ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

Posted By:

ಪ್ರತಿಯೊಬ್ಬರ ಜೀವನವು ಏಳು-ಬೀಳುಗಳಿಂದ ಕೂಡಿರುತ್ತವೆ. ಹಾಗೆಂದ ಮಾತ್ರಕ್ಕೆ ಯಶಸ್ಸು ಗಿಟ್ಟಿಸಿಕೊಂಡ ತಕ್ಷಣ ಅತೀವ ಸಂತೋಷಪಡುವುದು ಹಾಗೆಯೇ ಸೋಲು ಅನುಭವಿಸಿದಾಗ ಪತಾಳಕ್ಕೆ ಕುಗ್ಗಿ ಹೋಗುವುದು ತಪ್ಪಾದ ಪ್ರವೃತ್ತಿ. ಇಂತಹ ಸನ್ನಿವೇಶಗಳಲ್ಲಿ ನಮಗೆ ಸ್ಫೂರ್ತಿ ತುಂಬಬಲ್ಲ ಕೆಲವು ಉಲ್ಲೇಖಗಳು ಜೀವನದಲ್ಲಿ ನಮಗೆ ಮುಂದುವರಿಯಲು ಪ್ರೇರಣೆಯಾಗುತ್ತದೆ.

ಈ ಬಗ್ಗೆ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ವಾಹನ ಜಗತ್ತಿನಲ್ಲಿ ಕಂಡುಬರುವ ಕೆಲವು ಉಲ್ಲೇಖಗಳ ಬಗ್ಗೆ ಪಟ್ಟಿ ಮಾಡಿ ಕೊಟ್ಟಿರುತ್ತೇವೆ. ಇದು ಹಸಿದಿರುವವವನಿಗೆ ಒಂದು ತುತ್ತು ಅನ್ನ ಹಾಕೋ ರೀತಿಯಲ್ಲಿ ಖಂಡಿತವಾಗಿಯೂ ನಿಮ್ಮ ಜೀವನಕ್ಕೆ ಪ್ರೇರಣೆಯಾಗುವ ನಿರೀಕ್ಷೆಯನ್ನು ನಾವು ಹೊಂದಿರುತ್ತೇವೆ. ಈ ಇನ್ಫೋಗ್ರಾಫಿಕ್ ಚಿತ್ರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

ಜೀವನ ಎಂಬುದು ಸೈಕಲ್ ಸವಾರಿ ಇದ್ದಂತೆ; ಮುಂದಕ್ಕೆ ಚಲಿಸಿದ್ದಲ್ಲಿ ಮಾತ್ರ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ.

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

ನಿಮ್ಮ ಕಳೆದ ಹೋದ ಕಾಲವು ಕಾರಿನಲ್ಲಿ ರಿಯರ್ ವ್ಯೂ ಮಿರರ್ ಬಳಸಿದಂತೆ; ಎಷ್ಟು ದೂರ ಚಲಿಸಿ ಬಂದಿದ್ದೀರಾ ಎಂಬುದನ್ನು ತಿಳಿಯಲು ಒಮ್ಮೆ ತಿರುಗಿ ನೋಡುವುದು ಒಳ್ಳೆಯದು. ಆದರೆ ಅದನ್ನೇ ದಿಟ್ಟಿಸಿ ನೋಡಿದ್ದಲ್ಲಿ ನಿಮ್ಮ ಮುಂದಿರುವುದನ್ನು ಕಳೆದುಕೊಳ್ಳಲಿದ್ದೀರಿ.

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

ರಸ್ತೆಯಲ್ಲಿ ತಿರುವು ಇದ್ದ ಮಾತ್ರಕ್ಕೆ ರಸ್ತೆ ಕೊನೆಗೊಳ್ಳುವುದಿಲ್ಲ; ಎಲ್ಲಿಯ ವರೆಗೆ ತಿರುವು ಮಾಡಲು ನೀವು ಎಡವುದಿಲ್ಲವೋ!

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

ಒಳ್ಳೆಯ ಹೆಂಡತಿ ನಿಮ್ಮ ಜೀವನಕ್ಕೆ ಸಮತೋಲನ ತರಬಲ್ಲರು

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

ಒಂದೇ ದಾರಿ; ಅಥವಾ ಇನ್ನೊಂದು?

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಜೀವನದ ಅಂಚಿನಲ್ಲಿ ಸ್ವಲ್ಪ ತಾಳಿ, ಅಲ್ಲೊಂದು ಹೊಸ ರಸ್ತೆ ಅಥವಾ ಸಿಕ್ರೇಟ್ ಬಾಗಿಲು ನಿಮಗಾಗಿ ತೆರೆದಿರಬಹುದು"

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ನೇರವಾದ ರಸ್ತೆಗಳು ಜಾಣ ಚಾಲಕರನ್ನು ಸೃಷ್ಟಿ ಮಾಡುವುದಿಲ್ಲ"

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಬಹುಶ: ಇದು ಜಗತ್ತಿನ ತಂಪಾದ ವಸ್ತು ಆಗಿರಲಾರದು. ಹಾಗಿದ್ದರೂ ಮೆದುಳು ಒಡೆಯುವುದಕ್ಕಿಂತಲೂ ತಂಪಾದ ವಿಷಯನೇ ಆಗಿರುತ್ತದೆ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ನಾನೆಲ್ಲಿಗೆ ಹೋಗುತ್ತಿದ್ದೇನೆ ಎಂಬುದು ನನಗೆ ಅರಿವಿಲ್ಲ. ಆದರೆ ನನ್ನದೇ ಆದ ದಾರಿಯಲ್ಲಿಯೇ ಸಾಗುತ್ತಿದ್ದೇನೆ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಚಿತ್ರದಲ್ಲಿ ತೋರಿಸಿರುವಂತೆಯೇ ಅಪಘಾತ ತಡೆಗಟ್ಟಲು ಸೈಂಡ್ ಸ್ಟಾಂಡ್ ಬಳಿ ಹೆಚ್ಚುವರಿ ಕ್ಲಿಪ್ ಬಳಸಿ. ಹಾಗೊಂದು ವೇಳೆ ಸೈಡ್ ಸ್ಟಾಂಡ್ ತೆಗೆಯಲು ಮರೆತು ಹೋದ್ದಲ್ಲಿ ಗಾಡಿ ಸ್ಟಾರ್ಟ್ ಮಾಡುವ ವೇಳೆ ಗೇರ್ ಬದಲಾಯಿಸಲು ನಿಮ್ಮಿಂದ ಸಾಧ್ಯವಾಗುವುದಿಲ್ಲ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ರಕ್ತದಾನ ಮಾಡಿ. ಆದರೆ ರಸ್ತೆಯಲ್ಲಲ್ಲ. ಅಜಾಗರೂಕ ಚಾಲನೆ ತಪ್ಪಿಸಿರಿ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಇದು ನಿಮ್ಮ ಹಾದಿ, ನಿಮ್ಮದು ಮಾತ್ರ. ಇತರರು ನಿಮ್ಮ ಜತೆ ಚಲಿಸಬಲ್ಲರು. ಆದರೆ ಯಾರು ಕೂಡಾ ನಿಮಗಾಗಿ ನಿಮ್ಮ ಜೊತೆ ಬರಲಾರರು".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಆಕರ್ಷಕ ಸ್ವಾತಂತ್ರ್ಯ ಸೈಕಲ್"

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಇತರರಿಗೆ ನಿಮ್ಮ ಅಗತ್ಯವಿದ್ದಾಗ ಬ್ಯುಸಿ ಅಂತ ಹೇಳಿ ಬಿಡೋದು ತುಂಬಾನೇ ಸುಲಭ. ಆದರೆ ನಿಮಗೆ ಇತರರ ಸಹಾಯ ಬೇಕಾದಾಗ ಅವರಿಂದಲೂ ಅದೇ ಮಾತನ್ನೇ ಅರಗಿಸಿಕೊಳ್ಳುವುದು ತುಂಬಾನೇ ಕಷ್ಟಕರ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ನಿನಗೆ ಬೇಸರವಾದಾಗ ಮಾತ್ರ ನನ್ನಲ್ಲಿ ಮಾತಾಡಿಸಬೇಡ. ನಾನಿಲ್ಲಿ ನಿನ್ನ ಮನರಂಜನೆಗಾಗಿ ಬಂದಿಲ್ಲ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ನೀವು ಎಲ್ಲೇ ಹೋಗು, ಜತೆಗೆ ನಿಮ್ಮ ಹೃದಯವನ್ನು ಕೊಂಡುಹೋಗಿ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಪುಟ್ಟ ಪುಟ್ಟ ಹೆಜ್ಜೆಯಿಂದಲೇ ಸಾವಿರಾರು ಮೈಲ್‌ಗಳ ಪಯಣ ಆರಂಭವಾಗುತ್ತದೆ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ನಿಮಗೆ ದಾರಿ ಕಾಣಿಸದಿದ್ದಲ್ಲಿ ಹೊಸತೊಂದನ್ನು ಸೃಷ್ಟಿ ಮಾಡಿ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ನಿಧಾನವಾಗಿ ಚಲಿಸಿ ನಿಮ್ಮ ನಗರದ ಸೌಂದರ್ಯವನ್ನು ಆನಂದಿಸಿ. ಇನ್ನು ವೇಗವಾಗಿ ಚಲಿಸಿದರೆ ನಮ್ಮ ಜೈಲನ್ನು ನೋಡುವ ಅದೃಷ್ಟ ನಿಮ್ಮದಾಗಿರಲಿದೆ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಯಾವತ್ತೂ ಅವಕಾಶಗಳಿಗಾಗಿ ಹಾತೊರೆಯಿರಿ. ಯಾಕೆಂದರೆ ಕೆಲವೊಂದು ಅಂಶಗಳು ನಿಮ್ಮ ಪಾಲಿಗೆ ಹೇಗೆ ಕೈಗೂಡಲಿದೆ ಎಂಬುದು ಹೇಳಲಸಾಧ್ಯ.

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಸಮಸ್ಯೆಯಿಂದ ದೂರ ನಿಲ್ಲುವುದರಿಂದ ಪರಿಹಾರದ ಅಂತರವನ್ನು ಇನ್ನಷ್ಟು ವೃದ್ಧಿಸುತ್ತದೆ. ಹಾಗಾಗಿ ಸಮಸ್ಯೆಯಿಂದ ಬಚಾವಾಗುವ ಸುಲಭ ದಾರಿಯೆಂದರೆ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿದೆ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಯಶಸ್ಸು ಎಂಬುದು ಬೈಕ್; ಅದು ಚಲಿಸುತ್ತನೇ ಇರುತ್ತದೆ. ಅದರಲ್ಲಿ ಚಕ್ರ ಎಂಬುದು ಆತ್ಮವಿಶ್ವಾಸವಾಗಿರುತ್ತದೆ. ಅಂದರೆ ಬೈಕ್‌ನ ಚಕ್ರದ ಹೊರತಾಗಿ ಗುರಿ ಮುಟ್ಟಲು ಸಾಧ್ಯವೇ ಇಲ್ಲ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ನಿಮ್ಮ ಜೀವನವೆಂಬ ದೋಣಿಯ ನಾವಿಕ ನೀವೇ ಆಗಿರುತ್ತೀರಿ. ನಿಮ್ಮ ಸೀಟನ್ನು ದೋಚಿಕೊಳ್ಳಲು ಯಾರನ್ನು ಬಿಡಬೇಡಿ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಮೊದಲನೆಯ ಚಿತ್ರದಲ್ಲಿ ಕೊಟ್ಟಿರುವ ಕಾರು, ದುಡ್ಡಿನಿಂದ ಚಲಿಸುವುದಲ್ಲದೆ ನಿಮ್ಮ ಶರೀರವನ್ನು ದಪ್ಪವಾಗಿಸುತ್ತದೆ. ಆದರೆ ಎರಡನೇ ಚಿತ್ರದಲ್ಲಿ ಸೈಕಲ್ ನಿಮ್ಮ ಶರೀರದಿಂದ ಓಡುವುದಲ್ಲದೆ ಹಣ ಉಳಿತಾಯ ಮಾಡಲು ನೆರವಾಗುತ್ತದೆ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

"ಯಾರು ಕಾಯಲು ಸಿದ್ಧವಾಗಿರುತ್ತಾರೋ ಅವರನ್ನು ಒಳ್ಳೆಯ ವಿಚಾರ ಹರಸಿಕೊಂಡು ಬರಲಿದೆ. ಯಾರು ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲವೋ ಅವರಿಗೆ ಉತ್ತಮವಾಗಲಿದೆ. ಆದರೆ ಯಾರು ತಮ್ಮಲ್ಲಿ ತಮ್ಮನ್ನೇ ನಂಬಿಕೆಯನ್ನಿಟ್ಟುಕೊಂಡಿರುತ್ತಾರೋ ಅವರಿಗೆ ಶ್ರೇಯಸ್ಸು ಲಭ್ಯವಾಗಲಿದೆ".

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

ಪ್ರೇರಣೆ ಪಡೆಯಿರಿ; ಸಂತೋಷ ಜೀವನ ನಿಮ್ಮದಾಗಿಸಿ

ನಿಮಗೆ ಸ್ಫೂರ್ತಿ ತುಂಬಬಲ್ಲ ಆಟೋಮೊಬೈಲ್ ಉಲ್ಲೇಖ

ಪ್ರೇರಣೆ ಪಡೆಯಿರಿ; ಸಂತೋಷ ಜೀವನ ನಿಮ್ಮದಾಗಿಸಿ

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark