ವಿಚಿತ್ರ ವಾಹನ ಪ್ರೇಮ; ತುಕ್ಕು ಹಿಡಿದ ಕೋಟಿ ಬೆಲೆಬಾಳುವ ಪೋರ್ಷೆ ಕಾರು

Written By:

ಹಲವು ಬಗೆಯ ವಾಹನ ಪ್ರೇಮವನ್ನು ನಾವು ಕಂಡಿರುತ್ತೇವೆ. ತಮ್ಮ ಕಾರುಗಳು ವಿಶಿಷ್ಟವಾಗಿ ಕಾಣಿಸಿಕೊಳ್ಳುವ ನಿಟ್ಟಿನಲ್ಲಿ ಮಾರ್ಪಾಡುಗೊಳಿಸುವುದು ಅಥವಾ ಸ್ಟಿಕ್ಕರ್ ಅಂಟಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವಾಹನ ಉತ್ಸಾಹಿ ನಿಮ್ಮ ಯೋಚನೆಗೂ ನಿಲುಕದಂತಹ ಕಲಾ ಸೃಷ್ಟಿಯೊಂದಿಗೆ ಮುಂದೆ ಬಂದಿದ್ದಾರೆ.

ಹೇಳಿ ಕೇಳಿ ಕೋಟಿಗಟ್ಟಲೆ ಬೆಲೆ ಬಾಳುವ ಜರ್ಮನಿಯ ಐಷಾರಾಮಿ ಪೋರ್ಷೆ ಕಾರನ್ನು ತಮ್ಮದಾಗಿಸಿಕೊಂಡಿರುವ ಕೇರಳದ ವ್ಯಕ್ತಿಯೋರ್ವ ಇದಕ್ಕೆ ತುಕ್ಕು ಹಿಡಿದಂತಹ ಹೋದಿಕೆಯನ್ನು ಬಳಿದಿರುವುದು ನಿಜಕ್ಕೂ ವಿಶಿಷ್ಟವೇ ಸರಿ.

ವಿಚಿತ್ರ ವಾಹನ ಪ್ರೇಮ; ತುಕ್ಕು ಹಿಡಿದ ಕೋಟಿ ಬೆಲೆಬಾಳುವ ಪೋರ್ಷೆ ಕಾರು

ತಮ್ಮ ಕಾರಿನಲ್ಲಿ ಚಿಕ್ಕ ಪುಟ್ಟ ಗೆರೆ ಬೀಳುವುದನ್ನು ಸಹಿಸಿಕೊಳ್ಳಲಾಗದ ಆಧುನಿಕ ಕಾರು ಮಾಲಿಕರ ಮನೋಸ್ಥಿತಿಯ ನಡುವೆಯೂ ಕೇರಳದ ಕಲ್ಲಿಕೋಟೆಯ ಮೂಲದ ಈ ಪೋರ್ಷೆ ಕಾರಿನ ಮಾಲಿಕ ಗಮನಕ್ಕೆ ಪಾತ್ರವಾಗಿದ್ದಾರೆ.

ವಿಚಿತ್ರ ವಾಹನ ಪ್ರೇಮ; ತುಕ್ಕು ಹಿಡಿದ ಕೋಟಿ ಬೆಲೆಬಾಳುವ ಪೋರ್ಷೆ ಕಾರು

ಇಲ್ಲಿ ಕೋಟಿ ಬೆಲೆಬಾಳುವ ಪೋರ್ಷೆ 911 ಕರೆರಾ ಎಸ್ ಕ್ಯಾಬ್ರಿಯೊ ಕಾರಿಗೆ ತುಕ್ಕು ಹಿಡಿದಂತಹ ಹೋದಿಕೆಯನ್ನು ಬಳಿದಿದ್ದಾರೆ.

ವಿಚಿತ್ರ ವಾಹನ ಪ್ರೇಮ; ತುಕ್ಕು ಹಿಡಿದ ಕೋಟಿ ಬೆಲೆಬಾಳುವ ಪೋರ್ಷೆ ಕಾರು

ಬೆಂಗಳೂರು ತಳಹದಿಯ ಡಿಸೈನ್ ಮೋಟಾರ್ ಮೈಂಡ್ ಆಟೋಮೋಟಿವ್ ಡಿಸೈನ್ಸ್ ನಲ್ಲಿ ಐಷಾರಾಮಿ ಪೋರ್ಷೆ ಕಾರಿಗೆ ಹೊಸ ರೂಪವನ್ನು ಕಲ್ಪಿಸಿ ಕೊಡಲಾಗಿದೆ.

ವಿಚಿತ್ರ ವಾಹನ ಪ್ರೇಮ; ತುಕ್ಕು ಹಿಡಿದ ಕೋಟಿ ಬೆಲೆಬಾಳುವ ಪೋರ್ಷೆ ಕಾರು

ಸತ್ತವರಿಗೆ ಸಂತಾಪ ಸೂಚಕವಾಗಿ ಆಂಗ್ಲ ಭಾಷೆಯಲ್ಲಿ 'ರೆಸ್ಟ್ ಇನ್ ಪೀಸ್' ಹೇಳುವುದು ವಾಡಿಕೆ. ಆದರೆ ಪ್ರಸ್ತುತ ಪೋರ್ಷೆ ಕಾರಿಗೆ 'ರಸ್ಟ್ ಇನ್ ಪೀಸ್' (Rust In Peace) ಎಂದು ವಿಶ್ಲೇಷಿಸಲಾಗುತ್ತಿದೆ.

ವಿಚಿತ್ರ ವಾಹನ ಪ್ರೇಮ; ತುಕ್ಕು ಹಿಡಿದ ಕೋಟಿ ಬೆಲೆಬಾಳುವ ಪೋರ್ಷೆ ಕಾರು

ಐಕಾನಿಕ್ ಮಾರ್ಟಿನ್ ರೇಸಿಂಗ್ ಜೊತೆಗೆ ಕಡು ನೀಲಿ, ತಿಳಿ ನೀಲಿ ಮತ್ತು ಕೆಂಪು ರೇಖೆಗಳನ್ನು ನೀವಿಲ್ಲಿ ಕಾಣಬಹುದಾಗಿದೆ.

ವಿಚಿತ್ರ ವಾಹನ ಪ್ರೇಮ; ತುಕ್ಕು ಹಿಡಿದ ಕೋಟಿ ಬೆಲೆಬಾಳುವ ಪೋರ್ಷೆ ಕಾರು

ಶಕ್ತಿಶಾಲಿ 3.8 ಲೀಟರ್ ಸ್ಟ್ರೇಟ್ ಸಿಕ್ಸ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಪೋರ್ಷೆ 911 ಕರೆರಾ ಎಸ್ ಕ್ಯಾಬ್ರಿಯೊ 4.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ವಿಚಿತ್ರ ವಾಹನ ಪ್ರೇಮ; ತುಕ್ಕು ಹಿಡಿದ ಕೋಟಿ ಬೆಲೆಬಾಳುವ ಪೋರ್ಷೆ ಕಾರು

ವರ್ಷಗಟ್ಟಲೆ ಪಾಳು ಬಿದ್ದಿರುವ ಕಾರಿಗೆ ಹೇಗೆ ತುಕ್ಕು ಹಿಡಿದಿರುತ್ತದೆಯೋ ಅದೇ ರೀತಿ ಪೋರ್ಷೆ ಕಾರಿಗೆ ನೈಜ ತುಕ್ಕು ಹಿಡಿದ ಪ್ರತೀತಿ ನೀಡುತ್ತದೆ. ಹತ್ತಿರದಿಂದ ಬಹಳ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಸತ್ಯಾಂಶ ಬಯಲಾಗಲಿದೆ.

ವಿಚಿತ್ರ ವಾಹನ ಪ್ರೇಮ; ತುಕ್ಕು ಹಿಡಿದ ಕೋಟಿ ಬೆಲೆಬಾಳುವ ಪೋರ್ಷೆ ಕಾರು

ತಮ್ಮ ನೆಚ್ಚಿನ ಕಾರಿಗೆ '911' ಎಂಬ ನಂಬರ್ ಪ್ಲೇಟ್ ಪಡೆಯುವಲ್ಲಿಯೂ ಕೇರಳದ ಈ ವ್ಯಕ್ತಿ ಯಶಸ್ವಿಯಾಗಿದ್ದಾರೆ.

English summary
You Don't Usually See A Porsche Like This In India
Story first published: Friday, April 29, 2016, 16:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark