ಗಗನಕ್ಕೆ ಚಿಮ್ಮಿದ ಪೃಥ್ವಿ-2 ಖಂಡಾಂತರ ಕ್ಷಿಪಣಿ

Written By:

ಸ್ವದೇಶಿ ನಿರ್ಮಿತ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಖಂಡಾಂತರ ಪೃಥ್ವಿ-2 ಕ್ಷಿಪಣಿಯನ್ನು ಒಡಿಶಾದ ಚಂಡಿಪುರದಲ್ಲಿರುವ ಸೇನಾ ನೆಲೆಯಲ್ಲಿ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ. 500ರಿಂದ 1000 ಕೆ.ಜಿ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯದ ಪೃಥ್ವಿ ಕ್ಷಿಪಣಿಯು 350 ಕೀ.ಮೀ. ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

2003ನೇ ಇಸವಿಯಿಂದಲೇ ಭಾರತೀಯ ಸೇನೆಯ ಭಾಗವಾಗಿರುವ ಪೃಥ್ವಿ ಕ್ಷಿಪಣಿಯನ್ನು ಇಂಟೇಗ್ರೇಟಡ್ ಗೈಡಡ್ ಮಿಸೈಲ್ ಡೆವೆಲಪ್ ಮೆಂಟ್ ಪ್ರೋಗ್ರಾಂ (ಐಜಿಎಂಡಿಪಿ) ಅಡಿಯಲ್ಲಿ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅಭಿವೃದ್ಧಿಪಡಿಸಿದೆ.

ಗಗನಕ್ಕೆ ಚಿಮ್ಮಿದ ಪೃಥ್ವಿ-2 ಖಂಡಾಂತರ ಕ್ಷಿಪಣಿ

ಎರಡು ಶಕ್ತಿಶಾಲಿ ಎಂಜಿನ್ ಗಳಿಂದ ನಿಯಂತ್ರಿಸಲ್ಪಡುವ ಪೃಥ್ವಿ-2 ಕ್ಷಿಪಣಿಯು 8.56 ಮೀಟರ್ ಉದ್ದ ಮತ್ತು 1.1 ಮೀಟರ್ ಅಗಲವನ್ನು ಹೊಂದಿರುತ್ತದೆ. ಅಲ್ಲದೆ ಬರೋಬ್ಬರಿ 4600 ಕೆ.ಜಿ ತೂಕವನ್ನು ಹೊಂದಿದೆ.

ಗಗನಕ್ಕೆ ಚಿಮ್ಮಿದ ಪೃಥ್ವಿ-2 ಖಂಡಾಂತರ ಕ್ಷಿಪಣಿ

ನೆಲದಿಂದ ನೆಲಕ್ಕೆ ಚಿಮ್ಮುವ ಕಡಿಮೆ ಅಂತರದ ಪೃಥ್ವಿ 2 ವೈರಿ ಪಡೆಯ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಕರಾವಳಿ ಭದ್ರತೆಗಾಗಿ ನಿಯುಕ್ತಿ ಮಾಡಲಾಗುವುದು.

ಗಗನಕ್ಕೆ ಚಿಮ್ಮಿದ ಪೃಥ್ವಿ-2 ಖಂಡಾಂತರ ಕ್ಷಿಪಣಿ

ಪ್ರಮುಖವಾಗಿಯೂ ಪೃಥ್ವಿ 2 ಕ್ಷಿಪಣಿಯನ್ನು ಭಾರಯೀಯು ವಾಯುಪಡೆ ಬಳಕೆ ಮಾಡಲಿದೆ. 1996ರಲ್ಲಿ ಮೊದಲ ಬಾರಿಗೆ ಪೃಥ್ವಿ ಕ್ಷಿಪಣಿಯ ಪರೀಕ್ಷೆಗೆ ಒಳಪಡಿಸಲಾಗಿದ್ದು, 2004ರಲ್ಲಿ ಪೂರ್ಣಗೊಂಡಿತ್ತು.

ಗಗನಕ್ಕೆ ಚಿಮ್ಮಿದ ಪೃಥ್ವಿ-2 ಖಂಡಾಂತರ ಕ್ಷಿಪಣಿ

ಭಾರತದ ಅತ್ಯಂತ ಯಶಸ್ವಿ ಕ್ಷಿಪಣಿ ಇದಾಗಿದ್ದು, ವಿಜ್ಞಾನಿಗಳ ಸತತ ಪ್ರಯತ್ನದಿಂದಾಗಿ 1000 ಕೆ.ಜಿ ವರೆಗಿನ ಸಿಡಿತಲೆಯನ್ನು 350 ಕೀ.ಮೀ. ವ್ಯಾಪ್ತಿಯ ವರೆಗೂ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಗಗನಕ್ಕೆ ಚಿಮ್ಮಿದ ಪೃಥ್ವಿ-2 ಖಂಡಾಂತರ ಕ್ಷಿಪಣಿ

ಪೃಥ್ವಿ ಅಣ್ವಸ್ತ್ರ ಕ್ಷಿಪಣಿಗಳ ಪ್ರಯೋಗವನ್ನು ನಿರಂತರ ಅಂತರಾಳದಲ್ಲಿ ನಡೆಸಲಾಗುತ್ತಿದ್ದು, ಯುದ್ಧ ಕಾಲದಂತಹ ತುರ್ತು ಪರಿಸ್ಥಿತಿ ಎದುರಾದ್ದಲ್ಲಿ ಸರ್ವ ರೀತಿಯ ಸಿದ್ಧತೆಗಳೊಂದಿಗೆ ಕ್ಷಿಪಣಿ ಸಜ್ಜಾಗಿರಲಿದೆ.

ಗಗನಕ್ಕೆ ಚಿಮ್ಮಿದ ಪೃಥ್ವಿ-2 ಖಂಡಾಂತರ ಕ್ಷಿಪಣಿ

43.5 ಕೀ.ಮೀ. ಎತ್ತರದ ವಾಯು ವಲಯಲ್ಲೂ 483 ಸೆಕೆಂಡುಗಳ ವರೆಗೆ ಹಾರಾಡುವ ಸಾಮರ್ಥ್ಯವನ್ನು ಪೃಥ್ವಿ-2 ಹೊಂದಿದೆ.

ಗಗನಕ್ಕೆ ಚಿಮ್ಮಿದ ಪೃಥ್ವಿ-2 ಖಂಡಾಂತರ ಕ್ಷಿಪಣಿ

ಕೊನೆಯ ಬಾರಿಗೆ 2016 ಫೆಬ್ರವರಿ 16 ಪೃಥ್ವಿ ಕ್ಷಿಪಣಿಯನ್ನು ಯಶಸ್ವಿ ಪರೀಕ್ಷೆಗೊಳಪಡಿಸಲಾಗಿತ್ತು. ಈಗ ಇದೇ ಉಡ್ಡಯನ ಕೇಂದ್ರದಿಂದ ಪೃಥ್ವಿ 2 ಮಗದೊಮ್ಮೆ ಆಕಾಶಕ್ಕೆ ಚಿಮ್ಮಿದೆ.

ಗಗನಕ್ಕೆ ಚಿಮ್ಮಿದ ಪೃಥ್ವಿ-2 ಖಂಡಾಂತರ ಕ್ಷಿಪಣಿ

ಪೃಥ್ವಿ 2 ಕ್ಷಿಪಣಿಯಲ್ಲಿ ಸುಧಾರಿತ ನೇವಿಗೇಷನ್ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ. ಇದರಿಂದ ನಿಖರವಾಗಿ ಗುರಿಯಿಡಲು ಸಾಧ್ಯವಾಗಲಿದೆ.

ಗಗನಕ್ಕೆ ಚಿಮ್ಮಿದ ಪೃಥ್ವಿ-2 ಖಂಡಾಂತರ ಕ್ಷಿಪಣಿ

ಖಂಡಾಂತರ ಕ್ಷಿಪಣಿ ವಿರೋಧಿ ಸಾಮರ್ಥ್ಯವನ್ನು ಹೊಂದಿರುವ ಒಂಬತ್ತು ಮೀಟರ್ ಎತ್ತರದ ಪೃಥ್ವಿ 2 ಮಾರ್ಗದರ್ಶಿ ವ್ಯವಸ್ಥೆ ಹಾಗೂ ಗುರಿ ಹೊಡೆಯುವ ತಂತ್ರಗಾರಿಕೆ ಆಳವಡಿಸಲಾಗಿದೆ.

English summary
Interesting facts about Prithvi-II missile
Story first published: Saturday, May 21, 2016, 16:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark