ಮೈದಾನ ಹೊರಗೂ ವಿರಾಟ್ ಕೊಹ್ಲಿ ಅಪ್ಪಟ ಕಾರು ಪ್ರೇಮಿ

By Nagaraja

ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಹಾಗೂ ಏಕದಿನ ಮತ್ತು ಟ್ವೆಂಟಿ-20 ತಂಡದ ಉಪನಾಯಕನಾಗಿರುವ ವಿರಾಟ್ ಕೊಹ್ಲಿ ಮೈದಾನದ ಹೊರಗೂ ಅಪ್ಪಟ ಕಾರು ಪ್ರೇಮಿ ಎನಿಸಿಕೊಂಡಿದ್ದಾರೆ.

Also Read: ಸೆಲೆಬ್ರಿಟಿಗಳ ಕಾರು ಪ್ರೇಮ

ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಆಡಿಯ ಮುಖ್ಯ ಪ್ರಚಾರ ರಾಯಭಾರಿ ಆಗಿರುವ ವಿರಾಟ್ ಕೊಹ್ಲಿ, ಅನೇಕ ಪ್ರಸಂಗಗಳಲ್ಲಿ ತಮ್ಮ ಕಾರು ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಪ್ರಸ್ತುತ ವಿರಾಟ್ ಕೊಹ್ಲಿ ಬಳಿಯಿರುವ ಕೆಲವು ಐಷಾರಾಮಿ ಕಾರುಗಳ ಬಗ್ಗೆ ವಿವರಣೆಯನ್ನು ಕೊಡಲಿದ್ದೇವೆ.

ಆಡಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ

ಆಡಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ

ಇಷ್ಟು ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಕ್ರೀಡೆಯಲ್ಲಿ ಕೋಟಿಗಟ್ಟಲೆ ರುಪಾಯಿಗಳನ್ನು ಸಂಪಾದನೆ ಮಾಡಿರುವ ಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಎರಡು ಕೋಟಿಗಿಂತಲೂ ಹೆಚ್ಚು ಬೆಲೆಯ ಆಡಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಆಡಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ

ಆಡಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ

ಅತಿ ಉದ್ದವಾದ ಚಕ್ರಾಂತರ ಪಡೆದಿರುವ ಆಡಿ ಎ8ಎಲ್ ಮಾದರಿಯು ಮ್ಯಾಟ್ರಿಕ್ ಎಲ್‌ಇಡಿ ಹೆಡ್ ಲ್ಯಾಂಪ್ ಮುಂತಾದ ಅತ್ಯಾಧುನಿಕ ತಂತ್ರಾಂಶಗಳನ್ನು ಪಡೆದಿದೆ. ಅಲ್ಲದೆ 100 ಹೊರಮೈ ಹಾಗೂ 23 ಒಳಮೈ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಆಡಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ

ಆಡಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ

ಈ ಎಲ್ಲ ಮೂರು ಮಾದರಿಗಳು ದೆಹಲಿ ಎಕ್ಸ್ ಶೋ ರೂಂ 1.17 ಕೋಟಿ ರು.ಗಳಿಂದ 1.87 ಕೋಟಿ ರು.ಗಳಷ್ಟು ದುಬಾರಿಯೆನಿಸುತ್ತದೆ. ಅಂದರೆ ಆನ್ ರೋಡ್ ಬೆಲೆ ಎರಡು ಕೋಟಿ ರುಪಾಯಿಗಳನ್ನು ದಾಟಲಿದೆ.

ಆಡಿ ಆರ್8 ಎಲ್ ಎಂಎಕ್ಸ್

ಆಡಿ ಆರ್8 ಎಲ್ ಎಂಎಕ್ಸ್

ಇದಕ್ಕೂ ಮೊದಲು ಅತಿ ಬೇಡಿಕೆಯ ಕ್ರಿಕೆಟಿಗ ವಿರಾಟ್ ಕೊಹ್ಲಿ, ಅತಿ ವೇಗದ ಹಾಗೂ ದುಬಾರಿ ವೆಚ್ಚದ ಆಡಿ ಆರ್8 ಎಲ್ ಎಂಎಕ್ಸ್ ಸೀಮಿತ ಆವೃತ್ತಿಯನ್ನು ತಮ್ಮದಾಗಿಸಿರುವುದು ಹೆಚ್ಚಿನ ಸುದ್ದಿಗೆ ಗ್ರಾಸವಾಗಿತ್ತು.

ಆಡಿ ಆರ್8 ಎಲ್ ಎಂಎಕ್ಸ್

ಆಡಿ ಆರ್8 ಎಲ್ ಎಂಎಕ್ಸ್

5.2 ಲೀಟರ್ ವಿ10 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಆಡಿ ಆರ್ ಎಲ್ ಎಂಎಕ್ಸ್ ಮಾದರಿಯು ಬರೋಬ್ಬರಿ 570 ಅಶ್ವಶಕ್ತಿ (540 ತಿರುಗುಬಲ) ಉತ್ಪಾದಿಸುತ್ತದೆ. 7 ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಸಹ ಇದರಲ್ಲಿರಲಿದ್ದು, ಆಲ್ ವೀಲ್ ಡ್ರೈವಿಂಗ್ ವ್ಯವಸ್ಥೆಯನ್ನು ಹೊಂದಿದೆ. ನಾಲ್ಕು ಉಂಗುರಗಳ ಈ ಆಡಿ ರೂಪದರ್ಶಿಯ ದೆಹಲಿ ಹಾಗೂ ಮುಂಬೈ ಎಕ್ಸ್ ಶೋ ರೂಂ ಬೆಲೆ 2.97 ಕೋಟಿ ರು.ಗಳಿಷ್ಟಿದೆ.

ಆಡಿ ಆರ್8 ಎಲ್ ಎಂಎಕ್ಸ್

ಆಡಿ ಆರ್8 ಎಲ್ ಎಂಎಕ್ಸ್

ಕೊಹ್ಲಿ ಅವರಷ್ಟೇ ಆಕ್ರಮಣಕಾರಿ ಶೈಲಿಯ ಆಡಿ ಎಲ್ ಎಂಎಕ್ಸ್ ಸಹ 3.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಮತ್ತು ಗಂಟೆಗೆ ಗರಿಷ್ಠ 320 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಆಡಿ ಆರ್8 ಎಲ್ ಎಂಎಕ್ಸ್

ಆಡಿ ಆರ್8 ಎಲ್ ಎಂಎಕ್ಸ್

ಭಾರತದಲ್ಲಿ ಸೀಮಿತ 99 ಯುನಿಟ್ ಗಳಷ್ಟು ಮಾತ್ರ ಆಡಿ ಆರ್8 ಎಲ್ ಎಂಎಂಕ್ಸ್ ಮಾರಾಟವಾಗಲಿದೆ. ಈಗ ದೇಶದಲ್ಲಿ ಇದನ್ನು ಖರೀದಿಸಿದ ಮೊದಲ ಗ್ರಾಹಕ ಎಂಬ ಗೌರಕಕ್ಕೂ ವಿರಾಟ್ ಪಾತ್ರವಾಗಿದ್ದರು.

ಆಡಿ ಕ್ಯೂ7

ಆಡಿ ಕ್ಯೂ7

ಆಡಿ ಕಾರಿನ ಅಪ್ಪಟ ಅಭಿಮಾನಿಯಾಗಿರುವ ವಿರಾಟ್ ಕೊಹ್ಲಿ ಕ್ಯೂ 7 ಕ್ರಾಸೋವರನ್ನು ಕಾರನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಇದು 4.2 ಲೀಟರ್ ವಿ8 ಹಾಗೂ 3 ಲೀಟರ್ ವಿ6 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಅಲ್ಲದೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಆಲ್ ವೀಲ್ ಡ್ರೈವ್ ವ್ಯವಸ್ಥೆಯೂ ಇರುತ್ತದೆ.

ಆಡಿ ಎಸ್6

ಆಡಿ ಎಸ್6

ಸೆಡಾನ್ ಕಾರಿನಲ್ಲೂ ತಮ್ಮ ಪ್ರೀತಿ ತೋರಿರುವ ವಿರಾಟ್, ಆಡಿ ಎಸ್6 ಕಾರನ್ನು ಪಡೆದಿದ್ದಾರೆ. ಇದರಲ್ಲಿರುವ ವಿ8 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ 420 ಅಶ್ವಶಕ್ತಿ (550 ತಿರುಗುಬಲ) ಉತ್ಪಾದಿಸುತ್ತದೆ. ಅಲ್ಲದೆ ಏಳು ಸ್ಪೀಡ್ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಇದ್ದು, ಒಂದು ಕೋಟಿ ರು.ಗಳಷ್ಟು ದುಬಾರಿಯೆನಿಸುತ್ತದೆ.

ಸೆಡಾನ್ ಕಾರಿನಲ್ಲೂ ತಮ್ಮ ಪ್ರೀತಿ ತೋರಿರುವ ವಿರಾಟ್, ಆಡಿ ಎಸ್6 ಕಾರನ್ನು ಪಡೆದಿದ್ದಾರೆ. ಇದರಲ್ಲಿರುವ ವಿ8 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ 420 ಅಶ್ವಶಕ್ತಿ (550 ತಿರುಗುಬಲ) ಉತ್ಪಾದಿಸುತ್ತದೆ. ಅಲ್ಲದೆ ಏಳು ಸ್ಪೀಡ್ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಇದ್ದು, ಒಂದು ಕೋಟಿ ರು.ಗಳಷ್ಟು ದುಬಾರಿಯೆನಿಸುತ್ತದೆ.

ಆಡಿ ಆರ್8 ವಿ10

ಆಡಿ ಆರ್8 ವಿ10

ಆಡಿ ಆರ್8 ಎಲ್ ಎಂಎಕ್ಸ್ ಸೀಮಿತ ಆವೃತ್ತಿಯ ಜೊತೆ ಜೊತೆಗೆ ಆಡಿ ಆರ್8 ವಿ10 ಕಾರನ್ನು ವಿರಾಟ್ ಹೊಂದಿದ್ದಾರೆ. ಇದು ವಿ8 ಹಾಗೂ ವಿ10 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಪೈಕಿ ವಿ10 ಅತ್ಯಂತ ಶಕ್ತಿಶಾಲಿ 5.2 ಲೀಟರ್ ಎಂಜಿನ್ ಪಡೆದುಕೊಂಡಿದ್ದು, 517 ಅಶ್ವಶಕ್ತಿ (530 ತಿರುಗುಬಲ) ಉತ್ಪಾದಿಸುತ್ತದೆ. ಪ್ರಸ್ತುತ ಕಾರು ಎರಡು ಕೋಟಿ ರು.ಗಳಷ್ಟು ದುಬಾರಿಯೆನಿಸುತ್ತದೆ.

ಲಂಬೋರ್ಗಿನಿ ಗಲರ್ಡೊ

ಲಂಬೋರ್ಗಿನಿ ಗಲರ್ಡೊ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ಬಿಡುವಿನ ಸಂದರ್ಭದಲ್ಲಿ ಸಹ ಆಟಗಾರ ಸೀನ್ ಅಬಾಟ್ ಜೊತೆ ದೆಹಲಿ ಗಲ್ಲಿಯಲ್ಲಿ ತಮ್ಮ ಲಂಬೋರ್ಗಿನಿ ಗಲರ್ಡೊ ಕಾರಿನಲ್ಲಿ ಜಾಲಿ ರೈಡ್ ಹೊಡೆದಿದ್ದರು.

ರೆನೊ ಡಸ್ಟರ್

ರೆನೊ ಡಸ್ಟರ್

ತಮ್ಮ ವೃತ್ತಿ ಜೀವನದ ಆರಂಭಿಕ ಕಾಲಘಟ್ಟದಲ್ಲೇ ಶ್ರೇಷ್ಠ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿಕೊಂಡು ಬಂದಿರುವ ವಿರಾಟ್ ಕೊಹ್ಲಿ, 2012ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿಯಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿ ರೂಪದಲ್ಲಿ ಡಸ್ಟರ್ ಕಾರನ್ನು ಗೆದ್ದುಕೊಂಡಿದ್ದರು.

ಟೊಯೊಟಾ ಫಾರ್ಚ್ಯುನರ್

ಟೊಯೊಟಾ ಫಾರ್ಚ್ಯುನರ್

ಸರಿ ಸುಮಾರು 30 ಲಕ್ಷ ರು.ಗಳಷ್ಟು ದುಬಾರಿಯೆ ಟೊಯೊಟಾ ಫಾರ್ಚ್ಯುನರ್ ಐಷಾರಾಮಿ ಕ್ರೀಡಾ ಬಳಕೆಯ ವಾಹನವು ಕೊಹ್ಲಿ ಬಳಿಯಿದೆ. ಈ 4x4 ಚಾಲನಾ ವ್ಯವಸ್ಥೆಯ ಕಾರಿನಲ್ಲಿ ತ್ರಿ ಲೀಟರ್, ಫೋರ್ ಸಿಲಿಂಡರ್ ಡಿ4ಡಿ ಟರ್ಬೊ ಎಂಜಿನ್ ಆಳವಡಿಸಲಾಗಿದ್ದು, 170 ಅಶ್ವಶಕ್ತಿ (343 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಇವನ್ನೂ ಓದಿ...

'ಹಿಟ್ ಮ್ಯಾನ್' ರೋಹಿತ್ ಶರ್ಮಾ ಅವರ ಸೂಪರ್ ಹಿಟ್ ಕಾರು

ಹಾಲಿವುಡ್ ಕಾಮ ಕನ್ಯೆಯರ ಕಾರು ಪ್ರೇಮ ಪುರಾಣ

Most Read Articles

Kannada
English summary
Indian Cricketer Virat Kohli Car Collections
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X