ಹಾಲಿವುಡ್ ಚಿತ್ರಗಳಲ್ಲಿ ಹಾಟ್ ಬೈಕ್ ರೈಡಿಂಗ್

Posted By:

ಜಗತ್ತಿನ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಹರ್ಲಿ ಡೇವಿಡ್ಸನ್, ಡುಕಾಟಿ, ಕವಾಸಕಿ ಹಾಗೂ ಇನ್ನಿತರ ಅಗ್ರ ಸಂಸ್ಥೆಗಳ ಬೈಕ್‌ಗಳನ್ನು ಖರೀದಿಸಿರುವುದು ಪ್ರತಿಯೊಬ್ಬ ಬೈಕ್ ಪ್ರಿಯರ ಕನಸಾಗಿರುತ್ತದೆ. ಇನ್ನು ಕೆಲವು ಬಾರಿ ಹಾಲಿವುಡ್ ಚಿತ್ರಗಳಲ್ಲಿ ಇಂತಹ ಬೈಕ್‌ಗಳ ರೈಡಿಂಗ್ ನೋಡುವುದೇ ಮನಸ್ಸಿಗೆ ಮುದವನ್ನು ನೀಡುತ್ತದೆ.

ಅದೇ ರೀತಿಯಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಇಂದಿನ ಈ ಲೇಖನದಲ್ಲಿ ಹಾಲಿವುಡ್‌ನ ಪ್ರಖ್ಯಾತ ಚಿತ್ರಗಳಲ್ಲಿ ಕಂಡುಬಂದಿರುವ ಸಾಹಸಿ ಬೈಕ್‌ಗಳ ಪರಿಚಯ ಮಾಡಿಕೊಡಲಿದ್ದೇವೆ. ಇದನ್ನು ನೋಡಿದರೆ ಒಮ್ಮೆ ರೈಡಿಂಗ್ ಮಾಡೋಣವೆಂಬ ಭಾವನೆ ನಿಮ್ಮ ಲ್ಲಿ ಮೂಡಲಿದೆ.

ಕೆಲವೊಂದು ಇಂತಹ ಬೈಕ್‌ಗಳಲ್ಲಿ ನೈಜ ಫೀಚರ್‌ಗಳನ್ನು ಬಳಿಸಿದ್ದರೆ ಇನ್ನಿತರ ಬೈಕ್‌ಗಳನ್ನು ಕಸ್ಟಮೈಸ್ಡ್ ಆಗಿ ಬಸಲಾಗಿದೆ. ಹಾಗಿದ್ದರೆ ಬನ್ನಿ ಹಾಲಿವುಡ್ ಚಿತ್ರಗಳಲ್ಲಿ ಕಂಡುಬಂದಿರುವ ರೋಚಕ ಬೈಕ್ ರೈಡಿಂಗ್ ನೋಡೋಣ.

Hollywood's Hot Rides

ಹಾಲಿವುಡ್ ಚಿತ್ರಗಳಲ್ಲಿ ಬೈಕ್ ಮುಖ್ಯ ಪಾತ್ರ ವಹಿಸುತ್ತದೆ. ಇಂತಹ ಬೈಕ್‌ಗಳು ನಟ ಅಥವಾ ನಟಿಯಿಂದ ಸಾಹಸಿ ದೃಶ್ಯಗಳಲ್ಲಿ ಬಳಸಲಾಗುತ್ತದೆ. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಹೆಚ್ಚು ಕ್ರೇಜ್ ಹುಟ್ಟಿಸುತ್ತದೆ.

Matrix Reloaded

Matrix Reloaded

ಮ್ಯಾಟ್ರಿಕ್ಸ್ ಚಿತ್ರದಲ್ಲಿ ಅತ್ಯಾಮೋಘ ಚೇಸಿಂಗ್ ದೃಶ್ಯಗಳಿವೆ. ಹಾಗೆಯೇ ಬ್ಲ್ಯಾಕ್ ಡುಕಾಟಿಯಲ್ಲಿ ಸಾಹಸಿ ದೃಶ್ಯ ಸೆರೆ ಹಿಡಿಯಲಾಗಿದೆ.

Closer to the Edge 3D

Closer to the Edge 3D

ಬೈಕ್ ಅಭಿಮಾನಿಗಳಲ್ಲಿ ಅತ್ಯಂತ ಹೆಚ್ಚು ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದೆ. ವಿಶ್ವದ ಅತಿಶ್ರೇಷ್ಠ ಮೋಟಾರ್ ಸೈಕಲ್ ರೇಸ್ ಆಗಿರುವ ಇಸ್ಲೆ ಮ್ಯಾನ್ ಟೂರಿಸ್ಟ್ ಟ್ರೋಫಿ ಆಧಾರವಾಗಿಟ್ಟುಕೊಂಡು ಚಿತ್ರ ನಿರ್ಮಿಸಲಾಗಿದೆ. ಚಿತ್ರದಲ್ಲಿ ಗಯ್ ಮಾರ್ಟಿನ್, ಇಯಾನ್ ಹಚ್ಚಿನ್ಸನ್, ಜಾನ್ ಮೆಕ್‌ಗಿನ್ನಿಸ್, ಮೈಕಲ್ ಡನ್‌ಲಾಪ್, ಕೇಥ್ ಅಮೊರ್‌ಗಳಂತಹ ನೈಜ ರೇಸರುಗಳು ಅಭಿನಯಿಸಿದ್ದಾರೆ.

Dust to Glory

Dust to Glory

2005ರ ಸಾಕ್ಷ್ಯಚಿತ್ರವಾಗಿರುವ ಡಸ್ಟ್ ಟು ಗ್ಲೋರ್‌ನಲ್ಲಿ ಬಜಾ 1000 ಆಫ್ ರೋಡ್ ರೇಸ್ ಇದೆ. ಪ್ರಸ್ತುತ ಈವೆಂಟ್ ಆಫ್ ರೋಡ್ ರೈಡರ್ ಪಾಲಿಗೆ ಫೇವರಿಟ್ ಎನಿಸಿದೆ. ಚಿತ್ರದಲ್ಲಿ ಆಫ್ ರೋಡ್ ಬೈಕಿಂಗ್ ಜತೆಗೆ ಆಫ್ ರೋಡ್ ಕಾರು ಕೂಡಾ ಬಳಸಲಾಗಿದೆ.

Easy Rider

Easy Rider

'ಬೋರ್ನ್ ಟು ಬಿ ಲಿವ್' ಎಂಬ ಹಾಡಿಗಾಗಿ ಚಿತ್ರವು ಅತ್ಯಂತ ಹೆಚ್ಚು ಪ್ರಿಯವೆನಿಸಿದೆ. ಚಿತ್ರದಲ್ಲಿ 1950ರ ದಶಕದ ಅನೇಕ ಹರ್ಲಿ ಡೇವಿಡ್ಸನ್ ಬೈಕ್‌ಗಳನ್ನು ಬಳಸಲಾಗಿದೆ.

 Ghost Rider

Ghost Rider

ಖಂಡಿತವಾಗಿಯೂ ಈ ಚಿತ್ರದ ಬಗ್ಗೆ ಹೆಚ್ಚೇನೂ ಹೇಳಬೇಕಾದ ಅಗತ್ಯವಿಲ್ಲ. ಯಾಕೆಂದರೆ ಗೋಸ್ಟ್ ರೈಡರ್ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಪ್ರಸ್ತುತ ಚಿತ್ರದಲ್ಲಿ ಹರ್ಲಿ ಡೇವಿಡ್ಸನ್ ಬೈಕ್ ಬಳಕೆ ಮಾಡಲಾಗಿದೆ.

Mission-Impossible-2

Mission-Impossible-2

ಗೋಸ್ಟ್ ರೈಡರ್ ರೀತಿಯಲ್ಲೇ ಮಿಷನ್ ಇಂಪೊಸಿಬಲ್ 2 ಕೂಡಾ ದೇಶದಲ್ಲಿ ಹೆಚ್ಚು ಜನಪ್ರಿಯವಾದ ಹಾಲಿವುಡ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಬೈಕ್ ಸಾಹಸಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

Terminator 2 Judgement Day

Terminator 2 Judgement Day

ಟರ್ಮಿನೇಟರ್ ನಾಯಕ ಅರ್ನಾಲ್ಡ್ ಕೂಡಾ ಹರ್ಲಿ ಡೇವಿಡ್ಸನ್ ಅಭಿಮಾನಿಯಾಗಿದ್ದು, ಅವರ ಗ್ಯಾರೇಜ್‌ನಲ್ಲಿ ಹಲವು ಕಲೆಕ್ಷನ್‌ಗಳಿವೆ.

The Dark Knight Rises

The Dark Knight Rises

ಇಲ್ಲಿದೆ ನೋಡಿ ಮತ್ತೊಂದು ಕಸ್ಟಮೈಸ್ಡ್ ಬೈಕ್. ಇದು ಹೆಚ್ಚು ನಿರ್ವಹಣೆ ಹಾಗೂ ಶತ್ರುಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.

The Worlds Fastest Indian

The Worlds Fastest Indian

ಆಂಟನಿ ಹಾಪ್‌ಕಿನ್ಸ್ ನೈಜ ನಿರ್ವಹಣೆ ನೀಡಿರುವ ಚಿತ್ರವು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

Tron Legacy

Tron Legacy

ನೀವು ವಿನ್ಯಾಸ ಪ್ರಿಯರಾದರೆ ಹಾಲಿವುಡ್ ನಿಮ್ಮನ್ನು ಕೈಬೀಸಿ ಕರೆಯಲಿದೆ. ಯಾಕೆಂದರೆ ಹಾಲಿವುಡ್ ಚಿತ್ರಗಳಲ್ಲಿ ನಿಮ್ಮಿಂದ ಊಹಿಸಲಾಗದ ಡಿಸೈನ್‌ ಬೈಕ್‌ಗಳನ್ನು ಆಳವಡಿಸಲಾಗುತ್ತದೆ.

Viva Knievel!

Viva Knievel!

ಪ್ರಖ್ಯಾತ ಮೋಟಾರ್ ಸೈಕಲ್ ಸ್ಟಂಟ್ ರೈಡರ್ ಆಗಿರುವ ಇವೆಲ್ ನಿವೆಲ್, ಚಿತ್ರದಲ್ಲಿ ಸ್ವತ: ತಾವೇ ಅಪಾಯಕಾರಿ ದೃಶ್ಯಗಳಲ್ಲಿ ಭಾಗಿಯಾಗಿದ್ದಾರೆ.

Hollywood's Hot Rides

ಇನ್ನಿತರ ಹಲವಾರು ಹಾಲಿವುಡ್ ಚಿತ್ರಗಳಲ್ಲೂ ಇದೇ ರೀತಿ ಬೈಕ್‌ಗಳನ್ನು ಬಳಸಲಾಗಿದೆ. ಹಾಗಾಗಿ ಹಾಲಿವುಡ್ ಚಿತ್ರರಂಗದಲ್ಲಿ ಬೈಕ್ ಅವಿಭಾಜ್ಯ ಅಂಗವಾಗಿಬಿಟ್ಟಿದೆ.

English summary
Here are some famous Hollywood movies that impressed motorcycle fans across the world. Some of these films feature original bikes, while some have modified bikes. There are a select few which have custom made bikes specially for the film. Flip through the photo feature below to see some of the iconic Hollywood bikes.
Story first published: Wednesday, February 13, 2013, 10:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark