ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಮತ್ತೊಂದು ಹೊಸ ಪ್ಲಾನ್.!?

ರೈಲ್ವೆ ಸೇವೆಗಳಲ್ಲಿ ಭಾರೀ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಸದ್ಯ ಬುಲೆಟ್ ಟ್ರೈನ್ ಸೇರಿದಂತೆ ಹಲವು ಅತ್ಯಾಧುನಿಕ ಸಾರಿಗೆ ಸೌಲಭ್ಯಗಳನ್ನು ಆರಂಭಿಸುವ ಗುರಿಹೊಂದಿದೆ. ಇದರಲ್ಲಿ ಸದ್ಯಕ್ಕೆ ಹಳಿಗಿಳಿಯಲು ಸಜ್ಜಾಗಿರುವ ಟ್ರೈನ್ 18 ಹೆಸರಿನ ರೈಲು ಮಾದರಿಯು ಪರೀಕ್ಷಾರ್ಥ ಸಂದರ್ಭದಲ್ಲಿ ಇದುವರೆಗೂ ದೇಶದ ಅತಿ ವೇಗದ ರೈಲು ಎನ್ನಿಸಿಕೊಂಡಿದ್ದ ಶತಾಬ್ದಿ ಎಕ್ಸ್‌ಪ್ರೆಸ್ ಅನ್ನು ಕೂಡಾ ಹಿಂದಿಕ್ಕಿದೆ.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ಈ ನಿಟ್ಟಿನಲ್ಲಿ ದೇಶಿಯವಾಗಿ ತಯಾರಿಸಲ್ಪಟ್ಟ ಎಂಜಿನ್ ರಹಿತ ಮೊದಲ ಟ್ರೈನ್ 18 ಯಶಸ್ಸಿನ ನಂತರ ಇದೀಗ ರೈಲ್ವೆ ಇಲಾಖೆಯು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಇನ್ನು ಸುಮಾರು ಹತ್ತು ಎಂಜಿನ್ ರಹಿತ ಟ್ರೈನ್‍ 18 ರೈಲುಗಳನ್ನು ಸಿದ್ಧಪಡಿಸುವಂತೆ ರೈಲ್ವೆ ಸಚಿವಾಲಯವು ಚೆನ್ನೈನಲ್ಲಿರುವ ಐಸಿಎಫ್‍ಗೆ ಮಹತ್ವದ ಸೂಚನೆ ನೀಡಿದೆ.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ರೈಲ್ವೆ ಮಂಡಳಿಯು ಐಸಿಎಪ್ಗ್‍ಗೆ ನೀಡಿದ ಸುತ್ತೋಲೆ ಪ್ರಕಾರ ಕಾರ್ಖಾನೆಯು ಮತ್ತಷ್ಟು ಟ್ರೈನ್ 18 ರೈಲುಗಳನ್ನು ತಯಾರಿಸಬೇಕಾಗಿದ್ದು, 2019 ಮಾರ್ಚ್ ಮುಗಿಯುವಷ್ಟರಲ್ಲಿ ಮತ್ತೊಂದು ಟ್ರೈನ್ 18 ಅನ್ನು ಹಳಿಗಿಳಿಸಲಿದೆ.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ಹೊಸ ಸುತ್ತೋಲೆಯ ಪ್ರಕಾರ, ಫೈನಾನ್ಷಿಯಲ್ ಎಕ್ಸ್ಪ್ರೆಸ್ ಆನ್ಲೈನ್ನಲ್ಲಿನ ಒಂದು ಪ್ರತಿಯನ್ನು ರೈಲ್ವೆ ಮಂಡಳಿಯ ಇತ್ತೀಚಿನ ಸಭೆಯಲ್ಲಿ ಪಿಯೂಷ್ ಗೋಯಲ್ ನೇತೃತ್ವದಲ್ಲಿ ನಿರ್ಧರಿಸಲಾಯಿತು. ಪ್ರಸಕ್ತ ವರ್ಷದಲ್ಲಿ ನಾಲ್ಕು ಟ್ರೈನ್ 18 ಟ್ರೈನ್‍‍ಗಳನ್ನು ತಯಾರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿಕೊಂಡಿದ್ದಾರೆ.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ರೈಲ್ವೆ ಮಂಡಳಿ ಸಭೆ ಕಳೆದ ವಾರ ಡಿಸೆಂಬರ್ 5 ರಂದು ನಡೆಯಲಾಗಿದ್ದು, ಸುತ್ತೋಲೆಯ ಪ್ರಕಾರ ರೈಲ್ವೆ ಮಂಡಳಿ "ಹೊಸ ಸ್ಥಳೀಯ ರೈಲು ಸೆಟ್ (ಟಿ -18)"ನ ಯಶಸ್ಸನ್ನು ಮೆಚ್ಚಿಕೊಂಡಿದೆ. ಉತ್ಪಾದನಾ ಕಾರ್ಯಕ್ರಮದ (ಐಸಿಎಫ್) ಅಗತ್ಯ ಬದಲಾವಣೆಗಳನ್ನು ತರಲು ಮುಂದಾಗಿದೆ.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ರೈಲ್ವೆ ಮಂಡಳಿಯ ನಿರ್ದೇಶನದ ಬಗ್ಗೆ ಫೈನಾನ್ಶಿಯಲ್ ಎಕ್ಸ್ಪ್ರೆಸ್ ಸುದ್ಧಿಸಂಸ್ಥೆಯೊಂದಿಗೆ ಮಾತನಾಡಿದ ಐಸಿಎಫ್‍ನ ಪ್ರಧಾನ ವ್ಯವಸ್ಥಾಪಕ ಸುಧಾಂಶು ಮಣಿಯವರು 'ನಮ್ಮ ಕಾರ್ಖಾನೆಯು ಈ ಹಣಕಾಸು ವರ್ಷದಲ್ಲಿ ಎರಡು ಟ್ರೈನ್ 18ಗಳನ್ನು ಉತ್ಪಾದಿಸಲು ಪ್ರಯತ್ನಿಸಲಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಇನ್ನು 8 ಹೊಸ ಟ್ರೈನ್ 18ಗಳನ್ನು ಉತ್ಪಾದಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ದೇಶದ ಆಧುನಿಕ ಎಂಜಿನ್ ರಹಿತ ರೈಲು ಎಂಬ ಖ್ಯಾತಿ ಹೊಂದಿರುವ ಟ್ರೈನ್-18 ತನ್ನ ಸ್ಪೀಡ್ ಗೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದಷ್ಟೆ ಹೊಸ ದಾಖಲೆ ನಿರ್ಮಿಸಿದ್ದು, ಪರೀಕ್ಷಾರ್ಥ ಸಂಚಾರದ ವೇಳೆ ಗಂಟೆಗೆ ಬರೋಬ್ಬರಿ 180 ಕಿ.ಮೀ ವೇಗದಲ್ಲಿ ಚಲಿಸುವ ಮೂಲಕ ಆಧುನಿಕ ತಂತ್ರಜ್ಞಾನದ ಹೊಸ ಆವಿಷ್ಕಾರಕ್ಕೆ ಮತ್ತೊಂದು ಮುನ್ನುಡಿ ಬರೆದಿದೆ.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ಕೋಟಾ ಮತ್ತು ರಾಜಸ್ತಾನದ ಸವಾಯಿ ಮಾಧೋಪುರ ನಡುವಿನ ರೈಲು ಮಾರ್ಗದಲ್ಲಿ ನಡೆದ 2ನೇ ಪರೀಕ್ಷಾರ್ಥ ಸಂಚಾರದಲ್ಲಿ ಟ್ರೈನ್ 18 ಟ್ರೈನ್ ಗಂಟೆಗೆ 180 ಕಿಮಿ ವೇಗದಲ್ಲಿ ಚಲಿಸಿದ್ದು, ಸಂಪೂರ್ಣವಾಗಿ ಸ್ವದೇಶದಲ್ಲಿ ತಯಾರಾದ ರೈಲು ಇಷ್ಟು ವೇಗದಲ್ಲಿ ಸಂಚರಿಸಿರುವುದು ಇದೇ ಮೊದಲು.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ಸದ್ಯ ಶತಾಬ್ದಿ ಎಕ್ಸ್​​ಪ್ರೆಸ್ ರೈಲು ಪ್ರತಿ ಗಂಟೆಗೆ 130 ಕಿ.ಮಿ ವೇಗದೊಂದಿಗೆ ಭಾರತದಲ್ಲಿರುವ ಚಲಿಸುತ್ತಿರುವ ಅತಿ ವೇಗದ ರೈಲು ಎನ್ನುವ ಖ್ಯಾತಿ ಹೊಂದಿದ್ದು, ಇದೀಗ ಟ್ರೈನ್ 18 ರೈಲು ಗಂಟೆಗೆ ಸರಾಸರಿ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯದೊಂದಿಗೆ ಶತಾಬ್ದಿ ರೈಲನ್ನು ಹಿಂದಿಕ್ಕಿದೆ

MOST READ: ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

18 ತಿಂಗಳಿನಲ್ಲಿ ನಿರ್ಮಾಣ!

ಕೇವಲ 18 ತಿಂಗಳಿನಲ್ಲಿ ಸಿದ್ದವಾಗಿರುವ ಈ ಸ್ವದೇಶಿ ನಿರ್ಮಿತ ವೇಗ ರೈಲು ಮಾದರಿಯು ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್)ನಲ್ಲಿ ನಿರ್ಮಾಣ ಮಾಡಲಾಗಿದ್ದು, ಹೊಸ ರೈಲು ನಿರ್ಮಾಣದ ಹೊಣೆ ಹೊತ್ತಿದ್ದ ಜನರಲ್ ಮ್ಯಾನೇಜರ್ ಎಸ್.ಮಣಿ ಮತ್ತು ಅವರ ತಂಡ ನೀರಿಕ್ಷೆಗೂ ಮೀರಿ ಹೊಸ ರೈಲು ಮಾದರಿಯನ್ನು ಸಿದ್ದಗೊಳಿಸಿದೆ.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಹೊಸ ರೈಲು ಎಂಜಿನ್ ರಹಿತವಾಗಿದ್ದು, ಬುಲೆಟ್ ರೈಲು ಮಾದರಿಯಲ್ಲೇ ಇದನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಟ್ರೈನ್ 18ನಲ್ಲಿ ಪ್ರತ್ಯೇಕ ಎಂಜಿನ್ ಬದಲಾಗಿ ಮೆಟ್ರೋ ರೈಲು ಮಾದರಿಯಲ್ಲಿ ಬೋಗಿಯ ಕೆಳಗಡೆಯೇ ಎಂಜಿನ್ ಜೋಡಣೆ ಮಾಡಲಾಗಿರುತ್ತೆ.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ಈ ಹೊಸ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಇವುಗಲ್ಲಿ 52 ಆಸನಗಳ ಹೊಂದಿರುವ ಎರಡು ಎಕ್ಸಿಕ್ಯುಟಿವ್‌ ಬೋಗಿಗಳನ್ನು ನೀಡಲಾಗಿದೆ. ಉಳಿದವು 78 ಆಸನಗಳ ಸಾಮಾನ್ಯ ಬೋಗಿಗಳಿದ್ದು, ಸಂಪೂರ್ಣ ಹವಾನಿಯಂತ್ರಣ, ಸಿಸಿಟಿವಿ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ಫಲಕ, ಸ್ವಯಂ ಚಾಲಿತ ಬಾಗಿಲು ಸೌಲಭ್ಯ ಪಡೆದಿದೆ.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ಹಾಗೆಯೇ ಪ್ರತಿ ಎರಡು ಬೋಗಿಗಳ ನಡುವೆ ಮೋಟಾರೈಸ್ಡ್ ಎಂಜಿನ್ ಅಳವಡಿಕೆ ಮಾಡಿರುವುದಿಂದ ರೈಲು ಅತಿ ವೇಗವಾಗಿ ಚಲಿಸಲು ಸಾಧ್ಯವಾಗಿದೆ. ಜೊತೆಗೆ ಕ್ಷಣಾರ್ಧದಲ್ಲಿ ನಿಲ್ಲುವ ಸಾಮರ್ಥ್ಯವನ್ನೂ ಕೂಡಾ ಹೊಂದಿದ್ದು, ಆಗಬಹುದಾದ ರೈಲು ದುರಂತಗಳಿಗೆ ಇದರಿಂದ ತಪ್ಪಿಸಬಹುದಾಗಿದೆ.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ಇದಲ್ಲದೇ ದೀರ್ಘಾವಧಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ರೈಲಿನಲ್ಲಿ ವಿಶೇಷ ಮನೋರಂಜನಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವೈ ಫೈ, ವ್ಯಾಕ್ಯೂಮ್ ಟಾಯ್ಲೆಟ್, ಲಗೇಜ್‌ಗೆ ಪ್ರತ್ಯೇಕ ಜಾಗ ಮೀಸಲು, ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

MOST READ: ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ಹೊಸ ರೈಲು ನಿರ್ಮಾಣಕ್ಕೆ 100 ಕೋಟಿ ವೆಚ್ಚ!

ಟ್ರೈನ್ 18 ರೈಲು ಯೋಜನೆಯನ್ನು ಪೂರ್ಣಗೊಳಿಸಲು ಬರೋಬ್ಬರಿ ರೂ. 100 ಕೋಟಿ ಖರ್ಚು ಮಾಡಲಾಗಿದ್ದು, ಅತ್ಯಾಧುನಿಕ ಎಂಜಿನ್ ಮಾದರಿ, ಐಷಾರಾಮಿ ಸೌಲಭ್ಯದಿಂದಾಗಿ ರೈಲು ನಿರ್ಮಾಣದ ಖರ್ಚುಗಳು ತುಸು ದುಬಾರಿಯಾಗಿವೆ ಎನ್ನಬಹುದು.

ಶತಾಬ್ದಿ ತೆಗೆದುಹಾಕಲು ರೈಲ್ವೆ ಇಲಾಖೆಯಿಂದ ಹೊಸ ಪ್ಲಾನ್.!

ಆದ್ರೆ ಹೊಸ ರೈಲು ಪ್ರಸ್ತುತ ರೈಲುಗಳ ಓಡಾಟದ ಅವಧಿಗಿಂತಲೂ ಸಾಕಷ್ಟು ಇಳಿಕೆಯಾಗಲಿದ್ದು, ಇದರಲ್ಲಿ ಮುಖ್ಯವಾಗಿ ರೈಲಿನ ಪ್ರಯಾಣದ ವೆಚ್ಚಗಳು ತಗ್ಗುವ ಮೂಲಕ ಹೊಸ ರೈಲಿನಿಂದ ಸಾಕಷ್ಟು ಲಾಭ ಗಳಿಕೆಯಾಗಲಿದೆ.

Most Read Articles

Kannada
English summary
Train 18 a super hit! Indian Railways may roll out 10 more engine-less ‘Shatabdi killers’. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X