ವಿಮಾನಗಳಿಗೆ ಸಂಬಂಧಪಟ್ಟ 16 ಸ್ವಾರಸ್ಯಕರ ಸತ್ಯಗಳು!

Written By:

ಆಧುನಿಕ ಜಗತ್ತಿನ ವಿಮಾನಯಾನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇತರೆ ಸಂಚಾರ ವಾಹಕಗಳನ್ನು ಹೋಲಿಸಿದಾಗ ವಿಮಾನಯಾನ ಹೆಚ್ಚು ಸುರಕ್ಷಿತವೆನಿಸಿಕೊಂಡಿದ್ದು, ಕೆಲವೇ ಗಂಟೆಯೊಳಗೆ ಸಾವಿರಾರು ಕೀ.ಮೀ. ದೂರವನ್ನು ಕ್ರಮಿಸಬಹುದಾಗಿದೆ. ವಿಮಾನಯಾನದ ಬಗ್ಗೆ ಸಾಕಷ್ಟು ಕಟ್ಟುಕಥೆಗಳು ಅಲೆದಾಡುತ್ತಲೇ ಇದೆ. ಈ ಸಂಬಂಧ ನೀವು ಅರಿತುಕೊಳ್ಳಬೇಕಾದ ಕೆಲವೊಂದು ಸ್ವಾರಸ್ಯಕರ ಸತ್ಯಗಳ ಬಗ್ಗೆ ಇಲ್ಲಿ ವಿವರಣೆಯನ್ನು ಕೊಡಲಿದ್ದೇವೆ.

01. ಮೊಬೈಲ್ ಫೋನ್ ಬಳಕೆ ಹಾನಿಕಾರಕವೇ?

01. ಮೊಬೈಲ್ ಫೋನ್ ಬಳಕೆ ಹಾನಿಕಾರಕವೇ?

ವಿಮಾನ ಹಾರಾಟದ ವೇಳೆ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಲು ಗಗನಸಖಿಯರು ಸೂಚಿಸುತ್ತಾರೆ. ಅಷ್ಟಕ್ಕೂ ವಿಮಾನಗಳ ಹಾರಾಟದ ವೇಳೆ ಮೊಬೈಲ್ ಸಂಕೇತಗಳು ಸಮಸ್ಯೆಯನ್ನುಂಟು ಮಾಡುತ್ತದೆಯೇ ಎಂಬುದು ಆಸಕ್ತಿಯನ್ನು ಮೂಡಿಸುತ್ತದೆ. ಒಂದೆರಡು ಫೋನ್ ಗಳಿಂದಾಗಿ ತೊಂದರೆ ಕಾಡದು. ಆದರೆ ಎಲ್ಲ ಪ್ರಯಾಣಿಕರು ಸ್ವಿಚ್ ಆನ್ ಮಾಡಿಟ್ಟುಕೊಳ್ಳುವುದರಿಂದ ಸಂಕೇತ ಪ್ರವಾಹಕ್ಕೆ ತೊಡಕಾಗುವ ಭೀತಿಯಿರುತ್ತದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಮೊಬೈಲ್ ಮತ್ತು ಎಲೆಕ್ಟ್ರಿಕ್ ಉಪಕರಣಗಳನ್ನು ಸ್ವಿಚ್ ಆಫ್ ಮಾಡಿಡಲು ಸೂಚಿಸಲಾಗುತ್ತದೆ.

02. 13ನೇ ಸಾಲಿಗೆ ಕತ್ತರಿ?

02. 13ನೇ ಸಾಲಿಗೆ ಕತ್ತರಿ?

ವಿಜ್ಞಾನ ಎಷ್ಟೇ ಪ್ರಗತಿ ಸಾಧಿಸಿದರೂ ಮೂಢ ನಂಬಿಕೆಯಲ್ಲಿ ನಂಬಿಕೆಯನ್ನಿಡುವ ನಮ್ಮ ಸಮಾಜದಲ್ಲಿ ಅನೇಕ ಮಂದಿ 13ನೇ ಸಾಲು ಅಥವಾ ಸೀಟಿನಲ್ಲಿ ಪ್ರಯಾಣಿಸಲು ನಿರಾಕರಿಸುತ್ತಾರೆ. ಇದರಿಂದಾಗಿ ಬಹುತೇಕ ವಿಮಾನಗಳಲ್ಲಿ 13ನೇ ಸಾಲನ್ನು ಹೊರತುಪಡಿಸಲಾಗುತ್ತದೆ. ಇನ್ನೊಂದೆಡೆ ಲುಂಫ್ತಾಸಾದಲ್ಲಿ 17ನೇ ಸಾಲಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ.

3. ಧೂಮಪಾನ ನಿಷೇಧವಲ್ಲವೇ ?

3. ಧೂಮಪಾನ ನಿಷೇಧವಲ್ಲವೇ ?

ವಿಮಾನಗಳಲ್ಲಿ ಧೂಮಪಾನ ನಿಷೇಧ ಮಾಡಿರುವ ದಶಕಗಳ ಬಳಿಕವು ಶೌಚಾಲಯಗಳಲ್ಲಿ ಬೂದಿಯನ್ನು ಉದುರಿಸುವ ತಟ್ಟೆಯನ್ನಿಡಲಾಗುತ್ತದೆ. ವಿಮಾನ ಸುರಕ್ಷತೆಯ ನಿಟ್ಟಿನಲ್ಲಿ ಇಂದಿಗೂ ಇದನ್ನು ಅನುಸರಿಸಲಾಗುತ್ತದೆ.

4. ಬರ್ಮುಡಾ ಟ್ರಯಾಂಗಲ್ ಸತ್ಯಾಸತ್ಯತೆ

4. ಬರ್ಮುಡಾ ಟ್ರಯಾಂಗಲ್ ಸತ್ಯಾಸತ್ಯತೆ

ಬರ್ಮುಡಾ ಟ್ರಯಾಂಗಲ್ ಪ್ರದೇಶದಲ್ಲಿ ಹಾರಾಡಿದ 1,000ದಷ್ಟು ವಿಮಾನಗಳು ಅಪ್ರತ್ಯಕ್ಷಗೊಂಡಿದೆ. ಇಂತಹ ಹಲವು ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದರೂ ಸಹ ಪೈಲಟ್ ಗಳು ಮಾತ್ರ ಬರ್ಮುಡಾ ಟ್ರಯಾಂಗಲ್ ಮೇಲ್ಗಡೆಯಾಗಿ ಹಾರಾಡಲು ಧೈರ್ಯವನ್ನು ತೋರುತ್ತಿದ್ದಾರೆ.

05. ಕ್ಯಾಬಿನ್ ಸಿಬ್ಬಂದಿ

05. ಕ್ಯಾಬಿನ್ ಸಿಬ್ಬಂದಿ

ತಲೆ ಮೇಲಿನ ಕಂಪಾರ್ಟ್ ಮೇಂಟ್ ಮತ್ತು ತುರ್ತು ಪರಿಸ್ಥಿತಿಯಲ್ಲಿ ಖಾಲಿ ಮಾಡುವ ಸ್ಲೈಡ್ ಗಳನ್ನು ಕೈಯಿಂದಲೇ ನಿರ್ವಹಿಸುವ ನಿಟ್ಟಿನಲ್ಲಿ ಕ್ಯಾಬಿನ್ ಸಿಬ್ಬಂದಿಗಳಾಗಿ ನೇಮಕಗೊಳ್ಳುವ ವ್ಯಕ್ತಿಗಳು ಕನಿಷ್ಠ 5.2 ಇಂಚುಗಳ ಉದ್ದವನ್ನು ಹೊಂದಿರಬೇಕು. ಆದರೆ ಈ ವ್ಯಕ್ತಿಗಳ ತೂಕಗಳಿಗೆ ಯಾವುದೇ ಪರಿಮಿತಿಯಿರುವುದಿಲ್ಲ.

06. ಮಿಂಚು ಬಡಿದರೆ ವಿಮಾನ ಪತನವಾಗುವುದೇ?

06. ಮಿಂಚು ಬಡಿದರೆ ವಿಮಾನ ಪತನವಾಗುವುದೇ?

ವರದಿಯೊಂದರ ಪ್ರಕಾರ ವರ್ಷವೊಂದರಲ್ಲಿ ವಾಣಿಜ್ಯ ವಿಮಾನಕ್ಕೆ ವರ್ಷದಲ್ಲಿ ಒಂದು ಬಾರಿಯಾದರೂ ಮಿಂಚಿನ ಆಘಾತ ಎದುರಾಗುತ್ತದೆ. ಆದರೆ ಮಿಂಚು ಬಡಿತದಿಂದ ವಿಮಾನ ಪತನವಾಗಲಿದೆ ಎಂಬುದು ತಪ್ಪಾದ ಕಲ್ಪನೆಯಾಗಿದೆ.

07. ಗುಂಡಿನ ದಾಳಿ

07. ಗುಂಡಿನ ದಾಳಿ

ಅತೀವ ಭದ್ರತೆಯನ್ನು ಕಾಪಾಡಿಕೊಳ್ಳುವುದರಿಂದ ವಿಮಾನಗಳಿಗೆ ಗುಂಡಿನ ದಾಳಿ ಭೀತಿ ಸಾಧ್ಯತೆ ಕಡಿಮೆಯಾಗಿದೆ. ಹಾಗಿದ್ದರೂ ಹಾರಾಟದ ವೇಳೆ ವಿಮಾನದ ಗಾಜುಗಳಿಗೆ ಗುಂಡೇಟು ತಗುಲಿದ್ದಲ್ಲಿ ಹೊರಗಿನಿಂದ ಬಲವಾಗಿ ಬೀಸುವ ಗಾಳಿ ಒಳನುಗ್ಗುವ ಭೀತಿಯಿರುತ್ತದೆ.

08. ಎಮರ್ಜನ್ಸಿ ಮಾಸ್ಕ್

08. ಎಮರ್ಜನ್ಸಿ ಮಾಸ್ಕ್

ಎಮರ್ಜನ್ಸಿ ಮಾಸ್ಕ್ ಮುಖಾಂತರ ವಿಮಾನಗಳಲ್ಲಿ ಆಮ್ಲಜನಕ ಪೂರೈಕೆ ಮಾಡಲಾಗುತ್ತದೆ. ಪ್ರಯಾಣದ ವೇಳೆ ಉಸಿರಾಟದ ತೊಂದರೆ ಎದುರಾದ್ದಲ್ಲಿ ಇದರ ಸಹಾಯ ಪಡೆಯಬಹುದಾಗಿದೆ.

09. ಬೇಗನೇ ಮತ್ತೇರಬಹುದೇ?

09. ಬೇಗನೇ ಮತ್ತೇರಬಹುದೇ?

ಎತ್ತರದಲ್ಲಿ ಹಾರಾಡುವಾಗ ಆಮ್ಲಜನಕದ ಕೊರತೆಯಿರುವುದರಿಂದ ಮದ್ಯಪಾನ ಸೇವಿಸಿದ್ದಲ್ಲಿ ಬಹುಬೇಗನೇ ಮತ್ತೇರಬಹುದೇ ಎಂಬುದರ ಬಗ್ಗೆ ಮಾಡಿರುವ ಅಧ್ಯಯನದಲ್ಲಿ ಇದರಲ್ಲೇನು ದೊಡ್ಡ ಬದಲಾವಣೆ ಕಂಡುಬಂದಿಲ್ಲ ಎಂಬುದು ತಿಳಿದು ಬಂದಿದೆ.

10. ಅವಘಡ ಸಾಧ್ಯತೆ

10. ಅವಘಡ ಸಾಧ್ಯತೆ

ವಿಮಾನಗಳು ಹಲವಾರು ಕಾರಣಗಳಿಂದಾಗಿ ಅವಘಡಕ್ಕೊಳಬಹುದಾಗಿದೆ. ಈ ಹಿನ್ನಲೆಯಲ್ಲಿ ಸುರಕ್ಷಿತವಾದ ಸೀಟುಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಇನ್ನು ತುರ್ತು ಪರಿಸ್ಥಿತಿಯಲ್ಲಿ ಪಾರಾಗಲು ಬಹಳ ಹತ್ತಿರದಲ್ಲಿ ಎಮರ್ಜನ್ಸಿ ಬಾಗಿಲುಗಳನ್ನು ಜೋಡಿಸಲಾಗಿದೆ.

11. ವಾಯು ವಲಯ

11. ವಾಯು ವಲಯ

ವಿಮಾನದಲ್ಲಿ ಹೈ ಎಫಿಷಿಯನ್ಸಿ ಪಾರ್ಟಿಕಲ್ ಏರ್ ಫಿಲ್ಟರ್ಸ್ ವಲಯವನ್ನು ಲಗತ್ತಿಸಲಾಗಿದ್ದು, ಗಾಳಿಯನ್ನು ರಿಸೈಕಲ್ ಮಾಡಿ ಫಿಲ್ಟರ್ ಮಾಡಲಾಗುತ್ತದೆ. ತನ್ಮೂಲಕ ಶುದ್ಧ ವಾಯು ಉಸಿರಾಡುವಂತೆ ನೆರವಾಗುತ್ತದೆ.

12. ಬಿಡುವಿಲ್ಲದ ವಿಮಾನ ನಿಲ್ದಾಣ

12. ಬಿಡುವಿಲ್ಲದ ವಿಮಾನ ನಿಲ್ದಾಣ

ಜಗತ್ತಿನ ಅತಿ ಬಿಡುವಿಲ್ಲದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಚಿಕಾಗೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿ 37 ಸೆಕೆಂಡುಗಳಿಗೊಂದು ವಿಮಾನ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಆಗುತ್ತಿದೆ.

 13. ವಿಷಾಹಾರ

13. ವಿಷಾಹಾರ

ವಿಷಾಹಾರವನ್ನು ತಪ್ಪಿಸುವ ನಿಟ್ಟಿನಲ್ಲಿ ಪೈಲಟ್ ಮತ್ತು ಸಹ ಪೈಲಟ್ ಗಳಿಗೆ ವಿಭಿನ್ನವಾದ ಆಹಾರ ಕ್ರಮವನ್ನು ಅನುಸರಿಸಲಾಗುತ್ತದೆ.

14. ಲ್ಯಾಂಡಿಂಗ್

14. ಲ್ಯಾಂಡಿಂಗ್

ರಾತ್ರಿ ವೇಳೆಯಲ್ಲಿ ವಿಮಾನ ಲ್ಯಾಂಡಿಂಗ್ ಆದಾಗ ಹೊರಗಡೆ ಕಗ್ಗತ್ತಲು ಆವರಿಸಿರುವುದರಿಂದ ನಿಮ್ಮ ಕಣ್ಣುಗಳು ಆಗಲೇ ಪರಿಸ್ಥಿತಿಗೆ ಹೊಂದಿಕೊಳ್ಳಲು ವಿಮಾನದೊಳಗೆ ಬೆಳಕನ್ನು ಮಂಕು ಮಾಡಲಾಗುತ್ತದೆ.

15. ನಿದ್ರೆ

15. ನಿದ್ರೆ

ಮಗದೊಂದು ಬೆಚ್ಚಿ ಬೀಳಿಸುವ ಸತ್ಯ ಏನೆಂದರೆ ದೀರ್ಘ ದೂರದ ಯಾನದ ವೇಳೆಯಲ್ಲಿ ಇರ್ವರಲ್ಲಿ ಓರ್ವ ಪೈಲೆಟ್ ಗಾಢ ನಿದ್ರೆಗೆ ಜಾರುತ್ತಾರೆ. ಇಲ್ಲಿ ಇನ್ನಷ್ಟು ಆಸಕ್ತದಾಯಕ ವಿಚಾರ ಏನೆಂದರೆ, ಒಟ್ಟು ಸಂಚಾರ ಅವಧಿಯ ಮೂರನೇ ಒಂದರಷ್ಟು ಸಮಯದಲ್ಲಿ ಸಹ ಪೈಲಟ್ ಗಳು ನಿದ್ರೆಗೆ ಜಾರಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸುತ್ತಾರೆ.

16. ಎಂಜಿನ್ ವೈಫಲ್ಯ

16. ಎಂಜಿನ್ ವೈಫಲ್ಯ

ಎರಡೂ ಎಂಜಿನ್ ಗಳು ವೈಫಲ್ಯದ ನಡುವೆಯೂ ವಿಮಾನಗಳು 5000 ಅಡಿ ಎತ್ತರದಲ್ಲೂ 6 ನಾಟಿಕಲ್ ಮೈಲು ದೂರವನ್ನು ಸಾಗವಷ್ಟು ಸಾಮರ್ಥ್ಯವನ್ನು ಪಡೆದಿರುತ್ತದೆ.

English summary
Interesting truths and myths about flying
Story first published: Tuesday, November 15, 2016, 11:24 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark