ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ವಾಹನ ಅಪಘಾತಗಳು ಕರೋನಾ ವೈರಸ್‌ಗಿಂತ ಹೆಚ್ಚಿನ ಜೀವಗಳನ್ನು ಬಲಿ ತೆಗೆದುಕೊಂಡಿವೆ. ಭಾರತದಲ್ಲಿ ಪ್ರತಿವರ್ಷ 1.50 ಲಕ್ಷಕ್ಕೂ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ.

ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ಆದರೂ ಸಂಚಾರ ನಿಯಮ ಉಲ್ಲಂಘನೆಗಳು ಕಡಿಮೆಯಾಗಿಲ್ಲ. ಸದ್ಯ ಅಸ್ತಿತ್ವದಲ್ಲಿರುವ ಸಂಚಾರ ನಿಯಮಗಳಲ್ಲಿ ಸರ್ಕಾರವು ಕೆಲವು ಬದಲಾವಣೆಗಳನ್ನು ಮಾಡುತ್ತಿದೆ. ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಚಲನ್ ನೀಡುವ ಬದಲು ಸ್ಥಳದಲ್ಲಿಯೇ ದಂಡ ವಿಧಿಸಲು ಮುಂದಾಗಿದೆ.

ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ಜೊತೆಗೆ ಸಂಚಾರ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಮೋಟಾರು ವಾಹನ ಕಾಯ್ದೆಯನ್ನು ಹಲವಾರು ಬಾರಿ ತಿದ್ದುಪಡಿ ಮಾಡಲಾಗಿದೆ. ನಿಯಮಗಳನ್ನು ಉಲ್ಲಂಘಿಸುವವರಿಗೆ ಹೆಚ್ಚಿನ ಪ್ರಮಾಣದ ದಂಡ ವಿಧಿಸಲಾಗುತ್ತದೆ.

ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ದೆಹಲಿಯ ರಾಜ್ಯ ಸರ್ಕಾರವು ಬದಲಾವಣೆಯನ್ನು ಮಾಡಿದೆ. ವರದಿಗಳ ಪ್ರಕಾರ, ದೆಹಲಿಯಲ್ಲಿ ನ್ಯಾಯಾಲಯಗಳಿಗೆ ಕಳುಹಿಸುವ ದಂಡಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೆಹಲಿ ಪೊಲೀಸರು ವಾರಕ್ಕೆ 5 ರಿಂದ 7 ಸಾವಿರ ದಂಡ ವಿಧಿಸಿ ನ್ಯಾಯಾಲಯಗಳಿಗೆ ಕಳುಹಿಸುತ್ತಿದ್ದಾರೆ. ಆದರೆ ನ್ಯಾಯಾಲಯದ ಕೊರತೆಯಿಂದಾಗಿ ಲಕ್ಷಾಂತರ ದಂಡಗಳು ಸ್ಥಗಿತಗೊಳ್ಳುತ್ತಿವೆ.

ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ಈ ಕಾರಣಕ್ಕೆ ದೆಹಲಿ ಸರ್ಕಾರವು ಇದನ್ನು ಪರಿಷ್ಕರಿಸಲು ಮುಂದಾಗಿದೆ. ಸ್ಥಳದಲ್ಲಿಯೇ ದಂಡವನ್ನು ವಿಧಿಸುವುದರಿಂದ ದೆಹಲಿ ಪೊಲೀಸರು ಹೈಸ್ಪೀಡ್ ಕ್ಯಾಮೆರಾಗಳ ಬಳಕೆಯನ್ನು ನಿಲ್ಲಿಸಿದ್ದಾರೆ. ಸದ್ಯಕ್ಕೆಈ ಕ್ಯಾಮರಾಗಳನ್ನು ವೇಗವಾಗಿ ಚಲಿಸುವ ವಾಹನಗಳನ್ನು ಪತ್ತೆ ಹಚ್ಚಲು ಮಾತ್ರ ಬಳಸುತ್ತಿದ್ದಾರೆ.

ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ಕೆಲವು ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಸ್ಪಾಟ್ ಫೈನ್ ವಿಧಿಸಲು ಸಾಧ್ಯವಿಲ್ಲದ ಕಾರಣ ದಂಡದ ಚಲನ್ ಅನ್ನು ಮನೆಗೆ ಕಳುಹಿಸಲಾಗುತ್ತದೆ. ಇದಕ್ಕಾಗಿ ದೆಹಲಿ ಸರ್ಕಾರವು ಸ್ಥಳದಲ್ಲಿಯೇದಂಡ ವಿಧಿಸಲು ಅನುವಾಗುವಂತೆ ಕೆಲವು ಬದಲಾವಣೆಗಳನ್ನು ಮಾಡಿದೆ.

ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ಖಾಸಗಿ ವಾಹನಗಳು ಅತಿ ವೇಗವಾಗಿ ವಾಹನ ಚಲಾಯಿಸಿದರೆ ರೂ. 2 ಸಾವಿರ ದಂಡ ಕಮರ್ಷಿಯಲ್ ವಾಹನಗಳು ಅತಿ ವೇಗವಾಗಿ ವಾಹನ ಚಾಲನೆ ಮಾಡಿದರೆ ರೂ. 4 ಸಾವಿರ ದಂಡ ವಿಧಿಸಲಾಗುತ್ತದೆ.

ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ಅದೇ ರೀತಿ ಹೊಸ ಮೋಟಾರು ವಾಹನ ಕಾಯ್ದೆಯಡಿ ಸಿಗ್ನಲ್ ಜಂಪ್ ಮಾಡುವ ಖಾಸಗಿ ಹಾಗೂ ಕಮರ್ಷಿಯಲ್ ವಾಹನಗಳಿಗೆ ರೂ. ಐದು ಸಾವಿರ ದಂಡ ವಿಧಿಸಲಾಗುವುದು. ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಬಹುದು ಎಂದು ದೆಹಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವವರಿಗೆ ಮೊದಲ ಬಾರಿಗೆ ರೂ. 5 ಸಾವಿರ ದಂಡ ವಿಧಿಸಲಾಗುವುದು. ಎರಡನೇ ಬಾರಿಗೆ ರೂ. 10 ಸಾವಿರ ದಂಡ ವಿಧಿಸಲಾಗುವುದು. ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮೊದಲ ಬಾರಿಯ ಉಲ್ಲಂಘನೆಗಾಗಿ ಒಂದು ವರ್ಷದ ಜೈಲು ಶಿಕ್ಷೆ, ಎರಡನೇ ಬಾರಿಗೆ ಎರಡು ವರ್ಷ ಶಿಕ್ಷೆ ವಿಧಿಸಲಾಗುತ್ತದೆ.

ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ಡ್ರಿಂಕ್ ಮತ್ತು ಡ್ರೈವ್ ಗೆ ರೂ.15 ಸಾವಿರ ದಂಡ ವಿಧಿಸಲಾಗುವುದು. ದಂಡ ಪಾವತಿಸಲು ವಿಫಲವಾದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಅದೇ ವ್ಯಕ್ತಿಯು ಪದೇ ಪದೇ ಅದೇ ತಪ್ಪನ್ನು ಮಾಡಿದರೆ, ರೂ. 15 ಸಾವಿರ ದಂಡ ಅಥವಾ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು.

ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ದೆಹಲಿಯಲ್ಲಿ ಸಿಗ್ನಲ್‌ ಜಂಪ್, ವಾಹನ ಚಾಲನೆ ವೇಳೆ ಸೆಲ್‌ಫೋನ್ ಬಳಸಿ ಅಪಘಾತಗಳಿಗೆ ಕಾರಣವಾಗುವುದು, ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್‌ ಮಾಡುವುದು, ಇನ್ಶೂರೆನ್ಸ್ ಇಲ್ಲದೆವಾಹನವನ್ನು ಚಲಾಯಿಸುವುದು, ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವುದು ಹೆಚ್ಚಾಗಿದೆ.

ಸ್ಪಾಟ್ ಫೈನ್ ವಿಧಿಸಲು ಮುಂದಾದ ಸರ್ಕಾರ

ಈ ಹೊಸ ನಿಯಮದಿಂದಾಗಿ ವಾಹನ ಸವಾರರು ಭಯಭೀತರಾಗಿದ್ದಾರೆ. ದೆಹಲಿಯ ಜನರು ಇನ್ನು ಮುಂದೆ ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ,ಸಾವಿರಾರು ರೂಪಾಯಿಗಳನ್ನು ದಂಡವಾಗಿ ಪಾವತಿಸಲು ಇಲ್ಲವೇ ಜೈಲು ಶಿಕ್ಷೆಯನ್ನು ಎದುರಿಸ ಬೇಕಾಗುತ್ತದೆ. ಹೊಸ ನಿಯಮದಿಂದಾಗಿ ರಾಜಧಾನಿ ದೆಹಲಿಯಲ್ಲಿ ಸಂಚಾರ ಉಲ್ಲಂಘನೆಯು

ಕಡಿಮೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Delhi government to impose spot fine for traffic violations. Read in Kannada.
Story first published: Tuesday, March 17, 2020, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X