ಒಂದು ತಾಸಲ್ಲಿ ನ್ಯೂಯಾರ್ಕ್‌ನಿಂದ ಲಂಡನ್‌ಗೆ..!

Written By:

ಅಮೆರಿಕದ ನ್ಯೂಯಾರ್ಕ್ ನಗರದಿಂದ ಬ್ರಿಟನ್‌ನ ಲಂಡನ್ ವರೆಗಿನ ದೂರ ಸರಿ ಸುಮಾರಿ 5576 ಕೀ.ಮೀ. ಪ್ರಸ್ತುತ ಈ ದೂರವನ್ನು ಕ್ರಮಿಸಲು ಸಾಮಾನ್ಯ ವಿಮಾನವೊಂದಕ್ಕೆ ಏಳು ತಾಸುಗಳೇ ತಗಲುತ್ತದೆ.

ಈ ನಡುವೆ ಹೊಸತಾದ ಸೂಪರ್ ಸೋನಿಕ್ ಅಲ್ಟ್ರಾ ರಾಪಿಡ್ ವಿಮಾನ ಪರಿಕಲ್ಪನೆಯೊಂದಿಗೆ ಮುಂದೆ ಬಂದಿರುವ ಸಂಸ್ಥೆಯೊಂದು, ಜಗತ್ತಿನ ಎರಡು ಪ್ರಮುಖ ನಗರಗಳ ಅಂತರವನ್ನು ಕೇವಲ ಒಂದು ತಾಸಿಗೆ ಇಳಿಕೆ ಮಾಡಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ಚಿತ್ರ ಪುಟದಲ್ಲಿ ವಿವರಿಸಲಾಗಿದೆ.

To Follow DriveSpark On Facebook, Click The Like Button
ಒಂದು ತಾಸಲ್ಲಿ ನ್ಯೂಯಾರ್ಕ್‌ನಿಂದ ಲಂಡನ್‌ಗೆ..!

ಶಬ್ದ ಗತಿಗಿಂತ ನಾಲ್ಕೈದು ಐದು ಪಟ್ಟು (ಮ್ಯಾಕ್ 4.5) ಹೆಚ್ಚು ವೇಗದಲ್ಲಿ ಸಂಚರಿಸಬಲ್ಲ ಈ ವಿನೂತನ ಸೂಪರ್ ಸೋನಿಕ್ ಕಾನ್ಸೆಪ್ಟ್ ವಿಮಾನದ ಹಕ್ಕುಸ್ವಾಮ್ಯವನ್ನು ಏರ್ ಬಸ್ ಪಡೆದುಕೊಂಡಿದೆ.

ಒಂದು ತಾಸಲ್ಲಿ ನ್ಯೂಯಾರ್ಕ್‌ನಿಂದ ಲಂಡನ್‌ಗೆ..!

ಪ್ರಸ್ತುತ ಅಲ್ಟ್ರಾ ರಾಪಿಡ್ ವಿಮಾನದಲ್ಲಿ ರಾಕೆಟ್ ಎಂಜಿನ್ ಹಾಗೂ ಟರ್ಬೊ ಜೆಟ್ ಗಳನ್ನು ಆಳವಡಿಸಲಾಗುವುದು. ಹೈಡ್ರೋಜನ್ ನಿಯಂತ್ರಣ ಹಾಗೂ ರೆಕ್ಕೆಗಳಲ್ಲಿ ಆಳವಡಿಸಲಾಗಿರುವ ರಾಮ್ ಜೆಟ್ ಗಳು ಇನ್ನಿತರ ಗಮನಾರ್ಹ ತಂತ್ರಜ್ಞಾನಗಳಾಗಿವೆ.

ಇದು ಹೇಗೆ ಸಾಧ್ಯವಾಯಿತು?

ಇದು ಹೇಗೆ ಸಾಧ್ಯವಾಯಿತು?

ಎಲ್ಲ ಸೂಪರ್ ಸೋನಿಕ್ ವಿಮಾನಗಳನ್ನು ಹಿಂದಿಕ್ಕಲಿರುವ ಈ ರೋಲರ್ ಕೋಸ್ಟರ್ ರೆಕ್ಕೆಗಳ ಕೆಳಗಡೆ ಎರಡು ರಾಮ್ ಜೆಟ್ ಗಳು ಇರಲಿದೆ. ಇನ್ನು ಮುಂಭಾಗದಲ್ಲಿ ಎರಡು ಟರ್ಬೊ ಜೆಟ್ ಗಳನ್ನು ಆಳವಡಿಸಲಾಗಿದೆ.

ಒಂದು ತಾಸಲ್ಲಿ ನ್ಯೂಯಾರ್ಕ್‌ನಿಂದ ಲಂಡನ್‌ಗೆ..!

ಹಾಗೆಯೇ ರಾಕೆಟ್ ಎಂಜಿನ್ ಅನ್ನು ಹಿಂಭಾಗದಲ್ಲಿ ಜೋಡಣೆ ಮಾಡಲಾಗಿದೆ. ಈ ಪೈಕಿ ಟರ್ಬೊ ಜೆಟ್ ಎಂಜಿನ್ ಗಳು ವಿಮಾನವನ್ನು ಟೇಕ್ ಆಫ್ ಮಾಡುವ ವೇಳೆ ಮುಂದಕ್ಕೆ ತಳ್ಳಲು ಸಹಕರಿಸಲಿದೆ.

ಒಂದು ತಾಸಲ್ಲಿ ನ್ಯೂಯಾರ್ಕ್‌ನಿಂದ ಲಂಡನ್‌ಗೆ..!

ನಿರ್ದಿಷ್ಟ ಎತ್ತರವನ್ನು ತಲುಪಿದ ಬಳಿಕ ರಾಕೆಟ್ ಎಂಜಿನ್ ಗಳು ತನ್ನ ಕೆಲಸವನ್ನು ಆರಂಭಿಸಲಿದೆ. ಇದು ರಾಕೆಟ್ ವೇಗದಲ್ಲಿ ಚಲಿಸಲು ಸಹಕಾರಿಯಾಗಲಿದೆ.

ಒಂದು ತಾಸಲ್ಲಿ ನ್ಯೂಯಾರ್ಕ್‌ನಿಂದ ಲಂಡನ್‌ಗೆ..!

ಅಂತಿಮವಾಗಿ ಅತಿ ಎತ್ತರದ ವಾಯು ವಲಯವನ್ನು ತಲುಪಿದಾಗ ಜೆಟ್ ಎಂಜಿನ್ ನಿಲುಗೊಂಡು ರಾಮ್ ಜೆಟ್ ಗಳು ಸಮತಲ ವಾಯು ಪ್ರದೇಶದಲ್ಲಿ ಮ್ಯಾಕ್ 4.5 ವೇಗದಲ್ಲಿ ಚಲಿಸಲು ನೆರವಾಗಲಿದೆ.

ಒಂದು ತಾಸಲ್ಲಿ ನ್ಯೂಯಾರ್ಕ್‌ನಿಂದ ಲಂಡನ್‌ಗೆ..!

ಇವೆಲ್ಲದರ ನೆರವಿನಿಂದ ಲಂಡನ್‌ನಿಂದ ನ್ಯೂಯಾರ್ಕ್‌ಗೆ ಕೇವಲ ಒಂದು ತಾಸಿನ ಅವಧಿಯಲ್ಲಿ ತಲುಪಬಹುದಾಗಿದೆ. ಈ ಮಹತ್ತರ ಯೋಜನೆ ಆದಷ್ಟು ಬೇಗ ನನಸಾಗಲಿ ಎಂಬುದು ಡ್ರೈವ್ ಸ್ಪಾರ್ಕ್ ಆಶಯವಾಗಿದೆ.

English summary
Fly from New York to London in 1 hour
Story first published: Thursday, August 6, 2015, 12:10 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark