ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

By Nagaraja

ತಮ್ಮ ಜೀವನೋಪಾಯಕ್ಕಾಗಿ ಲಕ್ಷಾಂತರ ಮಂದಿ ಭಾರತೀಯರು ದುಬೈ ಎಂಬ ಮಾಯಾನಗರಿಯನ್ನು ಆಶ್ರಯಿಸಿಕೊಂಡಿರುತ್ತಾರೆ. ಈಗೊಂದು ಖುಷಿ ಸುದ್ದಿ ಬಂದಿದ್ದು, ನಿಕಟ ಭವಿಷ್ಯದಲ್ಲೇ ದುಬೈನಲ್ಲೂ ಡ್ರೈವರ್ ವಾಹನ ಕನಸು ನನಸಾಗಲಿದೆ.

ಇದರ ಮೊದಲ ಹಂತವಾಗಿ ದುಬೈ ನಗರದಲ್ಲಿ ಚಾಲಕರಹಿತ ವಾಹನದ ಪ್ರಯೋಗಿಕ ಸಂಚಾರ ಪರೀಕ್ಷೆಯನ್ನು ಆರಂಭಿಸಲಾಗಿದೆ. ಮೊಹಮ್ಮದ್ ಬಿನ್ ರಾಶೀದ್ ಬೌಲೆವಾರ್ಡ್ ರಸ್ತೆಯಲ್ಲಿ ಪರೀಕ್ಷೆ ಜೋರಾಗಿ ಸಾಗುತ್ತಿದೆ.

ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

ದುಬೈ ರಸ್ತೆ ಸಾರಿಗೆ ಪ್ರಾಧಿಕಾರ (ಆರ್ ಟಿಎ) ಸಹಯೋಗದಲ್ಲಿ ಎಮಾರ್ ಪ್ರಾಪರ್ಟೀಸ್ ಡ್ರೈವರ್ ಲೆಸ್ ಸಂಚಾರ ಪರೀಕ್ಷೆಯನ್ನು ಸಾರ್ವಜನಿಕ ರಸ್ತೆಗಳಲ್ಲಿ ನಡೆಸುತ್ತಿದೆ.

ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

10 ಸೀಟುಗಳ ಚಾಲಕ ರಹಿತ ವಾಹನ 700 ಮೀಟರ್ ಉದ್ದಕ್ಕೆ ಹರಡಿರುವ ರಸ್ತೆಯಲ್ಲಿ ಸಂಚಾರ ಪರೀಕ್ಷೆಗೊಳಪಡಲಿದೆ. ತನ್ಮೂಲಕ ಭವಿಷ್ಯದ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಹುಡುಕಲು ದುಬೈ ಬದ್ಧವಾಗಿದೆ.

ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

ಡ್ರೈವರ್ ಲೆಸ್ ಸ್ವಯಂಚಾಲಿತ ವಾಹನಗಳ ಪರೀಕ್ಷೆಯ ಜೊತೆಗೆ ಪ್ರಯಾಣಿಕರಲ್ಲಿ ಅರಿವು ಮೂಡಿಸುವುದು ಯೋಜನೆಯ ಹಿಂದಿರುವ ಉದ್ದೇಶವಾಗಿದೆ. ಅಲ್ಲದೆ 2030ರ ವೇಳೆಗೆ ಶೇಕಡಾ 25ರಷ್ಟು ಪ್ರಯಾಣವನ್ನು ಡ್ರೈವರ್ ಲೆಸ್ ಆಗಿ ಪರಿವರ್ತಿಸುವ ಗುರಿ ಹೊಂದಿದೆ.

ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

ಸೆನ್ಸಾರ್ ವ್ಯವಸ್ಥೆ, ಇಂಟೆಲಿಜೆಟ್ ಸಿಸ್ಟಂ ಸೇರಿದಂತೆ ಎಲ್ಲ ರೀತಿಯ ಆಧುನಿಕ ಸುರಕ್ಷಾ ವೈಶಿಷ್ಟ್ಯಗಳನ್ನು ಆಳವಡಿಲಾಗಿದ್ದು, ಮುಂದಿನಿಂದ ಎದುರಾಗುವ ಅಡೆತಡೆಗಳನ್ನು ತಪ್ಪಿಸಲಿದೆ.

ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

ಓಮ್ನಿಕ್ಸ್ ಇಂಟರ್ ನ್ಯಾಷನಲ್ ಆಂಡ್ ಈಸಿ ಮೈಲ್ ನಿರ್ಮಿಸಿರುವ ಡ್ರೈವರ್ ಲೆಸ್ ವಾಹನ 'ಇಝಡ್10' ಎಂದು ಹೆಸರಿಸಿಕೊಂಡಿದ್ದು, ಮುಂಭಾಗ ಹಾಗೂ ಹಿಂಭಾಗವನ್ನು ಪ್ರತ್ಯೇಕಿಸಲಾಗಿಲ್ಲ.

ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

ಪರೀಕ್ಷಾರ್ಥ ಚಾಲನೆಯ ವೇಳೆ ಪ್ರಯಾಣಿಕರಿಗೆ ಸಂಪೂರ್ಣವಾದ ಉಚಿತವಾದ ಸೇವೆಯನ್ನು ನೀಡಲಾಗುತ್ತದೆ.

ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

ಅಂದ ಹಾಗೆ ದುಬೈನ ಡ್ರೈವರ್ ಲೆಸ್ ಬಸ್ ಮುಂದಿನ ಹಂತವಾಗಿ, ವಿಶ್ವದ ಅತಿ ದೊಡ್ಡ ಕಟ್ಟಡ ಬುರ್ಜ್ ಖಲೀಫಾ, ದುಬೈ ಮಾಲ್, ದುಬೈ ಓಪೆರಾ, ಸೌಕ್ ಅಲ್ ಬಹರ್ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿದೆ.

ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

ಇಝಡ್10 ಡ್ರೈವರ್ ಲೆಸ್ ಬಸ್ ಸರಾಸರಿ ಗಂಟೆಗೆ 25 ಕೀ.ಮೀ. ವೇಗದಲ್ಲಿ ಸಂಚರಿಸಲಿದ್ದು, ಗಂಟೆಗೆ ಗರಿಷ್ಠ 40 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

ಬ್ಯಾಟರಿಯಿಂದ ನಿಯಂತ್ರಿತ ಈ ವಾಹನವು ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ ಎಸಿ ಆನ್ ಮಾಡಿಟ್ಟುಕೊಂಡೇ ನಾಲ್ಕು ತಾಸುಗಳ ವರೆಗೆ ಚಲಿಸಲಿದೆ. ಇನ್ನು ಎಸಿ ರಹಿತವಾಗಿ 10 ತಾಸಿನ ವರೆಗೂ ಚಲಿಸಲಿದೆ.

ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

360 ಡಿಗ್ರಿ ಸುತ್ತಳತೆಯಲ್ಲಿ ಎಲ್ಲ ಅಡೆತಡೆಗಳನ್ನು ಪತ್ತೆ ಹಚ್ಚಿ ಬೇಕಾದಂತೆ ಕಾರ್ಯನಿರ್ವಹಿಸಲಿದೆ. ಇನ್ನು ನೇವಿಗೇಷನ್ ಸಿಸ್ಟಂ, ಲೇಸರ್ ಸೆನ್ಸಾರ್, ಜಿಪಿಎಸ್ ಸೆನ್ಸಾರ್, ಕ್ಯಾಮೆರಾ ಗಳು ಸಹ ಲಗತ್ತಿಸಲಾಗಿದೆ.

ದುಬೈಗೂ ಬಂತು ನೋಡಿ ಡ್ರೈವರ್ ಲೆಸ್ ವಾಹನ

15ಕೆವಿ ಬ್ಯಾಟರಿ ಇದರಲ್ಲಿದ್ದು, ಒಟ್ಟು ನಾಲ್ಕು ಮೀಟರ್ ಉದ್ದ ಹಾಗೂ ಎರಡು ಮೀಟರ್ ಗಳಷ್ಟು ಅಗಲವಾಗಿದೆ. ಇನ್ನು 2021ರ ವೇಳೆಗೆ ತಂತ್ರಜ್ಞಾನ ಸಂಪರ್ಕಿತ ಸ್ಮಾರ್ಟ್ ಸಿಟಿಯನ್ನಾಗಿ ಪರಿವರ್ತಿಸುವ ಯೋಜನೆಯಿದೆ.

ವಿಡಿಯೋ ವೀಕ್ಷಿಸಿ

Most Read Articles

Kannada
Read more on ದುಬೈ dubai
English summary
Dubai takes new driverless vehicle for a test drive
Story first published: Saturday, September 3, 2016, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X