ಭಾರತೀಯ ಸೇನಾ ಬತ್ತಳಿಕೆಗೆ ಸೇರಲಿವೆ ವಿಧ್ವಂಸಕ ದಾಳಿ ಸಾಮರ್ಥ್ಯದ ಎಹೆಚ್ 64ಇ ಆಪಾಚೆ ಹೆಲಿಕಾಪ್ಟರ್‍‌ಗಳು..!

Written By:

ಅಮೆರಿಕ ಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ವಿಧ್ವಂಸಕ ದಾಳಿ ಸಾಮರ್ಥ್ಯದ ಆಪಾಚೆ ಹೆಲಿಕಾಪ್ಟರ್‌ಗಳು ಸದ್ಯದಲ್ಲೇ ಭಾರತೀಯ ಸೇನಾ ಬತ್ತಳಿಕೆಗೆ ಸೇರಿಲಿದ್ದು, 6 ಎಹೆಚ್ 64ಇ ಆಪಾಚೆ ಹೆಲಿಕಾಪ್ಟರ್ ಗಳ ಖರೀದಿ ಒಪ್ಪಂದಕ್ಕೆ ಅನುಮೋದನೆ ಸಿಕ್ಕಿದೆ.

ಭಾರತೀಯ ಸೇನಾ ಬಲ ಹೆಚ್ಚಿಸಲಿವೆ 64ಇ ಆಪಾಚೆ ಹೆಲಿಕಾಪ್ಟರ್‍‌ಗಳು..!!

ಅಮೆರಿಕದ ಖ್ಯಾತ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ವಿದ್ವಂಸಕ ದಾಳಿ ಸಾಮರ್ಥ್ಯದ ಅಪಾಚೆ ಹೆಲಿಕಾಪ್ಟರ್ ಗಳನ್ನು ತಯಾರಿಸುತ್ತಿದ್ದು, ಈ ಹಿಂದಿನ ಒಪ್ಪಂದದಂತೆ ಭಾರತಕ್ಕೆ ವಿವಿಧ ಮಾದರಿಯ ಆರು ಎಹೆಚ್ 64ಇ ಅಪಾಚೆ ಹೆಲಿಕಾಪ್ಟರ್ ಗಳನ್ನು ಒದಗಿಸುತ್ತಿದೆ.

ಭಾರತೀಯ ಸೇನಾ ಬಲ ಹೆಚ್ಚಿಸಲಿವೆ 64ಇ ಆಪಾಚೆ ಹೆಲಿಕಾಪ್ಟರ್‍‌ಗಳು..!!

ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರವು ಕೂಡ ಬೋಯಿಂಗ್ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಅನುಮೋದನೆ ನೀಡಿದ್ದು, ಆರು ಅಪಾಚೆ ಎಹೆಚ್ 64ಇ ಹೆಲಿಕಾಪ್ಟರ್ ಗಳನ್ನು ಖರೀದಿಸುವ ರಕ್ಷಣಾ ಇಲಾಖೆಯ ಪ್ರಸ್ತಾವಕ್ಕೆ ಗ್ರೀನ್ ಸಿಗ್ನಲ್ ತೊರಿದೆ.

ಭಾರತೀಯ ಸೇನಾ ಬಲ ಹೆಚ್ಚಿಸಲಿವೆ 64ಇ ಆಪಾಚೆ ಹೆಲಿಕಾಪ್ಟರ್‍‌ಗಳು..!!

ಇದರ ವೆಚ್ಚವು 4,168 ಕೋಟಿ ಎಂದು ಅಂದಾಜಿಸಲಾಗಿದ್ದು, ರಕ್ಷಣಾ ಇಲಾಖೆ ಸರ್ಕಾರಕ್ಕೆ ನೀಡಿದ್ದ ಬೇಡಿಕೆಯಂತೆ ಒಟ್ಟು 6 ಹೆಲಿಕಾಪ್ಟರ್ ಗಳನ್ನು ಖರೀದಿ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಭಾರತೀಯ ಸೇನಾ ಬಲ ಹೆಚ್ಚಿಸಲಿವೆ 64ಇ ಆಪಾಚೆ ಹೆಲಿಕಾಪ್ಟರ್‍‌ಗಳು..!!

ಇದಲ್ಲದೇ ಹಲವು ವರ್ಷಗಳ ಹಿಂದೆಯೇ ಸೇನೆ ಈ ಬಗ್ಗೆ ಅನುಮೋದನೆ ಸಲ್ಲಿಸಿತ್ತು. ಆದರೆ ದೇಶೀಯವಾಗಿ ನಿರ್ಮಾಣ ಹೊಂದಿರುವ ಯುದ್ಧ ಹೆಲಿಕಾಪ್ಟರ್‌ಗಳ ಬಳಕೆಗೆ ಮುಂದಾಗಿದ್ದ ವಾಯುಸೇನೆಯು ಮಹತ್ವದ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು.

ಭಾರತೀಯ ಸೇನಾ ಬಲ ಹೆಚ್ಚಿಸಲಿವೆ 64ಇ ಆಪಾಚೆ ಹೆಲಿಕಾಪ್ಟರ್‍‌ಗಳು..!!

ಆದ್ರೆ ಇದೀಗ ಚೀನಾ-ಭಾರತ ನಡುವಿನ ಗಡಿ ವಿವಾದ ತಾರಕಕ್ಕೇರಿರುವಂತೆಯೇ ಅಪಾಚೆ ಹೆಲಿಕಾಪ್ಟರ್ ಗಳ ಅವಶ್ಯಕತೆ ಹೆಚ್ಚುತ್ತಿದ್ದು, ಈ ಹಿನ್ನಲೆ ಹೆಲೆಕಾಪ್ಟರ್‌ಗಳ ಖರೀದಿಗೆ ಒಪ್ಪಿಗೆ ನೀಡಲಾಗಿದೆ.

ಭಾರತೀಯ ಸೇನಾ ಬಲ ಹೆಚ್ಚಿಸಲಿವೆ 64ಇ ಆಪಾಚೆ ಹೆಲಿಕಾಪ್ಟರ್‍‌ಗಳು..!!

ಇನ್ನು ರಕ್ಷಾಣಾ ಸಚಿವ ಅರುಣ್ ಜೇಟ್ಲಿ ನೇತೃತ್ವದ ಯುದ್ಧ ವಿಮಾನ ಖರೀದಿ ಮಂಡಳಿಯು 6 ಹೆಲಿಕಾಪ್ಟರ್ ಖರೀದಿ ಶಿಫಾರಸಿಗೆ ಹಸಿರು ನಿಶಾನೆ ತೋರಿಸಿದ್ದು, ಸದ್ಯದಲ್ಲೇ ಸೇನಾ ಪಡೆಗೆ ಹೊಸ ಮಾದರಿಯ ಹೆಲಿಕಾಪ್ಟರ್‌ಗಳ ಸೇರ್ಪಡೆಯಾಗಲಿವೆ.

Recommended Video
Triumph Thruxton R Review: Specifications
ಭಾರತೀಯ ಸೇನಾ ಬಲ ಹೆಚ್ಚಿಸಲಿವೆ 64ಇ ಆಪಾಚೆ ಹೆಲಿಕಾಪ್ಟರ್‍‌ಗಳು..!!

ಆಪಾಚೆ ಹೆಲಿಕಾಪ್ಟರ್‍‌ಗಳ ವಿಶೇಷತೆ

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಎಹೆಚ್ 64ಇ ಆಪಾಚೆ ಹೆಲಿಕಾಪ್ಟರ್‍‌ಗಳು ವಿದ್ವಂಸಕ ದಾಳಿಗೆ ಹೇಳಿ ಮಾಡಿಸಿದಂತಿದ್ದು, ಈ ಹಿಂದಿನ ಪನಾಮದ ಆಕ್ರಮಣದಲ್ಲಿ, ಕೊಲ್ಲಿ ಯುದ್ಧದಲ್ಲಿ, ಕೊಸೊವೊ ಯುದ್ಧದಲ್ಲಿ, ಅಫ್ಘಾನಿಸ್ತಾನ ಕಾರ್ಯಾಚರಣೆಯಲ್ಲಿ ಮತ್ತು ಇರಾಕಿನ ಯುದ್ಧದಲ್ಲಿ ಇದರ ಸೇವೆ ಅಮೋಘ.

ಭಾರತೀಯ ಸೇನಾ ಬಲ ಹೆಚ್ಚಿಸಲಿವೆ 64ಇ ಆಪಾಚೆ ಹೆಲಿಕಾಪ್ಟರ್‍‌ಗಳು..!!

ಇನ್ನೊಂದು ಪ್ರಮುಖ ವಿಚಾರವೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಬೃಹತ್ ಪ್ರಮಾಣದ ಯೋಜನೆ ಜಾರಿ ಅವಶ್ಯಕತೆಯಿದ್ದು, ಪ್ರತಿಕೂಲಕರ ಆರ್ಥಿಕ ಪರಿಸ್ಥಿತಿಯಲ್ಲೂ ಇಂತಹ ಯೋಜನೆಗೆ ಕೇಂದ್ರವು ಹಸಿರು ನಿಶಾನೆ ತೋರಿದ್ದು ಹೆಮ್ಮೆಯ ವಿಚಾರ.

ಭಾರತೀಯ ಸೇನಾ ಬಲ ಹೆಚ್ಚಿಸಲಿವೆ 64ಇ ಆಪಾಚೆ ಹೆಲಿಕಾಪ್ಟರ್‍‌ಗಳು..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶದ ರಕ್ಷಣೆಗೆ ಅಪಾಚೆ ಹೆಲಿಕಾಪ್ಟರ್ ಗಳ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಕೇಂದ್ರವು ತೆಗೆದುಕೊಂಡಿರುವ ನಿರ್ಧಾರ ಗಮನಾರ್ಹವಾಗಿದೆ. ಜೊತೆಗೆ ಗಡಿಯಲ್ಲಿ ವಿನಾಕಾರಣ ಕ್ಯಾತೆ ತೆಗೆಯುವ ಚೀನಾ ಮತ್ತು ಪಾಕಿಸ್ತಾನಕ್ಕೆ ಹೊಸ ಯುದ್ಧ ವಿಮಾನಗಳು ನಡುಕು ಹುಟ್ಟಿಸುವುದಲ್ಲಿ ಯಾವುದೇ ಅನುಮಾನವಿಲ್ಲ.

English summary
Read in Kannada about Indian Army Receives Approval To Purchase AH-64E Apache Attack Helicopters.
Story first published: Saturday, August 19, 2017, 15:51 [IST]
Please Wait while comments are loading...

Latest Photos