ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

By Nagaraja

ಸರಿ ಸುಮಾರು ಐದು ವರ್ಷಗಳ ಹಿಂದೆ ವಿಮಾನ ನಿಲ್ದಾಣದಿಂದ ಮನೆಗೆ ಕಾರಲ್ಲಿ ಹಿಂತಿರುವಾಗ ಚಾಲಕ ನಿದ್ರಿಸುತ್ತಿರುವ ಪ್ರಸಂಗವೂ ರೋಶಿ ಜಾನ್ ಎಂಬವರಿಗೆ ಎದುರಾಗಿತ್ತು. ಇದರಿಂದ ವಿಚಲಿತರಾದ ಜಾನ್ ಅವರಿಗೆ ತಾವೇ ಗಾಡಿ ಚಾಲನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.

ಇಲ್ಲಿಗೆ ಸುಮ್ಮನೇ ಕುಳಿತುಕೊಳ್ಳದ ರೋಶಿ ಜಾನ್ ಅವರ ಮನದಲ್ಲಿ ತಾವ್ಯಾಕೆ ಸ್ವಯಂ ಚಾಲಿತ ಕಾರು ಅಭಿವೃದ್ಧಿಪಡಿಸಬಾರದೆಂಬ ಯೋಚನೆ ಹೊಳೆದಿತ್ತು. ಇದು ಮುಂದಿನ ದಿನಗಳಲ್ಲಿ ಭಾರತದ ಚೊಚ್ಚಲ ಡ್ರೈವರ್ ಲೆಸ್ ಕಾರು ಹೊರಹೊಮ್ಮಲು ಹೇತುವಾಗಿದೆ.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ನಾವಿಂದು ಭಾರತದಲ್ಲೇ ನಿರ್ಮಿಸಿದ ದೇಶದ ಮೊದಲ ಡ್ರೈವರ್ ಲೆಸ್ ಕಾರನ್ನು ಪರಿಚಯಿಸಲಿದ್ದೇವೆ. ಇದನ್ನು ರೋಶಿ ಜಾನ್ ಹಾಗೂ ಮತ್ತವರ ತಂಡ ರಚಿಸಿದೆ.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ತಮ್ಮ ಯೋಜನೆಯನ್ನು ಎಲ್ಲಿಂದ ಆರಂಭಿಸಬೇಕು ಎಂಬುದಕ್ಕೆ ಸಂಬಂಧಪಟ್ಟಂತೆ ರೋಶಿ ಅವರಲ್ಲಿ ಯಾವುದೇ ಯೋಜನೆ ಇರಲಿಲ್ಲ. ಆದರೆ ಸತತ ಪ್ರಯತ್ನದ ಬಳಿಕ ಕೊನೆಗೂ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ತೀವ್ರ ರೀತಿಯಲ್ಲಿ ಹದೆಗೆಟ್ಟಿರುವ ಭಾರತೀಯ ರಸ್ತೆಯಲ್ಲಿ ಡ್ರೈವರ್ ಲೆಸ್ ಕಾರು ಹೋಗಿ ಸಾಮಾನ್ಯ ಗಾಡಿ ಓಡಿಸುವುದೇ ದೊಡ್ಡ ಸವಾಲಿನ ವಿಷಯವಾಗಿದೆ. ಹಾಗಿರುವಾಗ ಅಭಿವೃದ್ಧಿ ಹೆಸರಲ್ಲಿ ದೈನಂದಿನ ಕಾಮಗಾರಿ ನಡೆಯುವ ಭಾರತೀಯ ರಸ್ತೆಯ ಹದೆಗೆಟ್ಟ ಪರಿಸ್ಥಿತಿ ಹೇಳ ತೀರದು.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ಹಾಗಿದ್ದರೂ ಧೈರ್ಯ ಮಾಡಿ ಮುಂದುವರಿದ ರೋಶಿ ತಮ್ಮ ಈ ಮಹತ್ತರ ಯೋಜನೆಗಾಗಿ ವಿಶ್ವದ ಅತಿ ಅಗ್ಗದ ಕಾರು ಟಾಟಾ ನ್ಯಾನೋ ಕಾರನ್ನು ಆಯ್ಕೆ ಮಾಡಿಕೊಂಡಿದ್ದರು.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ವಿಶ್ವದ ಅತಿ ದೊಡ್ಡ ಕಾರು ಸಂಸ್ಥೆ ಟಾಟಾ ಮೋಟಾರ್ಸ್ ಕನಸಿನ ಕೂಸಾಗಿರುವ ಟಾಟಾ ನ್ಯಾನೋ ವಿನ್ಯಾಸ ತಂತ್ರಗಾರಿಕೆಯೇ ಈ ಕಾರನ್ನು ಆಯ್ಕೆ ಮಾಡಲು ಕಾರಣವಾಗಿದೆ.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ಈ ಬಗ್ಗೆ ಅಭಿಪ್ರಾಯ ಮಂಡಿಸಿದ ರೋಶಿ, ಟಾಟಾ ನ್ಯಾನೋ ಒಂದು ರಿಯರ್ ಎಂಜಿನ್ ಕಾರಾಗಿದ್ದು, ತಮ್ಮ ಯೋಜನೆಗೆ ಸೂಕ್ತವೆನಿಸಿದೆ ಎಂದಿದ್ದಾರೆ.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ತದಾ ಬಳಿಕ ನ್ಯಾನೋ ಕಾರಿಗೆ ಅಗತ್ಯ ಬದಲಾವಣೆಗಳನ್ನು ತಂದು ನಿರಂತರ ಪರೀಕ್ಷಾರ್ಥ ಸಂಚಾರವನ್ನು ನಡೆಸಿದ್ದರು.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ಹೊಚ್ಚ ಹೊಸ ನ್ಯಾನೋ ಕಾರಿಗೆ ವಿಶೇಷ ಅಲ್ಗಾರಿದಮ್ ಸಿಸ್ಟಂಗಳನ್ನು ಜೋಡಣೆ ಮಾಡಿದ ಜೋಶಿ ಮತ್ತವರ ತಂಡವು ಕ್ಯಾಮೆರಾ ಹಾಗೂ ಸೆನ್ಸಾರ್ ಗಳನ್ನು ಜೋಡಿಸಿದ್ದರು.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ಇಲ್ಲಿ ಗಮನಾರ್ಹ ಸಂಗತಿಯೆಂದರೆ ನೈಜ ರಸ್ತೆ ಪರಿಸ್ಥಿತಿಯಲ್ಲೂ ಟಾಟಾ ನ್ಯಾನೋ ಡ್ರೈವರ್ ಲೆಸ್ ಕಾರು ತನ್ನ ಯೋಜನೆಯಲ್ಲಿ ಯಶ ಕಂಡಿದೆ.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ಅಲ್ಲದೆ ಸುರಕ್ಷತೆಗೆ ಅತಿ ಹೆಚ್ಚು ಒತ್ತು ಕೊಡಲಾಗಿದ್ದು, ಅಡೆ-ತಡೆಗಳು ಎದುರಾದ್ದಲ್ಲಿ ಮಾನವ ಚಾಲಕನಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕಾರು ನಿಲುಗಡೆಯಾಗುತ್ತದೆ.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ಅಷ್ಟಕ್ಕೂ ಅಪತ್ಕಾಲ ಪರಿಸ್ಥಿತಿ ಎದುರಾದ್ದಲ್ಲಿ ಕಾರನ್ನು ನಿಲುಗಡೆಗೊಳಿಸಲು ಎಮರ್ಜನ್ಸಿ ಸ್ವಿಚ್ ಕೂಡಾ ನೀಡಲಾಗಿದೆ.

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ಈ ಎಲ್ಲ ತಂತ್ರಗಾರಿಕೆಯನ್ನು ಕೇವಲ ಒಂದು ತಾಸಿನ ಅವಧಿಯೊಳಗೆ ಜೋಡಣೆ ಮಾಡಬಹುದಾಗಿದೆ ಎಂದು ರೋಶಿ ಅಭಿಪ್ರಾಯಪಡುತ್ತಾರೆ.

Most Read Articles

Kannada
English summary
Indian Man Builds Self-Driving Tata Nano
Story first published: Tuesday, March 1, 2016, 16:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X