ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

By Nagaraja

ಇತ್ತೀಚೆಗಷ್ಟೇ 'ದಿ ಗ್ರೇಟ್ ಹಿಮಾಲಯನ್ ರೈಡ್' ಬಗ್ಗೆ 21 ಅಮೂಲ್ಯ ಸಲಹೆಗಳ ಬಗೆಗಿನ ವಿಶೇಷ ಲೇಖನವೊಂದನ್ನು ಪ್ರಕಟಿಸಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ತಂಡದ ಪ್ರಧಾನ ಸಂಪಾದಕರಾಗಿರುವ ಜೊಬೊ ಕುರುವಿಲ್ಲಾ ಅವರು ಈ ಸಾಹಸಮಯ ಚಾಲನೆಯ ಸವಾಲನ್ನು ಸ್ವೀಕರಿಸುತ್ತಾ ಹಿಮಾಲಯದ ಪರ್ವತ ಶ್ರೇಣಿಯತ್ತ ಸಕಲ ರೀತಿ ಪೂರ್ವ ತಯಾರಿಗಳೊಂದಿಗೆ ಹೊರಟಿರುವ ಬಗ್ಗೆ ಬಹಳ ಹೆಮ್ಮೆಯಿಂದಲೇ ಹೇಳಲಿಚ್ಛಿಸುತ್ತಿದ್ದೇವೆ.

Also Read: ದಿ ಗ್ರೇಟ್ ಹಿಮಾಲಯನ್ ರೈಡ್; 21 ಅಮೂಲ್ಯ ಟಿಪ್ಸ್

ಬೆಂಗಳೂರು ನಿವಾಸಿಯಾಗಿರುವ ಜೊಬೊ ಮೋಟಾರುಸೈಕಲ್ ಬಗ್ಗೆ ಹೊಂದಿರುವ ಅತೀವ ಕ್ರೇಜ್ ಇಂತಹ ಸಾಹಸಮಯ ಪಯಣಕ್ಕೆ ಅವರನ್ನು ಪ್ರೇರೇಪಿಸಿದೆ. ಅವರನ್ನು ಬೆಂಗಳೂರು ಹಾಗೂ ಭಾರತೀಯರೇ ಆಗಿರುವ ಖತಾರ್ ನಿಂದ ತಲಾ ಇಬ್ಬರು ಬೆಂಬಲಿಸದ್ದಾರೆ. ಇವರಿಗೆ ಬೆಂಗಾವಲು ವಾಹನ ರೂಪದಲ್ಲಿ ಮತ್ತಿಬ್ಬರು ಜೀಪ್ ಮೂಲಕ ಹಿಂಬಾಲಿಸಲಿದ್ದಾರೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ಹಲವಾರು ಸದ್ದುದ್ದೇಶಗಳೊಂದಿಗೆ ಈ ಸಾಹಸ ಪಯಣವನ್ನು ಆಯೋಜಿಸಲಾಗಿದೆ. ಇದರಲ್ಲಿ ಮಕ್ಕಳನ್ನು ನೆರವು ಮಾಡಲು ಧ್ಯೇಯೋದ್ದೇಶವೂ ಅಡಗಿದೆ. ಚಿಕ್ಕವನಿಂದಲೇ ಯಮಹಾ ಆರ್‌ಡಿ 350 ಬೈಕ್ ರೇಸಿಂಗ್ ಮೂಲಕ ಜೊಬೊ ಹೆಸರು ಮಾಡಿದ್ದಾರೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ಈ ಎಲ್ಲ ಸವಾರರು ಹೆಚ್ಚು ಬೈಕ್ ರೈಡಿಂಗ್ ನಲ್ಲಿ ಅನುಭವಸ್ಥರಾಗಿರುವುದರಿಂದ ತಮ್ಮ ಲೇಹ್ ಪಯಣವನ್ನು ಸ್ಮರಣೀಯವಾಗಿಸಲಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಹಿಮಾಲಯ ಪಯಣದಲ್ಲಿ ಕೈಗೊಳ್ಳಬೇಕಾದ ಎಲ್ಲ ಪೂರ್ವ ತಯಾರಿಗಳನ್ನು ನಡೆಸಿರುತ್ತಾರೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ಹಿಮಾಲಯ ಪರ್ವತ ಶ್ರೇಣಿ ಏರುವ ಬೈಕ್ ಗಳಲ್ಲಿ ಎರಡು ಕೆಟಿಎಂ ಡ್ಯೂಕ್ 390 ಬೈಕ್ ಇರಲಿದೆ. ಇದರಲ್ಲಿ ಅಲ್ಲಿನ ರಸ್ತೆ ಪರಿಸ್ಥಿತಿಗೆ ಹೊಂದಿಕೆಯಾಗುವ ರೀತಿಯಲ್ಲಿ ವಿಶೇಷ ಮಾರ್ಪಾಡುಗಳನ್ನು ತರಲಾಗಿದೆ. ಇವುಗಳಲ್ಲಿ ಹೆಡ್ ಲೈಟ್, ಚಕ್ರಗಳು ಪ್ರಮುಖವೆನಿಸಿದೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ಮಗದೊಂದು ಯಮಹಾ ಎಫ್‌ಝಡ್ ಸಹ ತನ್ನದೇ ಆದ ವಿಶೇಷ ವಿಶಿಷ್ಟ ವಿನ್ಯಾಸದಿಂದ ಆಕರ್ಷಕವೆನಿಸಿದೆ. ಮುಂಭಾಗದಲ್ಲಿ ಡ್ಯುಯಲ್ ಹೆಡ್ ಲೈಟ್ ಟ್ರೇಡ್ ಮಾರ್ಕ್ ಆಗಿರಲಿದೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ಸವಾರರು ಮತ್ತೆರಡು ರಾಯಲ್ ಎನ್ ಫೀಲ್ಡ್ ಬೈಕ್ ಗಳು ಸಹ ಆಯ್ಕೆ ಮಾಡಲಾಗಿದೆ. ಜೊತೆಗೆ ಬೆಂಗಾವಲು ಜೀಪ್ ಸಹ ಹಿಂಬಾಲಿಸಲಿದೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ಎರಡು ಕೆಟಿಎಂ ಬೈಕ್ ಗಳಿಗೆ ಒಂದು ಲಕ್ಷ ರು.ಗಳಷ್ಟು ಹೆಚ್ಚುವರಿ ಆಕ್ಸೆಸರಿಗಳನ್ನು ಬಳಕೆ ಮಾಡಲಾಗಿದೆ. ಕೊರೆಯುವ ಚಳಿ ನಡುವೆಯೂ ಜಗತ್ತಿನ ಅತಿ ಎತ್ತರದ ಪರ್ವತ ಶಿಖರಗಳಿಗೆ ಪಯಣ ಹಮ್ಮಿಕೊಳ್ಳುವಾಗ ಪೂರ್ವ ತಯಾರಿಗೆ ಹೆಚ್ಚಿನ ಆದ್ಯತೆ ಕೊಡಬೇಕಾಗುತ್ತದೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ಮೂಲತ: ಇವೆಲ್ಲವೂ ಅಡ್ವೆಂಚರ್ ಬೈಕ್ ಗಳಲ್ಲ. ಹಾಗಾಗಿ ಮಾರ್ಪಾಡುಗೊಳಿಸುವುದು ಅನಿವಾರ್ಯವಾಗಿದೆ. ಕೆಟಿಎಂನಲ್ಲಿ ಪಂಚರ್ ನಿಯಂತ್ರಣ ಚಕ್ರ ಬಳಕೆ ಮಾಡಲಾಗಿದೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ಹಿಮಾಲಯ ಪ್ರವಾಸ ಅತ್ಯಂಕ ಕಠಿಣ ಮತ್ತು ಸಾಹಸಮಯವಾಗಿರುವುದರಿಂದ ಸವಾರರು ದೈಹಿಕ ಫಿಟ್ನೆಸ್ ಕಾಯ್ದುಕೊಳ್ಳುವುದು ಅತಿ ಅಗತ್ಯವಾಗಿದೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ಹಿಮ ಶಿಖರವನ್ನೇರುತ್ತಾ ಜಗತ್ತಿನ ಅತಿ ಎತ್ತರದ ಮೋಟಾರು ವಾಹನ ಪ್ರದೇಶ ಖರ್‌ದುಂಗಾ ಲಾ ಗುರಿ ಮುಟ್ಟುವ ಯೋಜನೆ ಇರಿಸಲಾಗಿದೆ. ಇದು ಪ್ರತಿಯೊಬ್ಬ ವಾಹನ ಸವಾರನ ಕನಸಾಗಿದೆ. ಖರ್‌ದುಂಗಾ ಲಾ ಸಮುದ್ರ ಮಟ್ಟದಿಂದ 18,380 ಅಡಿ ಎತ್ತರದಲ್ಲಿದೆ. ಅಲ್ಲದೆ ಖತಾರ್ ನಲ್ಲಿ ನಡೆಯಲ್ಲಿರುವ ಫುಟ್ಬಾಲ್ ವಿಶ್ವಕಪ್ ಗೂ ಮುನ್ನ ಫುಟ್ಬಾಲ್ ಆಡುವ ಎಲ್ಲ ದೇಶಗಳಿಗೆ ಭೇಟಿ ಕೊಡುವ ಇರಾದೆ ಹೊಂದಲಾಗಿದೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ಇನ್ನು ಬೆಂಗಾವಲು ಜೀಪ್ ನಲ್ಲಿ ಅಗತ್ಯ ಬಿಡಿಭಾಗಗಳನ್ನು, ಲಗ್ಗೇಜ್, ಆಕ್ಸಿಜನ್ ಸಿಲಿಂಡರ್, ಇಂಧನ ಇತ್ಯಾದಿ ಅಗತ್ಯ ಪರಿಕರಗಳನ್ನು ಹೊತ್ತೊಯ್ಯಲಾಗುವುದು. ಇದನ್ನು ನಾರ್ಥ್ ಬೈ ನಾರ್ಥ್ ಈಸ್ಟ್ ನ ಚಾಲಕರು ಮುನ್ನಡೆಸಲಿದ್ದಾರೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ನಿಗೂಢತೆಯನ್ನು ಸಾರುವ ಸಾಲು ಸಾಲಾಗಿ ನಿಂತಿರುವ ಹಿಮ ಪರ್ವತಗಳು, ಜಲಧಾರೆಗಳು, ವಿಸ್ಮಯಕಾರಿ ಕಣಿವೆ, ಮಂಜು, ಮೋಡ ಕವಿದ ವಾತಾವರಣ ಇವೆಲ್ಲವೂ ಹಿಮಾಲಯ ಪರ್ವತ ಸಾಲಿನ ಪಯಣವನ್ನು ಸವಾರರಿಗೆ ಸ್ಮರಣೀಯವಾಗಿಸಲಿದೆ.

ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸು 'ಹಿಮಾಲಯ ಬೈಕ್ ರೈಡ್'

ಒಟ್ಟಿನಲ್ಲಿ ಹಿಮಾಲಯ ಕನಸನ್ನು ಹೊತ್ತುಕೊಂಡಿರುವ ಹೋಗಿರುವ ಈ ತಂಡಕ್ಕೆ ಯಶಸ್ಸು ಸಿಗಲಿ ಎಂಬುದು ನಮ್ಮ ತಂಡದ ಹಾರೈಕೆಯಾಗಿದೆ.

Most Read Articles

Kannada
Read more on ಬೈಕ್ motorcycle
English summary
The Himalayas are calling and Drivespark is answering that call, which can be heard only by people with adventure fused in their DNA.
Story first published: Tuesday, August 25, 2015, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X