ಮಾರ್ಷಲ್ ಆರ್ಟ್ ಸ್ಟಾರ್ ಜಾಕಿ ಚಾನ್ ಖಾಸಗಿ ಜೆಟ್

By Nagaraja

ಮಾರ್ಷಲ್ ಆರ್ಟ್ಸ್ ಚಿತ್ರಗಳ ಸ್ಟಾರ್ ಜಾಕಿ ಚಾನ್, ಹಾಂಕಾಂಗ್‌ ಮೂಲದ ಓರ್ವ ನಟ, ಚಲನಾ ನೃತ್ಯ ಸಂಯೋಜಕ, ಚಲನಚಿತ್ರೋದ್ಯಮಿ, ಹಾಸ್ಯನಟ, ನಿರ್ಮಾಪಕ, ಚಿತ್ರಕಥಾ ಲೇಖನ, ವಾಣಿಜ್ಯೋದ್ಯಮಿ, ಗಾಯಕ ಹಾಗೂ ಸಾಹಸ ಪ್ರದರ್ಶನ ನಿರ್ವಾಹಕರಾಗಿ ಗುರುತಿಸಿಕೊಂಡಿದ್ದಾರೆ.

ಜಾಕಿ ಚಾನ್ ಚಿತ್ರಗಳಲ್ಲಿ ಮಾರ್ಷಲ್ ಆರ್ಟ್ಸ್ ಹಾಗೂ ಹಾಸ್ಯ ನಟನಾ ಶೈಲಿ ಎಂಥವರಲ್ಲೂ ನಗೆಯುಕ್ಕಿಸುತ್ತದೆ. 1960ರ ದಶಕದಲ್ಲಿ ಸಿನೆಮಾ ರಂಗವನ್ನು ಪ್ರವೇಶ ಮಾಡಿರುವ 61ರ ಹರೆಯದ ಜಾಕಿ ಚಾನ್ ಇದುವರೆಗೆ 150ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ.

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ಹೀಗೆ ವಿಶ್ವ ವಿಖ್ಯಾತಿ ಪಡೆದಿರುವ ಜಾಕಿ ಚಾನ್ ತಮ್ಮ ಖಾಸಗಿ ಪಯಣ ಅಗತ್ಯಗಳಿಗಾಗಿ ಖಾಸಗಿ ಜೆಟ್ ವಿಮಾನವನ್ನೊಂದನ್ನು ಬಳಕೆ ಮಾಡುತ್ತಾರೆ. ಅದುವೇ 'ಎಂಬ್ರೇಯರ್ ಲೆಗಸಿ 650' (Embraer Legacy 650).

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ಬ್ರೆಜಿಲ್ ಮೂಲದ ವಾಣಿಜ್ಯ, ಮಿಲಿಟರಿ ಹಾಗೂ ಕಾರ್ಯ ನಿರ್ವಾಹಕ ವಿಮಾನ ನಿರ್ಮಾಣ ಸಂಸ್ಥೆಯಾಗಿರುವ ಎಂಬ್ರೇಯರ್ ಇದನ್ನು ನಿರ್ಮಿಸಿದೆ. ಅಂತೆಯೇ ಜಾಕಿ ಚಾನ್ ಸ್ವತ: ಎಂಬ್ರೇಯರ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿದ್ದಾರೆ.

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ಕೆಂಪು, ಬಿಳುಪು ಬಣ್ಣ ಮಿಶ್ರಿತ ಜಾಕಿ ಚಾನ್ ಖಾಸಗಿ ಜೆಟ್ ವಿಮಾನದಲ್ಲಿ ಮಾರ್ಷಲ್ ಆರ್ಟ್ಸ್ ಸೂಚಕವಾಗಿ ಬೃಹತ್ ಡ್ರಾಗನ್ ಲೊಗೊ ಅಂಟಿಸಲಾಗಿದೆ. ಅಲ್ಲದೆ ಕೆಲವು ವರ್ಷಗಳ ಹಿಂದೆ ಸಿಂಗಾಪುರ ಏರ್ ಶೋದಲ್ಲೂ ವಿಶೇಷ ಪ್ರದರ್ಶನ ಕಂಡಿತ್ತು.

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ಜಾಕಿ ಚಾನ್ ಅವರ ಲೆಗಸಿ 650 ವಿಮಾನವು 7223 ಕೀ.ಮೀ. ದೂರದ ವ್ಯಾಪ್ತಿಯ ವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಂದರೆ ಅವರು ಬೀಜಿಂಗ್ ನಿಂದ ದುಬೈ ವರೆಗೆ ಅಥವಾ ಹಾಂಕಾಂಗ್ ನಿಂದ ಆಸ್ಟ್ರೇಲಿಯಾ ವರೆಗೆ ನಾನ್-ಸ್ಟಾಪ್ ಆಗಿ ಸಂಚರಿಸಬಹುದಾಗಿದೆ.

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ಜಾಕಿ ಚಾನ್ ಅಗತ್ಯಗಳಿಗಾನುಸಾರವಾಗಿ ಲೆಗಸಿ 650 ವಿಮಾನದ ಒಳಮೈಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಕೆಲಸ, ಆಟ ಹಾಗೂ ಆರಾಮ ಕೊಠಡಿ.

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ಇನ್ನು ನಿರಂತರ ಇಂಟರ್ ನೆಟ್ ಸೇವೆಗಾಗಿ ವೈ-ಫೈ ಸೇವೆ ಇರಲಿದೆ. ಅಂದರೆ ವಿಮಾನದಲ್ಲೇ ಸಕಲ ರೀತಿಯ ಸೌಲಭ್ಯಗಳು ಲಭ್ಯವಾಗಲಿದೆ.

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ಎಂಬ್ರೇಯರ್ ಸಂಸ್ಥೆಯ ಬಗ್ಗೆ ಮಾತನಾಡುವುದಾದ್ದಲ್ಲಿ 2001ರಲ್ಲಿ ಕಾರ್ಯ ನಿರ್ವಾಹಕ ವಿಮಾನಯಾನ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ಅಲ್ಲದೆ ಜಾಗತಿಕವಾಗಿ ಖಾಸಗಿ ಕಾರ್ಯ ನಿರ್ವಾಹಕ ವಿಮಾನಗಳ ಪೈಕಿ ಶೇಕಡಾ 20ಕ್ಕೂ ಹೆಚ್ಚು ಮಾರಾಟವನ್ನು ವಶಪಡಿಸಿಕೊಂಡಿದೆ.

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ನೂತನ ಎಂಬ್ರೇಯರ್ ಲೆಗಸಿ 650 ವಿಮಾನದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿರುವ ಜಾಕಿ ಚಾನ್, "ಇದರಲ್ಲಿನ ಪಯಣವು ತಮ್ಮ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ಒಳಗಡೆಯ ಕ್ಯಾಬಿನ್ ಪ್ರದೇಶದಲ್ಲಿ ಸಾಕಷ್ಟು ಸ್ಥಳಾವಕಾಶ ಒದಗಿಸಲಾಗಿದ್ದು, ದೂರ ಪ್ರಯಾಣದ ವೇಳೆ ಸೀಟುಗಳನ್ನು ಬಾಗಿಸುವ ಮೂಲಕ ವಿಶ್ರಾಂತಿಗೂ ಜಾರಬಹುದಾಗಿದೆ.

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ಅಂತೆಯೇ ಸೀಟು ಮುಂಭಾಗದಲ್ಲಿ ಟೇಬಲ್ ರಚನೆಯನ್ನು ನೀಡಲಾಗಿದ್ದು, ಲ್ಯಾಪ್ ಟಾಪ್ ನಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಬಹುದು ಅಥವಾ ಹಸಿವಾದಾಗ ಭೋಜನವನ್ನು ಸ್ವೀಕರಿಸಬಹುದಾಗಿದೆ.

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ಇನ್ನು ಕಾಕ್ ಪಿಟ್ ನಲ್ಲೂ (ವಿಮಾನದಲ್ಲಿ ಚಾಲಕನು ಕೂರುವ ಕೋಣೆ) ಅತ್ಯಾಧುನಿಕ ಹಾಗೂ ತಾಜಾ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ.

ಜಾಕಿ ಚಾನ್ ಖಾಸಗಿ ಜೆಟ್ - ಎಂಬ್ರೇಯರ್ ಲೆಗಸಿ 650

ಒಟ್ಟಿನಲ್ಲಿ ಜಾಕಿ ಚಾನ್ ಖಾಸಗಿ ಭದ್ರತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದು ವಿಶ್ವ ವಿಖ್ಯಾತ ನಟನಿಗೆ ಅತ್ಯಾಧುನಿಕ ಚಾಲನಾ ಅನುಭವ ನೀಡುತ್ತದೆ.

Most Read Articles

Kannada
English summary
Jackie Chan's Private Jet - Embraer Legacy 650
Story first published: Wednesday, May 27, 2015, 13:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X