Just In
- 54 min ago
ಮಕ್ಕಳಿಗಾಗಿ 60-70 ಕಿ.ಮೀ ಮೈಲೇಜ್ ನೀಡುವ ಮಿನಿ ಎಲೆಕ್ಟ್ರಿಕ್ ಜೀಪ್ ತಯಾರಿಸಿದ ತಂದೆ
- 1 hr ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 3 hrs ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 3 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
Don't Miss!
- News
ಮಂಗಳೂರು; ಇಂದಿನಿಂದ ರಂಝಾನ್ ಉಪವಾಸ ಆಚರಣೆ
- Sports
19 ವರ್ಷದ ಈ ಬ್ಯಾಟ್ಸ್ಮನ್ ಬಾರಿಸಿರೋ 8 ಐಪಿಎಲ್ ಸಿಕ್ಸರ್ ಸಾಮಾನ್ಯದ್ದಲ್ಲ!
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೈಲಿನ ಕೊನೆಯ ಬೋಗಿಯ ಹಿಂದಿರುವ 'X' ಚಿಹ್ನೆಯ ಅರ್ಥವೇನು?
ನಾವು ನೀವೆಲ್ಲಾ ಕೆಲವು ವಿಷಯಗಳನ್ನು ಪ್ರತಿದಿನ ಕೇಳುತ್ತಲೇ ಇರುತ್ತೇವೆ. ಆದ್ರೆ ಅದರ ಬಗ್ಗೆ ವಿಶೇಷವಾಗಿ ಗಮನಹರಿಸಿರುವುದಿಲ್ಲ. ಯಾರಾದರೂ ಅದರ ಶ್ರೇಷ್ಠತೆ ಬಗೆಗೆ ಹೇಳಿದರೆ ಮಾತ್ರ ನಮಗೆ ಆ ಬಗ್ಗೆ ಆಸಕ್ತಿ ಉಂಟಾಗುತ್ತದೆ. ಅಂತಹ ವಿಷಯಗಳಲ್ಲಿ ರೈಲಿನ ಹಿಂಭಾಗದಲ್ಲಿ X ಗುರುತಿನ ರಹಸ್ಯ ಕೂಡಾ ಒಂದು.

ಪ್ರತಿ ದಿವಸ ಲಕ್ಷಾಂತರ ಜನ ಪ್ರಯಾಣಿಕರು ರೈಲ್ವೆ ಸೇವೆಯನ್ನೇ ನೆಚ್ಚಿಕೊಂಡಿದ್ದಾರೆ. ಆದ್ರೆ ಕೊನೆಯ ಬೋಗಿಯಲ್ಲಿ ಬರೆದಿರುವ ಎಕ್ಸ್ ಗುರುತಿನ ಅರ್ಥ ಬಹುತೇಕ ಜನಕ್ಕೆ ಗೊತ್ತಿಲ್ಲ.

ಒಂದು ವೇಳೆ ರೈಲಿನ ಕೊನೆಯ ಬೋಗಿಯ ಎಕ್ಸ್ ಗುರುತಿನ ಅರ್ಥವನ್ನು ತಿಳಿದುಕೊಂಡಲ್ಲಿ ಓ.. ಹೋ.. ಇದೇನಾ ಇದರ ಅರ್ಥ ಎಂದು ಬೆರಗಾಗಿಸುತ್ತೆ.

ಇದರರ್ಥ ಈ ರೈಲಿನಲ್ಲಿ ಇದೇ ಕೊನೆಯ ಬೋಗಿ ಎಂದರ್ಥ. ಇನ್ನೊಂದೆಡೆ, ಸರಿಯಾಗಿ ಗಮನಿಸಿ ನೋಡಿದರೆ 'LV' ಎಂದು ಆ ಬೋಗಿಯ ಎಡಭಾಗದಲ್ಲಿ ಒಂದು ಸಣ್ಣ ಪದದ ಬೋರ್ಡ್ ಸಹ ಗೋಚರಿಸುತ್ತದೆ. ಅಂದರೆ ಅದು ಕೊನೆಯ ಬೋಗಿ ಎಂದರ್ಥ.

ಈ ಎಕ್ಸ್ ಗುರುತು ಅಂತಿಮ ಬೋಗಿ ಹಿಂದೆ ಹಳದಿ ಬಣ್ಣದಲ್ಲಿ ಬರೆಯಲಾಗಿರುತ್ತದೆ. ಇಷ್ಟೇ ಅಲ್ಲ ರೈಲಿನ ಅಂತಿಮ ಬೋಗಿಯಲ್ಲಿ ಕೆಂಪು ವಿದ್ಯುತ್ ದೀಪವನ್ನು ಅಳವಡಿಸಲಾಗಿರುತ್ತದೆ.

ಇದು ಐದು ಸೆಕೆಂಡ್‍ನಲ್ಲಿ ಒಂದು ಬಾರಿ ಈ ದೀಪ ಹೊಳೆಯುತ್ತದೆ. ಈ ನಿಯಮದ ಪ್ರಕಾರ ವಿಶೇಷ ರೈಲು ಅಂತಿಮ ಬೋಗಿಯಲ್ಲಿ ಈ ಗುರುತು ಇರಬೇಕಾಗುತ್ತದೆ.
MOST READ: ಬಹುನೀರಿಕ್ಷಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಜಾರಿಗೆ ಗ್ರೀನ್ ಸಿಗ್ನಲ್

ಮಾತ್ರವಲ್ಲ ಅಂತಿಮ ಬೋಗಿಯಲ್ಲಿ ಒಂದು ಬೋರ್ಡ್ ಇರುತ್ತದೆ. ಇದರಲ್ಲಿ ಎಲ್‍ವಿ ಬರೆದಿರುತ್ತದೆ. ಈ ಬೋರ್ಡು ಇಂಗ್ಲಿಷ್‍ನಲ್ಲಿ ಬರೆದಿರುತ್ತದೆ. ಮತ್ತು ಅದರ ಬಣ್ಣ ಕಪ್ಪು ಅಥವಾ ಬಿಳಿ ಆಗಿರುತ್ತದೆ. ಈ ಬೋರ್ಡ್ ಅರ್ಥ ಅಂತಿಮ ವಾಹನ ಅಥವಾ ಲಾಸ್ಟ್ ವೆಹಿಕಲ್ ಎಂದಾಗಿದೆ.

ಇನ್ನು ರಾತ್ರಿ ವೇಳೆ ಬೆಳಕು ಮತ್ತು ಹಗಲು ಬೆಳಕಿಗೆ 'X' ಮಾರ್ಕ್ ಗಮನಿಸುವುದು ಸುಲಭವಾಗಿದ್ದು, ಇದೇ ಉದ್ದೇಶದಿಂದ ದೊಡ್ಡ ಅಕ್ಷರಗಳಲ್ಲಿ ಬರೆದಿರಲಾಗುತ್ತದೆ.
MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಒಂದು ವೇಳೆ ರೈಲಿನ ಹಿಂಭಾಗದಲ್ಲಿ 'LV' ಅಥವಾ 'X' ಗುರುತಿನ ಬೋಗಿ ಕಾಣದಿದ್ದರೆ ಏನೋ ಅಗಿದೆ ಎಲ್ಲ ಬೋಗಿಗಳು ಬಂದಿಲ್ಲ ಎಂದಾಯಿತು. ಈ ಸ್ಥಿತಿಯಲ್ಲಿ ತುರ್ತು ಕಾರ್ಯಚರಣೆಯನ್ನು ಆರಂಭಿಸಲು ನೇರವಾಗಲಿದೆ.