ಒನ್ ಮ್ಯಾನ್ ಒನ್ ಎಂಜಿನ್ - ಪವರ್‌ಫುಲ್ ಮರ್ಸಿಡಿಸ್ ಎಎಂಜಿ

By Nagaraja

ಏನಿದು ಎಎಂಜಿ? ಸುಲಭವಾಗಿ ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆ ಮರ್ಸಿಡಿಸ್ ಬೆಂಝ್‌ನ ಶಕ್ತಿಶಾಲಿ ನಿರ್ವಹಣಾ ವಿಭಾಗದ ಕಾರುಗಳನ್ನು ಎಎಂಜಿ ಎಂದು ಗುರುತಿಸಬಹುದು. ಸಹಜವಾಗಿಯೇ ಇದು ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ಕ್ಲಾಸಿಕ್ ವೆಸ್ಪಾ ಇತಿಹಾಸದತ್ತ ಹದ್ದುನೋಟ

ಎಎಂಜಿ ಕಾರುಗಳು ಶರವೇಗದಲ್ಲಿ ಸಾಗುತ್ತದೆ ಮಾತ್ರವಲ್ಲದೆ ಅಷ್ಟೇ ಆಕ್ರಮಣಕಾರಿ ನೋಟವನ್ನು ಸಹ ಪಡೆದುಕೊಂಡಿರುತ್ತದೆ. ಮರ್ಸಿಡಿಸ್ ಬೆಂಝ್‌ನ ಎಂಎಂಜಿ ಸ್ಪೋರ್ಟ್ಸ್ ಸೆಡಾನ್ ಹಾಗೂ ಎಸ್‌ಯುವಿ ಕಾರುಗಳನ್ನು ಸಂಸ್ಥೆಯ ಪ್ರತಿಷ್ಠೆ ಎತ್ತಿ ಹಿಡಿಯಲು ನೆರವಾಗಿದೆ. ಅಂದ ಹಾಗೆ ಎಎಂಜಿ ಉಗಮ ಹೇಗಾಯಿತು? ಇದಕ್ಕೆ ಸಂಬಂಧಪಟ್ಟಂತೆ ಆಕರ್ಷಕ ಕಥೆ ಅಡಗಿದೆ. ಹೆಚ್ಚಿನ ಮಾಹಿತಿಗಳಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

'ಒನ್ ಮ್ಯಾನ್ ಒನ್ ಎಂಜಿನ್' ಇದುವೇ ಪವರ್‌ಫುಲ್ ಮರ್ಸಿಡಿಸ್ ಎಎಂಜಿ

1965ನೇ ಇಸವಿಯಲ್ಲಿ ಮೋಟಾರುಸ್ಪೋರ್ಟ್ಸ್ ವಿಭಾಗದಿಂದ ಹೊರಬರಲು ಮರ್ಸಿಡಿಸ್ ಬೆಂಝ್ ನಿರ್ಧರಿಸಿತ್ತು. ಇದು ವಾಹನ ಪ್ರೇಮಿಯಾಗಿದ್ದ ಹ್ಯಾನ್ಸ್ ವರ್ನರ್ ಆಫ್ರೆಚ್ಟ್ (Hans Werner Aufrecht) ಹಾಗೂ ಎರ್ಹಾರ್ಡ್ ಮೆಲ್ಚರ್ (Erhard Melcher) ಅವರನ್ನು ದು:ಖತಪ್ತರಾಗಿಸಿತ್ತು. ಇಲ್ಲಿಗೆ ಎದೆಗುಂದದ ಅವರು ತಮ್ಮ ಸತತ ಸಾಧನೆಯ ಫಲವಾಗಿ '300 ಎಸ್‌ಇ ರೇಸಿಂಗ್ ಎಂಜಿನ್' (170ರಿಂದ 238 ಬಿಎಚ್‌ಪಿ) ಹೊರತರುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೇ ಯಾಕೆ ಇದು ಬಳಿಕ 1965ರಲ್ಲಿ ಜರ್ಮನ್ ಟೂರಿಂಗ್ ಕಾರು ಚಾಂಪಿಯನ್‌ಶಿಪ್‌ನಲ್ಲಿ 10 ರೇಸ್‌ಗಳಲ್ಲಿ ವಿಜಯ ಪತಾಕೆ ಹಾರಿಸಿತ್ತು.

'ಒನ್ ಮ್ಯಾನ್ ಒನ್ ಎಂಜಿನ್' ಇದುವೇ ಪವರ್‌ಫುಲ್ ಮರ್ಸಿಡಿಸ್ ಎಎಂಜಿ

ಇದರಿಂದಲೇ ಸ್ಫೂರ್ತಿ ಪಡೆದ ಅವರು 1967ನೇ ಇಸವಿಯಲ್ಲಿ ರೇಸಿಂಗ್ ಎಂಜಿನ್ ಅಭಿವೃದ್ಧಿಗಾಗಿ ಎಎಂಜಿ ಎಂಜಿನಿಯರಿಂಗ್, ಡಿಸೈನ್ ಹಾಗೂ ಟೆಸ್ಟಿಂಗ್ ವಿಭಾಗವೊಂದನ್ನು ಸ್ಥಾಪಿಸಿದರು. ಇಲ್ಲಿ ಎಎಂಜಿ ಎಂಬುದು ಆಫ್ರೆಚ್ಟ್, ಮೆಲ್ಚರ್ ಹಾಗೂ ಆಫ್ರೆಚ್ಟ್ ಹುಟ್ಟೂರಾದ ಗ್ರೊಬಾಸ್ಪಾಚ್ (Großaspach) ಸೂಚಿಸುತ್ತದೆ.

ಫೋಟೊ ಕೃಪೆ: ಫ್ಲಿಕರ್
'ಒನ್ ಮ್ಯಾನ್ ಒನ್ ಎಂಜಿನ್' ಇದುವೇ ಪವರ್‌ಫುಲ್ ಮರ್ಸಿಡಿಸ್ ಎಎಂಜಿ

ಎಎಂಜಿ ತನ್ನ ಮೊದಲ ಮೋಟಾರುಸ್ಪೋರ್ಟ್ಸ್ ಮೈಲಗಲ್ಲನ್ನು 1971ನೇ ಇಸವಿಯಲ್ಲಿ ಸಾಧಿಸಿತ್ತು. ಅಲ್ಲದೆ ಸ್ಪಾ 24 ಹವರ್ಸ್‌ನಲ್ಲಿ ಎಎಂಜಿ ಮರ್ಸಿಡಿಸ್ 300 ಎಸ್‌ಇಎಲ್ 6.8, ತನ್ನ ಕ್ಲಾಸ್‌ನಲ್ಲಿ ಚಾಂಪಿಯನ್ ಹಾಗೂ ಒಟ್ಟಾರೆಯಾಗಿ ಎರಡನೇ ಸ್ಥಾನ ಆಲಂಕರಿಸಿತ್ತು. ಇದು ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಎಎಂಜಿ ಬ್ರಾಂಡ್ ಇನ್ನಷ್ಟು ಪವರ್‌ಫುಲ್ ಆಗಿ ಹೊರಹೊಮ್ಮುವಲ್ಲಿ ನೆರವಾಗಿತ್ತು.

ಫೋಟೊ ಕೃಪೆ: ವಿಕಿ ಕಾಮನ್ಸ್
'ಒನ್ ಮ್ಯಾನ್ ಒನ್ ಎಂಜಿನ್' ಇದುವೇ ಪವರ್‌ಫುಲ್ ಮರ್ಸಿಡಿಸ್ ಎಎಂಜಿ

1970ನೇ ಕಾಲಘಟ್ಟದಲ್ಲಿ ಕಸ್ಟಮೈಸ್ಡ್‌ಗೆ ಬೇಡಿಕೆ ವರ್ಧಿಸಿದ್ದರಿಂದ ಎಂಜಿನ್ ಜೊತೆಗೆ ಕಸ್ಟಮ್ ನಿರ್ಮಿತ ಒಳಮೈ ನಿರ್ಮಿಸಲು ಎಂಎಂಜಿ ಮುಂದಾಗಿತ್ತು. ಇದರ ಫಲವಾಗಿ 1976ರಲ್ಲಿ ವರ್ಕ್‌ಶಾಪ್ ಹಾಗೂ ಆಫೀಸ್ ತಲೆದೋರಿದವು. 1984ರಲ್ಲಿ ಹೊಸ ಸಂಶೋಧನೆಯ ಭಾಗವಾಗಿ ಮೆಲ್ಚರ್ ಸಂಪೂರ್ಣ ಸ್ವತಂತ್ರವಾದ ಸಿಲಿಂಡರ್ ಹೆಡ್ (ಪ್ರತಿ ಸಿಲಿಂಡರ್‌ಗೂ ನಾಲ್ಕು ವಾಲ್ವ್) ಅಭಿವೃದ್ಧಿಸಿದ ಬೆನ್ನಲ್ಲೇ, ಎಂಎಂಜಿ ಎಂಜಿನ್ ತಯಾರಕರಾಗಿಯೂ ಗುರುತಿಸಲ್ಪಟ್ಟಿತ್ತು. ಬಳಿಕ 1986ರಲ್ಲಿ ಇ ಕ್ಲಾಸ್ ಕೂಪೆ ಕಾರಿನಲ್ಲಿ 5.0 ಲೀಟರ್ ವಿ8 ಎಂಜಿನ್ ಆಳವಡಿಸಲಾಯಿತು. 'ದಿ ಹ್ಯಾಮರ್' (hammer) ಎಂಬ ಪ್ರೀತಿಯ ಹೆಸರಿನಿಂದ ಅರಿಯಲ್ಪಡುವ ಈ ಕಾರು ಇಂದಿಗೂ ಐಕಾನಿಕ್ ಎನಿಸಿಕೊಂಡಿದೆ.

ಫೋಟೊ ಕೃಪೆ: ಫ್ಲಿಕರ್
'ಒನ್ ಮ್ಯಾನ್ ಒನ್ ಎಂಜಿನ್' ಇದುವೇ ಪವರ್‌ಫುಲ್ ಮರ್ಸಿಡಿಸ್ ಎಎಂಜಿ

1980ನೇ ದಶಕದ ಅಂತ್ಯದಲ್ಲಿ ಡೈಮ್ಲರ್ ಬೆಂಝ್ ಜೊತೆಗೆ ಎಎಂಜಿ ಪಾಲುದಾರಿಕೆಗೆ ಹಸಿರು ನಿಶಾನೆ ನೀಡಿರುವುದು ಮಹತ್ವದ ತಿರುವಿಗೆ ಸಾಕ್ಷಿಯಾಗಿತ್ತು. ಈ ಜೋಡಿಯ ಬಹುದೊಡ್ಡ ಯಶಸ್ಸು ಮೊತ್ತ ಮೊದಲ 190 ರೇಸ್ ಕಾರಾಗಿದ್ದು, ಇದು 1988 ಹಾಗೂ 1993ನೇ ಕಾಲಘಟ್ಟದಲ್ಲಿ 50 ಡಿಟಿಎಂ ಗೆಲುವನ್ನು ದಾಖಲಿಸಿತ್ತು.

ಫೋಟೊ ಕೃಪೆ: ಫ್ಲಿಕರ್
'ಒನ್ ಮ್ಯಾನ್ ಒನ್ ಎಂಜಿನ್' ಇದುವೇ ಪವರ್‌ಫುಲ್ ಮರ್ಸಿಡಿಸ್ ಎಎಂಜಿ

ಅಂದ ಹಾಗೆ 1993ನೇ ಇಸವಿಯಲ್ಲಿ ಡೈಮ್ಲರ್ ಬೆಂಝ್ ಎಜಿ ಹಾಗೂ ಎಎಂಜಿ ಜಂಟಿಯಾಗಿ, ಸಿ36 ಎಎಂಜಿ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇದು ಪ್ರಮುಖವಾಗಿಯೂ ಬಿಎಂಡಬ್ಲ್ಯು ಇ36 ಎಂ3 ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿತ್ತಲ್ಲದೆ ಭವಿಷ್ಯದ ಎಎಂಜಿ ವಿಭಾಗದ ಟ್ರೇಡ್ ಮಾರ್ಕ್ ಎನಿಸಿಕೊಂಡಿತ್ತು. ಇದಾದ ಬಳಿಕ ನೀವು ನೋಡಿರುವಂತೆಯೇ ಬೆಂಝ್ ತಲಹದಿಯಲ್ಲಿ ಸಿಎಲ್‌ಕೆ-ಜಿಟಿಆರ್ ಸೂಪರ್ ಕಾರು ಸೇರಿದಂತೆ ಅನೇಕ ಎಎಂಜಿ ಮಾದರಿಗಳು ಪ್ರವೇಶವಾದವು.

ಫೋಟೊ ಕೃಪೆ: ಫ್ಲಿಕರ್
'ಒನ್ ಮ್ಯಾನ್ ಒನ್ ಎಂಜಿನ್' ಇದುವೇ ಪವರ್‌ಫುಲ್ ಮರ್ಸಿಡಿಸ್ ಎಎಂಜಿ

21ನೇ ಶತಮಾನದ ಆರಂಭಿಕ ಕಾಲಘಟ್ಟದಲ್ಲಿ ಬೆಂಝ್ ಹಾಗೂ ಎಎಂಜಿ ಸೂಪರ್ ಚಾರ್ಜ್ಡ್ ವಿ8 ಹಾಗೂ ವಿ6 ಎಂಜಿನ್‌ಗಳಲ್ಲಿ ಗಮನ ಕೇಂದ್ರಿತವಾಗಿತ್ತು. ಬಳಿಕ 2006ರಲ್ಲಿ ತಾನೇ ಅಭಿವೃದ್ಧಿಪಡಿಸಿದ್ದ ನೈಸರ್ಗಿಕವಾಗಿ ಚೋಷಿತ 6.2 ಲೀಟರ್ ವಿ8 ಎಂಜಿನ್ ಪರಿಚಯಿಸಿತ್ತು. ಅದೇ ವರ್ಷ ಟರ್ಬೊಚಾರ್ಜ್ಡ್ ಎಂಜಿನ್ ಸಹ ಆಳವಡಿಸಲಾಗುವುದು ಎಂದು ಬೆಂಝ್ ಘೋಷಿಸಿತ್ತು. ಇದನ್ನೇ ಇಂದಿನ ವರೆಗೂ ಮುಂದುವರಿಸಿಕೊಂಡು ಬಂದಿದೆ.

ಫೋಟೊ ಕೃಪೆ: ವಿಕಿ ಕಾಮನ್ಸ್
'ಒನ್ ಮ್ಯಾನ್ ಒನ್ ಎಂಜಿನ್' ಇದುವೇ ಪವರ್‌ಫುಲ್ ಮರ್ಸಿಡಿಸ್ ಎಎಂಜಿ

ಇನ್ನಷ್ಟು ಶಕ್ತಿ, ಇನ್ನಷ್ಟು ನಿರ್ವಹಣೆ ಡೈನಾಮಿಕ್ಸ್, ಇನ್ನಷ್ಟು ಶೈಲಿ, ಇನ್ನಷ್ಟು ಎಂಜಿನಿಯರಿಂಗ್, ಇನ್ನಷ್ಟು ಎಎಂಜಿ - ಹೌದು, ಇಂದು 20ಕ್ಕೂ ಹೆಚ್ಚು ಮಾದರಿಗಳಿಗೆ ಮರ್ಸಿಡಿಸ್-ಎಎಂಜಿ ಸೂತ್ರಧಾರಿಯಾಗಿದೆ. 'ಒನ್ ಮ್ಯಾನ್ ಒನ್ ಕಾರ್'ನಿಂದ ಆರಂಭಿಸಿದ ಎಎಂಜಿ ತತ್ವಶಾಸ್ತ್ರದ ನೇಮ್‌ಪ್ಲೇಟ್ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ವಾಹನ ಪ್ರೇಮಿಗಳಿಗೆ ಇದು ಹೆಮ್ಮೆಯ ವಿಚಾರ ಕೂಡಾ ಹೌದು.

'ಒನ್ ಮ್ಯಾನ್ ಒನ್ ಎಂಜಿನ್' ಇದುವೇ ಪವರ್‌ಫುಲ್ ಮರ್ಸಿಡಿಸ್ ಎಎಂಜಿ

ಈ ವಾಕ್ಯವನ್ನು ಸೇರಿಸದಿದ್ದಲ್ಲಿ ಎಎಂಜಿ ಚರಿತ್ರೆ ಅಪೂರ್ಣವಾದಿತ್ತು. ರೇಸಿಂಗ್ ಜಗತ್ತಿಗೆ ಕಾಲಿಟ್ಟಿರುವ ಮರ್ಸಿಡಿಸ್-ಎಎಂಜಿ ಪೆಟ್ರೋನಸ್ ಎಫ್1 ತಂಡವು ಲೆವಿಸ್ ಹ್ಯಾಮಿಲ್ಟನ್ ಹಾಗೂ ನಿಕೊ ರೋಸ್‌ಬರ್ಗ್ ನೇತೃತ್ವದಲ್ಲಿ ಅಭೂತಪೂರ್ವ ಪ್ರದರ್ಶನ ನೀಡುತ್ತಿದ್ದು, ಪ್ರಸಕ್ತ ಸಾಲಿನ ರೇಸಿಂಗ್‌ನಲ್ಲಿ ತಮ್ಮ ಅಮೋಘ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಎಫ್1 ಜಗತ್ತಿನಲ್ಲಿ ಇಂತಹದೊಂದು ಸಾಧನೆ ಹಿಂದೆಂದೂ ಕಂಡಿರಲಿಲ್ಲ. ಒಟ್ಟಿನಲ್ಲಿ ಮೋಟಾರು ಜಗತ್ತಿನಲ್ಲಿ ಎದುರಾಳಿಗಳ ಪಾಲಿಗೆ ಮರ್ಸಿಡಿಸ್-ಎಂಎಂಜಿ ಇನ್ನಷ್ಟು ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.


Most Read Articles

Kannada
English summary
If you thought Mercedes-Benz cars were highly desirable, AMG sport sedans and SUVs take it to the next level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X