ಭಾರತದ ಟಾಪ್ ಸಿಕ್ರೇಟ್ ವೆಪನ್ 'ಕಾಳಿ'

Written By:

ಗಡಿಯಾಚೆಗಿನ ಪಾಕಿಸ್ತಾನ ಮತ್ತು ಚೀನಾ ದೇಶಗಳಿಂದ ಪ್ರಕ್ಷುಬ್ಧ ವಾತಾವರಣವನ್ನು ಎದುರಿಸುತ್ತಿರುವ ಭಾರತ ರಕ್ಷಣಾ ಇಲಾಖೆಯ ಬಲವರ್ಧನೆಗಾಗಿ ಅತಿ ಹೆಚ್ಚು ಹೂಡಿಕೆ ಮಾಡುತ್ತಿದೆ. ಈ ಮೂಲಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿರ್ಮಿಸುತ್ತಿದೆ.

ಈ ಪೈಕಿ ಶತ್ರು ಪಾಳೇಯದಿಂದ ಪುಟಿದೆದ್ದು ಬರುವ ರಹಸ್ಯ ಮಿಸೈಲ್ ಗಳನ್ನು ಹೊಡೆದುರಳಿಸಬಲ್ಲ 'ಕಾಳಿ' ಮಾರಕ ರಕ್ಷಣಾ ಶಸ್ತ್ರಾಸ್ತ್ರವನ್ನು ಭಾರತ ಅಭಿವೃದ್ಧಿಗೊಳಿಸಿದೆ. ಈ ಸಂಬಂಧ ನೀವು ಅರಿತುಕೊಳ್ಳಬೇಕಾದ ಕೆಲವು ಆಸಕ್ತಿದಾಯಕ ವಿಚಾರಗಳನ್ನು ನಾವಿಲ್ಲಿ ಬಹಿರಂಗಪಡಿಸಲಿದ್ದೇವೆ.

ಭಾರತದ ಟಾಪ್ ಸಿಕ್ರೇಟ್ ವೆಪನ್ 'ಕಾಳಿ'

ಕಾಳಿ ಎಂಬುದರ ಪೂರ್ಣರೂಪ ಕಿಲೊ ಆಂಪಿಯರ್ ಲಿನಿಯರ್ ಇಂಜೆಕ್ಟರ್ (Kilo Ampere Linear Injector) ಎಂದಾಗಿದೆ. ಇದು ಅಚಾನಕ್ ಆಗಿ ಬರುವ ಮಿಸೈಲ್ ಅಥವಾ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಿದೆ.

ಭಾರತದ ಟಾಪ್ ಸಿಕ್ರೇಟ್ ವೆಪನ್ 'ಕಾಳಿ'

ಕಾಳಿ ಮಾರಕ ರಹಸ್ಯ ಅಸ್ತ್ರವನ್ನು ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ ಮತ್ತು ಬಾಬಾಅಣು ಸಂಶೋಧನಾ ಕೇಂದ್ರ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ಭಾರತದ ಟಾಪ್ ಸಿಕ್ರೇಟ್ ವೆಪನ್ 'ಕಾಳಿ'

ಪ್ರಾಥಮಿಕವಾಗಿ ಕೈಗಾರಿಕಾ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿತ್ತಾದರೂ ಕಾಳಿ ರಹಸ್ಯ ಅಸ್ತ್ರದ ಶಕ್ತಿಯನ್ನು ಅರಿದ ವಿಜ್ಞಾನಿಗಳು ದೇಶದ ಅತ್ಯಂತ ಶಕ್ತಿಶಾಲಿ ರಕ್ಷಣಾ ಆಯುಧವಾಗಿ ಮಾರ್ಪಾಡುಗೊಳಿಸಿದ್ದಾರೆ.

ಭಾರತದ ಟಾಪ್ ಸಿಕ್ರೇಟ್ ವೆಪನ್ 'ಕಾಳಿ'

ಸರಿ ಸುಮಾರು ಮೂರು ದಶಕಗಳಷ್ಟು ಹಿಂದೆ 1985ರಲ್ಲಿ ಅಂದಿನ ಬಾಬಾ ಅಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿದ್ದ ಡಾ. ಆರ್. ಚಿದಂಬರಂ ಕಾಳಿ ಮಾರಕ ಶಸ್ತ್ರಾಸ್ತ್ರದ ಯೋಜನೆಯನ್ನು ಆರಂಭಿಸಿದ್ದರು. ಬಳಿಕ ಇದರ ನಿರ್ಮಾಣ ಕಾಮಗಾರಿ 1989ರಲ್ಲಿ ಆರಂಭವಾಗಿತ್ತು.

ಭಾರತದ ಟಾಪ್ ಸಿಕ್ರೇಟ್ ವೆಪನ್ 'ಕಾಳಿ'

ಕಾಳಿ ಶ್ರೇಣಿಯ ಶಸ್ತ್ರಾಸ್ತ್ರಗಳಾದ ಕಾಳಿ 80, ಕಾಳಿ 200, ಕಾಳಿ 1000, ಕಾಳಿ 5000 ಮತ್ತು ಕಾಳಿ 10000 ಗಳು "ಸಿಂಗಲ್ ಶಾಟ್ ಪಲ್ಸ್ಡ್ ಗಿಗಾವ್ಯಾಟ್ ಎಲೆಕ್ಟ್ರಾನ್ ಆಕ್ಸೆಲೇಟರ್" ಗಳನ್ನು ಹೊಂದಿರುತ್ತದೆ.

ಭಾರತದ ಟಾಪ್ ಸಿಕ್ರೇಟ್ ವೆಪನ್ 'ಕಾಳಿ'

ಸ್ಯಾಟಲೈಟ್ ಗಳಿಂದ ಅಥವಾ ಇನ್ಯಾವುದೇ ದಾಳಿಯನ್ನು ಹೊಡೆದುರುಳಿಸಲು ಸಾಮರ್ಥ್ಯದ ಕಾಳಿ ಕದನ ಶಸ್ತ್ರಾಸ್ತ್ರವನ್ನು ರೇಖೀಯ ಎಲೆಕ್ಟ್ರಾನ್ ವೇಗವರ್ಧಕವಾಗಿ ಬಳಕೆ ಮಾಡಲಾಗುತ್ತದೆ.

ಭಾರತದ ಟಾಪ್ ಸಿಕ್ರೇಟ್ ವೆಪನ್ 'ಕಾಳಿ'

ಕಾಳಿಯನ್ನು ಒಂದು ಲೇಸರ್ ಆಯುಧವೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಅಂತೆಯೇ ಲೇಸರ್ ಆಯುಧಗಳ ವಿಭಿನ್ನವಾಗಿ ಇದು ಸಂಪೂರ್ಣವಾಗಿ ಧ್ವಂಸ ಮಾಡಲಿದೆ.

ಭಾರತದ ಟಾಪ್ ಸಿಕ್ರೇಟ್ ವೆಪನ್ 'ಕಾಳಿ'

ಅಂದ ಹಾಗೆ ವಿಜ್ಞಾನಿಗಳು ಈಗಲೂ ಕಾಳಿ ಅಭಿವೃದ್ಧಿಯಲ್ಲಿ ಮುಂದುವರಿದಿದ್ದು, ಮತ್ತಷ್ಟು ನಿಖರತೆಯನ್ನು ಕಾಯ್ದುಕೊಳ್ಳುವ ಇರಾದೆಯಲ್ಲಿದ್ದಾರೆ.

English summary
KALI: India's Top Secret Weapon And Facts You Should Know

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark