ವೇಗದ ಪ್ರಯಾಣ ತಂದ ಆಪತ್ತು- ಅಪಘಾತದಲ್ಲಿ ಕಾರ್ ರೇಸ್ ಚಾಂಪಿಯನ್ ಸಜೀವ ದಹನ..!!

Written By:

ಭಾರತೀಯ ಉದಯೋನ್ಮುಖ ಕಾರು ರೇಸರ್ ಅಶ್ವಿನ್ ಸುಂದರ್ ಹಾಗೂ ಅವರ ಪತ್ನಿ ನಿವೇದಿತಾ ಕಾರು ಅಪಘಾದಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ಪ್ರಯಾಣ ಮಾಡುವಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವ ದಹನವಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಚೆನ್ನೈನ ಸಂತೋಮೆ ರಸ್ತೆಯಲ್ಲಿ ಶನಿವಾರ ಮುಂಜಾನೆ 1.30ರ ಸುಮಾರಿಗೆ ಈ ದುರಂತ ಘಟನೆ ನಡೆದಿದ್ದು, ಅಶ್ವಿನ್ ಹಾಗೂ ನಿವೇದಿತಾ ಅವರಿದ್ದ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಜೋರಾಗಿ ಅಪ್ಪಳಿಸಿದೆ. ಗುದ್ದಿದ ರಭಸಕ್ಕೆ ಕಾರಿನ ಎಂಜಿನ್ ಸ್ಫೋಟಗೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಸುಟ್ಟು ಭಸ್ಮವಾಗಿದ್ದಾರೆ.

ಅಶ್ವಿನ್ ಸುಂದರ್ ಹಾಗೂ ನಿವೇದಿತಾ ಅವರು ತಡರಾತ್ರಿ ಸ್ನೇಹಿತರೊಬ್ಬರ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಈ ದುರಂತ ಘಟನೆ ನಡೆದಿದೆ. ಮರಕ್ಕೆ ಜೋರಾಗಿ ಗುದ್ದಿದ ಪರಿಣಾಮ ಕಾರು ಹೊತ್ತಿಉರಿದಿದ್ದು, ಸ್ಥಳೀಯರು ನೆರವಿಗೆ ಬರುವಷ್ಟರಲ್ಲಿ ಸುಟ್ಟುಭಸ್ಮವಾಗಿದ್ದಾರೆ.

ಮೊದಮೊದಲು ಕಾರಿನೊಳಗಿದ್ದವರು ಯಾರು ಎಂದು ಗುರುತು ಪತ್ತೆಹಚ್ಚಲು ಸ್ಥಳೀಯರಿಗೆ ಸಾಧ್ಯವಾಗಿಲ್ಲ. ನೆರವಿಗಾಗಿ ಪೊಲೀಸ್ ಮತ್ತು ಅಗ್ನಿಶಾಮಕದಳಕ್ಕೆ ಕರೆ ಮಾಡಲಾಗಿತ್ತಾದರೂ ರಕ್ಷಣೆ ಮಾಡುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ದಂಪತಿಗಳಿಬ್ಬರ ಪ್ರಾಣವನ್ನೇ ಪಡೆದುಕೊಂಡಿತ್ತು.

ಕಾರಿನ ನೋಂದಣಿ ಸಂಖ್ಯೆಯ ಫಲಕದಲ್ಲಿ ಸಿಕ್ಕ ಸಣ್ಣ ಸುಳಿವಿನಿಂದಲೇ ಕಾರಿನಲ್ಲಿದ್ದವರು ಸುಂದರ್ ಹಾಗೂ ಅವರ ಪತ್ನಿ ನಿವೇದಿತಾ ಎಂಬುವುದು ಖಚಿತವಾಗಿದೆ. ಇನ್ನು ದುರಂತಕ್ಕೆ ನಿಖರ ಕಾರಣ ಏನು ಎಂಬುವುದು ತಿಳಿಯದೇ ಇದ್ದರೂ ವೇಗದ ಪ್ರಯಾಣದ ವೇಳೆ ನಿಯಂತ್ರಣ ತಪ್ಪಿದಿದ್ದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.

ಎಫ್-4 ವಿಭಾಗದಲ್ಲಿ ಕಾರು ರೇಸ್ ಚಾಂಪಿಯನ್ ಆಗಿರುವ ಅಶ್ವಿನ್, 2012 ಮತ್ತು 2013ರಲ್ಲಿ ರಾಷ್ಟ್ರೀಯ ಚಾಂಪಿಯನ್ ಕೂಡಾ ಆಗಿದ್ದಾರೆ. ಆದ್ರೆ ಮರಕ್ಕೆ ಡಿಕ್ಕಿ ಹೊಡೆದ ಮಾತ್ರಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಎಲ್ಲರ ಆಶ್ಚರ್ಯಕ್ಕೂ ಕಾರಣವಾಗಿದೆ. ಹೀಗಾಗಿ ಐಷಾರಾಮಿ ಕಾರು ಬಿಎಂಡಬ್ಲ್ಯು 4ನಲ್ಲೂ ಸರಿಯಾದ ಸುರಕ್ಷಾ ಕ್ರಮಗಳಿಲ್ಲವೇ ಎನ್ನುವ ಪ್ರಶ್ನೆ ಮೂಡತೊಡಗಿದೆ.

ಸದ್ಯ ಅಪಘಾತ ಸ್ಥಳದಲ್ಲಿ ಅಸ್ಥಿಪಂಜರ ಮಾತ್ರ ಉಳಿದಿದ್ದು, ಭೀಕರ ಅಪಘಾತ ಕಂಡ ಸ್ಥಳೀಯರು ಕೂಡಾ ಫುಲ್ ಶಾಕ್ ಆಗಿದ್ದಾರೆ. ಇನ್ನು ಅಗಲಿದ ಸುಂದರ್ ಹಾಗೂ ನಿವೇದಿತಾ ದಂಪತಿಗೆ ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಸುರಕ್ಷಾ ಕ್ರಮಗಳಿಲ್ಲದೇ ಐಷಾರಾಮಿ ಕಾರುಗಳಲ್ಲಿನ ವೇಗದ ಪ್ರಯಾಣ ಪ್ರಾಣಕ್ಕೆ ಕುತ್ತು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ವೃತ್ತಿಪರ ಕಾರ್ ರೇಸರ್ ಸುಂದರ್ ಅಶ್ವಿನ್ ಹೀಗೇ ದುರಂತವಾಗಿ ಸಾವನ್ನಪ್ಪಿದ್ದು ಅವರ ಅಭಿಮಾನಿಗಳ ಬಳಗಕ್ಕೆ ಭಾರೀ ಆಘಾತ ಉಂಟುಮಾಡಿದ್ದು ಮಾತ್ರ ಸುಳ್ಳಲ್ಲ.

ಡೈವ್‌ಸ್ವಾರ್ಕ್‌ನಲ್ಲಿ ನಿಮಗಾಗಿ ಮತ್ತಷ್ಚು ಸುದ್ಧಿಗಳು 

ಬಿಡುಗಡೆಗೆ ಸಜ್ಜುಗೊಂಡಿರುವ ಟಾಟಾ ಟಿಗೋರ್ ಕಾರಿನ ಚಿತ್ರಗಳ ವೀಕ್ಷಣೆ ಮಾಡಿ.

ವಿನೂತನ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750

2017ರ ವಿನೂತನ ಮಾರುತಿ ಸ್ವಿಫ್ಟ್ ಕಾರು

Read more on ಅಪಘಾತ accident
English summary
Indian car racing champion Ashwin Sundar and his wife were killed in a tragic BMW crash in Chennai on Saturday morning. The BMW lost control and hit a tree and burst into flames.
Please Wait while comments are loading...

Latest Photos