'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ವ್ಯಾಪಾರ, ಉದ್ಯೋಗ ಮತ್ತು ಪ್ರವಾಸ ನಿಮಿತ್ತ ಎಲ್ಲಾ ವರ್ಗದ ಜನರು ಇಂದು ಒಂದಿಲ್ಲೊಂದು ಕಾರಣಕ್ಕೆ ವಿಮಾನಯಾನವನ್ನು ಆಯ್ಕೆ ಮಾಡುತ್ತಿದ್ದು, ವಿಮಾನಯಾವು ಎಷ್ಟೇ ಸರಳವಾಗಿದ್ದರೂ ಅದರಲ್ಲಿನ ಕೆಲವು ಕುತೂಹಲಕಾರಿಯಾದ ವಿಚಾರಗಳು ಯಾವಾಗಲೂ ರಹಸ್ಯವಾಗಿಯೇ ಕಾಣುತ್ತವೆ.

'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ವಿಮಾನಯಾದ ಕುರಿತಾದ ಕೆಲವು ಇಂಟ್ರಸ್ಟಿಂಗ್ ಮಾಹಿತಿಗಳು ನಮ್ಮೆಲ್ಲರಿಗೂ ತಿಳಿದಿವೆಯಾದರೂ 'ರೆಡ್ ಐ ಪ್ಲೇನ್' ಪ್ರಯಾಣದ ಸಾಕಷ್ಟು ಜನರಿಗೆ ತಿಳಿದಿಲ್ಲ ಎನ್ನಬಹುದು. 'ರೆಡ್ ಐ ಫ್ಲೈಟ್ಸ್' ಅಥವಾ ಕೆಂಪು ಕಣ್ಣಿನ ವಿಮಾನಗಳು ಎನ್ನಬಹುದಾದರೂ ಅವುಗಳನ್ನು ಪ್ರಯಾಣದ ಅವಧಿಯನ್ನು ಆಧರಿಸಿ ವಿಮಾನಯಾನ ಕಾರ್ಯಾಚರಣೆಯಲ್ಲಿ ಬಳಸಲಾಗುವ ಪದವಾಗಿದೆ.

'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ರೆಡ್ ಐ ಪ್ಲೇನ್‌ಗಳು ಸಾಮಾನ್ಯವಾಗಿ ಸಂಜೆ ಅಥವಾ ರಾತ್ರಿ ವೇಳೆಯೇ ದೀರ್ಘಕಾಲದ ಪ್ರಯಾಣ ಬೆಳೆಸುವ ವಿಮಾನಗಳಾಗಿದ್ದು, ಈ ವಿಮಾನಗಳು ಮರುದಿನ ಬೆಳಗಿನ ಜಾವ ತಮ್ಮ ಗಮ್ಯಸ್ಥಾನವನ್ನು ತಲುಪುತ್ತವೆ.

'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ಸಂಜೆ ಅಥವಾ ರಾತ್ರಿಯಲ್ಲಿ ಹೊರಟು ಬೆಳಗಿನ ಜಾವ ಮತ್ತೊಂದು ಸ್ಥಳವನ್ನು ತಲುಪುವ ವಿಮಾನಗಳನ್ನು ವಿಮಾನಯಾನ ಕಾರ್ಯಾಚರಣೆಯಲ್ಲಿ ರೆಡ್ ಐ ಪ್ಲೇನ್ ಎಂದು ಕರೆಯುವ ರೂಢಿಯಿದ್ದು, ಸಾಮಾನ್ಯವಾಗಿ ನೀವು ಮಲಗಬೇಕಾದ ಸಮಯದಲ್ಲಿ ವಿಮಾನದಲ್ಲಿ ಹಾರುತ್ತಿದ್ದರೆ ಅವುಗಳನ್ನು ರೆಡ್ ಐ ಪ್ಲೇನ್ ಎಂದು ಕರೆಯಬಹುದು.

'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ಬಹುತೇಕ ರೆಡ್ ಐ ವಿಮಾನಗಳು ರಾತ್ರಿ 9 ಗಂಟೆಯ ನಂತರ ಹೊರಟು ಮರುದಿನ ಬೆಳಿಗ್ಗೆ 5 ಅಥವಾ 6 ಗಂಟೆಗೆ ಗಮ್ಯಸ್ಥಾನಕ್ಕೆ ಆಗಮಿಸಲಿದ್ದು, ಈ ವಿಮಾನಗಳನ್ನು ರೆಡ್ ಐ ಪ್ಲೇನ್ ಎಂದು ಕರೆಯಲು ಒಂದು ಮುಖ್ಯ ಕಾರಣವಿದೆ.

'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ವಿಮಾನಯಾನ ಸಮಯದಲ್ಲಿ ಎಲ್ಲರಿಗೂ ಆರಾಮವಾಗಿ ಮಲಗಲು ಸಾಧ್ಯವಿಲ್ಲ. ಹಾರಾಟದ ಸಮಯದಲ್ಲಿ ಚೆನ್ನಾಗಿ ನಿದ್ದೆ ಮಾಡುವವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು. ಅದರಲ್ಲೂ ರಾತ್ರಿಯ ವಿಮಾನಗಳಾದರೆ ಸುಖಕರ ನಿದ್ದೆ ದೂರದ ಮಾತು ಎನ್ನಬಹುದು.

'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ಯಾಕೆಂದರೆ ವಿಮಾನಯಾನವು ಕೆಲವರಿಗೆ ಕುತುಹೂಲವಾಗಿ ಕಂಡರೆ ಇನ್ನು ಕೆಲವರಿಗೆ ಮನಸ್ಸಿನಲ್ಲಿರುವ ಭಯಗಳು ರಾತ್ರಿಯ ಪ್ರಯಾಣದ ಸುಖನಿದ್ರೆಯನ್ನು ಕಸಿದುಕೊಳ್ಳಬಹುದು. ಇದರಿಂದಾಗಿ ಮರುದಿನ ಬೆಳಗ್ಗೆ ವಿಮಾನದಿಂದ ಇಳಿಯುವಾಗ ಅಂತವರ ಕಣ್ಣುಗಳು ತುಂಬಾ ಕೆಂಪಾಗಿರುತ್ತವೆ. ಇದನ್ನೇ ವಿಮಾನಯಾನ ಭಾಷೆಯಲ್ಲಿ ರೆಡ್ ಐ ಪ್ಲೇನ್ ಬಳಕೆಯು ರೂಢಿಯಲ್ಲಿದೆ.

'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ರೆಡ್ ಐ ಪ್ಲೇನ್ ಹೆಚ್ಚಾಗಿ ಅಂತರಾಷ್ಟ್ರೀಯ ವಿಮಾನಗಳಾಗಿದ್ದು, ದೀರ್ಘಕಾಲದ ಪ್ರಯಾಣದ ನಂತರ ಒಂದು ದೇಶದಿಂದ ಇನ್ನೊಂದು ದೇಶದಕ್ಕೆ ಪ್ರಯಾಣ ಬೆಳೆಸಿದಾಗ ಸಮಯದ ವ್ಯತ್ಯಾಸವು ಕೂಡಾ ಪ್ರಯಾಣಿಕರಿಗೆ ಆರಂಭದಲ್ಲಿ ತುಸು ನಿದ್ರಾಹೀನತೆ ಉಂಟಾಗುತ್ತದೆ.

'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ಈ ಎಲ್ಲಾ ಕಾರಣಗಳಿಂದ ರೆಡ್ ಐ ಪ್ಲೇನ್‌ ಪದ ಬಳಕೆಯು ರೂಢಿಯಲ್ಲಿದ್ದು, ಅದಾಗ್ಯೂ ರೆಡ್ ಐ ಪ್ಲೇನ್‌ಗಳಲ್ಲಿ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುವ ಮತ್ತು ಪ್ರಯಾಣಿಕರಿಗೆ ಯಾವುದೇ ಅಯಾಸವಾಗದಂತೆ ವಿಶ್ವದರ್ಜೆ ಸವಲತ್ತುಗಳನ್ನು ಒದಗಿಸುವ ಹಲವಾರು ವಿಮಾನಯಾನ ಸಂಸ್ಥೆಗಳಿವೆ.

'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ಆದರೆ ರೆಡ್ ಐ ಪ್ಲೇನ್‌‌ನಲ್ಲಿ ಯಾವುದೇ ರೀತಿಯ ಗುಣಮಟ್ಟದ ಸೇವೆಗಳನ್ನು ಪಡೆದುಕೊಂಡರೂ ನಿಮ್ಮ ಪ್ರಯಾಣದ ಯೋಜನೆಯು ಗೊಂದಲಮಯವಾಗಿದ್ದರೆ ನಿದ್ರಾಹೀನತೆಗೆ ಕಾರಣವಾಗಬಹುದಾಗಿದ್ದು, ವಿಮಾನಯಾನ ಪ್ರಯಾಣವನ್ನು ಸುಖಕರವಾಗಿಸಲೂ ಪ್ರಯಾಣ ಮಾಡುವ ಮುನ್ನ ಪೂರ್ವಯೋಜನೆಯೊಂದಿಗೆ ಸಿದ್ದವಾಗಿರಬೇಕು.

'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ಮೊದಲನೆಯದಾಗಿ ವಿಮಾನಯಾನಗಳ ಸಂದರ್ಭದಲ್ಲಿ ಬೆಚ್ಚಗಿನ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸುವುದು ಬಹಳ ಮುಖ್ಯವಾಗಿರುತ್ತದೆ. ಸುಂದರವಾಗಿ ಕಾಣುವುದಕ್ಕಿಂತ ಆರಾಮದಾಯಕವಾದ ಬಟ್ಟೆಗಳು ನಿಮ್ಮ ದೀರ್ಘಕಾಲದ ಕಾಲದ ಪ್ರಯಾಣಕ್ಕೆ ಸೂಕ್ತವಾಗಿದ್ದು, ಯಾವುದೇ ಗೊಂದಲಗಳಿಲ್ಲದೆ ಪ್ರಯಾಣ ಬೆಳೆಸಬಹುದು.

'ರೆಡ್ ಐ ಪ್ಲೇನ್' ಪ್ರಯಾಣದ ಬಗೆಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯಿದು..

ಜೊತೆಗೆ ದೀರ್ಘಕಾಲದ ಪ್ರಯಾಣದ ವೇಳೆ ರಾತ್ರಿ ವಿಶ್ರಾಂತಿಯಾಗಿ ವಿಮಾನಯಾನ ಸಂಸ್ಥೆಗಳು ಉತ್ತಮವಾದ ಹೊದಿಕೆಗಳನ್ನು ನೀಡಿದರೂ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಹೊದಿಕೆ ಕೂಡಾ ತೆಗೆದುಕೊಂಡು ಹೋಗಬಹುದಾಗಿದ್ದು, ಈ ಎಲ್ಲಾ ಪೂರ್ವಸಿದ್ದತೆಗಳು ನಿಮ್ಮ ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸುತ್ತವೆ.

Most Read Articles

Kannada
Read more on ವಿಮಾನ plane
English summary
Interesting facts about red eye flights
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X