ಹರ್ಲಿ ಡೇವಿಡ್ಸನ್: ಕನಸಿನ ಬೈಕ್; ಗೊತ್ತಿರದ ನಿಜಾಂಶ

Posted By:

ವಿಶ್ವದ ಪ್ರತಿಷ್ಠಿತ ಬೈಕ್ ಉತ್ಪಾದಕ ಕಂಪನಿಗಳಲ್ಲಿ ಒಂದಾಗಿರುವ ಹರ್ಲಿ ಡೇವಿಡ್ಸನ್ ಬಗ್ಗೆ ಬಹುತೇಕರು ಕೇಳಿರುತ್ತೀರಾ. ಅಷ್ಟೇ ಯಾಕೆ ಈ ಅದ್ದೂರಿ ಬ್ರಾಂಡ್ ತಮ್ಮದಾಗಿಸಿಕೊಳ್ಳಬೇಕೆಂಬ ಕನಸನ್ನು ಹಲವರು ಹೊಂದಿರುತ್ತಾರೆ. ಹಾಗಿರುವಾಗ ನಿಮ್ಮಲ್ಲಿ ಎಷ್ಟು ಮಂದಿಗೆ ಹರ್ಲಿ ಡೇವಿಡ್ಸನ್ ಇತಿಹಾಸ ಬಗ್ಗೆ ಗೊತ್ತು?

ಚಿಂತೆ ಮಾಡಬೇಡಿರಿ. ಇಂದಿನ ಈ ಲೇಖನದಲ್ಲಿ ಹರ್ಲಿ ಡೇವಿಡ್ಸನ್ ಕುತೂಹಲಕಾರಿ ಅಂಶಗಳನ್ನು ನಿಮ್ಮ ಮುಂದಿಡುವ ಪ್ರಯತ್ನವನ್ನು ನಮ್ಮ ಡ್ರೈವ್ ಸ್ಪಾರ್ಕ್ ತಂಡ ಮಾಡಲಿದೆ. ಸಂಪೂರ್ಣ ಹರ್ಲಿ ಡೇವಿಡ್ಸನ್ ಖಜಾನೆಯನ್ನು ಸಂಕ್ಷಿಪ್ತ ರೂಪದಲ್ಲಿ ನಿಮ್ಮ ಮುಂದಿಡಲಿದ್ದೇವೆ. ಈ ಲೇಖನ ಓದಿದ ಮೇಲಾದರೂ ಜೀವನದಲ್ಲಿ ಒಂದಲ್ಲ ಒಂದು ದಿನ ಈ ಕನಸಿನ ಬೈಕ್ ತಮ್ಮದಾಗಿಸಬೇಕೆಂಬ ಹಂಬಲ ಖಂಡಿತ ನಿಮ್ಮಲ್ಲಿ ಮೂಡಲಿದೆ.

20ನೇ ಶತಮಾನದ ಆರಂಭದಲ್ಲಿ ಅಂದರೆ 1903ನೇ ಇಸವಿಯಲ್ಲಿ ವಿಲಿಯಮ್ ಎಸ್. ಹರ್ಲಿ, ಅರ್ಥುರ್ ಡೇವಿಡ್ಸನ್, ವಾಲ್ಟರ್ ಡೇವಿಡ್ಸನ್ ಹಾಗೂ ವಿಲಿಯಮ್ ಎ. ಡೇವಿಡ್ಸನ್ ಎಂಬವರು ಸೇರಿ 'ಹರ್ಲಿ ಡೇವಿಡ್ಸನ್' ಮೋಟಾರ್‌ಸೈಕಲ್ ಕಂಪನಿಯನ್ನು ಸ್ಥಾಪಿಸಿದ್ದರು.

ಅಮೆರಿಕದ ಈ ಮೋಟಾರ್‌ಸೈಕಲ್ ಉತ್ಪಾದಕ ಕಂಪನಿಯನ್ನು ಸಂಕ್ಷಿಪ್ತ ರೂಪದಲ್ಲಿ 'ಹರ್ಲಿ' ಅಥವಾ 'ಎಚ್‌ಡಿ' ಎಂದು ವಿಶ್ಲೇಷಿಸಲಾಗುತ್ತದೆ. ಇದರ ಮುಖ್ಯ ಕಾರ್ಯಗಾರ ವಿಸ್ಕೊನ್ಸಿನ್‌ನ ಮಿಲ್‌ವಾಕೀ (Milwaukee, Wisconsin) ಎಂಬಲ್ಲಿದೆ.

ಅಂದಿನ ಕಾಲಘಟ್ಟದಲ್ಲಿ ಜಪಾನ್ ವಾಹನ ತಯಾರಕರಿಂದ ಪ್ರಬಲ ಪೈಪೋಟಿ ಎದುರಾಗಿದ್ದರೂ ಅವೆಲ್ಲವನ್ನು ಮೆಟ್ಟಿ ನಿಲ್ಲುವಲ್ಲಿ ಹರ್ಲಿ ಡೇವಿಡ್ಸನ್‌ಗೆ ಸಾಧ್ಯವಾಗಿತ್ತು.

ಕಂಪನಿಯು ಪ್ರಮುಖವಾಗಿ 750 ಸಿಸಿಗಿಂತಲೂ ಮಿಗಿಲಾದ ಹೆವಿ ವೇಟ್ ಕ್ರೂಸರ್ ಬೈಕ್‌ಗಳನ್ನು ಮಾರಾಟ ಮಾಡುತ್ತಿವೆ. ಎಚ್‌ಡಿ ಬೈಕ್‌ಗಳು ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಹೊಂದಿದ್ದು, ಶ್ರೇಷ್ಠ ಗುಣಮಟ್ಟ ಹಾಗೂ ಹ್ಯಾಂಡ್ಲಿಂಗ್‌ಗೆ ಹೆಸರುವಾಸಿಯಾಗಿದೆ.

ಸಾಂಪ್ರದಾಯಿಕ ಹೆವಿ ಕಸ್ಟಮೈಸ್ಡ್ ಬೈಕ್‌ಗಳಿಗೆ ಗುರುತಿಸಿಕೊಂಡಿದ್ದ ಎಚ್‌ಡಿ ಆ ಬಳಿಕ ಚಾಪರ್ (chopper) ಶೈಲಿಯ ಬೈಕ್‌ಗಳಿಗೂ ರೂಪು ನೀಡಿತು. ಸಮಕಾಲೀನ ಹರ್ಲಿ ಡೀವಿಡ್ಸನ್ ಬೈಕ್‌ಗಳೆಲ್ಲ ಕ್ಲಾಸಿಕ್ ಹರ್ಲಿ ವಿನ್ಯಾಸವನ್ನು ಹೊಂದಿದೆ.

ನಿಷ್ಠಾವಂತ ಬ್ರಾಂಡ್ ಗ್ರಾಹಕರ ಮೂಲಕ ತನ್ನ ಉಳಿಗಾಲವನ್ನು ಮತ್ತಷ್ಟು ಭದ್ರಪಡಿಸಿರುವ ಹರ್ಲಿ ಡೇವಿಡ್ಸನ್, ಕ್ಲಬ್, ಈವೆಂಟ್ ಹಾಗೂ ಮ್ಯೂಸಿಯಂ ಮೂಲಕ ಸಕ್ರಿಯವಾಗಿದೆ.

ಹರ್ಲಿ ಡೇವಿಡ್ಸನ್ ಇಂಡಿಯಾ

ಎಚ್‌ಡಿ ಉಪಾಂಗ ಸಂಸ್ಥೆಯಾಗಿರುವ ಹರ್ಲಿ ಡೇವಿಡ್ಸನ್ ಇಂಡಿಯಾ 2009ನೇ ಇಸವಿಯಲ್ಲಿ ಸ್ಥಾಪಿತವಾಗಿತ್ತು. ಹರಿಯಾಣದ ಗುರ್ವಾಂಗ್‌ನಲ್ಲಿ ನೆಲೆ ಭದ್ರಪಡಿಸಿರುವ ಹರ್ಲಿ ಡೇವಿಡ್ಸನ್ ನೊಕ್ ಡೌನ್ ಕಿಟ್ಸ್ (konck-down kits) ಮೂಲಕ ಕ್ರೂಸರ್ ಬೈಕ್‌ಗಳ ಜೋಡಣೆ ಮಾಡಲಾಗುತ್ತದೆ. ಹಾಗಿದ್ದರೂ ಸಣ್ಣ ಡಿಸ್‌ಪ್ಲೇಸ್‌ಮೆಂಟ್ ಮಾದರಿಗಳನ್ನು (displacement model) ಲಾಂಚ್ ಮಾಡುವ ಯಾವುದೇ ಇರಾದೆಯಿಲ್ಲ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿದೆ. ಭಾರತದಲ್ಲಿ ಅನೂಪ್ ಪ್ರಕಾಶ್ ಹರ್ಲಿ ಡೇವಿಡ್ಸನ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

Harley Davidson Facts The You Did Not Know

ಪ್ರಸ್ತುತ 110 ವರ್ಷಗಳ ಇತಿಹಾಸ ಹೊಂದಿರುವ ಹರ್ಲಿ ಡೇವಿಡ್ಸನ್ ಆಟೋಮೊಬೈಲ್ ಜಗತ್ತಿನಲ್ಲಿ ಇನ್ನು ಪ್ರಬಲವಾಗಿಯೇ ಮುಂದುವರಿಯುತ್ತಿದೆ. ಹಾಗಿದ್ದರೆ ಬನ್ನಿ ಆಕರ್ಷಕ ಚಿತ್ರಣಗಳ ಮೂಲಕ ಹರ್ಲಿ ಡೇವಿಡ್ಸನ್ ಬಗೆಗಿನ ಇನ್ನಷ್ಟು ಹೆಚ್ಚಿನ ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಲಿದ್ದೇವೆ.

Harley Davidson Facts The You Did Not Know

1901 ಇಸವಿಯಲ್ಲಿ 22ರ ಹರೆಯದ ಪೋರ ವಿಲಿಯಮ್ಸ್ ಎಸ್ ಹರ್ಲಿ ಅವರು 116 ಸಿಸಿ ಸಣ್ಣ ಎಂಜಿನ್ ಪೆಡಲ್ ಬೈಸಿಕಲ್ ಫ್ರೇಮ್‌ಗೆ ಆಳವಡಿಸುವ ಪ್ರಯತ್ನ ಮಾಡಿದ್ದರು. ಬಳಿಕ ಎರಡು ವರ್ಷಗಳ ನಂತರ 1904ನೇ ಇಸವಿಯಲ್ಲಿ ಹರ್ಲಿ ಡೇವಿಡ್ಸನ್ ಮೋಟಾರ್‌ಸೈಕಲ್ ಆರಂಭಿಸಲಾಗಿತ್ತು.

ಎಚ್‌ಡಿ ಮೊದಲ ಬೈಕ್

ಎಚ್‌ಡಿ ಮೊದಲ ಬೈಕ್

1904ನೇ ಇಸವಿಯಲ್ಲಿ 10X15 ಅಡಿ ಎತ್ತರದ ವುಡನ್ ಫ್ಯಾಕ್ಟರಿಯಲ್ಲಿ ಹರ್ಲಿ ಹಾಗೂ ಡೇವಿಡ್ಸನ್ ತಮ್ಮ ಮೊದಲ ಬೈಕ್ ನನಸಾಗಿಸುವಲ್ಲಿ ಯಶಸ್ವಿಯಾದರು.

ಮೊದಲ ಖರೀದಿಗಾರ

ಮೊದಲ ಖರೀದಿಗಾರ

ಅಮೆರಿಕದವರೇ ಆದ ಹೆರ್ನಿ ಮೆಯೆರ್ ಹರ್ಲಿ ಡೇವಿಡ್ಸನ್ ಬೈಕ್‌ನ ಮೊದಲ ಖರೀದಿಗಾರನಾಗಿದ್ದಾರೆ.

ಮೊದಲ ಶೋ ರೂಂ

ಮೊದಲ ಶೋ ರೂಂ

ಅಮೆರಿಕದ ಚಿಕಾಗೋದಲ್ಲಿ ಸಿ. ಎಚ್ ಲಾಂಗ್ ಹರ್ಲಿ ಡೇವಿಡ್ಸನ್ ಮೊದಲ ಡೀಲರ್‌ಶಿಪ್ ಸ್ಥಾಪಿಸಿದ್ದರು.

Racing Legend

Racing Legend

1905ನೇ ಇಸವಿಯಲ್ಲಿ ಮೊದಲ ಬಾರಿಗೆ ಹರ್ಲಿ ಡೇವಿಡ್ಸನ್ ರೇಸಿಂಗ್ ಜಗತ್ತಿಗೆ ಕಾಲಿಟ್ಟಿತ್ತು. ಇದಾದ ಐದು ವರ್ಷದ ಬಳಿಕ ಹಿಲ್ ಕ್ಲಿಂಬ್, ಎಡ್ಯೂರನ್ಸ್ ಸೇರಿದಂತೆ ಸ್ಪೀಡ್ ರೇಸ್‌ಗಳಲ್ಲಿ ಮೊದಲ ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

Harley Davidson Facts The You Did Not Know

1906ನೇ ಇಸವಿಯಲ್ಲಿ ಆರು ಕಾರ್ಮಿಕರ ಬೆಂಬಲದೊಂದಿಗೆ ಹರ್ಲಿ ಡೇವಿಡ್ಸನ್ ಘಟಕ ಆರಂಭಿಸಲಾಯಿತು. ಹಾಗೆಯೇ 1910ರಲ್ಲಿ ಫುಲ್ ಟೈಮ್ ಕಾರ್ಮಿಕರನ್ನು ನೇಮಕ ಮಾಡಲಾಯಿತು.

First Woman HD Rider

First Woman HD Rider

ಹರ್ಲಿ ಡೇವಿಡ್ಸನ್ ಡ್ರೈವಿಂಗ್ ಮಾಡಿದ ಮೊದಲ ಮಹಿಳಾ ರೈಡರ್ ಜಾನೆಟ್ ಡೇವಿಡ್ಸನ್ ಆಗಿದ್ದಾರೆ.

First V-Twin Motor

First V-Twin Motor

1909ನೇ ಇಸವಿಯಲ್ಲಿ ಹರ್ಲಿ ಡೇವಿಡ್ಸನ್‌ನಿಂದ ಮೊದಲ ವಿ-ಟ್ವಿನ್ ಎಂಜಿನ್ ಬೈಕ್ ಲಾಂಚ್ ಮಾಡಲಾಯಿತು. ಪ್ರಸ್ತುತ ಇಂಜಿನ್ 7 ಬಿಎಚ್‌ಪಿ ಪೀಕ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು.

A Cult Classic

A Cult Classic

ಹರ್ಲಿ ಡೇವಿಡ್ಸನ್ ಬಿಡುಗಡೆಗೊಂಡ ಕೆಲವೇ ವರ್ಷಗಳಲ್ಲಿ ಜನಪ್ರಿಯವಾಗತೊಡಗಿತು. ಪ್ರಖ್ಯಾತ ಫೋರ್ಬ್ಸ್ ನಿಯತಕಾಲಿಕದ ಸ್ಥಾಪಕ ಮಾಲ್ಕಮ್ ಫೋರ್ಬ್ಸ್ (Malcolm Forbes) 50ಕ್ಕೂ ಹೆಚ್ಚು ಎಚ್‌ಡಿ ಬೈಕ್ ಹೊಂದಿದ್ದರಲ್ಲದೆ ಅನೇಕ ಬೈಕ್‌ಗಳನ್ನು ತಮ್ಮ ಗಳೆಯರಿಗೂ ಉಡುಗೊರೆಯಾಗಿಯೂ ನೀಡಿದ್ದರು.

Harley Davidson Facts The You Did Not Know

ಅಂದ ಹಾಗೆ 1998ನೇ ಇಸವಿಯಲ್ಲಿ ಹರ್ಲಿ ಡೇವಿಡ್ಸನ್ ಅಮೆರಿಕದಿಂದ ಹೊರಗಡೆ ಅಂದರೆ ಬ್ರೆಜಿಲ್‌ನಲ್ಲಿ ಮೊದಲ ಬಾರಿಗೆ ಜೋಡಣೆ ಕಾರ್ಯ ಆರಂಭಿಸಿತ್ತು.

Harley Davidson Facts The You Did Not Know

ಸಿವಿಒ ಅಲ್ಟ್ರಾ ಕ್ಲಾಸಿಕ್ ಎಲೆಕ್ಟ್ರಾ ಗ್ಲೈಡ್ (CVO Ultra Classic Electra Glide) ಹರ್ಲಿ ಡೇವಿಡ್ಸನ್‌ನ ಅತಿ ದುಬಾರಿ ಬೈಕ್‌ಗಳಲ್ಲಿ ಒಂದಾಗಿದೆ. ಇದರ ದರ 22 ಲಕ್ಷ ರು.ಗಳಾಗಿವೆ.

Harley Davidson Facts The You Did Not Know

ಹಾಗಿದ್ದರೆ ಬನ್ನಿ ದೇಶದಲ್ಲಿ ಮಾರಾಟವಾಗುತ್ತಿರುವ ಹರ್ಲಿ ಡೇವಿಡ್ಸನ್ ಆಧುನಿಕ ಬೈಕ್‌ಗಳನ್ನು ಫೋಟೊ ಮೂಲಕ ನೋಡೋಣ...

Super Glide Custom

Super Glide Custom

Street Bob

Street Bob

Road King

Road King

Night Road Special

Night Road Special

Iron 883

Iron 883

Heritage Softail® Classic

Heritage Softail® Classic

Forty-Eight

Forty-Eight

Fat Boy Special

Fat Boy Special

Fat Boy

Fat Boy

883 Roadster

883 Roadster

Superlow

Superlow

Harley Davidson Facts The You Did Not Know

ಇದೀಗ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿರಿ...

English summary
There are several tit bits about Harley-Davidson that very few know. Drivespark wants to share some Harley Davidson facts that you probably did not know. Flip through the photo feature below to read some interesting Harley-Davidson facts along with beautiful images of the motorcycle that we all dream to ride.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more