ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

ಮೋಟಾರು ವಾಹನ ಕಾಯ್ದೆಯ ಪ್ರಕಾರ ವಾಹನಗಳ ಮಾರ್ಪಾಡು ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವುದರಲ್ಲಿ ಕೇರಳ ರಾಜ್ಯವು ಎತ್ತಿದ ಕೈ. ಈ ರಾಜ್ಯದಲ್ಲಿರುವ ಹಲವಾರು ಮಾರ್ಪಡಿಸಿದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

ಪೊಲೀಸರ ಈ ಕ್ರಮದ ವಿರುದ್ಧ ಕೇರಳದ ಆಫ್ ರೋಡ್ ಬೈಕ್ ಪ್ರಿಯರ ಸಮುದಾಯವು ಪ್ರತಿಭಟನೆ ನಡೆಸಿತ್ತು. ಇತ್ತೀಚೆಗೆ, ಕೇರಳದ ಉನ್ನತ ಪೊಲೀಸ್ ಅಧಿಕಾರಿಗಳು ರ್‍ಯಾಲಿಯೊಂದನ್ನು ಆಯೋಜಿಸಿದ್ದರು. ಈ ರ್‍ಯಾಲಿಯಲ್ಲಿ ಮಾಡಿಫೈ ಮಾಡಲಾದ ಹಲವಾರು ಬೈಕುಗಳನ್ನು ಬಳಸಲಾಗಿತ್ತು.

ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

ಮಾಡಿಫೈ ಮಾಡಲಾದ ವಾಹನಗಳನ್ನು ತಮ್ಮ ಅಧಿಕೃತ ವಾಹನಗಳಾಗಿ ಬಳಸುತ್ತಿರುವ ಕೇರಳ ಪೊಲೀಸ್ ಅಧಿಕಾರಿಗಳ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕಿಸಲಾಗುತ್ತಿದೆ. ತ್ರಿಶೂರ್ ಪೊಲೀಸ್ ಆಯುಕ್ತರಾದ ಯತೀಶ್ ಚಂದ್ರರವರು ಪೊಲೀಸ್ ಸ್ಮೃತಿ ದಿವಸ್ ಅಂಗವಾಗಿ ಬೈಕ್ ರ್‍ಯಾಲಿಯನ್ನು ಆಯೋಜಿಸಿದ್ದರು.

ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

40 ಕಿ.ಮೀ ಉದ್ದದ ಈ ರ್‍ಯಾಲಿಯಲ್ಲಿ ಕೇರಳದ ವಿವಿಧ ಇಲಾಖೆಗಳ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಇದರ ಜೊತೆಗೆ ಜನಪ್ರಿಯ ಮಲಯಾಳಂ ನಟ ಟೋವಿನೋ ಕೂಡ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

ಪೊಲೀಸರು ಹಾಗೂ ಅವರ ಸಂಘಟಕರಿಗೆ ಇದು ಭರ್ಜರಿ ಯಶಸ್ಸನ್ನು ತಂದು ಕೊಟ್ಟರೂ, ರ್‍ಯಾಲಿಯಲ್ಲಿ ಮಾಡಿಫೈ ಮಾಡಲಾದ ಅನೇಕ ಬೈಕುಗಳನ್ನು ಬಳಸಿಲಾಗಿದ್ದ ಕಾರಣಕ್ಕೆ ಕೇರಳದ ನಾಗರಿಕರು ಪೊಲೀಸರ ಈ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ.

ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

ಪೊಲೀಸ್ ಕಮೀಷನರ್‍‍‍ರವರು ಸವಾರಿ ಮಾಡುತ್ತಿದ್ದ ಬೈಕ್ ಅನ್ನು ಸಹ ಮಾಡಿಫೈ ಮಾಡಲಾಗಿತ್ತು. ಈ ಬೈಕಿನಲ್ಲಿರುವ ಅಲಾಯ್ ವ್ಹೀಲ್, ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಹಾಗೂ ಹ್ಯಾಂಡಲ್‍‍ಬಾರ್‍‍ಗಳನ್ನು ಮಾಡಿಫೈ ಮಾಡಲಾಗಿದೆ. ಈ ಎಲ್ಲಾ ಮಾಡಿಫಿಕೇಷನ್‍‍ಗಳು ಕಾನೂನುಬಾಹಿರವಾಗಿದ್ದು, ಪೊಲೀಸರು ಈ ಬೈಕುಗಳನ್ನು ವಶಕ್ಕೆ ಪಡೆಯಬಹುದಾಗಿದೆ.

ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

ಆದರೆ ಇದುವರೆಗೂ ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಯಾವುದೇ ಬೈಕುಗಳನ್ನು ವಶಕ್ಕೆ ಪಡೆದ ಹಾಗೂ ಅವುಗಳನ್ನು ಸವಾರಿ ಮಾಡಿದವರ ಮೇಲೆ ಕ್ರಮ ಕೈಗೊಂಡ ಪ್ರಕರಣಗಳು ವರದಿಯಾಗಿಲ್ಲ. ಕಮೀಷನರ್‍‍ರವರ ಜೊತೆಗೆ ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಇತರ ಪೊಲೀಸರೂ ಸಹ ಮಾಡಿಫೈ ಮಾಡಲಾದ ಬೈಕುಗಳನ್ನು ಬಳಸಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

ವರದಿಗಳ ಪ್ರಕಾರ ಹಿರಿಯ ಪೊಲೀಸ್ ಅಧಿಕಾರಿಗಳು ಆಯೋಜಿಸಿದ್ದ ಈ ರ್‍ಯಾಲಿಯಲ್ಲಿ ಯೂನಿಫಾರಂ ಧರಿಸಿದ್ದ 200ಕ್ಕೂ ಹೆಚ್ಚು ಪೊಲೀಸರು ಭಾಗವಹಿಸಿದ್ದರು. ಪೊಲೀಸರು ಈ ರ್‍ಯಾಲಿಯಲ್ಲಿ ಬಳಸಿದ್ದ ಬೈಕುಗಳು ಅವರ ಸ್ವಂತದ ಬೈಕುಗಳೋ ಅಥವಾ ಬೇರೆಡೆಯಿಂದ ಅವುಗಳನ್ನು ತರಲಾಗಿತ್ತೋ ಎಂಬುದು ಇನ್ನೂ ತಿಳಿದು ಬಂದಿಲ್ಲ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

ಆದರೆ ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಎಲ್ಲಾ ಬೈಕುಗಳು ರಾಯಲ್ ಎನ್‍‍ಫೀಲ್ಡ್ ಕಂಪನಿಯ ಬೈಕುಗಳಾಗಿವೆ. ಈ ಹಿಂದೆ ಕೇರಳ ಪೊಲೀಸರು ಮಾಡಿಫೈಗೊಳಿಸಲಾಗಿದ್ದ ಬೈಕ್, ಕಾರ್ ಹಾಗೂ ಎಸ್‍‍‍ಯುವಿಗಳನ್ನು ವಶಕ್ಕೆ ಪಡೆದಿದ್ದರು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

ಇದರ ಜೊತೆಗೆ ಮೋಟಾರ್ ವೆಹಿಕಲ್ ಇಲಾಖೆಯು ಮಾಡಿಫೈ ವಾಹನಗಳನ್ನು ಪ್ರದರ್ಶಿಸುತ್ತಿದ್ದ ಆಟೋಮೊಬೈಲ್ ಪ್ರದರ್ಶನದ ಮೇಲೂ ದಾಳಿ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿತ್ತು. ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಾಡಿಫೈ ವಾಹನಗಳನ್ನು ಬಳಸುವ ರಾಜ್ಯದ ಆಫ್ ರೋಡಿಂಗ್ ಸಮುದಾಯವು ಮಾಡಿಫೈ ವಾಹನಗಳನ್ನು ವಶಕ್ಕೆ ಪಡೆಯಬಾರದೆಂದು ಪೊಲೀಸರಿಗೆ ಮನವಿಯನ್ನು ಸಲ್ಲಿಸಿತ್ತು.

ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

ಕೇರಳದಲ್ಲಿರುವ ಆಫ್ ರೋಡಿಂಗ್ ಸಮುದಾಯವು ಪ್ರವಾಹದ ಸಮಯದಲ್ಲಿ ಜನರನ್ನು ರಕ್ಷಿಸಲು ಹಾಗೂ ಅವರಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ದೊಡ್ಡ ಪಾತ್ರವನ್ನು ವಹಿಸುತ್ತದೆ. ಪೊಲೀಸರೂ ಸಹ ಮಾಡಿಫೈ ಮಾಡಲಾದ ವಾಹನಗಳನ್ನು ಕೇರಳದ ನೀರು ತುಂಬಿದ ಬೀದಿಗಳಲ್ಲಿ ಓಡಾಡಲು ಹಾಗೂ ಪ್ರವಾಹ ಪೀಡಿತ ಪ್ರದೇಶಗಳನ್ನು ತಲುಪಲು ಬಳಸಿದ್ದರು.

ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ ಪೊಲೀಸರು

ಆದರೆ ಈ ಹಿಂದೆ ಇದೇ ಪೊಲೀಸರು ಪ್ರವಾಹದಲ್ಲಿ ಬಳಸಿದ್ದ ಮಾಡಿಫೈ ಎಸ್‍‍ಯುವಿಯ ವಿರುದ್ಧವೂ ದಂಡ ವಿಧಿಸಿದ್ದರು. ಈ ರ್‍ಯಾಲಿಯಲ್ಲಿ ಬಳಸಲಾಗಿದ್ದ ಬೈಕುಗಳ ವಿರುದ್ದ ಪೊಲೀಸ್ ಇಲಾಖೆ ಅಥವಾ ಮೋಟಾರ್ ವೆಹಿಕಲ್ ಇಲಾಖೆಯು ಯಾವುದಾದರೂ ಕ್ರಮಗಳನ್ನು ಕೈಗೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಪೊಲೀಸರ ಈ ಕಾರ್ಯದ ವಿರುದ್ಧ ಸಿಡಿದೆದ್ದಿರುವ ಕೇರಳ ನಾಗರೀಕರು ರ್‍ಯಾಲಿ ಆಯೋಜಿಸಿದ್ದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

Source: Vandibhranthanmar

Most Read Articles

Kannada
English summary
Kerala cop conducts bike rally with illegally modified bikes - Read in Kannada
Story first published: Wednesday, October 23, 2019, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X