ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

By Nagaraja

'ಅಗ್ನಿ' ಕ್ಷಿಪಣಿ ಭಾರತದ ಖಂಡಾಂತರ ಸಮರ ಕ್ಷಿಪಣಿಯಾಗಿದ್ದು, ಪ್ರಕೃತಿಯ ಐದು ಅಂಶಗಳನ್ನು ಒಳಗೊಂಡಿರುವ ಅಗ್ನಿ ದೇವತೆಯ ಹೆಸರನ್ನಿಡಲಾಗಿದೆ. ಅಗ್ನಿ ಕ್ಷಿಪಣಿ ದೀರ್ಘ ವ್ಯಾಪ್ತಿಯ ಪರಮಾಣು ಸಾಮರ್ಥ್ಯದ ಕ್ಷಿಪಣಿಯಾಗಿದ್ದು, ನೆಲದಿಂದ ನೆಲಕ್ಕೆ ಖಂಡಾಂತರ ಅಣ್ವಸ್ತ್ರ ದಾಳಿ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.

Also Read: ಭಾರತದ ವಾಯು ಪ್ರದೇಶದ ಸುರಕ್ಷತೆ ಕಾಯುವ ಯುದ್ಧ ವಿಮಾನಗಳು ಮುಂದಕ್ಕೆ ಓದಿ

1999ನೇ ಇಸವಿಯಲ್ಲಿ ಮೊದಲ ಬಾರಿಗೆ ಭಾರತೀಯ ಸೇನೆಯ ಸೇವೆಗೆ ಲಭ್ಯವಾಗಿದ್ದ ಅಗ್ನಿ ಕ್ಷಿಪಣಿಯನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಭಾರತ್ ಡೈನಮಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ರಕ್ಷಣಾ ವಿಭಾಗವನ್ನು ಮತ್ತಷ್ಟು ಬಲಾಢ್ಯಗೊಳಿಸಿರುವ ಅಗ್ನಿ ಈಗಾಗಲೇ ನಾಲ್ಕು ಶ್ರೇಣಿಗಳನ್ನು ತಲುಪಿದ್ದು, ಅಗ್ನಿ 5 ಪರೀಕ್ಷಾರ್ಥ ಹಂತದಲ್ಲೂ ಅಗ್ನಿ 6 ಅಭಿವೃದ್ಧಿ ಹಂತದಲ್ಲಿದೆ. ಇದು ಭವಿಷ್ಯದಲ್ಲಿ ಭಾರತ ಅಶ್ವಶಕ್ತಿಯಾಗಿ ಬೆಳೆದು ಬರಲು ಸಹಕಾರಿಯಾಗಲಿದೆ.

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

ಅಗ್ನಿ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಅಭಿವೃದ್ದಿಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನಿರ್ಣಾಯಕ ಪಾತ್ರ ವಹಿಸಿದ್ದರು.

ಅಗ್ನಿ 1

ಅಗ್ನಿ 1

ಒಂದು ಸಾವಿರ ಕೆ.ಜಿ ಪರಮಾಣು ಶಸ್ತ್ರವನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಅಗ್ನಿ 1 ಒಟ್ಟು 1250 ಕೀ.ಮೀ. ದೂರ ಹಾರುವ ಸಾಮರ್ಥ್ಯ ಹೊಂದಿದೆ. 12 ಟನ್ ಭಾರತದ ಅಗ್ನಿ 1 ಅಣ್ವಸ್ತ್ರ ಕ್ಷಿಪಣಿ 15 ಮೀಟರ್ ಉದ್ದವನ್ನು ಹೊಂದಿದ್ದು, ಎರಡು ಹಂತಗಳಲ್ಲಾಗಿ ದಾಳಿ ನಡೆಸುತ್ತದೆ. ಇದನ್ನು ಮೊದಲ ಬಾರಿಗೆ 1989 ಹಾಗೂ ಬಳಿಕ 2002ರಲ್ಲೂ ಟೆಸ್ಟ್ ಮಾಡಲಾಯಿತು.

ಅಗ್ನಿ 2

ಅಗ್ನಿ 2

ಅಗ್ನಿ ಕ್ಷಿಪಣಿ ಸರಣಿಯಲ್ಲಿ ಎರಡನೇಯದಾಗಿರುವ ಅಗ್ನಿ 2 ಗರಿಷ್ಠ 3000 ಕೀ.ಮೀ. ವರೆಗೂ ಹಾರುತ್ತದೆ. 18 ಟನ್ ತೂಕದ ಈ ಶಕ್ತಿಶಾಲಿ ಕ್ಷಿಪಣಿ 20 ಮೀಟರ್ ಉದ್ದವಿದ್ದು, ಎರಡು ಹಂತಗಳಲ್ಲಿ ಹಾರುತ್ತದೆ. ಇದನ್ನು 2013 ಎಪ್ರಿಲ್ 7ರಂದು ಒರಿಸ್ಸಾದಲ್ಲಿ ಯಶಸ್ವಿ ಪ್ರಯೋಗ ನಡೆಸಲಾಯಿತು.

ಅಗ್ನಿ 3

ಅಗ್ನಿ 3

ಮೊದಲ ಬಾರಿಗೆ 2006ರಲ್ಲಿ ಪರೀಕ್ಷಾರ್ಥ ಪ್ರಯೋಗ ಹಮ್ಮಿಕೊಂಡಿರುವ ಅಗ್ನಿ 3 ಪರಮಾಣ ಸಾಮರ್ಥ್ಯ ಖಂಡಾಂತರ ಕ್ಷಿಪಣಿ 5,000 ಕೀ.ಮೀ. ವ್ಯಾಪ್ತಿಯನ್ನು ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. 1.5 ಟನ್ ಪರಮಾಣು ಶಸ್ತ್ರ ಭಾರವನ್ನು ಹೊರುವ ಸಾಮರ್ಥ್ಯದ ಅಗ್ನಿ 3, ವಿಶ್ವದಲ್ಲೇ ಅತ್ಯಂತ ನಿಖರ ಖಂಡಾಂತರ ಮಿಸೈಲ್ ಎಂಬ ಗೌರವಕ್ಕೂ ಪಾತ್ರವಾಗಿದೆ.

ಅಗ್ನಿ 4

ಅಗ್ನಿ 4

ಪ್ರಾರಂಭದಲ್ಲಿ ಅಗ್ನಿ 2 ಪ್ರೈಮ್ ಎಂಬ ಹೆಸರಿನಿಂದ ಅರಿಯಲ್ಪಟ್ಟಿದ್ದ ಅಗ್ನಿ 4, ಮೊದಲ ಬಾರಿಗೆ 2011ರಲ್ಲೂ ಬಳಿಕ 201ರಲ್ಲಿ ಒರಿಸ್ಸಾದ ತೀರಾ ಪ್ರದೇಶದಲ್ಲಿ ಟೆಸ್ಟಿಂಗ್ ಮಾಡಲಾಗಿತ್ತು. 4,000 ಕೀ.ಮೀ. ದೂರದ ವರೆಗೂ ಹಾರುವ ಅಗ್ನಿ 4, ಒಂದು ಟನ್ ಪರಮಾಣು ಶಸ್ತ್ರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಇದು ಕೂಡಾ ಎರಡು ಹಂತದ ಕ್ಷಿಪಣಿಯಾಗಿದ್ದು, 20 ಮೀಟರ್ ಉದ್ದ ಹಾಗೂ 17 ಟನ್ ಭಾರವನ್ನು ಹೊಂದಿದೆ.

ಅಗ್ನಿ 5

ಅಗ್ನಿ 5

ಅಗ್ನಿ ಕ್ಷಿಪಣಿ ಸಾಲಿಗೆ ತಾಜಾ ಸೇರ್ಪಡೆಯಾಗಿರುವ ಅಗ್ನಿ 5, 8,000 ಕೀ.ಮೀ. ದೂರದ ವರೆಗೂ ಅಂದರೆ ಇಡೀ ಯುರೋಪ್ ಖಂಡಕ್ಕೆ ದಾಳಿವಷ್ಟು ಶಕ್ತವಾಗಿದೆ. ಮೊದಲ ಬಾರಿಗೆ 2012, ಬಳಿಕ 2013 ಹಾಗೂ ಕೊನೆಯ ಬಾರಿ 2015 ಜನವರಿಯಲ್ಲಿ ಒರಿಸ್ಸಾದ ವೀಲರ್ಸ್ ದ್ವೀಪದಲ್ಲಿ ಇದರ ಯಶಸ್ವಿ ಪ್ರಯೋಗವನ್ನು ಹಮ್ಮಿಕೊಳ್ಳಲಾಗಿತ್ತು.

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

17.5 ಮೀಟರ್ ಉದ್ದದ ಅಗ್ನಿ 5 ಮಿಸೈಲ್, 49 ಟನ್ ಭಾರ ಹೊಂದಿದ್ದು, ದೇಶದಲ್ಲಿರುವ ಪೈಕಿ ಅತಿ ದೂರದ ಖಂಡಾಂತರ ಕ್ಷಿಪಣಿ ಇದಾಗಿದೆ. ಇದನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

ಯಾವುದೇ ದಿಕ್ಕಿಗೂ ಬೇಕಾದರೂ ವಿನಾಶಕಾರಿ ಪರಮಾಣು ದಾಳಿ ಸಾಮರ್ಥ್ಯವನ್ನು ಹೊಂದಿದ್ದು, ಪಶ್ಚಿಮದಲ್ಲಿ ಯುರೋಪ್ ಹಾಗೂ ಚೀನಾದಲ್ಲಿ ಚೀನಾವನ್ನು ಹೊಡೆದುರುಳಿಸಬಹುದಾಗಿದೆ.

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

1.1 ಟನ್ ಭಾರವನ್ನು ಹೊರುವ ಹೊರತಾಗಿಯೂ ಹೈ ಎಂಡ್ ಮೆಷಿನ್ ಗನ್ ಹಾಗೂ ಬುಲೆಟ್ ಫೈರ್ ಗಿಂತಲೂ ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

ಅಗ್ನಿ 5 ಕ್ಷಿಪಣಿಯ ವಿಶೇಷತೆ ಏನೆಂದರೆ ಪ್ರಧಾನ ಮಂತ್ರಿ ಅವರ ಆದೇಶವಿದ್ದರೆ ಮಾತ್ರ ಇದರ ಪ್ರಯೋಗ ಮಾಡಬಹುದಾಗಿದೆ. ಇದು ಪ್ರಧಾನಿಯ ವಿಶೇಷ ಹಕ್ಕುಗಳ ಪರಿಧಿಗೆ ಒಳಪಟ್ಟಿರುತ್ತದೆ.

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

ಅಗ್ನಿ 5 ಪರೀಕ್ಷೆಯೊಂದಿಗೆ ಭಾರತವೀಗ ರಷ್ಯಾ, ಚೀನಾ, ಅಮೆರಿಕ ಹಾಗೂ ಫ್ರಾನ್ಸ್‌ಗಳಂತಹ ಎಲೈಟ್ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

20 ಮೀಟರ್ ಉದ್ದದ ಈ ಕ್ಷಿಪಣಿಯಲ್ಲಿ ನಿಖರವಾದ ರಿಂಗ್ ಲೇಸರ್ ಗೈರೊ ತಳಹದಿಯ ಇಂಟರ್ಷಿಯಲ್ ನೇವಿಗೇಷನ್ ಸಿಸ್ಟಂ (ಆರ್‌ಐಎನ್‌ಎಸ್) ಮತ್ತು ಮುಂದುವರಿದ ಮೈಕ್ರೊ ನೇವಿಗೇಷನ್ ಸಿಸ್ಟಂ (ಎಂಐಎನ್‌ಎಸ್) ಬಳಕೆ ಮಾಡಲಾಗಿದೆ. ಇದು ಗುರಿ ಅತ್ಯಂತ ನಿಖರವಾಗಿ ತಲುಪಲು ನೆರವಾಗಲಿದೆ.

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಅತಿ ದೊಡ್ಡ ಪರಮಾಣು ಕ್ಷಿಪಣಿ ಇದಾಗಿದ್ದು, ಭಾರತೀಯ ಸೇನೆಯೀಗ ಇದಕ್ಕೂ ಬಲಿಷ್ಠವಾದ ಅಗ್ನಿ 6ರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಭಾರತವು ಅಕಾಶ್, ಪೃಥ್ವಿ, ನಾಗಗ್ ಹಾಗೂ ತ್ರಿಶೂಲ್ ಗಳಂತಹ ತನ್ನದೇ ಆದ ವಿವಿಧ ವ್ಯಾಪ್ತಿ ಸಾಮರ್ಥ್ಯದ ಕ್ಷಿಪಣಿಗಳನ್ನು ಹೊಂದಿದ್ದರೂ ಇವೆಲ್ಲದಕ್ಕೂ ಮಿಗಿಲಾಗಿ ಅಗ್ನಿ ಕ್ಷಿಪಣಿ ಅತಿ ಬಲಿಷ್ಠವಾಗಿ ಗುರುತಿಸಿಕೊಂಡಿದೆ.

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

ಆಗ್ನಿ-1 ವ್ಯಾಪ್ತಿ: 700ರಿಂದ 1250 ಕೀ.ಮೀ. (ಸೇವೆಯಲ್ಲಿದೆ)

ಆಗ್ನಿ-2 ವ್ಯಾಪ್ತಿ: 2,000-3000 ಕೀ.ಮೀ. (ಸೇವೆಯಲ್ಲಿದೆ)

ಆಗ್ನಿ-3 ವ್ಯಾಪ್ತಿ: 3,500-5,000 ಕೀ.ಮೀ. (ಸೇವೆಯಲ್ಲಿದೆ)

ಆಗ್ನಿ-4 ವ್ಯಾಪ್ತಿ: 3,000-4,000 ಕೀ.ಮೀ. (ಸೇವೆಯಲ್ಲಿದೆ)

ಆಗ್ನಿ-5 ವ್ಯಾಪ್ತಿ: 5,000-8000 ಕೀ.ಮೀ. (ಪರೀಕ್ಷಾರ್ಥ ಪ್ರಯೋಗ ಹಂತದಲ್ಲಿದೆ)

ಆಗ್ನಿ-6 ವ್ಯಾಪ್ತಿ: 8,000-10,000 ಕೀ.ಮೀ. (ಅಭಿವೃದ್ಧಿ ಹಂತದಲ್ಲಿದೆ)

ಇವನ್ನೂ ಓದಿ

ಗಣ್ಯರಿಗೆ ಶ್ರೀರಕ್ಷೆಯಾದ ಟಾಪ್ 10 ಆರ್ಮರ್ಡ್ ಕಾರ್ಸ್ ಮುಂದಕ್ಕೆ ಓದಿ

Most Read Articles

Kannada
English summary
Interesting things about agni missiles
Story first published: Wednesday, November 4, 2015, 10:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X