ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎಸ್63 ಕೂಪೆ ಕಾರು ಬಿಡುಗಡೆ

ಕಳೆದ ತಿಂಗಳ ಹಿಂದಷ್ಟೇ ಎಎಂಜಿ ಇ63 ಎಸ್ ಕೂಪೆ ಕಾರುಗಳನ್ನು ಬಿಡುಗಡೆ ಮಾಡಿದ್ದ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಇದೀಗ ಮತ್ತೊಂದು ಹೊಸ ವಿನ್ಯಾಸದ ಎಎಂಜಿ ಎಸ್63 ಕೂಪೆ ಬಿಡುಗಡೆಗೊಳಿಸಿದೆ.

By Praveen Sannamani

ಕಳೆದ ತಿಂಗಳ ಹಿಂದಷ್ಟೇ ಎಎಂಜಿ ಇ63 ಎಸ್ ಕೂಪೆ ಕಾರುಗಳನ್ನು ಬಿಡುಗಡೆ ಮಾಡಿದ್ದ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಇದೀಗ ಮತ್ತೊಂದು ಹೊಸ ವಿನ್ಯಾಸದ ಎಎಂಜಿ ಎಸ್63 ಕೂಪೆ ಬಿಡುಗಡೆಗೊಳಿಸಿದೆ. ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 2.55 ಕೋಟಿಗೆ ನಿಗದಿಪಡಿಸಲಾಗಿದ್ದು, ಹತ್ತಾರು ವಿನೂತನ ತಾಂತ್ರಿಕ ಸೌಲಭ್ಯಗಳು ಈ ಕಾರಿನಲ್ಲಿವೆ.

ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎಸ್63 ಕೂಪೆ ಕಾರು ಬಿಡುಗಡೆ

ಮರ್ಸಿಡಿಸ್ ಬೆಂಝ್ ಸಂಸ್ಥೆಯ ಸೆನ್‌ಸ್ಯುಲ್ ಪ್ಯೂರಿಟಿ ಡಿಸೈನ್ ಲಾಂಗ್ವೆಜ್ ಪ್ಯಾಟ್‌ಫಾರ್ಮ್ ಅಡಿ ಹೊಸ ಕೂಪೆ ಕಾರುಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದೀಗ ಬಿಡುಗಡೆಯಾಗಿರುವ ಎಎಂಜಿ ಎಸ್63 ಕೂಪೆ ಸಹ ವಿನೂತನ ತಂತ್ರಜ್ಞಾನ ಪ್ರೇರಣೆ ಹೊಂದಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ ಎನ್ನಬಹದು.

ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎಸ್63 ಕೂಪೆ ಕಾರು ಬಿಡುಗಡೆ

ಎಎಂಜಿ ಸರಣಿ ಕಾರುಗಳಲ್ಲೇ ಅತಿ ಹೆಚ್ಚು ಸ್ಪೋರ್ಟಿ ಲುಕ್ ಮತ್ತು ಎಸ್ ಕ್ಲಾಸ್ ಮಾದರಿಯಲ್ಲಿ ಎಂಜಿನ್ ಸೌಲಭ್ಯ ಹೊಂದಿರುವ ಎಎಂಜಿ ಎಸ್63 ಕೂಪೆ ಕಾರುಗಳು, ಈ ಹಿಂದಿನ ಎಎಂಜಿ ಸರಣಿಯ ಇ63 ಎಸ್ ಕೂಪೆ ಕಾರುಗಳ ರೀತಿಯಲ್ಲೇ ಫ್ರಂಟ್ ಪ್ರೋಫೈಲ್ ಪಡೆದಿದೆ ಎನ್ನಬಹುದು.

ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎಸ್63 ಕೂಪೆ ಕಾರು ಬಿಡುಗಡೆ

ಕಾರಿನ ಬ್ಯಾನೆಟ್ ಮತ್ತು ವರ್ಟಿಕಲ್ ಸ್ಲಾಟ್ ಗ್ರೀಲ್ ಸಹ ಕಾರಿನ ಅಂದವನ್ನು ಹೆಚ್ಚಿಸಿದ್ದು, ಹೊಸ ಕಾರು ತ್ರಿ ಡೋರ್ ಸೌಲಭ್ಯದೊಂದಿಗೆ ಖರೀದಿಗೆ ಲಭ್ಯವಾಗಿವೆ. ಜೊತೆಗೆ ಕ್ರೋಮ್ ಗಾರ್ನಿಷ್ ಸಹ ಕಾರಿಗೆ ಹೊಳಪು ಹೆಚ್ಚಿಸಿದ್ದು, ಗ್ರ್ಯಾಂಡ್ ಟೂರರ್ ಮಾದರಿಯ ಹೋಲಿಕೆ ಪಡೆದಿದೆ.

ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎಸ್63 ಕೂಪೆ ಕಾರು ಬಿಡುಗಡೆ

ಇನ್ನು ಹಿಂಭಾಗದ ಡಿಸೈನ್ ಬಗೆಗೆ ಹೇಳುವುದಾದರೇ, ಕಾರಿನ ಮುಂಭಾಗದಲ್ಲಿ ಅಳವಡಿಸಿದ ಸೌಲಭ್ಯಗಳನ್ನು ಹಿಂಭಾಗದಲ್ಲಿ ಅಳವಡಿಸಲಾಗಿರುವ ಸೌಲಭ್ಯಗಳಿಗೆ ಹೋಲಿಕೆ ಮಾಡಿದಲ್ಲಿ ಅಷ್ಟೇನು ವಿಶೇಷ ಎನ್ನಿಸಲಾರವು. ಸಾಮಾನ್ಯ ಮಾದರಿಯಲ್ಲೇ ಕ್ವಾಡ್ ಎಕ್ಸಾಸ್ಟ್, ಎಲ್ಇಡಿ ಟೈಲ್ ಲ್ಯಾಂಪ್, ವೆಂಟ್ ಬಂಪರ್ ಒದಗಿಸಲಾಗಿದೆ.

ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎಸ್63 ಕೂಪೆ ಕಾರು ಬಿಡುಗಡೆ

ಹಾಗೆಯೇ ಸ್ಪೋರ್ಟಿ ಮಾದರಿಯಲ್ಲಿ 20-ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳನ್ನು ಹೊಂದಿರುವ ಹೊಸ ಕಾರು ಒಳಭಾಗದ ವಿನ್ಯಾಸದಲ್ಲಿ ಹಳೆಯ ಮಾದರಿಯ ಎಎಂಜಿ ಕಾರುಗಳಿಂತಲೂ ವಿಶೇಷ ಎನ್ನಿಸಬಲಿದೆ. ಎಎಂಜಿ ಎಸ್63 ಕೂಪೆ ಕಾರುಗಳಲ್ಲಿ 12.3-ಇಂಚಿನ ಇನ್‌ಸ್ಟ್ರುಮೆಂಟಲ್ ಮತ್ತು ಇನ್ಪೋಟೈನ್‌ಮೆಂಟ್ ಕನ್ಸೊಲ್ ಪಡೆದಿದೆ.

ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎಸ್63 ಕೂಪೆ ಕಾರು ಬಿಡುಗಡೆ

ಜೊತೆಗೆ ದುಬಾರಿ ಬೆಲೆಯ ನಪ್ಪಾ ಲೆದರ್ ಬಳಕೆ ಮಾಡಲಾಗಿದ್ದು, ಪ್ರಿಮಿಯಂ ಬೂಮ್ರಸ್ಟರ್ ಸರೌಂಡ್ ಆಡಿಯೋ ಸಿಸ್ಟಂ, 12-ವೇ ಅಡ್‌ಜೆಸ್ಟಬಲ್ ಫ್ರಂಟ್ ಸೀಟ್, ಕೂಲ್, ಹಿಟ್ ಮತ್ತು ಮಸಾಜ್ ಸೀಟ್‌ಗಳು ಇದ್ದು, ಸ್ಮಾರ್ಟ್ ಕನೆಕ್ಟಿವಿಟಿ ಮೂಲಕ ಕಾರಿನ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದು.

ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎಸ್63 ಕೂಪೆ ಕಾರು ಬಿಡುಗಡೆ

ಆದ್ರೆ ಐದೂವರೆ ಅಡಿಗಿಂತ ಹೆಚ್ಚಿನ ಎತ್ತರ ಇರುವ ವಾಹನ ಸವಾರರಿಗೆ ಈ ಕಾರಿನ ಚಾಲನೆ ಸ್ವಲ್ಪ ಕಷ್ಟವಾಗಬಹುದಾಗಿದ್ದು, ಹೆಡ್ ರೂಮ್ ಎತ್ತರ ತುಸು ಕಡಿಮೆಯಿದೆ ಎನ್ನುಬಹುದು. ಆದರೂ ಆಸದ ಎತ್ತರವನ್ನು ಅಡ್ಜೆಸ್ಟ್ ಮಾಡಿಕೊಳ್ಳುವ ಮೂಲಕ ಕಾರು ಚಾಲನೆಯನ್ನು ಸುಖಕರವಾಗಿಸಬಹುದು.

ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎಸ್63 ಕೂಪೆ ಕಾರು ಬಿಡುಗಡೆ

ಎಂಜಿನ್ ಸಾಮರ್ಥ್ಯ

ಎಎಂಜಿ ಎಸ್63 ಕೂಪೆ ಕಾರುಗಳು 4.0-ಲೀಟರ್ ಬಿ-ಟರ್ಬೋ ವಿ8 ಎಂಜಿನ್ ಹೊಂದಿದ್ದು, 610-ಬಿಎಚ್‌ಪಿ ಮತ್ತು 900-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ 9-ಸ್ಪೀಡ್ ಮಲ್ಟಿ ಕ್ಲಚ್ ಟ್ರಾನ್‌ಮಿಷನ್ ಪಡೆದಿದ್ದು, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಬಳಕೆಯಿದೆ.

ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎಸ್63 ಕೂಪೆ ಕಾರು ಬಿಡುಗಡೆ

ಈ ಮೂಲಕ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಎಎಂಜಿ ಎಸ್63 ಕೂಪೆ ಕಾರುಗಳು ಸುರಕ್ಷತೆಗಾಗಿ ಸರೌಂಡ್ ವ್ಯೂ ಕ್ಯಾಮೆರಾ, 10 ಏರ್‌ಬ್ಯಾಗ್, ಡಿಸ್ಟೋನಿಕ್ ಸೆಮಿ ಆಟೋಮಸ್ ಡ್ರೈವ್ ಮೊಡ್, ಆಪ್ಷನಲ್ ನೈಟ್ ವಿಷನ್ ಸೌಲಭ್ಯ ಪಡೆದಿದೆ.

ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎಸ್63 ಕೂಪೆ ಕಾರು ಬಿಡುಗಡೆ

ಒಟ್ಟಿನಲ್ಲಿ ಈ ಹಿಂದಿನ ಎಎಂಜಿ ಸರಣಿಗಳಿಂತಲೂ ಹೆಚ್ಚಿನ ಗುಣಮಟ್ಟ ಮತ್ತು ಅಧಿಕ ಎಂಜಿನ್ ಪರ್ಫಾಮೆನ್ಸ್ ಹೊಂದಿರುವ ಎಎಂಜಿ ಎಸ್63 ಕೂಪೆ ಕಾರುಗಳು ಕೂಪೆ ಪ್ರಿಯರನ್ನು ರಂಜಿಸಲು ಸಿದ್ದವಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರುಗಳು ಹೇಗೆ ಬೇಡಿಕೆ ಪಡೆದುಕೊಳ್ಳುತ್ತವೆ ಎಂಬುದನ್ನು ಕಾಯ್ದು ನೋಡಬೇಕಿದೆ.

Most Read Articles

Kannada
Read more on mercedes benz amg
English summary
Mercedes-AMG S63 Coupe Launched At Rs 2.55 Crore — Combines Performance With Elegance.
Story first published: Monday, June 18, 2018, 16:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X