಸ್‍ಯುವಿಯ ಒಟ್ಟಾರೆ ವಿನ್ಯಾಸವು ಐಷಾರಾಮಿ ಮತ್ತು ಪ್ರೀಮಿಯಂ ಆಗಿದೆ. ಇದರಲ್ಲಿ ದೊಡ್ಡದಾದ ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ವಿಂಡೋ ಲೈನ್, ಸೈಡ್-ಸ್ಟೆಪ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಡಿಸೈನ್ ಆಕ್ಸೆಂಟ್, ರೂಫ್ ರೈಲ್ಸ್ ಮತ್ತು ಸ್ಪೋರ್ಟಿ ಎಕ್ಸಾಸ್ ನೋಟ್ ಹೊಂದಿದೆ.

ಪ್ರೀಮಿಯಂ ಐಷಾರಾಮಿ ಎಸ್‌ಯುವಿ ಕಾರಿನ ವಿನ್ಯಾಸಕ್ಕೆ ತಕ್ಕಂತೆ 23 ಇಂಚಿನ ಬ್ರಷ್ಡ್ ಮಲ್ಟಿ-ಸ್ಪೋಕ್ ವೀಲ್ಹ್ ಆಯ್ಕೆ ಜೊತೆಗೆ ವಿಂಡೋ ಪಿಲ್ಲರ್, ರೂಫ್ ಮೇಲೆ ಕಪ್ಪು ಬಣ್ಣದ ಡ್ಯುಯಲ್ ಟೋನ್ ಪೇಂಟ್ ಸ್ಕೀಮ್ ಮತ್ತು 'ಮೇಬ್ಯಾಕ್' ಬ್ರಾಂಡ್ ಬ್ಯಾಡ್ಜ್ ಹೊಂದಿದೆ. ಈ ಎಸ್‍ಯುವು ಕಾರು ಮಾದರಿಯ ಪ್ರತಿ ಸೀಟ್ ವೆಂಟಿಲೆಟರ್ ಮತ್ತು ಮಸಾಜ್ ಫಂಕ್ಷನ್ ವೈಶಿಷ್ಟ್ಯತೆ ಒಳಗೊಂಡಿದ್ದು, ಪ್ರತಿ ಸೀಟ್ ನಲ್ಲೂ ಆಡಿಯೋ, ಹವಾಮಾನ ನಿಯಂತ್ರಣ, ಆಂಬಿಯೆಂಟ್ ಲೈಟಿಂಗ್, ಸನ್ಶೇಡ್ಸ್ ಮತ್ತು ನ್ಯಾವಿಗೇಷನ್ ಅನ್ನು ಒಳಗೊಂಡಿದೆ.

ಹಿಂಭಾಗದಲ್ಲಿ ಫೋರ್ಡರ್‌ಗಳಲ್ಲಿ ರೆಫ್ರಿಜರೇಟರ್ ಅನ್ನು ಸಹ ಒಳಗೊಂಡಿದೆ. ಇನ್ನು ದೊಡ್ಡದಾದ ಪನೋರಮಿಕ್ ಮೂನ್‌ರೂಫ್, 12.3-ಇಂಚಿನ ಎಂಬಿಯುಎಕ್ಸ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಮತ್ತು 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬರ್ಮೆಸ್ಟರ್ ಸರೌಂಡ್ ಸೌಂಡ್ ಸಿಸ್ಟಮ್, 64 ಬಣ್ಣ ಮತ್ತು ಹೆಚ್ಚಿನ ಎಲ್ಇಡಿ ಆಪ್ಟಿಕಲ್ ಫೈಬರ್ ಆಂಬಿಯೆಂಟ್ ಲೈಟಿಂಗ್ ಅನ್ನು ಒಳಗೊಂಡಿದೆ.

ಈ ಎಸ್‍ಯುವಿ ಮಾದರಿಯಲ್ಲಿ ವಿಶೇಷ ತಂತ್ರಜ್ಞಾನ ಪ್ರೇರಿತ ಇ-ಆಕ್ಟಿವ್ ಬಾಡಿ ಕಂಟ್ರೋಲ್ ಸಸ್ಪೆಂಕ್ಷನ್ ಸಿಸ್ಟಂ ಹೊಂದಿದ್ದು, ಫ್ರಂಟ್ ಕ್ಯಾಮೆರಾ ಮೂಲಕ ಕಾರು ಚಾಲನೆಯಲ್ಲಿರುವಾಗ ರಸ್ತೆಯನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತು ಸಸ್ಪೆಂಕ್ಷನ್ ಹೊಂದಾಣಿಕೆಯೊಂದಿಗೆ ಅಂಡರ್ ಬಾಡಿ ಡ್ಯಾಮೆಜ್ ತಪ್ಪಿಸಲು ನೆರವಾಗುತ್ತದೆ. ಈ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಎಸ್‍ಯುವಿಯು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಈ ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9 ಜಿ-ಟ್ರಾನಿಕ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ 550ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಂಜಿನ್‌ನಲ್ಲಿ 21ಬಿಎಚ್‌ಪಿ ಮತ್ತು 249ಎನ್ಎಂ ಟಾರ್ಕ್ ಕೊಡುಗೆ ನೀಡುವ ಸಂಯೋಜಿತ ಇಕ್ಯೂ ಬೂಸ್ಟ್ ಸ್ಟಾರ್ಟರ್-ಜನರೇಟರ್ ಅನ್ನು ಸಹ ಹೊಂದಿದೆ.

Most Read Articles

Kannada
English summary
Deepika padukone spotted in her new maybach gls600
Story first published: Friday, November 18, 2022, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X