ಚಂಡಮಾರುತಕ್ಕೆ ಸಿಲುಕಿದ ವಿಮಾನ; ಕೊನೆಯ ಕ್ಷಣ ಸೃಷ್ಟಿಸಿದ ಆತಂಕ!

Written By:

2010ರಲ್ಲಿ ಮಂಗಳೂರು ಬಜ್ಪೆಯಲ್ಲಿ ಸಂಭವಿಸಿದ ವಿಮಾನ ದುರಂತದ ಕರಾಳ ಚಿತ್ರಗಳು ಇನ್ನು ಮನದಲ್ಲಿ ಮಾಸದೇ ಉಳಿದಿದೆ. ಹಾಗಿರುವಾಗ ಅತ್ತ ಹಾಲೆಂಡ್ ನಲ್ಲಿ ಪ್ರಕೃತಿ ವಿಕೋಪದಿಂದ ಸ್ವಲ್ಪದರಲ್ಲೇ ವಿಮಾನವೊಂದು ಪಾರಾಗಿರುವ ಘಟನೆ ವರದಿಯಾಗಿದೆ.

ಈ ರೋಚಕ ವೀಡಿಯೋ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ ಮೂರು ದಿನದೊಳಗೆ 4.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಭಾರಿ ಕುತೂಹಲ ಕೆರಳಿಸಿದೆ. ಸದ್ಯ ಪ್ರಯಾಣಿಕರು ಅಬ್ಬಾ ಬಚಾವ್ ಎಂದು ದೇವರಿಗೆ ಹರಕೆ ಸಲ್ಲಿಸಿದ್ದಾರೆ.

ಚಂಡಮಾರುತದ ತಾಳಕ್ಕೆ ತಕ್ಕಂತೆ ಕುಣಿದ ವಿಮಾನ

ಹಾಲೆಂಡ್‌ನ ಆರ್ಮ್‌ಸ್ಟರ್ ಡ್ಯಾಮ್ ಶಿಫೋಲ್ (Amsterdam Airport Schiphol) ಅಂತರಾಷ್ಟ್ರೀಯ ವಿಮಾನದಿಂದ ಈ ರೋಚಕ ಕ್ಷಣಗಳನ್ನು ಸೆರೆ ಹಿಡಿಯಲಾಗಿದೆ.

ಚಂಡಮಾರುತದ ತಾಳಕ್ಕೆ ತಕ್ಕಂತೆ ಕುಣಿದ ವಿಮಾನ

ಪ್ರಯಾಣಿಕರು ಹೊತ್ತುಕೊಂಡು ಬರುತ್ತಿದ್ದ ಕೆಎಲ್ ಎಂ ಬಿ777 ವಿಮಾನವು ಇನ್ನೇನು ಲ್ಯಾಂಡಿಂಗ್ ಆಗುವಷ್ಟರಲ್ಲಿ ಪ್ರಬಲ ಚಂಡಮಾರುತವು ಬಂದಪ್ಪಳಿಸಿತ್ತು.

ಚಂಡಮಾರುತದ ತಾಳಕ್ಕೆ ತಕ್ಕಂತೆ ಕುಣಿದ ವಿಮಾನ

ಪ್ರಬಲವಾಗಿ ಬೀಸಿದ ಗಾಳಿಯಿಂದಾಗಿ ವಿಮಾನವೂ ಎಡಕ್ಕೂ ಬಲಕ್ಕೂ ವಾಲುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ದುರಂತವೊಂದು ತಪ್ಪಿದೆ.

ಚಂಡಮಾರುತದ ತಾಳಕ್ಕೆ ತಕ್ಕಂತೆ ಕುಣಿದ ವಿಮಾನ

ಹಮಾಮಾನ ವೈಪರೀತ್ಯದ ಬಗ್ಗೆ ಅಧಿಕಾರಿಗಳು ಮುನ್ಸೂಚನೆ ನೀಡಿದರೂ ಅನಿರೀಕ್ಷಿತವಾಗಿ ಬೀಸಿದ ಬಿರುಗಾಳಿಯಿಂದಾಗಿ ಪೈಲಟ್ ಬಳಿ ವಿಮಾನ ಕೆಳಗಿಳಿಸದೇ ಬೇರೆ ಮಾರ್ಗ ಇರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಚಂಡಮಾರುತದ ತಾಳಕ್ಕೆ ತಕ್ಕಂತೆ ಕುಣಿದ ವಿಮಾನ

ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರು ಸಂಚರಿಸುತ್ತಿದ್ದರು ಎಂಬುದು ಇನ್ನಷ್ಟು ತಿಳಿದು ಬರಬೇಕಿದೆ. ಸದ್ಯ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಚಂಡಮಾರುತದ ತಾಳಕ್ಕೆ ತಕ್ಕಂತೆ ಕುಣಿದ ವಿಮಾನ

ಹಾಲೆಂಡ್ ನಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಹಲವಾರು ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಈ ರೋಚಕ ವೀಡಿಯೋ ವೀಕ್ಷಣೆಯಾಗಿ ಮುಂದೆ ಕ್ಲಿಕ್ಕಿಸಿರಿ.

ವೀಡಿಯೋ ವೀಕ್ಷಿಸಿ

ಚಂಡಮಾರುತಕ್ಕೆ ಸಿಲುಕಿದ ವಿಮಾನ; ಕೊನೆಯ ಕ್ಷಣ ಸೃಷ್ಟಿಸಿದ ಆತಂಕ!

Read more on ವಿಮಾನ plane
English summary
KLM B777 approach rather rough plane rolls from left to right. just before the runway hit a dangerous roll to the right.
Story first published: Tuesday, July 28, 2015, 12:19 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark