ದುಬಾರಿ ಫೋರ್ಡ್ ಮಸ್ಟಾಂಗ್ ಖರೀದಿಸಿದ ಕರುಣ್ ನಾಯರ್: ನಂಬರ್ ಪ್ಲೇಟ್ ಸೀಕ್ರೆಟ್ ಏನು ಗೊತ್ತಾ..?

Written By:

ಟೀಂ ಇಂಡಿಯಾದಲ್ಲಿ ಉತ್ತಮ ಫಾರ್ಮ ಕಂಡುಕೊಂಡಿರುವ ಕನ್ನಡಿಗ ಕರುಣ್ ನಾಯರ್, ಸದ್ಯಕ್ಕೆ ಟೀಂ ಇಂಡಿಯಾದ ಭರವಸೆಯ ಆಟಗಾರ. ಅಲ್ಲದೇ ಸತತ ಪರಿಶ್ರಮದೊಂದಿಗೆ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಅತ್ಯುತ್ತಮ ಪ್ರದರ್ಶನ ತೋರಿ ಹಲವು ಬಾರಿ ಗೆಲುವಿನ ರೂವಾರಿಯಾಗಿದ್ದಾರೆ.

ದುಬಾರಿ ಫೋರ್ಡ್ ಮಸ್ಟಾಂಗ್ ಖರೀದಿಸಿದ ಕರುಣ್ ನಾಯರ್: 'ಕೆಎ-03-ಎನ್ಎ 303' ನಂಬರ್ ಪ್ಲೆಟ್ ಸಿಕ್ರೇಟ್ ಏನು ಗೊತ್ತಾ..?

ಮೊನ್ನೆಯಷ್ಟೇ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತ್ರಿಶಕ ಸಾಧಿಸಿದ್ದ ಕರುಣ್ ನಾಯರ್, ಸೆಹ್ವಾಗ್ ನಂತರ ಉತ್ತಮ ಸಾಧನೆ ಮಾಡಿದ 2ನೇ ಭಾರತೀಯ ಆಟಗಾರನಾಗಿ ಹೊರಹೊಮ್ಮಿದ್ದರು. ಜೊತೆಗೆ ಏಕದಿನ ಪಂದ್ಯಗಳಲ್ಲೂ ಉತ್ತಮ ಸಾಧನೆ ತೊರಿದ್ದರು. ಸದ್ಯ ಬಿಡುವಿನಲ್ಲಿರುವ ಕರುಣ್ ನಾಯರ್ ಅತಿ ದುಬಾರಿ ಕಾರು ಒಂದನ್ನ ಖರೀದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ದುಬಾರಿ ಫೋರ್ಡ್ ಮಸ್ಟಾಂಗ್ ಖರೀದಿಸಿದ ಕರುಣ್ ನಾಯರ್: 'ಕೆಎ-03-ಎನ್ಎ 303' ನಂಬರ್ ಪ್ಲೆಟ್ ಸಿಕ್ರೇಟ್ ಏನು ಗೊತ್ತಾ..?

ದುಬಾರಿ ಸ್ಪೋರ್ಟ್ಸ್ ಕಾರುಗಳಲ್ಲಿ ಒಂದಾಗಿರುವ ಫೋರ್ಡ್ ಮಸ್ಟಾಂಗ್ ಖರೀದಿಸಿರುವ ಕ್ರಿಕೆಟರ್ ಕರುಣ್ ನಾಯರ್, ಕಾರಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಹಾಕಿಸಿದ್ದಾರೆ. ಆದ್ರೆ ಕರುಣ್ ಆಯ್ಕೆ ಮಾಡಿರುವ ನಂಬರ್ ಪ್ಲೇಟ್‌ನಲ್ಲಿ ಹತ್ತಾರು ಇಂಟ್ರೆಸ್ಟಿಂಗ್ ಕಥೆಗಳಿವೆ.

ದುಬಾರಿ ಫೋರ್ಡ್ ಮಸ್ಟಾಂಗ್ ಖರೀದಿಸಿದ ಕರುಣ್ ನಾಯರ್: 'ಕೆಎ-03-ಎನ್ಎ 303' ನಂಬರ್ ಪ್ಲೆಟ್ ಸಿಕ್ರೇಟ್ ಏನು ಗೊತ್ತಾ..?

ಸದ್ಯ ಕರುಣ್ ನಾಯರ್ ಖರೀದಿ ಮಾಡಿರುವ ದುಬಾರಿ ಕಾರಿನ ಹೆಸರು ಫೋರ್ಡ್ ಮಸ್ಟಾಂಗ್, ನಂಬರ್ ಪ್ಲೇಟ್ ವಿಶೇಷತೆಗಳಿಂದ ಕೂಡಿದ್ದು, ಕೆಎಂ 03, ಎನ್ಎ303 ಎಂಬುವುದಾಗಿದೆ. ಇನ್ನು ಕರುಣ್ ಆಯ್ದುಕೊಂಡಿರುವ ಸಂಖ್ಯೆಗಳು ತಮ್ಮ ಜೀವನದ ಒಂದೊಂದು ಸಾಧನೆಗಳನ್ನು ಬಿಚ್ಚಿಡುತ್ತವೆ.

ದುಬಾರಿ ಫೋರ್ಡ್ ಮಸ್ಟಾಂಗ್ ಖರೀದಿಸಿದ ಕರುಣ್ ನಾಯರ್: 'ಕೆಎ-03-ಎನ್ಎ 303' ನಂಬರ್ ಪ್ಲೆಟ್ ಸಿಕ್ರೇಟ್ ಏನು ಗೊತ್ತಾ..?

ಚೆನ್ನೈನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಕರುಣ್ ತ್ರಿಶಕ ದಾಖಲಿಸಿದ್ದರು. ಅದರ ಪ್ರತಿಬಿಂಬವೇ ನಂಬರ್ ಪ್ಲೇಟ್‌ನಲ್ಲಿರುವ ಎನ್ಎ 303 ಸಂಖ್ಯೆ. ಇನ್ನು ಕೆಎ 03 ನಂಬರ್ ಹಿಂದೆ ಮತ್ತೊಂದು ಕೌತುಕವಿದೆ. ಅದೇನಂದರೆ ಕೆಎ ಮೊದಲೆರಡು ಅಕ್ಷರಗಳು ಕರ್ನಾಟಕ ಸಂಖ್ಯೆಯನ್ನು ಸೂಚಿಸುತ್ತೆ. ಬದಲಾಗಿ ಕರುಣ್ ಅಕ್ಷರದ ಮೊದಲೆರಡು ಇಂಗ್ಲಿಷ್ ಅಕ್ಷರಗಳನ್ನು ಕೂಡಾ ಸೂಚಿಸುತ್ತೆ.

ದುಬಾರಿ ಫೋರ್ಡ್ ಮಸ್ಟಾಂಗ್ ಖರೀದಿಸಿದ ಕರುಣ್ ನಾಯರ್: 'ಕೆಎ-03-ಎನ್ಎ 303' ನಂಬರ್ ಪ್ಲೆಟ್ ಸಿಕ್ರೇಟ್ ಏನು ಗೊತ್ತಾ..?

ಇನ್ನು ಕಾರಿನಲ್ಲಿರುವ 03 ನಂಬರ್ ಹಿಂದೆಯೂ ಒಂದು ಕಥೆಯಿದೆ. ಕರುಣ್ ನಾಯರ್ ಆಡಿದ ಮೂರು ಟೆಸ್ಟ್‌ಗಳಲ್ಲಿ ಮಿಂಚಿದ್ದು ಮತ್ತು ತ್ರಿಶಕ ಸಾಧನೆ ಮಾಡಿದ್ದನ್ನು ಸೂಚಿಸುತ್ತೆ. ಹೀಗಾಗಿ ಕರುಣ್ ನಾಯರ್ ನಂಬರ್ ಹಿಂದಿನ ಸೀಕ್ರೆಟ್ ರೋಚಕವಾಗಿದೆ.

ದುಬಾರಿ ಫೋರ್ಡ್ ಮಸ್ಟಾಂಗ್ ಖರೀದಿಸಿದ ಕರುಣ್ ನಾಯರ್: 'ಕೆಎ-03-ಎನ್ಎ 303' ನಂಬರ್ ಪ್ಲೆಟ್ ಸಿಕ್ರೇಟ್ ಏನು ಗೊತ್ತಾ..?

ಆದ್ರೆ ಅದು ಏನೇ ಇರಲಿ, ಸದ್ಯ ಟೀಂ ಇಂಡಿಯಾದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಕರುಣ್ ನಾಯರ್, ಮುಂಬರುವ ದಿನಗಳಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡುವ ತವಕದಲ್ಲಿದ್ದಾರೆ. ಹೀಗಾಗಿ ಕರುಣ್ ನಾಯರ್‌‌ರಿಂದ ಇನ್ನಷ್ಟು ಸಾಧನೆಗಳು ಮೂಡಿ ಬರಲೆಂಬುವುದೇ ಕನ್ನಡಿಗರ ಆಶಯವಾಗಿದೆ.

ಫೋರ್ಡ್ ಮಸ್ಟಾಂಗ್ ಕಾರುಗಳ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಫೋರ್ಡ್ ford
English summary
Karun Nair, the second Indian Cricketer to score a triple century has bough himself a new Ford Mustang.
Please Wait while comments are loading...

Latest Photos