ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಸಂಚಾರ ನಿಯಮಗಳನ್ನು ಸುಧಾರಿಸಲು ಹಾಗೂ ರಸ್ತೆ ಚಾಲಕರ ಸುರಕ್ಷತೆಯನ್ನು ಹೆಚ್ಚಿಸಲು, ಕೇಂದ್ರ ಸರ್ಕಾರವು 2019ರ 1ರಂದು ತಿದ್ದುಪಡಿ ಮಾಡಲಾದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆಯನ್ನು ದೇಶದ ಹಲವು ರಾಜ್ಯಗಳಲ್ಲಿ ಜಾರಿಗೊಳಿಸಲಾಗಿತ್ತು. ಈ ಮೋಟಾರು ವಾಹನ ಕಾಯ್ದೆಯನ್ನು ದೆಹಲಿಯಲ್ಲಿಯೂ ಜಾರಿಗೆ ತರಲಾಯಿತು.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಹೊಸ ನಿಯಮಗಳ ಪ್ರಕಾರ, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಜೊತೆಗೆ ಹೊಸ ಸುರಕ್ಷತಾ ನಿಯಮಗಳನ್ನು ಸಹ ಈ ಕಾಯ್ದೆಗೆ ಸೇರಿಸಲಾಗಿದೆ. ತಿದ್ದುಪಡಿ ಮಾಡಲಾದ ಈ ಮೋಟಾರು ವಾಹನ ಕಾಯ್ದೆಯಲ್ಲಿ ಹಲವಾರು ನಿಯಮಗಳಿದ್ದು, ಅದರ ಆಧಾರದ ಮೇಲೆ ದಂಡ ಅಥವಾ ಚಲನ್ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಾಹನ ಚಲಾಯಿಸುವವರು ಹೊಸ ಸಂಚಾರ ನಿಯಮಗಳ ಬಗ್ಗೆ ತಿಳಿದಿರಬೇಕು.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಇನ್ನು ಮುಂದೆ ದೆಹಲಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ ರೂ. 5,000 ದಂಡ ಅಥವಾ ಮೂರು ತಿಂಗಳ ಸಮುದಾಯ ಸೇವೆಯ ಶಿಕ್ಷೆ ನೀಡಲಾಗುತ್ತದೆ. ಕುಡಿದು ವಾಹನ ಚಲಾಯಿಸಿದರೆ ರೂ. 10,000 ರೂಪಾಯಿ ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದು. ಅಪರಾಧದ ತೀವ್ರತೆಗೆ ಅನುಗುಣವಾಗಿ ರೂ. 15,000 ದಂಡ ಅಥವಾ 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಮಿತಿ ಮೀರಿದ ವೇಗದಲ್ಲಿ, ಲಘು ಮೋಟಾರು ವಾಹನ ಚಾಲನೆ ಮಾಡಿದರೆ ರೂ. 1,000 ದಂಡ ವಿಧಿಸಬಹುದು. ಇದೇ ವೇಳೆ ನಾಲ್ಕು ಚಕ್ರ ಅಥವಾ ಭಾರೀ ವಾಹನಗಳನ್ನು ಅತಿ ವೇಗವಾಗಿ ಚಾಲನೆ ಮಾಡಿದರೆ ರೂ. 5,000 ಗಳವರೆಗೆ ದಂಡ ವಿಧಿಸಬಹುದು. ಸಂಚಾರಕ್ಕೆ ಸಂಬಂಧಿಸಿದ ಯಾವುದೇ ನಿಯಮ ಅಥವಾ ಕಾನೂನನ್ನು ಉಲ್ಲಂಘಿಸಿದರೆ ರೂ. 5,000 ದಂಡ ವಿಧಿಸಬಹುದು.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಅಪ್ರಾಪ್ತ ಮಕ್ಕಳಿಗೆ ಸ್ಕೂಟಿ, ಬೈಕ್ ಅಥವಾ ಕಾರು ಅಥವಾ ಯಾವುದೇ ಲಘು ಅಥವಾ ಭಾರೀ ಮೋಟಾರು ವಾಹನವನ್ನು ನೀಡಿದರೆ ರೂ. 25,000 ದಂಡ ಅಥವಾ 3 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು. ಈ ಅಪರಾಧಕ್ಕಾಗಿ ವಾಹನದ ನೋಂದಣಿಯನ್ನು ಸಹ ರದ್ದುಗೊಳಿಸಬಹುದು. ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ ಅಡಿಯಲ್ಲಿ ಮಾನ್ಯತೆ ಇಲ್ಲದೇ ದೆಹಲಿಯಲ್ಲಿ ವಾಹನ ಚಲಾಯಿಸಿದರೆ ರೂ. 10,000 ಗಳವರೆಗೆ ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ ವಿಧಿಸಬಹುದು.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಇನ್ನು ದೆಹಲಿ ಸಾರಿಗೆ ಇಲಾಖೆಯು ಆಗಸ್ಟ್ 7 ರಿಂದ ತನ್ನ ಬಹುತೇಕ ಎಲ್ಲಾ ಸೇವೆಗಳನ್ನು ಆನ್ ಲೈನ್ ಮೂಲಕ ನೀಡುತ್ತಿದೆ. ಇಲಾಖೆಯು ಒಟ್ಟು 33 ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡುತ್ತಿದೆ. ಇವುಗಳಲ್ಲಿ ಕಲಿಯುವವರ ಪರವಾನಗಿ, ನಕಲಿ ಚಾಲನಾ ಪರವಾನಗಿ, ವಿಳಾಸ ಬದಲಾವಣೆ, ನೋಂದಣಿ ಪ್ರಮಾಣಪತ್ರ, ಎನ್‌ಒಸಿ, ಪರವಾನಗಿಗಳು ಸೇರಿದಂತೆ ಇತರ ಸೇವೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಫೇಸ್ ಲೆಸ್ ಸೇವೆ ಆರಂಭವಾದ ನಂತರ ಚಾಲನಾ ಪರವಾನಗಿ ಅರ್ಜಿದಾರರು ಖಾಯಂ ಚಾಲನಾ ಪರವಾನಗಿ ಹಾಗೂ ಫಿಟ್ ನೆಸ್ ಪರೀಕ್ಷೆ ಪ್ರಮಾಣ ಪತ್ರ ಪಡೆಯಲು ಮಾತ್ರ ಸಾರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಬೇಕಾಗಿದೆ. ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವಾಗ, ಆನ್‌ಲೈನ್ ಪರೀಕ್ಷೆಯ ದಿನಾಂಕ ಹಾಗೂ ಸಮಯದ ಸ್ಲಾಟ್ ಬಗ್ಗೆ ಅರ್ಜಿದಾರರಿಗೆ ತಿಳಿಸಲಾಗುತ್ತದೆ.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಇದರ ನಂತರ, ಅರ್ಜಿದಾರರು ಆನ್‌ಲೈನ್ ಮೂಲಕ ಮನೆಯಲ್ಲೇ ಕುಳಿತು ನಿಗದಿತ ಸಮಯದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದು ಆಧಾರ್ ಸಕ್ರಿಯಗೊಳಿಸಿದ ವೇದಿಕೆಯಾಗಿದ್ದು, ಇದರಲ್ಲಿ ಅರ್ಜಿದಾರರ ಬಯೋಮೆಟ್ರಿಕ್ ಮಾಹಿತಿಯನ್ನು ಸಾಫ್ಟ್‌ವೇರ್ ಗುರುತಿಸುತ್ತದೆ. ಇದು ಅರ್ಜಿದಾರರು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ತೋರಿಸುತ್ತದೆ. ಈ ಆನ್‌ಲೈನ್ ಪರೀಕ್ಷೆಯ ನಂತರ, ಅರ್ಜಿದಾರರು ಶಾಶ್ವತ ಪರವಾನಗಿಗಾಗಿ ಆರ್‌ಟಿಒಗೆ ಬಂದು ಡ್ರೈವಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಇದೇ ವೇಳೆ ದೆಹಲಿ ಸರ್ಕಾರವು 2020ರ ಫೆಬ್ರವರಿ ಹಾಗೂ 2021ರ ನವೆಂಬರ್ ನಡುವೆ ಮುಕ್ತಾಯಗೊಳ್ಳುವ ಕಲಿಕಾ ಪರವಾನಗಿಯ ಮಾನ್ಯತೆಯನ್ನು 2022ರ ಜನವರಿ 31ರವರೆಗೆ ವಿಸ್ತರಿಸಿದೆ. ಕೋವಿಡ್ 19 ಸಾಂಕ್ರಾಮಿಕ ರೋಗ ಹಾಗೂ ಡ್ರೈವಿಂಗ್ ಪರೀಕ್ಷೆಗೆ ಸ್ಲಾಟ್‌ಗಳನ್ನು ಪಡೆಯಲು ಜನರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ದೆಹಲಿ ಸಾರಿಗೆ ಇಲಾಖೆಯು ತನ್ನ ಆದೇಶದಲ್ಲಿ ವಿವಿಧ ಆರ್‌ಟಿಒ ಕಚೇರಿಗಳು ಹಾಗೂ ಫಿಟ್‌ನೆಸ್ ಕೇಂದ್ರಗಳಲ್ಲಿ ಭಾರೀ ಜನದಟ್ಟಣೆ ಉಂಟಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈಗ ದೆಹಲಿಯಲ್ಲಿ ವಾಹನವನ್ನು ಖರೀದಿಸುವವರು ನೋಂದಣಿ ಪ್ರಮಾಣಪತ್ರಕ್ಕಾಗಿ (ಆರ್‌ಸಿ) ಹೆಚ್ಚು ಸಮಯ ಕಾಯಬೇಕಾಗಿಲ್ಲ. ಅವರು ಆರ್‌ಟಿಒಗೂ ಹೋಗಬೇಕಾಗಿಲ್ಲ.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಇನ್ನು ಮುಂದೆ ದೆಹಲಿಯ ವಾಹನ ವಿತರಕರೇ ತಮ್ಮ ಗ್ರಾಹಕರಿಗೆ ವಾಹನ ನೋಂದಣಿ ಸಂಖ್ಯೆಗಳನ್ನು ನೀಡಲಿದ್ದಾರೆ. ದೆಹಲಿಯ ವಾಹನ ವಿತರಕರು ಸ್ಥಳದಲ್ಲೇ ನೋಂದಣಿ ಪ್ರಮಾಣಪತ್ರಗಳನ್ನು ಒದಗಿಸುವ ಸೌಲಭ್ಯವನ್ನು ಆರಂಭಿಸಿದ್ದಾರೆ.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಈಗ ಹೊಸ ಆರ್‌ಸಿಯನ್ನು ಹೈಟೆಕ್ ಮಾಡಲಾಗಿದೆ. ಹೊಸ ಆರ್‌ಸಿಯಲ್ಲಿ ಹಳೆಯ ಚಿಪ್ ಬದಲಿಸಿ ಹೊಲೊಗ್ರಾಮ್ ನೀಡಲಾಗುತ್ತದೆ. ಈ ಹಾಲೋಗ್ರಾಮ್‌ನಿಂದ ಅಸಲಿ ಆರ್‌ಸಿಗಳನ್ನು ನಕಲು ಮಾಡುವ ಸಮಸ್ಯೆಯೂ ಕೊನೆಗೊಳ್ಳುತ್ತದೆ.

ಸಂಚಾರ ಉಲ್ಲಂಘನೆ ದಂಡದ ಮೊತ್ತ ಹೆಚ್ಚಿಸಿದ ದೆಹಲಿ ಪೊಲೀಸರು

ಹೊಸ ಆರ್‌ಸಿಯಲ್ಲಿ ಕ್ಯೂಆರ್ ಕೋಡ್ ನೀಡಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿ ಚಾಲಕ ಹಾಗೂ ಅವರ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಬಹುದು. ಈ ವರ್ಷದ ಮಾರ್ಚ್ 17ರಂದು ದೆಹಲಿಯಲ್ಲಿ ಹೊಸ ಆರ್‌ಸಿ ನೀಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಯಿತು.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi traffic police to issue challan under new motor vehicles act details
Story first published: Saturday, December 18, 2021, 14:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X