ವಿದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘನೆ - ಭಾರತೀಯನಿಗೆ 66 ಸಾವಿರ ದಂಡ

ಭಾರತೀಯ ಮೂಲದ ಸ್ಕೂಟರ್ ಸವಾರನೊಬ್ಬ ವಿದೇಶದಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಾರೆ. ಇವರು ಭಾರತದ ರೀತಿಯಲ್ಲೇ ವಿದೇಶದಲ್ಲೋ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಬಹುದೆಂದು ತ್ರಿಬಲ್ ರೈಡಿಂಗ್ ಹೋಗುವ ವೇಳೆಯಲ್ಲಿ ಆಸ್ಟ್ರೇಲಿಯಾದ ಪೊಲೀಸರು ಆತನಿಗೆ ದುಬಾರಿ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ವಿದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘನೆ - ಭಾರತೀಯನಿಗೆ 66 ಸಾವಿರ ದಂಡ

ಭಾರತೀಯ ಮೂಲದ 67 ವರ್ಷದ ವ್ಯಕ್ತಿ ತನ್ನ ಪತ್ನಿ ಮತ್ತು 6 ವರ್ಷದ ಮೊಮ್ಮಗನ ಜೊತೆ ತ್ರಿಬಲ್ ರೈಡಿಂಗ್ ಹೋಗುವ ವೇಳೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಸ್ಥಳಿಯ ಟ್ರಾಫಿಕ್ ಪೊಲೀಸರು ಅವರನ್ನು ತಡೆದು ವಿಚಾರಿಸಿದ್ದಾರೆ. ಈ ವೇಳೆ ಆತನ ಬಳಿ ಭಾರತ ಚಾಲನ ಪರವಾನಗಿಯನ್ನು ಹೊಂದಿದ್ದ ಆದರೆ ಅಂತರಾಷ್ಟ್ರೀಯ ಚಾಲನ ಪರವಾನಿಗೆಯನ್ನು ಹೊಂದಿರಲಿಲ್ಲ.

ವಿದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘನೆ - ಭಾರತೀಯನಿಗೆ 66 ಸಾವಿರ ದಂಡ

ಈ ವೇಳೆ ಅವನಿಗೆ ಉಸಿರಾಟ ಪರೀಕ್ಷೆಯನ್ನು ನಡೆಸಿದ ಪೊಲೀಸರು ಆವರಿಗೆ ಉಸಿರಾಟದ ತೊಂದರೆ ಇರುವುದಾಗಿ ಕಂಡುಬಂದಿದೆ. ಉಸಿರಾಟದ ಜೊತೆ ಪೊಲೀಸರು ಇನ್ನೀತರ ಪರೀಕ್ಷೆ ನಡೆಸಿದರು. ಇದರೊಂದಿಗೆ ಹೆಲ್ಮೆಟ್ ಧರಿಸದಿರುವುದು ಸೇರಿ ಹಲವು ಅಪರಾಧಗಳಗೆ ಸೇರಿ ದುಬಾರಿ ಮೊತ್ತದ ದಂಡವನ್ನು ವಿಧಿಸಲಾಗಿದೆ.

ವಿದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘನೆ - ಭಾರತೀಯನಿಗೆ 66 ಸಾವಿರ ದಂಡ

ಅವರ ಪತ್ನಿ ಹೆಲ್ಮೆಟ್ ಧರಿಸದ ಕಾರಣ ಅವರಿಗೆ ರೂ. 16,024 ದಂಡ ವಿಧಿಸಲಾಗಿದೆ. ತ್ರಿಬಲ್ ರೈಡ್ ಮತ್ತು ಹೆಲ್ಮೆಟ್ ಧರಿಸದೆ ಇರುವುದು ಮತ್ತು ಇನ್ನೀತರ ಸಂಚಾರಿ ನಿಯಮ ಉಲ್ಲಂಘಣೆಗೆ ದುಬಾರಿ ಮೊತ್ತದ ದಂಡವನ್ನು ವಿಧಿಸಿದ್ದಾರೆ. ಭಾರತದಲ್ಲಿ ಆದರೆ ಅದರ ವಿರುದ್ದ ಪ್ರತಿಭಟನೆ ಮತ್ತು ಪೊಲೀಸರು ಮತ್ತು ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ ಆದರೆ ವಿದೇಶದಲ್ಲಿ ಅದಕ್ಕೆ ಅವಕಾಶವಿಲ್ಲ.

ವಿದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘನೆ - ಭಾರತೀಯನಿಗೆ 66 ಸಾವಿರ ದಂಡ

ಇಂತಹ ಸಂಚಾರಿ ನಿಯಮವನ್ನು ಉಲ್ಲಂಘಿಸುವುದು ಭಾರತದಲ್ಲಿ ಸಾಮಾನ್ಯ ಸಂಗತಿಯಾಗಿದ್ದರೂ ವಿದೇಶಿದಲ್ಲಿ ಅದು ದೊಡ್ಡ ಅಪಾರಧವೇ. ಇವರು ಭಾರತೀಯ ಚಾಲನಾ ಪರವಾನಿಗೆಯನ್ನು ತೋರಿಸಿ ಆಸ್ಟ್ರೆಲಿಯಾದ ಕಾನೂನು ಗೊತ್ತಿರಲಿಲ್ಲ ಎಂದು ಪೊಲೀಸರ ಜೊತೆ ಮನವಿ ಮಾಡಿಕೊಂಡಿದ್ದಾರೆ.

ವಿದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘನೆ - ಭಾರತೀಯನಿಗೆ 66 ಸಾವಿರ ದಂಡ

ಭಾರತೀಯ ಪೊಲೀಸರ ಜೊತೆ ಗೋಳಾಡುವ ರೀತಿ ಎಷ್ಟು ಗೋಳಾಡಿದರು ಆಸ್ಟ್ರೇಲಿಯಾದ ಪೊಲೀಸರು ಅದಕ್ಕೆ ಕ್ಯಾರೆ ಅಂದಿಲ್ಲ. ಆತನಿಗೆ ಆಸ್ಟ್ರೇಲಿಯಾದ ನಿಯಮದ ಬಗ್ಗೆ ಅರಿವು ಇಲ್ಲ ಅಂದರು ಪೊಲೀಸರು ಮಾತ್ರ ತಮ್ಮ ಕಾನೂನಿನ ಪ್ರಕಾರ ದಂಡ ವಿಧಿಸಿದ್ದಾರೆ.

ವಿದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘನೆ - ಭಾರತೀಯನಿಗೆ 66 ಸಾವಿರ ದಂಡ

ಭಾರತದಲ್ಲಿ ಹೊಸ ಸಂಚಾರಿ ನಿಯಮವನ್ನು ಜಾರಿಗೊಳಿಸಿ, ಅದರ ಅನ್ವಯ ದುಬಾರಿ ದಂಡವನ್ನು ವಿಧಿಸುತ್ತಿದ್ದಾರೆ. ಆದರೆ ಭಾರತದಲ್ಲಿ. ಕೆಲವು ರಾಜ್ಯಗಳು ಜಾರಿಗೊಳಿಸಲಿಲ್ಲ ಇನ್ನೂ ಕೆಲವು ರಾಜ್ಯಗಳಲ್ಲಿ ಹೊಸ ಸಂಚಾರಿ ನಿಯಮವನ್ನು ತಿದ್ದುಪಡಿ ಮಾಡಿ ಸಂಚಾರಿ ನಿಯಮವನ್ನು ಜಾರಿಗೊಳಿಸಿದ್ದಾರೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ವಿದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘನೆ - ಭಾರತೀಯನಿಗೆ 66 ಸಾವಿರ ದಂಡ

ಸೆಪ್ಟೆಂಬರ್ 1 ರಿಂದ ಜಾರಿಯಾದ ಹೊಸ ಮೋಟಾರು ವಾಹನ ಕಾಯ್ದೆಯ ಪ್ರಕಾರ ಕುಡಿದು ವಾಹನ ಚಲಾಯಿಸಿದಕ್ಕೆ 10,000 ದಂಡವನ್ನು ವಿಧಿಸಲಾಗುತ್ತಿದೆ. ಹಾಗೇ ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಓಡಿಸುವುದು, ಹೆಲ್ಮೆಟ್‌ ಇಲ್ಲದೆ ಚಾಲನೆ, ತ್ರಿಬಲ್‌ ರೈಡಿಂಗ್‌, ಸೀಟ್‌ ಬೆಲ್ಟ್‌ ಹಾಕಿಕೊಳ್ಳದೆ ಪ್ರಯಾಣ, ಸಿಗ್ನಲ್‌ ಜಂಪ್‌, ಅತಿವೇಗದ ಚಾಲನೆ ದುಭಾರಿ ದಂಡವನ್ನು ವಿಧಿಸುತ್ತಿದ್ದಾರೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ವಿದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘನೆ - ಭಾರತೀಯನಿಗೆ 66 ಸಾವಿರ ದಂಡ

ಹಲವರು ಕೇಂದ್ರ ಸಾರಿಗೆ ನಿಯಮದ ಕುರಿತು ಟೀಕೆಗಳನ್ನು ಮಾಡಿದ್ದಾರೆ. ಅಲ್ಲದೇ ದೇಶದೆಲ್ಲೆಡೆ ದುಬಾರಿ ದಂಡ ಹಾಕಿದ ಪ್ರಕರಣಗಳು ವರದಿಯಾಗಿದೆ. ಆದರೆ ಇದೀಗ ಜನರಲ್ಲಿ ಟ್ರಾಫಿಕ್ ನಿಯಮದ ಕುರಿತು ಭಯ ಮೂಡುತ್ತಿದೆ. ದೇಶದಲ್ಲಿ ಜನರು ಎಚ್ಚರಿಕೆಯ ಹೆಜ್ಜೆ ಇಡುವಂತಾಗಿರುದು ಸುಳ್ಳಲ್ಲ. ಕೆಲವು ರಾಜ್ಯಗಳಲ್ಲಿ ಜಾರಿಗೊಳಿಸಲ್ಲ ಮತ್ತು ಹೊಸ ನಿಯಮವನ್ನು ತಿದ್ದುಪಡಿ ಮಾಡಿ ಜಾರಿಗೊಳಿಸಿದ್ದಾರೆ.

Most Read Articles

 

Kannada
English summary
Indian scooter rider fined Rs 66,000 for riding triples in Australia - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X