ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಭಾರತದ ರಸ್ತೆಗಳಲ್ಲಿ ಚಲಿಸುವಾಗ ಸರ್ಕಾರಿ ವಾಹನಗಳನ್ನು ಕಾಣಬಹುದು. ಈ ಸರ್ಕಾರಿ ವಾಹನಗಳ ಮೇಲೆ ಸಾಮಾನ್ಯವಾಗಿ ಕರ್ನಾಟಕ ಸರ್ಕಾರ, ಭಾರತ ಸರ್ಕಾರ ಎಂಬ ಸ್ಟಿಕ್ಕರ್‍‍ಗಳನ್ನು ಅಂಟಿಸಲಾಗಿರುತ್ತದೆ.

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಪೊಲೀಸ್ ವಾಹನಗಳ ಮೇಲೆ, ಜನಪ್ರತಿನಿಧಿಗಳ ವಾಹನಗಳ ಮೇಲೆ ಅಥವಾ ಬೇರೆ ಯಾವುದಾದರೂ ಉನ್ನತಾಧಿಕಾರವನ್ನು ಹೊಂದಿದವರ ಕಾರುಗಳ ಮೇಲೆ ಸಂಬಂಧಪಟ್ಟ ಸ್ಟಿಕ್ಕರ್‍‍ಗಳನ್ನು ಕಾಣಬಹುದು. ಆದರೆ ಯಾವುದೇ ಅಧಿಕಾರವನ್ನು ಹೊಂದದೇ ಇರುವ ಕೆಲವರು ಜನರ ಮುಂದೆ ಬಿಲ್ಡಪ್ ಕೊಡಲು ತಮಗೆ ಸಂಬಂಧಪಡದೇ ಇರುವ ಸ್ಟಿಕ್ಕರ್‍‍ಗಳನ್ನು ಅಂಟಿಸಿಕೊಂಡಿರುವುದನ್ನು ಕಾಣಬಹುದು.

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಈ ರೀತಿಯ ಸ್ಟಿಕ್ಕರ್‍‍ಗಳನ್ನು ಅಂಟಿಸಿಕೊಂಡರೆ ಪೊಲೀಸರು ತಮ್ಮನ್ನು ಹಿಡಿಯುವುದಿಲ್ಲ ಎಂಬ ಭ್ರಮೆಯೂ ಇರಬಹುದು. ಕೆಲವು ಬಾರಿ ಇದು ನಿಜವಾದರೂ, ಇನ್ನು ಕೆಲವು ಬಾರಿ ಅದೃಷ್ಟ ಕೈಕೊಡುತ್ತದೆ. ಹೈದರಾಬಾದಿನಲ್ಲಿ ನಡೆದಿರುವುದು ಸಹ ಇದೇ ರೀತಿಯ ಘಟನೆ.

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಹೈದರಾಬಾದ್ ಪೊಲೀಸರು, ಪೊಲೀಸ್ ಎಂಬ ಸ್ಟಿಕ್ಕರ್ ಅನ್ನು ಕಾನೂನುಬಾಹಿರವಾಗಿ ಅಳವಡಿಸಿಕೊಂಡು ತಿರುಗಾಡುತ್ತಿದ್ದ ಹೋಂಡಾ ಸಿವಿಕ್ ಕಾರ್ ಅನ್ನು ತಡೆದು, ವಶಕ್ಕೆ ಪಡೆದಿದ್ದಾರೆ. ಎಂದಿನಂತೆ ಪೊಲೀಸರು, ಹೈದರಾಬಾದಿನ ಜ್ಯೂಬಿಲಿ ಹಿಲ್ಸ್ ನ ಚೆಕ್‍‍ಪೋಸ್ಟಿನಲ್ಲಿ ತಪಾಸಣೆ ನಡೆಸುತ್ತಿದ್ದರು.

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಆಗ ಪೊಲೀಸ್ ಎಂಬ ಸ್ಟಿಕ್ಕರ್ ಹೊಂದಿದ್ದ ಹೋಂಡಾ ಸಿವಿಕ್ ಕಾರ್ ಅನ್ನು ತಡೆದು ನಿಲ್ಲಿಸಿದ್ದಾರೆ. ಈ ಕಾರ್ ಅನ್ನು ಸಂದೀಪ್ ಎಂಬಾತ ಡ್ರೈವ್ ಮಾಡುತ್ತಿದ್ದ. ಪೊಲೀಸರ ಪ್ರಕಾರ ಈ ಕಾರಿನಲ್ಲಿ ಅಳವಡಿಸಲಾಗಿದ್ದ ನಂಬರ್ ಪ್ಲೇಟ್ ಸಹ ನಕಲಿ ಎಂದು ತಿಳಿದು ಬಂದಿದೆ.

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಕಾರಣಕ್ಕೆ ಪೊಲೀಸರು ಹಿಡಿಯಬಾರದು ಎಂಬ ಕಾರಣಕ್ಕೆ ಕಾರಿನ ಮುಂಭಾಗ ಹಾಗೂ ಹಿಂಭಾಗದ ಗ್ಲಾಸ್‍‍ಗಳ ಮೇಲೆ ಪೊಲೀಸ್ ಎಂಬ ಸ್ಟಿಕ್ಕರ್ ಅಳವಡಿಸಿಕೊಂಡಿದ್ದಾನೆ. ಈ ಕಾರಿನ ನಿಜವಾದ ನಂಬರ್ ಎಪಿ16ಬಿ‍ಇ0300. ಆದರೆ ಈ ನಂಬರಿನ ಬದಲಿಗೆ ಎಪಿ16ಬಿ‍ಇ3 ಎಂಬ ನಂಬರ್ ಪ್ಲೇಟ್ ಅಳವಡಿಸಿಕೊಂಡು ತಿರುಗಾಡುತ್ತಿದಿದ್ದು ಕಂಡು ಬಂದಿದೆ.

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಈ ಕಾರ್ ಅನ್ನು ತಪಾಸಣೆ ನಡೆಸಿದ ಬಳಿಕ ಹಲವು ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಈ ಕಾರಿನಲ್ಲಿ ಟಿಂಟೆಡ್ ಗ್ಲಾಸ್ ಸಹ ಅಳವಡಿಸಲಾಗಿತ್ತು. ಭಾರತದಲ್ಲಿ ಯಾವುದೇ ನಾಲ್ಕು ಚಕ್ರದ ವಾಹನವು ಟಿಂಟೆಡ್ ಗ್ಲಾಸ್ ಹೊಂದುವುದನ್ನು ನಿಷೇಧಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಹಲವು ಸಂದರ್ಭಗಳಲ್ಲಿ ಟ್ರಾಫಿಕ್ ಪೊಲೀಸರು ಟಿಂಟೆಡ್ ಗ್ಲಾಸುಗಳನ್ನು ಸ್ಥಳದಲ್ಲಿಯೇ ತೆಗೆದು ಹಾಕುತ್ತಾರೆ. ಆದರೆ ಈ ಪ್ರಕರಣದಲ್ಲಿ ಹೋಂಡಾ ಸಿವಿಕ್ ಕಾರು ಹಲವು ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಕಾರ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರು ಸದ್ಯ ಎಲ್ ಅಂಡ್ ಒ ಪೊಲೀಸ್ ಠಾಣೆಯಲ್ಲಿದೆ.

MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಯಾವುದೇ ವಾಹನದಲ್ಲಿಯೇ ಆಗಲಿ ನಕಲಿ ನಂಬರ್ ಪ್ಲೇಟ್‍‍ಗಳನ್ನು ಹೊಂದುವುದು ಭಾರತದಲ್ಲಿ ಬಹುದೊಡ್ಡ ಅಪರಾಧವಾಗಿದೆ. ಪೊಲೀಸರು ಈ ಕಾರಣಕ್ಕಾಗಿ ಹೋಂಡಾ ಸಿವಿಕ್ ಕಾರಿನ ರಿಜಿಸ್ಟ್ರೇಷನ್ ಅನ್ನು ರದ್ದುಗೊಳಿಸಬಹುದಾಗಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಪೊಲೀಸರು ಈ ಪ್ರಕರಣದಲ್ಲಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಇನ್ನೂ ಬಹಿರಂಗ ಪಡಿಸಿಲ್ಲ. ನಿಜವಾದ ಪೊಲೀಸರನ್ನು ಹೊರತುಪಡಿಸಿ, ಯಾವುದೇ ವಾಹನದಲ್ಲಿ ಪೊಲೀಸ್ ಎಂಬ ಸ್ಟಿಕ್ಕರ್ ಅಳವಡಿಸಿಕೊಳ್ಳುವುದು ಸಹ ಕಾನೂನುಬಾಹಿರ.

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಆದರೆ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳುವ ಕಾರಣಕ್ಕೆ ಈ ರೀತಿಯಾಗಿ ಸ್ಟಿಕ್ಕರ್‍‍ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ವಾಹನಗಳನ್ನು ಚಲಾಯಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇತ್ತೀಚಿಗಷ್ಟೇ ದಂಡ ಪ್ರಮಾಣವನ್ನು ಹೆಚ್ಚಿಸಿದೆ.

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಈ ವಾಹನದ ಮೇಲೆ ಎಷ್ಟು ಪ್ರಮಾಣದ ದಂಡವನ್ನು ವಿಧಿಸಲಾಗುವುದು ಎಂದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ. ಕಳೆದ ಕೆಲ ದಿನಗಳ ಹಿಂದೆ ಈ ರೀತಿಯ ಸ್ಟಿಕ್ಕರ್‍‍ಗಳನ್ನು ಹೊಂದಿ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ನೋಯ್ಡಾ ಹಾಗೂ ಉತ್ತರ ಪ್ರದೇಶ ಪೊಲೀಸರು ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದರು.

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಈ ರೀತಿ ಸ್ಟಿಕ್ಕರ್‍‍ಗಳನ್ನು ಹೊಂದಿರುವ ಯಾವುದೇ ವಾಹನವನ್ನು ತಡೆದು ದಂಡ ವಿಧಿಸುವ ಅಧಿಕಾರವನ್ನು ಟ್ರಾಫಿಕ್ ಪೊಲೀಸರಿಗೆ ನೀಡಲಾಗಿದೆ. ಇದರ ಜೊತೆಗೆ ನಂಬರ್ ಪ್ಲೇಟ್‍‍ಗಳನ್ನೂ ಸಹ ನಿಗದಿಪಡಿಸಿರುವ ಫಾಂಟ್‍‍ನಲ್ಲಿಯೇ ಹೊಂದಿರಬೇಕೆಂಬ ನಿಯಮವಿದೆ.

ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಈಗ ವಶಕ್ಕೆ ಪಡೆಯಲಾಗಿರುವ ಹೋಂಡಾ ಸಿವಿಕ್ ಕಾರ್ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಸಹ ಹೊಂದಿದೆ. ಇದೂ ಸಹ ಕಾನೂನುಬಾಹಿರವಾಗಿದೆ. ಫ್ಯಾನ್ಸಿ ನಂಬರ್ ಪ್ಲೇಟ್‍‍ಗಳನ್ನು ಹೊಂದಿದ್ದ ಕಾರಣಕ್ಕೆ ಮುಂಬೈನಲ್ಲಿ ಈ ವರ್ಷದ ಜನವರಿಯಿಂದ ಇಲ್ಲಿಯವರೆಗೂ 2,272 ವಾಹನಗಳಿಗೆ ಮುಂಬೈನಲ್ಲಿ ದಂಡ ವಿಧಿಸಲಾಗಿದೆ.

Most Read Articles

Kannada
English summary
Honda civic owner busted for using fake police stickers - Read in kannada
Story first published: Thursday, August 29, 2019, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X