ಮೊದಲ ಪ್ರಯತ್ನದಲ್ಲೇ 115 ಕೀ.ಮೀ. ವೇಗದಲ್ಲಿ ಸಂಚರಿಸಿದ ಟಾಲ್ಗೊ ರೈಲು

Written By:

ಭಾರತದ ಮಹತ್ವಕಾಂಕ್ಷೆ ಯೋಜನೆಯ ಸ್ಪೇನ್ ನ 'ಟಾಲ್ಗೊ' ರೈಲು ತನ್ನ ಮೊದಲ ಪ್ರಯತ್ನದಲ್ಲೇ ಗಂಟೆಗೆ 115 ಕೀ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಬರೇಲಿ ಮಾರ್ಗದಲ್ಲಿ ವೇಗದ ರೈಲು ಪ್ರಾಯೋಗಿಕ ಸಂಚಾರ ನಡೆಸಿತ್ತಲ್ಲದೆ, ಗಂಟೆಗೆ 110ರಿಂದ 115 ಕೀ.ಮೀ. ವೇಗವನ್ನು ಕಾಪಾಡಿಕೊಂಡಿತ್ತು.

ಈಗಿರುವ ರೈಲ್ವೆ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸದೆ ರೈಲುಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಟಾಲ್ಗೊ ರೈಲುಗಳ ಪ್ರಾಯೋಗಿಕ ಸಂಚಾರ ಪ್ರಯೋಗ ನಡೆಸಲಾಗುತ್ತಿದೆ. ಬೋಗಿಗಳು ಹಗುರವಾಗಿರುವುದರಿಂದ ಇದನ್ನು ಎಳೆಯಲು ಕಡಿಮೆ ಶಕ್ತಿ ಸಾಕಾಗುವುದು.

ಮೊದಲ ಪ್ರಯತ್ನದಲ್ಲೇ 115 ಕೀ.ಮೀ. ವೇಗದಲ್ಲಿ ಸಂಚರಿಸಿದ ಟಾಲ್ಗೊ ರೈಲು

ಪ್ರಾಯೋಗಿಕ ಸಂಚಾರದಲ್ಲಿ ಭಾರತೀಯ ರೈಲ್ವೆಯ 4500 ಅಶ್ವಶಕ್ತಿ ಸಾಮರ್ಥ್ಯದ ಡೀಸೆಲ್ ಎಂಜಿನ್ , 70 ನಿಮಿಷಗಳ ಅವಧಿಯಲ್ಲಿ 90 ಕೀ.ಮೀ. ದೂರವನ್ನು ಕ್ರಮಿಸಿತ್ತು. ಬೆಳಗ್ಗೆ 9.05ಕ್ಕೆ ಬರೇಯಿಂದ ನಿರ್ಗಮಿಸಿದ ಟಾಲ್ಗೊ ರೈಲು 10.15ರ ವೇಳೆಗೆ ಮೊರಾದಾಬಾದ್ ತಲುಪಿತ್ತು.

ಮೊದಲ ಪ್ರಯತ್ನದಲ್ಲೇ 115 ಕೀ.ಮೀ. ವೇಗದಲ್ಲಿ ಸಂಚರಿಸಿದ ಟಾಲ್ಗೊ ರೈಲು

ಟಾಲ್ಗೊ ರೈಲು ಗಂಟೆಗೆ 100ರಿಂದ 115 ಕೀ.ಮೀ. ವೇಗವನ್ನು ಕಾಪಾಡಿಕೊಂಡಿರುವುದನ್ನು ಖಾತ್ರಿಪಡಿಸಿರುವ ರೈಲ್ವೆ ಅಧಿಕಾರಿಗಳು, ಶೇಕಡಾ 30ರಷ್ಟು ಕಡಿಮೆ ಇಂಧನ ಬಳಕೆಯಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮೊದಲ ಪ್ರಯತ್ನದಲ್ಲೇ 115 ಕೀ.ಮೀ. ವೇಗದಲ್ಲಿ ಸಂಚರಿಸಿದ ಟಾಲ್ಗೊ ರೈಲು

ಒಂಬತ್ತು ಬೋಗಿಗಳ ಟಾಲ್ಗೊ ರೈಲಿನಲ್ಲಿ ಎರಡು ಎಕ್ಸಿಕ್ಯೂಟಿವ್ ಕ್ಲಾಸ್ ಕಾರು, ನಾಲ್ಕು ಚೈರ್ ಕಾರು, ತಲಾ ಒಂದು ಕೆಫೆಟೇರಿಯಾ, ಪವರ್ ಕಾರ್ ಮತ್ತು ಸಿಬ್ಬಂದಿ ಹಾಗೂ ಸಾಮಾನುಗಳಿನ್ನಡಲು ಟೈಲ್ ಎಂಡ್ ಕೋಚ್ ಗಳಿವೆ.

ಮೊದಲ ಪ್ರಯತ್ನದಲ್ಲೇ 115 ಕೀ.ಮೀ. ವೇಗದಲ್ಲಿ ಸಂಚರಿಸಿದ ಟಾಲ್ಗೊ ರೈಲು

ಜೂನ್ 12ರ ವರೆಗೆ ಇದೇ ಮಾರ್ಗದಲ್ಲಿ ಪ್ರಯೋಗಿಕ ಸಂಚಾರ ಮುಂದುವರಿಯಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿನ ಪ್ರಾಯೋಗಿಕ ಸಂಚಾರದ ಬಳಿಕ ಮಥುರಾ ಮತ್ತು ಪಲ್ವಾಲ್ ನಡುವಣ ಹಾದಿಯಲ್ಲಿ ಸುಮಾರು 40 ದಿನಗಳ ಕಾಲ ಗಂಟೆಗೆ 180 ಕೀ.ಮೀ. ವೇಗದಲ್ಲಿ ಪರೀಕ್ಷೆ ನಡೆಸಲಾಗುವುದು.

ಮೊದಲ ಪ್ರಯತ್ನದಲ್ಲೇ 115 ಕೀ.ಮೀ. ವೇಗದಲ್ಲಿ ಸಂಚರಿಸಿದ ಟಾಲ್ಗೊ ರೈಲು

ಟಾಲ್ಗೊ ರೈಲುಗಳ ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸರಣಿ ಪ್ರಾಯೋಗಿಕ ಸಂಚಾರದ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ ಪ್ರಾಯೋಗಿಕ ಸಂಚಾರದ ವೇಳೆಯಲ್ಲಿ ಟಾಲ್ಗೊ ರೈಲುಗಳ ಯಶಸ್ಸು ಅಥವಾ ವೈಫಲ್ಯದ ಬಗ್ಗೆ ಕಾಮೆಂಟ್ ಹೇಳುವುದು ಕಷ್ಟ ಎಂದಿದೆ.

ಮೊದಲ ಪ್ರಯತ್ನದಲ್ಲೇ 115 ಕೀ.ಮೀ. ವೇಗದಲ್ಲಿ ಸಂಚರಿಸಿದ ಟಾಲ್ಗೊ ರೈಲು

ಅಧಿಕಾರಿಗಳ ಹೊರತಾಗಿ ಮರಳು ಬ್ಯಾಗ್ ಗಳನ್ನಿರಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲದೆ ಖಾಲಿ ಬೋಗಿಯಲ್ಲೂ ಪರೀಕ್ಷೆ ಹಮ್ಮಿಲಾಗುತ್ತಿದೆ ಎನ್ನಲಾಗಿದೆ. ಅಂದ ಹಾಗೆ 2016 ಎಪ್ರಿಲ್ 21ರಂದು ಟಾಲ್ಗೊ ರೈಲುಗಳು ಮುಂಬೈ ಬಂದರನ್ನು ತಲುಪಿತ್ತು.

ಮೊದಲ ಪ್ರಯತ್ನದಲ್ಲೇ 115 ಕೀ.ಮೀ. ವೇಗದಲ್ಲಿ ಸಂಚರಿಸಿದ ಟಾಲ್ಗೊ ರೈಲು

ಟಾಲ್ಗೊ ವೇಗದ ರೈಲು ಯೋಜನೆಯಂತೆ ಮುಂಬೈ ಮತ್ತು ದೆಹಲಿ ನಡುವಣ 1200 ಕೀ.ಮೀ. ದೂರವನ್ನು ಕೇವಲ 12 ಗಂಟೆಗಳಲ್ಲಿ ಕ್ರಮಿಸಲಿದೆ. ಪ್ರಸ್ತುತ 17 ತಾಸುಗಳಷ್ಟು ಪ್ರಯಾಣಿಸಬೇಕಾಗಿದೆ. ಅಂದ ಹಾಗೆ ಈ ಎರಡು ಪ್ರಮುಖ ನಗರಗಳ ನಡುವೆ 200 ಕೀ.ಮೀ. ವೇಗದಲ್ಲಿ ಪರೀಕ್ಷೆ ನಡೆಯಲಿದೆ.

ಮೊದಲ ಪ್ರಯತ್ನದಲ್ಲೇ 115 ಕೀ.ಮೀ. ವೇಗದಲ್ಲಿ ಸಂಚರಿಸಿದ ಟಾಲ್ಗೊ ರೈಲು

ಸದ್ಯಕ್ಕೆ ದೇಶದ ಅತಿ ವೇಗದ ರೈಲೆಂಬ ಪಟ್ಟ ಕಟ್ಟಿಕೊಂಡಿರುವ 'ಗತಿಮಾನ್' ಸೆಮಿ ಬುಲೆಟ್ ರೈಲು ಗಂಟೆಗೆ 160 ಕೀ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಇವನ್ನೂ ಓದಿ...

ಬದಲಾವಣೆಯ ಪರ್ವದಲ್ಲಿ ಭಾರತ; ರೈಲಲ್ಲಿ ವಿಮಾನದಂತಹ ಐಷಾರಾಮಿ ಸೌಲಭ್ಯ

ಇವನ್ನೂ ಓದಿ...

'ಗತಿಮಾನ್ ಎಕ್ಸ್‌ಪ್ರೆಸ್' ಸೆಮಿ ಬುಲೆಟ್ ರೈಲಿನ ವಿಶಿಷ್ಟತೆಗಳೇನು?

English summary
Indian Railways Test Spanish High Speed Talgo Train

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark