ಟ್ರಾಫಿಕ್‌ನಿಂದ ಮುಕ್ತಿ; ಗುರ್ಗಾಂವ್‌ನಲ್ಲಿ ದೇಶದ ಪ್ರಥಮ 'ಪೊಡ್ ಟ್ಯಾಕ್ಸಿ'

By Nagaraja

ದೈನಂದಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು ಹೋಗಿರುವೀರಾ? ಕಚೇರಿ, ಕಲಾಪದ ಒತ್ತಡದ ನಡುವೆ ಈ ಕಿಕ್ಕಿರಿದು ತುಂಬಿರುವ ಟ್ರಾಫಿಕ್ ಸಮಸ್ಯೆ ಬೇರೆ ಕಾಡುತ್ತಿದೆಯೇ ? ಇವೆಲ್ಲ ಸಮಸ್ಯೆಗಳಿಗೆ ಪರಿಹಾರದ ರೂಪದಲ್ಲಿ ದೇಶದ ಮೊದಲ 'ಪೊಡ್ ಟ್ಯಾಕ್ಸಿ' ಗುರ್ಗಾಂವ್ ನಲ್ಲಿ ತೆಲೆಯೆತ್ತಲಿದೆ.

Also Read: ಜಗತ್ತಿನ 10 ವಾಹನ ನಿಬಿಡ ಜಂಕ್ಷನ್‌ಗಳು ಸಮಗ್ರ ವಿವರಗಳಿಗಾಗಿ ಇಲ್ಲಿ ಕ್ಲಿಕ್ಲಿಸಿ

ಹೌದು, ಕೊನೆಗೂ ದೇಶದ ಅತಿ ದೊಡ್ಡ ಯೋಜನೆ ನನಸಾಗುವ ಕಾಲ ಹತ್ತಿರ ಬಂದಿದೆ. ಈ ಸಂಬಂಧ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನೀಲಿ ನಕ್ಷೆಯನ್ನು ತಯಾರಿಸಿದೆ.

ಏನಿದು ಪೊಡ್ ಟ್ಯಾಕ್ಸಿ ?

ಏನಿದು ಪೊಡ್ ಟ್ಯಾಕ್ಸಿ ?

ಇದೊಂದು ಮೆಟ್ರೋ ಶೈಲಿಯಲ್ಲಿ ಮೇಲ್ಗಡೆಯಾಗಿ ಅತಿ ವೇಗದಲ್ಲಿ ಹಾದು ಹೋಗುವ ವೈಯಕ್ತಿಕ ಕ್ಷಿಪ್ರ ಪ್ರಯಾಣ (personal rapid transit) ಸಂಚಾರ ಜಾಲವಾಗಿದೆ.

13 ಕೀ.ಮೀ. ದೂರ, 850 ಕೋಟಿ ರು. ವೆಚ್ಚ

13 ಕೀ.ಮೀ. ದೂರ, 850 ಕೋಟಿ ರು. ವೆಚ್ಚ

13 ಕೀ.ಮೀ. ದೂರದ ಈ ಯೋಜನೆಗೆ ಬರೋಬ್ಬರಿ 850 ಕೋಟಿ ರುಪಾಯಿ ವೆಚ್ಚ ಅಂದಾಜಿಸಲಾಗಿದೆ.

ಎಲ್ಲಿಂದ ಎಲ್ಲಿಗೆ?

ಎಲ್ಲಿಂದ ಎಲ್ಲಿಗೆ?

ಗುರ್ಗಾಂವ್-ದೆಹಲಿ ಗಡಿಯಿಂದ ಆರಂಭವಾಗುವ ಈ ಪೊಡ್ ಟ್ಯಾಕ್ಸಿ ಜಾಲವು ಸೋನ್ಹಾ ರಸ್ತೆಯ ಮುಖಾಂತರ ಬಾದ್ ಷಾಪುರ್ ಮೊಡ್ ಪ್ರದೇಶವನ್ನು ತಲುಪಲಿದೆ.

ಯೋಜನೆಯ ಹೆಸರೇನು?

ಯೋಜನೆಯ ಹೆಸರೇನು?

ಗುರ್ಗಾಂವ್ ನಲ್ಲಿ ತಲೆಯೆತ್ತಲಿರುವ ವೈಯಕ್ತಿಕ ಕ್ಷಿಪ್ರ ಪ್ರಯಾಣಕ್ಕೆ (ಪಿಆರ್‌ಟಿ) ಮೆಟ್ರಿನೊ (Metrino) ಎಂದು ನಾಮಕರಣ ಮಾಡಲಾಗಿದೆ.

ಎಷ್ಟು ಮಂದಿ ಪ್ರಯಾಣಿಸಬಹುದು?

ಎಷ್ಟು ಮಂದಿ ಪ್ರಯಾಣಿಸಬಹುದು?

ಪ್ರತಿಯೊಂದು ಪೊಡ್ ಟ್ಯಾಕ್ಸಿಯಲ್ಲಿ ಗರಿಷ್ಠ ಐದು ಮಂದಿಗೆ ಪ್ರಯಾಣಿಸಬಹುದಾಗಿದೆ. ಅಲ್ಲದೆ ಎಲ್ಲರೂ ಒಂದೇ ಗುರಿಯನ್ನು ಸೇರುವುದಾದ್ದಲ್ಲಿ ನೇರವಾಗಿ ಗಮ್ಯಸ್ಥಾನವನ್ನು ತಲುಪಿಸುವ ವ್ಯವಸ್ಥೆಯೂ ಇರುತ್ತದೆ.

ಎಷ್ಟು ವೇಗದಲ್ಲಿ ಸಾಗಬಲ್ಲದು?

ಎಷ್ಟು ವೇಗದಲ್ಲಿ ಸಾಗಬಲ್ಲದು?

ಪ್ರಸ್ತುತ ಪೊಡ್ ಟ್ಯಾಕ್ಸಿ ಗಂಟೆಗೆ ಗರಿಷ್ಠ 60 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಯೋಜನೆ ಯಾವಾಗ ಪೂರ್ಣ?

ಯೋಜನೆ ಯಾವಾಗ ಪೂರ್ಣ?

ಸದ್ಯ ಬಿಡ್ ಕರೆಯಲಾಗಿದ್ದು, ಮುಂದಿನ ಒಂದು ವರ್ಷದೊಳಗೆ ಯೋಜನೆ ಪೂರ್ಣಗೊಳಿಸುವ ಇರಾದೆಯನ್ನು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಯಾವುದು ಅಗ್ಗ?

ಯಾವುದು ಅಗ್ಗ?

ಮೆಟ್ರೋ ಮತ್ತು ಮೊನೊರೈಲ್ ಗಳಿಗೆ ಹೋಲಿಸಿದಾಗ ಪೊಡ್ ಟ್ಯಾಕ್ಸಿ ವ್ಯವಸ್ಥೆಯ ನಿರ್ಮಾಣ ಬಹಳ ಅಗ್ಗವಾಗಿದೆ. ಪ್ರತಿ ಕೀ.ಮೀ. ನಿರ್ಮಾಣಕ್ಕೆ ಮೆಟ್ರೋ ಮತ್ತು ಮೊನೊರೈಲುಗಳಿಗೆ ಅನುಕ್ರಮವಾಗಿ 250 ಮತ್ತು 200 ಕೋಟಿ ರುಪಾಯಿಗಳ ವೆಚ್ಚ ತಗಲುವುದಾದ್ದಲ್ಲಿ ಮೆಟ್ರಿನೊ ವ್ಯವಸ್ಥೆಗೆ 70 ಕೋಟಿ ರುಪಾಯಿಗಳಷ್ಟೇ ವೆಚ್ಚ ಅಂದಾಜಿಸಲಾಗಿದೆ. ಹಾಗೆಯೇ ಹಗುರ ಭಾರ ಕೂಡಾ ಆಗಿರುತ್ತದೆ.

ಹೂಡಿಕೆ ಹೇಗೆ?

ಹೂಡಿಕೆ ಹೇಗೆ?

ಹರಿಯಾಣ ಸರಕಾರದ ಯೋಜನೆಯ ಪ್ರಕಾರ ಬಿಡ್ ಗೆಲ್ಲುವ ಖಾಸಗಿ ಸಂಸ್ಥೆಗಳೇ ಯೋಜನೆಯ ಸಂಪೂರ್ಣ ಹೂಡಿಕೆಯನ್ನು ಮಾಡಲಿದೆ. ಇದನ್ನು ಪ್ರಯಾಣಿಕರ ಟಿಕೆಟ್ ಮುಖಾಂತರ ಮುಂದಿನ 25 ವರ್ಷಗಳ ಅವಧಿಯಲ್ಲಿ ಹಿಂಪಡೆಯಲಾಗುವುದು. ಪ್ರಸ್ತುತ ಯೋಜನೆಗೆ ಅರಣ್ಯ ಮತ್ತು ಪರಿಸರ ವಿಭಾಗದ ಮಾನ್ಯತೆಯ ಅಗತ್ಯವಿರುವುದಿಲ್ಲ ಎಂಬುದು ಸಹ ಗಮನಾರ್ಹ.

ಟ್ರಾಫಿಕ್‌ನಿಂದ ಮುಕ್ತಿ; ಗುರ್ಗಾಂವ್‌ನಲ್ಲಿ ದೇಶದ ಪ್ರಥಮ 'ಪೊಡ್ ಟ್ಯಾಕ್ಸಿ'

ಒಟ್ಟಿನಲ್ಲಿ ಇಂತಹದೊಂದು ವ್ಯವಸ್ಥೆಯು ವಾಹನ ನಿಬಿಡ ನಮ್ಮ ಬೆಂಗಳೂರಿನಲ್ಲೂ ಜಾರಿಗೆ ಬಂದ್ದಲ್ಲಿ ಹೇಗಿರಬಹುದು? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ ಬಾಕ್ಸ್ ನಲ್ಲಿ ವ್ಯಕ್ತಪಡಿಸಿರಿ.

ಟ್ರಾಫಿಕ್‌ನಿಂದ ಮುಕ್ತಿ; ಗುರ್ಗಾಂವ್‌ನಲ್ಲಿ ದೇಶದ ಪ್ರಥಮ 'ಪೊಡ್ ಟ್ಯಾಕ್ಸಿ'

ಜಗತ್ತಿನ ಮೊದಲ ಟ್ರಾಫಿಕ್ ದೀಪದ ವಿಶಿಷ್ಟತೆಗಳು

ನೀವು ತಿಳಿದುಕೊಳ್ಳಬೇಕಾದ 8 ಟ್ರಾಫಿಕ್ ನಿಯಮಗಳು

Most Read Articles

Kannada
English summary
India's First 'Pod Taxis' To Debut in Gurgaon
Story first published: Monday, March 21, 2016, 11:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X