ಮೊದಲ ಐಷಾರಾಮಿ ಎಲೆಕ್ಟ್ರಿಕ್ ಕಾರು ಖರೀದಿಸಿ ನೆಚ್ಚಿನವರೊಂದಿಗೆ ಸಂತಸ ಹಂಚಿಕೊಂಡ ಖ್ಯಾತ ನಿರ್ದೇಶಕಿ

ಕನ್ನಡಿಗ ಕ್ಯಾಪ್ಟನ್ ಗೋಪಿನಾಥನ್ ಅವರ ಜೀವನದ ಕಥೆಯನ್ನು ಇಟ್ಟುಕೊಂಡು ಸೂರರೈ ಪೊಟ್ರು ಎಂಬ ಸಿನಿಮಾ ಮಾಡಿ ಸುಧಾ ಕೊಂಗರ ಅಭಿಮಾನಿಗಳ ಹೃದಯ ಗೆದ್ದಿದಾರೆ. ಆ ಸಿನಿಮಾದಲ್ಲಿ ಸೂರ್ಯ ಹೀರೋ ಆಗಿ ನಟಿಸಿದ್ದರೆ. ನಿರ್ದೇಶಕಿ ಸುಧಾ ಕೊಂಗರ ಅವರು ಸೂರರೈ ಪೊಟ್ರು ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.

ನಿರ್ದೇಶಕಿ ಸುಧಾ ಕೊಂಗರ ಅವರು ಇತ್ತೀಚೆಗೆ ತನ್ನ ಮೊಟ್ಟಮೊದಲ ಹೊಚ್ಚಹೊಸ ಐಷಾರಾಮಿ ಎಲೆಕ್ಟ್ರಿಕ್ ಆಡಿ ಕಾರನ್ನು ಖರೀದಿಸಿದ್ದಾರೆ. ನಿರ್ದೇಶಕಿ ಸುಧಾ ಅವರು ತಮ್ಮ ಹೊಚ್ಚಹೊಸ ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ ಬಳಿಕ ತಮ್ಮ ನೆಚ್ಚಿನ ಜನರನ್ನು ಭೇಟಿಯಾದರು. ಅವರು ಸೋಷಿಯಲ್ ಮೀಡಿಯಾದಲ್ಲಿ ಹೊಸ ಕಾರಿನೊಂದಿಗೆ ಸೆಲಬ್ರಿಟಿಗಳನ್ನು ಭೇಟಿ ಮಾಡಿದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಮುಂದಿನ ಫೋಟೋ ಸಂಗೀತ ಸಂಯೋಜಕ ಜಿವಿ ಪ್ರಕಾಶ್ ಕುಮಾರ್ ಅವರು ಮುಂಭಾಗದ ಸೀಟಿನ ಬಳಿ ನಿಂತಿರುವಾಗ ಸುಧಾ ಅವರು ತಮ್ಮ ಹೊಸ ಕಾರಿನ ಪಕ್ಕದಲ್ಲಿ ಅವರ ಫೋಟೋವನ್ನು ಕ್ಲಿಕ್ ಮಾಡಿದರು.

ಮೊದಲ ಐಷಾರಾಮಿ ಎಲೆಕ್ಟ್ರಿಕ್ ಕಾರು ಖರೀದಿಸಿದ ಖ್ಯಾತ ನಿರ್ದೇಶಕಿ

ನಂತರ ನಟ ಸೂರ್ಯ ಅವರ ಜೊತೆ ಕಾಣಬಹುದು. ಕೊನೆಯ ಸ್ನ್ಯಾಪ್‌ನಲ್ಲಿ ಸುಧಾ, ಸೂರ್ಯ ಮತ್ತು ಸೂರರೈ ಪೊಟ್ರು ನಿರ್ಮಾಪಕ ರಾಜೇಸ್ಕರ್ ಪಾಂಡಿಯನ್ ಅವರು ಕ್ಯಾಮೆರಾಗೆ ಪೋಸ್ ನೀಡುತ್ತಿರುವಾಗ ಕಾರಿನ ಮುಂದೆ ನಿಂತಿದ್ದಾರೆ. ಕಾರಿನ ಹಸಿರು ಬಣ್ಣದ ನಂಬರ್ ಪ್ಲೇಟ್‌ನ ಕೊನೆಯಲ್ಲಿ "0606" ಇರುವುದರಿಂದ ನಿರ್ದೇಶಕರಿಗೆ 6 ಅದೃಷ್ಟ ಸಂಖ್ಯೆ ಎಂದು ತೋರುತ್ತದೆ. ನನ್ನ ನೆಚ್ಚಿನ ಜನರೊಂದಿಗೆ ನನ್ನ ಮೊದಲ ಕಾರಿನೊಂದಿಗೆ ಹಸಿರಿನ ಕಡೆಗೆ ಹೋಗುವುದನ್ನು ಆನಂದಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಹುಟ್ಟಿ ಚೆನ್ನೈನಲ್ಲಿ ಬೆಳೆದ ಸುಧಾ ಕೊಂಗರ ಅವರು ನಿರ್ದೇಶಕ ಮಣಿ ರತ್ನಂ ಅವರ ಜೊತೆ ಏಳು ವರ್ಷ ಕೆಲಸ ಮಾಡಿದ್ದಾರೆ. 2008ರಲ್ಲಿ ಆಂಧ್ರ ಅಂದಗಾಡು ಚಿತ್ರದ ಮೂಲಕ ನಿರ್ದೇಶಕಿಯಾಗಿದರು. ಆದರೆ ಅಂದುಕೊಂಡ ರೀತಿಯಲ್ಲಿ ಸಿನಿಮಾ ಯಶಸ್ಸು ಕೊಡಲಿಲ್ಲ. ಕನ್ನಡಿಗ ಕ್ಯಾಪ್ಟನ್ ಜಿಆರ್‌ ಗೋಪಿನಾಥ್‌ ಅವರ ಕಥೆ ಸೂರರೈ ಪೊಟ್ರು (Soorarai Pottru) ಚಿತ್ರದಕ್ಕೆ ಸುಧಾ ಆಕ್ಷನ್ ಕಟ್ ಹೇಳಿದ ಬಳಿಕ ಅವರು ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದರು.

ನಿರ್ದೇಶಕಿ ಸುಧಾ ಕೊಂಗರ ಅವರು ಖರೀದಿಸಿದ ಐಷಾರಾಮಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ, ಜರ್ಮನ್ ಕಾರು ಉತ್ಪಾದನಾ ಕಂಪನಿ ಆಡಿ ತನ್ನ ಐಷಾರಾಮಿ ಎಲೆಕ್ಟ್ರಿಕ್ ಆವೃತ್ತಿಯಾದ ಇ-ಟ್ರಾನ್ ಮಾದರಿಯನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದೆ. ಈ ಇ-ಟ್ರಾನ್ ಎಲೆಕ್ಟ್ರಿಕ್ ಕಾರು ಗ್ರಾಹಕರ ಬೇಡಿಕೆಯೆಂತೆ ಇ-ಟ್ರಾನ್ 50, ಇ-ಟ್ರಾನ್ 55 ಮತ್ತು ಇ-ಟ್ರಾನ್ 55 ಸ್ಪೋರ್ಟ್‌ಬ್ಯಾಕ್ ಎನ್ನುವ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ.

ಈ ಹೊಸ ಕಾರಿನ ಮಧ್ಯಮ ಆವೃತ್ತಿ ಮತ್ತು ಹೈ ಎಂಡ್ ಮಾದರಿಯಾದ 55 ಮತ್ತು 55 ಸ್ಪೋರ್ಟ್‌ಬ್ಯಾಕ್‌ನಲ್ಲಿ ಆಡಿ ಕಂಪನಿಯು 95 ಕಿ.ವ್ಯಾ ಬ್ಯಾಟರಿ ಪ್ಯಾಕ್‌ ಜೋಡಣೆ ಮಾಡಿದ್ದು, ಇದು 402 ಬಿಹೆಚ್‌ಪಿ ಹಾಗೂ 664 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 480 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು. ಈ ಕಾರಿನ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 11kW ಎಸಿ ಹೋಂ ಚಾರ್ಜರ್ ಮೂಲಕ ಕನಿಷ್ಠ ಎಂಟೂವರೆ ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದು, 150kW ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಚಾರ್ಜ್ ಮಾಡಿದ್ದಲ್ಲಿ ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಮಾಡಬಹುದಾಗಿದೆ.

ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಆಡಿ ಕಂಪನಿಯು ಸದ್ಯ ತನ್ನ ಡೀಲರ್ಸ್ ಯಾರ್ಡ್‌ಗಳಲ್ಲಿಯೇ 50kW ಸಾಮರ್ಥ್ಯದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದು, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಚಾರ್ಜಿಂಗ್ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇನ್ನು ಹೊಸ ಕಾರಿನ ಡಿಸೈನ್, ಫೀಚರ್ಸ್‌ಗಳು ಮತ್ತು ಟೆಕ್ನಾಲಜಿ ಗ್ರಾಹಕರನ್ನು ಆಕರ್ಷಿಸಲಿದೆ. ಈ ಕಾರಿನಲ್ಲಿ ಡಿಜಿಟಲ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್, ಆನಿಮೆಟೆಡ್ ಪ್ರೊಜೆಕ್ಷನ್, ಎಲ್ಇಡಿ ಟೈಲ್‌ಲ್ಯಾಂಪ್, 20-ಇಂಚಿನ ಅಲಾಯ್ ವ್ಹೀಲ್‌ಗಳು ಮತ್ತು ಕಾರಿನ ಎರಡು ಬದಿಗಳಲ್ಲೂ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ.

ಈ ಕಾರಿನಲ್ಲಿ ಟ್ವಿನ್ ಸ್ಪೋಕ್ ಸ್ಟೀರಿಂಗ್ ವ್ಹೀಲ್ ಜೊತೆ ಮೌಂಟೆಡ್ ಕಂಟ್ರೋಲ್, ಆಂಡ್ರಾಯಿಡ್ ಆಟೋ ಮತ್ತು ಕಾರ್‌ಪ್ಲೇ, ಮೈ ಆಡಿ ಕನೆಕ್ಟ್, ವಾಯ್ಸ್ ಅಸಿಸ್ಟಂಟ್, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಹೆಡ್ಸ್ಅಪ್ ಡಿಸ್‌ಪ್ಲೇ, ಪನೊರಮಿಕ್ ಸನ್‌ರೂಫ್ ಸೌಲಭ್ಯಗಳಿವೆ. ಈ ಕಾರಿನಲ್ಲಿ ಸುರಕ್ಷತೆಗಾಗಿ ಎಬಿಎಸ್ ಜೊತೆ ಬ್ರೇಕ್ ಅಸಿಸ್ಟ್, ಲೆನ್ ಡಿಪಾರ್ಚರ್ ವಾರ್ನಿಂಗ್, ಪಾರ್ಕ್ ಅಸಿಸ್ಟ್ ಫಂಕ್ಷನ್, 8 ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಬ್ಲೈಂಡ್ ಸ್ಪಾಟ್ ಮಾನಿಟರ್ ಸೇರಿದಂತೆ ಹಲವು ಫೀಚರ್ಸ್‌ಗಳಿವೆ.

Most Read Articles

Kannada
English summary
Director sudha konkara bought new audi e tron details
Story first published: Wednesday, December 21, 2022, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X