ರನ್ವೇ ಬೇಡ; ನಿಂತಲ್ಲಿಂದಲೇ ಟೇಕ್ ಆಫ್ ಆಗುವ ವಿಮಾನ

Written By:

ವಿಮಾನಯಾನ ತಂತ್ರಜ್ಞಾನದಲ್ಲಿ ನಿರಂತರ ಬೆಳವಣಿಗೆಗಳು ಕಂಡುಬರುತ್ತಲೇ ಇವೆ. ಅತ್ಯಂತ ಪರಿಣಾಮಕಾರಿಯಾಗಿರುವ ವಿಮಾನಗಳ ಸಂಚಾರಕ್ಕೂ ಟ್ರಾಫಿಕ್ ತೊಂದರೆ ಕಾಡುವ ಸಮಯ ಬಹಳ ದೂರವೇನಿಲ್ಲ.

ಆದರೆ ವಿಮಾನ ನಿಲ್ದಾಣಗಳ ಸಹಾಯವಿಲ್ಲದೇ ಕ್ರಾಸ್-ಕಂಟ್ರಿ ಪ್ರಯಾಣಿಕರನ್ನು ಬಂಧಿಸುವ ನೂತನ ಕಾನ್ಸೆಪ್ಟನ್ನು ಎಕ್ಸ್‌ಟಿಐ ಎರ್ ಕ್ರಾಫ್ಟ್ ಮುಂದಿರಿಸಿದೆ. ನಿಮ್ಮ ಕಟ್ಟಡ ಅಥವಾ ಮನೆಯ ಸಮೀಪದಿಂದಲೇ ಈ ವಿಮಾನವನ್ನು ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.

ರನ್ವೇ ಬೇಡ; ನಿಂತಲ್ಲಿಂದಲೇ ಟೇಕ್ ಆಫ್ ಆಗುವ ವಿಮಾನ

ಎಕ್ಸ್ ಟಿಐ ಏರ್ ಕ್ರಾಫ್ಟ್ ಪರಿಚಯಿಸುತ್ತಿರುವ ಟ್ರೈಫ್ಯಾನ್ (TriFan 600) ಲಘು ವಿಮಾನವು ಹೆಲಿಕಾಪ್ಟರ್ ವಿನ್ಯಾಸವನ್ನು ಪಡೆದುಕೊಂಡಿದ್ದು, ಜೆಟ್ ವೇಗದಲ್ಲಿ ಸಂಚರಿಸಲಿದೆ.

ರನ್ವೇ ಬೇಡ; ನಿಂತಲ್ಲಿಂದಲೇ ಟೇಕ್ ಆಫ್ ಆಗುವ ವಿಮಾನ

ಇದನ್ನು ಸಂಸ್ಥೆಯು ಡೋರ್-ಟು-ಡೋರ್ ಕ್ರಾಸ್ ಕಂಟ್ರಿ ಏರ್ ಕ್ರಾಫ್ಟ್ ಎಂದು ವಿಶ್ಲೇಷಿಸುತ್ತಿದ್ದು, ಇದರಿಂದ ಉದ್ಯಮಿಗಳಿಗೆ ಹೆಚ್ಚು ಅನುಕೂಲವಾಗಲಿದೆ.

ರನ್ವೇ ಬೇಡ; ನಿಂತಲ್ಲಿಂದಲೇ ಟೇಕ್ ಆಫ್ ಆಗುವ ವಿಮಾನ

ಅಷ್ಟಕ್ಕೂ ಇದೊಂದು ಹೊಸ ತಂತ್ರಜ್ಞಾನವಲ್ಲ. ಮಿಲಿಟರಿ ಯುದ್ಧ ವಿಮಾನಗಳು ದಶಕದಿಂದಲೂ ನೆಟ್ಟಗೆ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಮಾಡುತ್ತಲೇ ಇದೆ. ಈಗ ವಾಣಿಜ್ಯ ವಿಮಾನಗಳಿಗೂ ಇಂತಹ ತಂತ್ರಗಾರಿಕೆಯನ್ನು ತರಲಾಗುತ್ತಿದೆ.

ರನ್ವೇ ಬೇಡ; ನಿಂತಲ್ಲಿಂದಲೇ ಟೇಕ್ ಆಫ್ ಆಗುವ ವಿಮಾನ

ಪ್ರಸ್ತುತ ವಿಮಾನ ಗಂಟೆಗೆ ಗರಿಷ್ಠ 644 ಕೀ.ಮೀ ವೇಗದಲ್ಲಿ ಸಂಚರಿಸುವ ಹಾಗೂ 30,000 ಸಾವಿರದಷ್ಟು ಅಡಿ ಎತ್ತರದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ರನ್ವೇ ಬೇಡ; ನಿಂತಲ್ಲಿಂದಲೇ ಟೇಕ್ ಆಫ್ ಆಗುವ ವಿಮಾನ

ಇದರಲ್ಲಿ ಪೈಲಟ್ ಹಾಗೂ ಐದು ಪ್ರಯಾಣಿಕರು ಆರಾಮವಾಗಿ ಪಯಣಿಸಬಹುದಾಗಿದೆ. ಅಲ್ಲದೆ 1300ರಿಂದ 1900 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸಬಹುದಾಗಿದೆ.

ರನ್ವೇ ಬೇಡ; ನಿಂತಲ್ಲಿಂದಲೇ ಟೇಕ್ ಆಫ್ ಆಗುವ ವಿಮಾನ

ಸಂಸ್ಥೆಯೀಗ ಇದರ ಮೊದಲ ಮಾದರಿ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಆದರೂ ವಿಮಾನ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಮಾನ್ಯತೆಗೆ ಸಂಬಂಧಿಸಿದಂತೆ ಸಮಸ್ಯೆ ಕಾಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ರನ್ವೇ ಬೇಡ; ನಿಂತಲ್ಲಿಂದಲೇ ಟೇಕ್ ಆಫ್ ಆಗುವ ವಿಮಾನ

ತಾಜಾ ಐಷಾರಾಮಿ ಬ್ಯುಸಿನೆಸ್ ಕ್ಲಾಸ್ ಒಳಮೈಯನ್ನು ಇದರಲ್ಲಿ ಆಳವಡಿಸಲಾಗುತ್ತದೆ. ಹಾಗೆಯೇ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂದಿದೆ.

ರನ್ವೇ ಬೇಡ; ನಿಂತಲ್ಲಿಂದಲೇ ಟೇಕ್ ಆಫ್ ಆಗುವ ವಿಮಾನ

ಪ್ರಸ್ತುತ ಲಾಂಗ್ ರೇಂಜ್ ವರ್ಟಿಕಲ್ ಟೇಕಾಫ್ ಆಂಡ್ ಲ್ಯಾಂಡಿಂಗ್ (VTOL) ವಿಮಾನವು ಅಮೆರಿಕದ ಸುರಕ್ಷತೆ ಮತ್ತು ಎಕ್ಸ್ ಚೇಂಜ್ ಕಮಿಷನ್ ಮಾನ್ಯತೆ ಪಡೆಯುವ ಭರವಸೆಯಲ್ಲಿದೆ.

English summary
Experience the TRIFAN 600 introduced by XTI Aircraft
Story first published: Monday, August 31, 2015, 11:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark