Just In
- 8 hrs ago
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- 12 hrs ago
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- 1 day ago
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- 1 day ago
ಟಾಟಾಗೆ ಸೆಡ್ಡು ಹೊಡೆಯಲು 6 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮಾರುತಿ ಸುಜುಕಿ
Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಷಾರಾಮಿ ಕಾರು ಖರೀದಿಸಿದ ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ
ವಾಹನಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇತ್ತೀಚೆಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.

ಸ್ಟಾರ್ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ ಅವರು ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೊಕ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಈ ಹೊಸ ಐಷಾರಾಮಿ ಕಾರನ್ನು ವಿತರಣೆ ಪಡೆದುಕೊಂಡ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಇವರು ಆಯ್ಕೆ ಮಾಡಿಕೊಂಡ ಎಸ್‍ಯುವಿಯು ಸಿಲಿಕಾನ್ ಸಿಲ್ವರ್ ಶೇಡ್ ಬಣ್ನವನ್ನು ಹೊಂದಿದೆ. ಈ ರೇಂಜ್ ರೋವರ್ ಇವೊಕ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.72.09 ಲಕ್ಷವಾಗಿದೆ.

ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ ತಮ್ಮ ಬ್ಯಾಟಿಂಗ್ ಜೊತೆಗೆ ತಮ್ಮ ಸೌಂದರ್ಯದಿಂದ ಸಖತ್ ಸುದ್ದಿಯಲ್ಲಿರುತ್ತಾರೆ. ಇವರು ಕಡಿಮೆ ಅವಧಿಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಇವರು ನಿರಂತರವಾಗಿ ಉತ್ತಮ ರನ್ ಗಳಿಸುತ್ತಿದ್ದಾರೆ.

ಸ್ಮೃತಿ ಮಂಧಾನ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಪೂರ್ಣಗೊಳಿಸಿದ ಎರಡನೇ ಭಾರತೀಯ ಆಟಗಾರ್ತಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 19ಕ್ಕೂ ಹೆಚ್ಚು ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಸ್ಮೃತಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಓಪನರ್ ಆಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈ ಮುಂಬೈ ಬೆಡಗಿ ವಿಶ್ವದ ಗಮನ ಸೆಳೆದಿದ್ದು 2018ರಲ್ಲಿ ನಡೆದ ಐಸಿ ಮಹಿಳಾ ಟಿ20 ಪಂದ್ಯಾವಳಿಯಲ್ಲಿ. ಕೇವಲ ಐದು ಮ್ಯಾಚ್ನಲ್ಲಿ 178 ರನ್ ಗಳಿಸಿ ಪಂದ್ಯಾವಳಿಯ ಮೂರನೇ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದರು.

2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಮಂಧಾನ ಅಂದಿನಿಂದ ಇಂದಿನವರೆಗೆ ಯಶಸ್ಸಿನ ಉತ್ತುಂಗವನ್ನು ಏರಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ 2019 ರಲ್ಲಿ ಅರ್ಜುನ ಪ್ರಶಸ್ತಿಯೂ ಲಭಿಸಿದೆ. ಇನ್ನು ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನ ಅವರ ಜೆರ್ಸಿ ಒಂದೇ ಸಂಖ್ಯೆಯ (18) ಆಗಿದೆ.

ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಖರೀದಿಸಿದ ರೇಂಜ್ ರೋವರ್ ಇವೊಕ್ ಎಸ್‍ಯುವಿ ಭಾರತದಲ್ಲಿ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಸ್ಮೃತಿ ಅವರು ಯಾವ ಎಂಜಿನ್ ಆಯ್ಕೆಯನ್ನು ಆರಿಸಿಕೊಂಡರು ಎಂಬ ಮಾಹಿತಿ ಬಹಿರಂಗವಾಗಿಲ್ಲ,

ಈ ರೇಂಜ್ ರೋವರ್ ಇವೋಕ್ ಎಸ್‍ಯುವಿ ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಯಲ್ಲೂ ಆರ್ ಡೈಮಾನಿಕ್ ವೆರಿಯೆಂಟ್‌ನೊಂದಿಗೆ ಎಸ್ ವೆರಿಯೆಂಟ್ ಹೊಂದಿವೆ. ಈ ಎಸ್‍ಯುವಿಯಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಆಫ್ ರೋಡ್ ಕೌಶಲ್ಯತೆಗಾಗಿ ಹಲಾವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಆಲ್ ಟೆರೈನ್ ರೆಸ್ಪಾನ್ಸ್ ಸಿಸ್ಟಂ ಅನ್ನು ನೀಡಲಾಗಿದೆ.

ಅತ್ಯಾಧುನಿಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನಗಳ ಪರಿಪೂರ್ಣ ಸಮತೋಲನವನ್ನು ನೀಡುವ ಎಸ್‍ಯುವಿಯಲ್ಲಿ ನಾಲ್ಕು ಸಿಲಿಂಡರ್ ಹೊಂದಿರುವ ಇಂಜಿನಿಯಮ್ 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಪವರ್ ಟ್ರೈನ್ ಆಯ್ಕೆಗಳು ಲಭ್ಯವಿವೆ.

ಈ ಇಂಜಿನಿಯಮ್ 2.0 ಲೀಟರ್ ಪೆಟ್ರೋಲ್ ಮಾದರಿಯು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 247-ಬಿಎಚ್‌ಪಿ ಮತ್ತು 365-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಇಂಜಿನಿಯಮ್ 2.0 ಲೀಟರ್ ಡೀಸೆಲ್ ಮಾದರಿಯು ಸಹ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 201-ಬಿಎಚ್‌ಪಿ ಮತ್ತು 430-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಾಗೆಯೇ ಈ ಎಸ್‍ಯುವಿಯಲ್ಲಿ ಕಂಪನಿಯು ಹಲವಾರು ಹೊಸ ಫೀಚರ್ಸ್‌ಗಳನ್ನು ಉನ್ನತೀಕರಿಸಿದ್ದು, ಏರ್ ಸಸ್ಪೆನ್ಷನ್, 3D ಸರೌಂಡ್ ಕ್ಯಾಮೆರಾ ಮತ್ತು PM2.5 ಫಿಲ್ಟರ್‍ನೊಂದಿಗೆ ಕ್ಯಾಬಿನ್ ಏರ್ ಅಯಾನೈಸೇಶನ್ ನಂತಹ ಹೊಸ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ನೀಡಿದೆ.

ಜೊತೆಗೆ ಈ ಎಸ್‍ಯುವಿಯಲ್ಲಿ ವೈಶಿಷ್ಟ್ಯತೆಗಳನ್ನು ಮತ್ತು ವಿಶಿಷ್ಠವಾಗಿಸಲು ಹೊಸ ಕಾರಿನಲ್ಲಿ ಪಿವಿ ಪ್ರೊ ಇನ್ಫೋಟೈನ್‍ಮೆಂಟ್ ಮತ್ತು ಆಕ್ಟಿವ್ ರೋಡ್ ನಾಯ್ಸ್ ಕ್ಯಾನ್ಸಲೇಷನ್ ನಂತಹ ಫೀಚರ್ಸ್‌ಗಳನ್ನು ಸಹ ಜೋಡಣೆ ಮಾಡಲಾಗಿದೆ.

ಈ ಫೀಚರ್ಸ್‌ಗಳೊಂದಿಗೆ ಇವೋಕ್ ಕಾರು ಮಾದರಿಯು ಈ ಹಿಂದೆಂದಿಗಿಂತಲೂ ಆಕರ್ಷಕ, ಹೆಚ್ಚು ಸುರಕ್ಷಿತ ಮತ್ತು ಸ್ಮಾರ್ಟ್ ಕಾರು ಮಾದರಿಯಾಗಿ ಗುರುತಿಸಿಕೊಳ್ಳಲಿದ್ದು, ಡೀಪ್ ಗಾರ್ನೆಟ್ ಮತ್ತು ಎಬೊನಿ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿದೆ. ರೇಂಜ್ ರೋವರ್ ಇವೋಕ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ವೊಲ್ವೊ ಎಕ್ಸ್‌ಸಿ60, ಬಿಎಂಡಬ್ಲ್ಯು ಎಕ್ಸ್3 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತದೆ.ಸ್