TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಆಪರೇಷನ್ ಸೇವ್ ಕಿಟೆನ್ - ಅಂತೂ ಬದುಕಿತು ಬಡಜೀವ
ಚಳಿಗಾಲ ಶುರುವಾಯ್ತು ಹೊರಗಿರುವ ಚಳಿಯನ್ನು ತಾಳಲಾರದೆ ಹಾಸಿಗೆ ಇಂದ ಎದ್ದೇಳಲು ನಮ್ಮ ದೇಹ ನಮಗೇ ಒಮ್ಮೊಮೆ ಸ್ಪಂದಿಸುವುದಿಲ್ಲ. ಮಾನುಷ್ಯರಾಗಿ ನಾವೇ ಈ ಚಳಿಗಾಲದಲ್ಲಿ ಬೆಚ್ಚಗಿನ ಪ್ರದೇಶವನ್ನು ಹುಡುಕಿಕೊಂಡು ಅಲ್ಲಿಯೆ ಸ್ವಲ್ಪ ಹೊತ್ತು ಸಮಯಕಳೆಯಲು ಬಯಸುತ್ತೇವೆ.
ಆದರೆ ಪ್ರಾಣಿಗಳಿಗೆ ಅಂತಹ ಸೌಲಭ್ಯಗಳಿಲ್ಲ ಆದುದರಿಂದ ಅವುಗಳು ಸಹ ಈಗೀಗ ಮಾನವರಂತೆಯೆ ಬೆಚ್ಚಗಿರಲು ಹಲವಾರು ಮಾರ್ಗಗಳನ್ನು ಹುಡುಕುತ್ತಿವೆ. ಆದರೆ ಈ ಸಣ್ಣ ಗಾತ್ರದ ಪ್ರಾಣಿಗಳು ಚಳಿಯಿಂದ ದೂರವಿರಲು ಕಾರಿನ ಎಂಜಿನ್ ಭಾಗಗಳಿಗೆ ತಲುಪಿ ತಮ್ಮ ದೇಹಗಳನ್ನು ಬೆಚ್ಚಗಿರಿಸಿಕೊಳ್ಳುತ್ತದೆ. ಕೆಲವೊಮ್ಮೆ ಅವುಗಳು ಹೊರ ಬರುವುದು ಸಾಧ್ಯವಾಗದ ಹಾಗೆ ಅಲ್ಲಿಯೆ ಸಿಲುಕಿಕೊಳ್ಳುತ್ತವೆ.
ಇಲ್ಲಿ ನಡೆದ ಘಟನೆ ಕೂಡಾ ಅದೆ ಬೆಕ್ಕಿನ ಮರಿಯೊಂದು ಪಾಪ ಹೊರಗಿರುವ ಚಳಿ ತಾಳಲಾರದೆ ಯಾವುದೊ ಮನೆಯಲ್ಲಿ ಆಗ ತಾನೆ ಹೊರಗಿಂದ ಬಂದಿದ್ದ ಐಷಾರಾಮಿ ಕಾರಿನ ಎಂಜಿನ್ ಭಾಗದಲ್ಲಿ ಬೆಚ್ಚಗಿರುತ್ತದೆ ಎಂದು ಅಲ್ಲಿಗೆ ಹೋಗಿದೆ. ಆದರೆ ನಾಯಿಯೊಂದು ಪತ್ತೆ ಹಚ್ಚಿ ಮಾಲೀಕರಿಗೆ ತಿಳಿಸಿದೆಯಂತೆ.!
ಹೌದು, ಮುಂಬೈ ನಗರದಲ್ಲಿರುವ ಸೂರತ್ ಮೂಲದ ವ್ಯಾಪಾರಿ ಜಯೇಶ್ ಬೈ ಎಂಬಾತ ಐಷಾರಾಮಿ ಮರ್ಸಿಡೀಸ್ ಇ ಕ್ಲಾಸ್ ಬೆಂಜ್‍ನ ಮಾಲೀಕರಾಗಿದ್ದು, ಇವರ ಕಾರಿನಲ್ಲೆ ಆ ಬೆಕ್ಕು ಬಿಸಿ ಕಾಯಿಸಿಕೊಳ್ಳಲು ಕಾರಿನ ಎಂಜಿನ್ ಭಾಗದಲ್ಲಿ ಕೂತಿದೆ.
ವ್ಯಾಪರಿ ಮತ್ತು ಆತನ ಕುಟುಂಬದವರು ಕಾರಿನಲ್ಲಿ ಪ್ರಾಯಣಿಸುವಾಗ ಬೆಕ್ಕಿನ ಶಬ್ದವನ್ನು ಕೇಳಿ ನಾಯಿ ಬೊಗಳಲು ಶುರು ಮಾಡಿತು. ಆದರೆ ಇದನ್ನು ಅರಿಯಲಾರದ ಕಾರಿನಲಿದ್ದವರು ನಾಯಿಯನ್ನು ಬೊಗಳದೆ ಇರಲು ಹೇಳಿದರು. ಆದರೂ ಸಹ ಸುಮಾರು ಹೊತ್ತು ನಾಯಿ ಬೊಗಳುತ್ತಲೇ ಇತ್ತು.
ನಂತರ ಬೆಕ್ಕಿನ 'ಮಿಯಾವ್' ಶಬ್ದವನ್ನ ಅರಿತ ಜಯೇಶ್ ಅವರು ತಕ್ಷಣ ತಮ್ಮ ಕಾರಿನ ಚಾಲಕನಿಗೆ ನಿಲ್ಲಿಸಲು ಆದೇಶಿಸಿದರು. ಕಾರಿನಿಂದ ಹೊರ ಬಂದ ತಕ್ಷಣ ನಾಯಿ ಬೆಕ್ಕು ಅಡಗಿದ್ದ ಎಂಜಿನ್ ಭಾಗದ ಬಳಿಗೆ ಬಂದು ಜೋರಾಗಿ ಬೊಗಳಲು ಶುರು ಮಾಡಿತು. ಆದರೆ ಬೆಕ್ಕಿನಮರಿ ಎಂಜಿನ್ ಭಾಗದಲ್ಲಿ ಇದ್ದ ಕಾರಣ ಹೊರಗೆ ಕಾಣಿಸಲಿಲ್ಲ.
ನಂತರ ಬೆಕ್ಕು ಕಾಣಿಸದಿದ್ದರೂ ಅದರ ಶಬ್ದ ಮಾತ್ರ ಕೇಳಿಸುತ್ತಲೇ ಇತ್ತು. ಹೇಗಾದರು ಆ ಬಡಜೀವಿಯನ್ನು ರಕ್ಷಿಸಲು ಜಯೇಶ್ ಮತ್ತು ಆತನ ಡ್ರೈವರ್ ಮುಂದಾದರು. ಆದರೆ ಸರಿಯಾದ ಉಪಕರಣಗಳಿಲ್ಲದೆ ಅವರ ಪ್ರಯತ್ನ ವ್ಯರ್ಥವಾಯಿತು.
ಹೀಗೆ ಸ್ಥಳಕ್ಕೆ ಭೇಟಿ ನೀಡಿದ ಸುತ್ತಮುತ್ತಲಿನವರು ಮತ್ತು ಮೆಕಾನಿಕ್‍ಗಳು ಕೂಡಾ ಪ್ರಯತ್ನಿಸಿದರು, ಅವರಿಗು ಸಹ ಬೆಕ್ಕಿನ ಶಬ್ದ ಕೇಳಿಸುತ್ತಿದೆಯೆ ಹೊರತು ಬೆಕ್ಕು ಯಾರಿಗೂ ಕಾಣಿಸಿಕೊಳ್ಳಲಿಲ್ಲ. ಕೊನೆಗೆ ಅವರ ಪ್ರಯತ್ನಗಳು ಕೂಡ ವಿಫಲವಾಯಿತು.
ನಂತರ ಇದು ನಮ್ಮಿಂದ ಆಗುವ ಕೆಲಸವಲ್ಲ ಎಂದು ತಿಳಿದ ಜಯೇಶ್ ತಕ್ಷಣವೇ ಮುಂಬೈನಲ್ಲಿರುವ ಮರ್ಸಿಡೀಸ್ ಬೆಂಜ್ ಸರ್ವೀಸ್ ಸೆಂಟರ್‍ಗೆ ಕರಿ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ತಿಳಿಹೇಳಿದರು. ಅದಾದ ನಂತರ ಸಿಬ್ಬಂದಿ ತಡಮಾಡದೆ ಕಾರನ್ನು ಸರ್ವೀಸ್ ಸೆಂಟರ್‍ಗೆ ಕೊಂಡೊಯ್ಯಲು ಆದೇಶಿಸಿದರು.
ಜಯೇಶ್ ಅವರು ಕಾರನ್ನು ಮರ್ಸಿಡೀಸ್ ಬೆಂಝ್ ಸರ್ವೀಸ್ ಸೆಂಟರ್‍ಗೆ ಕೊಂಡೊಯ್ದ ತಕ್ಷಣಾ ಆಪರೇಷನ್ ಸೇವ್ ಕಿಟೆನ್ ಆರಂಭವಾಯಿತು. ಆದರೆ ಇಲ್ಲಿ ಅಚ್ಚರಿಯ ವಿಷಯ ಏನೆಂದರೆ ಅಲ್ಲಿನ ಸಿಬ್ಬಂದಿಗು ಸಹ ಬೆಕ್ಕು ಕಾಣಿಸಿಕೊಳ್ಳಲಿಲ್ಲ.
ಕೇವಲ ಜಯೇಶ್ ಮತ್ತು ತನ್ನ ಕುಟುಂಬದವರಿಗೆ ಕೇಳಿಸಿದ ಬೆಕ್ಕಿನ ಶಬ್ದ ಬೇರಾರಿಗು ಕೇಳಿಸಲಿಲ್ಲ. ನಂತರ ಜಯೇಶ್ ಕಾರಿನ ಮುಂಭಾಗಕ್ಕೆ ಹೊಡೆದ ನಂತರವೂ ಬೆಕ್ಕು ಸದ್ದು ಮಾಡಲಿಲ್ಲ. ಇದರಿಂದ ಬೆಕ್ಕು ನಿದ್ದೆಗೆ ಜಾರಿರಬಹುದು ಎಂದು ತಿಳಿದಿದ್ದರು.
ಕಾರಿನ ಫ್ರಂಟ್ ಬಾನೆಟ್ ಅನ್ನು ತೆಗೆದು ಅಲ್ಲಿಂದ ಬೆಕ್ಕಿನ ಯಾವುದಾದರು ಒಂದು ಭಾಗವು ಕಾಣಬಹುದ ಎಂದು ಪರೀಕ್ಷಿಸಿದಾಗ, ಜಯೇಶ್ ಅವರಿಗೆ ಬೆಕ್ಕಿನ ಕಿವಿ ಕಾಣಿಸಿಕೊಂಡಿತು. ನಂತರ ಸರ್ವೀಸ್ ಸೆಂಟರ್‍ನಲ್ಲಿನ ಸಿಬ್ಬಂದಿಗೆ ತನ್ನ ಕ್ಯಾಮೆರಾವನ್ನು ಆನ್ ಮಾಡಿ ಜೂಂ ಮಾಡಲು ಹೇಳಿದರು. ನಂತರ ಆ ಸಿಬ್ಬಂದಿಗು ಸಹ ಬೆಕ್ಕು ಕಾಣಿಸಿಕೊಂಡಿತು.
ಕೊನೆಯ ಹಂತದ ಯತ್ನ
ಕೊನೆಗು ಸಿಬ್ಬಂದಿಯ ಕಣ್ಣಿಗೆ ಕಾಣಿಸಿಕೊಂಡ ಬೆಕ್ಕನ್ನು ಹೊರ ತೆಗೆಯಲು ಹರ ಸಾಹಸ ಪಟ್ಟರು. ಕಾರಿನ ಎಂಜಿನ್ ಭಾಗಗಳನ್ನು ಒಂದೊಂದಾಗಿಯೇ ತೆಗೆದು, ಸತತ 6 ಗಂಟೆಗಳ ಪ್ರಯತ್ನದ ನಂತರ ಆ ಬಡಜೀವಿ ಬೆಕ್ಕುನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು.
ಬೆಕ್ಕನ್ನು ಕಾಪಾಡಿದ ನಂತರ ಜಯೇಶ್ ಮತ್ತು ತನ್ನ ಕುಟುಂಬ ಸದಸ್ಯರು ಆ ಬೆಕ್ಕನ್ನು ಪ್ರಾಣಿ ಆಶ್ರಯದಲ್ಲಿ ಬಿಡಲು ತೀರ್ಮಾನಿಸಿದರು ಮತ್ತು ಅಲ್ಲಿನ ಜನರು ಜಯೇಶ್‍ರವರ ಮಾನವೀಯತೆಯ ಬಗ್ಗೆ ಹೊಗಳಿದ್ದಾರೆ.
ಇದೇನು ಹೊಸತೇನಲ್ಲ, ಕಾರಿನಲ್ಲಿರುವ ಬೆಚ್ಚನೆಯ ಭಾಗಗಳಲ್ಲಿ ಹಾವುಗಳು ಮತ್ತು ಇನ್ನಿತರೆ ಸಣ್ಣ ಪ್ರಾಣಿಗಳು ಕಂಡಿರುವ ಸುದ್ಧಿಗಳನ್ನು ಹಲವಾರು ಬಾರಿ ನಾವೆಲ್ಲಾ ನೀಡಿದ್ದೇವೆ. ಹೀಗಾಗಿ ನೀವು ಸಹ ಈ ಚಳಿಗಾಲದಲ್ಲಿ ನಿಮ್ಮ ಕಾರನ್ನು ಹೊರ ತೆಗೆಯುವಾಗ ಮೊದಲು ಶಬ್ದ ಬರುವ ಹಾಗೆ ಮುಂಭಾಗದ ಬಾನೆಟ್‍ನ ಮೇಲೆ ಹೊಡೆಯಿರಿ. ಆಗ ಅಲ್ಲಿ ಯಾವುದಾದರು ಪ್ರಾಣಿ ಇದೆಯೆ ಎಂದು ನಿಮಗೆ ತಿಳಿದು ಬರುತ್ತದೆ. ಅವುಗಳು ಸಹ ಆ ಶಬ್ದದಿಂದ ಹೊರ ಬರಬಹುದು.
Source: IndiaToday