ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಭಾರತದಲ್ಲಿ ವಿವಿಧ ಪಾಸ್‌ಪೋರ್ಟ್‌ಗಳು ಸದ್ಯ ಚಾಲ್ತಿಯಲ್ಲಿದ್ದು, ಪ್ರತಿಯೊಂದು ಪಾಸ್‌ಪೋರ್ಟ್ ಮಾದರಿಗಳು ತಮ್ಮದೇ ಆದ ವ್ಯಾಪ್ತಿ ಮತ್ತು ಉದ್ದೇಶಗಳನ್ನು ಹೊಂದಿವೆ. ಹಾಗಾದರೆ ಪಾಸ್‌ಪೋರ್ಟ್ ವಿಧಗಳು ಮತ್ತು ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಪಾಸ್‌ಪೋರ್ಟ್ ಪ್ರಯೋಜನಗಳ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಭಾರತ ಸರ್ಕಾರವು ತನ್ನ ನಾಗರಿಕರಿಗೆ ನೀಡುವ ಪ್ರಮುಖ ದಾಖಲೆಗಳಲ್ಲಿ ಪಾಸ್‌ಪೋರ್ಟ್ ಕೂಡಾ ಒಂದಾಗಿದೆ. ಸರ್ಕಾರವು ವಿತರಿಸುವ ಪಾಸ್‌ಪೋರ್ಟ್‌ಗಳ ಬಳಕೆಯು ಕೇವಲ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರದೆ ಇದರಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಲು ಕೂಡಾ ಅನುಕೂಲಕರವಾಗಿದೆ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಪಾಸ್‌ಪೋರ್ಟ್‌ ವಿದೇಶಿ ಪ್ರಯಾಣದ ಜೊತೆಗೆ ಇತರೆ ಹಲವು ಸರ್ಕಾರಿ ಸೌಲಭ್ಯಗಳಿಗೆ ಸಹಕಾರಿಯಾಗಿದ್ದು, ನಿಮ್ಮ ಪೌರತ್ವವನ್ನು ಪರಿಶೀಲಿಸಲು ಸಹಾಯ ಮಾಡುವುದರಲ್ಲಿ ಪಾಸ್‌ಪೋರ್ಟ್‌ನ ಪ್ರಮುಖ ಉಪಯೋಗಗಳಲ್ಲಿ ಒಂದಾಗಿದೆ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಜೊತೆಗೆ ಪಾಸ್‌ಪೋರ್ಟ್‌ ಮೂಲಕ ಚಾಲನಾ ಪರವಾನಗಿಯನ್ನು ಪಡೆದುಕೊಳ್ಳಲು ಸಹಕಾರಿಯಾಗುವುದರ ಜೊತೆಗೆ ಹಲವಾರು ಕಡೆಗಳಲ್ಲಿ ಪಾಸ್‌ಪೋರ್ಟ್‌ನ ಪ್ರಯೋಜನಗಳು ಸಾಕಷ್ಟಿವೆ. ಹೀಗಾಗಿ ಪಾಸ್‌ಪೋರ್ಟ್ ಪ್ರಯೋಜನಗಳ ಕುರಿತಾಗಿ ಕೆಲವರಿಗೆ ಹೆಚ್ಚಿನ ಮಾಹಿತಿಯಿದ್ದರೂ ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಪಾಸ್‌ಪೋರ್ಟ್ ಮಾಹಿತಿಗಳು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಹೌದು, ವಾಸ್ತವವಾಗಿ ಭಾರತದಲ್ಲಿ ನೀಲಿ ಬಣ್ಣದ ಪಾಸ್‌ಪೋರ್ಟ್‌ಗಳು ಮಾತ್ರ ಇವೆ ಎಂದು ಹಲವರು ಭಾವಿಸಿದ್ದಾರೆ. ಆದರೆ ಭಾರತದಲ್ಲಿ ಸದ್ಯ ಮೂರು ವಿವಿಧ ಬಣ್ಣಗಳನ್ನು ಒಳಗೊಂಡಿರುವ ಪಾಸ್‌ಪೋರ್ಟ್ ವಿತರಣೆ ಹೊಂದಿದ್ದು, ವಿವಿಧ ಮಾದರಿಯ ಪಾಸ್‌ಪೋರ್ಟ್‌ಗಳನ್ನು ಕೇವಲ ಬಣ್ಣದ ಮೂಲಕವೇ ಅವುಗಳ ವ್ಯಾಪ್ತಿ, ಉದ್ದೇಶ ಗುರುತಿಸಲು ಸಹಕಾರಿಯಾಗಿವೆ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಸಾಮಾನ್ಯವಾಗಿ ನಾವೆಲ್ಲರೂ ನೀಲಿ ಬಣ್ಣದ ಪಾಸ್‌ಪೋರ್ಟ್‌ಗಳನ್ನು ಹೆಚ್ಚಾಗಿ ನೋಡಿದ್ದೇವೆ. ಆದರೆ ಭಾರತ ಸರ್ಕಾರವು ವಿವಿಧ ಉದ್ದೇಶಗಳಿಗಾಗಿ ನೀಲಿ(Blue) ಬಣ್ಣದ ಪಾಸ್‌‌ಪೋರ್ಟ್ ಜೊತೆಗೆ ಬಿಳಿ(White) ಬಣ್ಣದ ಕವರ್ ಹೊಂದಿರುವ ಪಾಸ್‌ಪೋರ್ಟ್ ಮತ್ತು ಕೆಂಗಂದು(Maroon) ಬಣ್ಣ ಹೊಂದಿರುವ ಪಾಸ್‌ಪೋರ್ಟ್‌ಗಳು ಚಾಲನೆಯಲ್ಲಿವೆ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ನೀಲಿ, ಬಿಳಿ ಮತ್ತು ಕೆಂಗಂದು ಬಣ್ಣದ ಕವರ್ ಹೊಂದಿರುವ ಪಾಸ್‌ಪೋರ್ಟ್‌ಗಳು ವಿವಿಧ ಉದ್ದೇಶ, ವ್ಯಾಪ್ತಿಯನ್ನು ಹೊಂದಿದ್ದು, ಇದರಲ್ಲಿ ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿರುವ ಪಾಸ್‌ಪೋರ್ಟ್ ಮಾತ್ರ ಸಾರ್ವಜನಿಕ ಬಳಕೆಗೆ ಲಭ್ಯವಿದೆ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ನೀಲಿ ಪಾಸ್‌ಪೋರ್ಟ್ ಅನ್ನು ಭಾರತದಲ್ಲಿ ಸಾಮಾನ್ಯ ಜನರಿಗೆ ನೀಡಲಾಗುತ್ತದೆ. ಹಾಗೆಯೇ ಬಿಳಿ ಬಣ್ಣದ ಪಾಸ್‌ಪೋರ್ಟ್ ಅನ್ನು ವಿಶೇಷವಾಗಿ ಭಾರತದ ಉನ್ನತ ಅಧಿಕಾರಿಗಳಿಗೆ ಮಾತ್ರ ನೀಡಲಾಗುತ್ತದೆ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಇದರೊಂದಿಗೆ ನೀಲಿ ಮತ್ತು ಬಿಳಿ ಬಣ್ಣದ ಪಾಸ್‌ಪೋರ್ಟ್ ಮೂಲಕ ಕಸ್ಟಮ್ಸ್, ಇಮಿಗ್ರೇಷನ್ ಮತ್ತು ಇತರೆ ಭದ್ರತಾ ಅಧಿಕಾರಿಗಳಿಗೆ ಉನ್ನತ ಅಧಿಕಾರಿಗಳು ಮತ್ತು ಸಾಮಾನ್ಯ ಜನರ ನಡುವಿನ ವ್ಯತ್ಯಾಸವನ್ನು ತಿಳಿಯಲು ಸಹಾಯ ಮಾಡುತ್ತದೆ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಯಾವುದೇ ಉದ್ದೇಶಕ್ಕಾದರೂ ಸಾಗರೋತ್ತರ ಪ್ರಯಾಣಗಳಿಗಾಗಿ ನಾಗರಿಕರಿಗೆ ನೀಲಿ ಪಾಸ್‌ಪೋರ್ಟ್‌ಗಳನ್ನು ಬಳಸಬಹುದಾಗಿದ್ದು, ಬಿಳಿ ಪಾಸ್‌ಪೋರ್ಟ್‌ಗಳ ಮೂಲಕ ಅಧಿಕಾರಿ ವರ್ಗವನ್ನು ಗುರುತಿಸಲು ಅದು ವಿಮಾನ ಸಂಸ್ಥೆಗಳಿಗೆ ಸಹಕಾರಿಯಾಗುತ್ತದೆ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಜೊತೆಗೆ ಸರ್ಕಾರಿ ಅಧಿಕಾರಿಗಳೊಂದಿಗೆ ಕಸ್ಟಮ್ಸ್, ಇಮಿಗ್ರೇಷನ್ ಅಧಿಕಾರಿಗಳು ಹೇಗೆ ನಡೆಸಿಕೊಳ್ಳಬೇಕು ಎಂಬ ಸೂಚನೆಗಳನ್ನು ಪಾಲಿಸಲು ಸಹಕಾರಿಯಾಗಲಿದ್ದು, ಹೀಗಾಗಿ ಬಿಳಿ ಬಣ್ಣದ ಪಾಸ್ ಪೋರ್ಟ್ ಹೊಂದಿರುವವರಿಗೆ ಹೆಚ್ಚಿನ ಗೌರವ ಸಿಗುವುದರಲ್ಲಿ ಸಂಶಯವಿಲ್ಲ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಇನ್ನು ಕೆಂಗಂದು ಅಥವಾ ಮರೂನ್ ಬಣ್ಣದ ಪಾಸ್‌ಪೋರ್ಟ್ ಮಾದರಿಯು ಹೆಚ್ಚಿನ ಮೌಲ್ಯವನ್ನು ಹೊಂದಿದ್ದು, ಇದನ್ನು ಕೇವಲ ಭಾರತೀಯ ರಾಜತಾಂತ್ರಿಕರು ಮತ್ತು ವಿದೇಶದಲ್ಲಿ ಕೆಲಸ ಮಾಡುವ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಇದನ್ನು ನೀಡಲಾಗುತ್ತದೆ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಇದು ಹೆಚ್ಚಿನ ಮೌಲ್ಯದ ಪಾಸ್‌ಪೋರ್ಟ್ ಆಗಿರುವುದರಿಂದ ಇದಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಿದ್ದು, ಮರೂನ್ ಬಣ್ಣದ ಪಾಸ್‌ಪೋರ್ಟ್ ಹೊಂದಿರುವವರು ವಿದೇಶಿ ಪ್ರವಾಸದ ಸಮಯದಲ್ಲಿ ವಿವಿಧ ಪ್ರಯೋಜನಗಳನ್ನು ಪಡೆಯುತ್ತಾರೆ.

ಪಾಸ್‌ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..

ಮರೂನ್ ಬಣ್ಣದ ಪಾಸ್‌ಪೋರ್ಟ್ ಹೊಂದಿರುವವರಿಗೆ ಯಾವುದೇ ದೇಶಗಳಿಗೆ ಪ್ರವಾಸಗಳನ್ನು ಕೈಗೊಳ್ಳಲು ವೀಸಾ ಅಗತ್ಯವಿರುವುದಿಲ್ಲ. ಜೊತೆಗೆ ಇತರೆ ಸಾಮಾನ್ಯ ವ್ಯಕ್ತಿಗಳಿಗೆ ಹೋಲಿಸಿದರೆ ಮರೂನ್ ಪಾಸ್‌ಪೋರ್ಟ್ ಹೊಂದಿರುವವರು ವಲಸೆ ಕಾರ್ಯವಿಧಾನಗಳನ್ನು ತ್ವರಿತವಾಗಿ ಪೂರ್ಣಗೊಳಿಸಬಹುದಾಗಿದೆ.

Most Read Articles

Kannada
Read more on ವಿಮಾನ plane
English summary
Different types of passports in india and their uses
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X