ಲಂಬೋರ್ಗಿನಿ ಸೂಪರ್ ಕಾರು ಶೈಲಿಯ ಟೊಯೊಟಾ ಮಿನಿವ್ಯಾನ್

Written By:

ಐಕಾನಿಕ್ ಲಂಬೋರ್ನಿಗಿ ಶೈಲಿಗೆ ಮಾರ್ಪಾಡುಗೊಂಡಿರುವ ಟೊಯೊಟಾ ಹೈ ಏಸ್ (Toyota Hi Ace) ಕುರಿತು ಹೇಳುವಾಗ ಇದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಬೇಕಾಗುತ್ತದೆ. ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಟೊಯೊಟಾದಿಂದ ಮಾರಾಟವಾಗುತ್ತಿರುವ ಐಷಾರಾಮಿ ಮಿನಿ ವ್ಯಾನ್ ಗಳಲ್ಲಿ ಇದೂ ಒಂದಾಗಿದೆ.

ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಜನಪ್ರಿಯತೆಗೆ ಪಾತ್ರವಾಗಿರುವ ಟೊಯೊಟಾ ಹೈ ಏಸ್ ವ್ಯಾನ್ ಅನ್ನು ಲಂಬೋರ್ಗಿನಿ ಶೈಲಿಯಲ್ಲಿ ಮಾರ್ಪಾಡುಗೊಳಿಸಲಾಗಿದೆ. ಅಲ್ಲದೆ ಇದಕ್ಕೆ ಎಸ್.ಎ.ಡಿ ಕಸ್ಟಮ್ ಎಂದು ವಿಶ್ಲೇಷಣೆ ಮಾಡಲಾಗಿದೆ.

To Follow DriveSpark On Facebook, Click The Like Button
ಲಂಬೋ ಶೈಲಿಯ ಟೊಯೊಟಾ ಹೈ ಏಸ್

ಕುಗ್ಗಿದ ಸಸ್ಪೆನ್ಷನ್, ಆಕರ್ಷಕ ಚಕ್ರಗಳು ಜೊತೆಗೆ ಇಟಲಿಯ ಸೂಪರ್ ಕಾರಿಗೆ ಹೊಂದಿಕೆಯಾಗುವ ರೀತಿಯಲ್ಲಿ ಬಾಡಿ ಕಿಟ್ ವಿನ್ಯಾಸಗೊಳಿಸಲಾಗಿದೆ.

ಲಂಬೋ ಶೈಲಿಯ ಟೊಯೊಟಾ ಹೈ ಏಸ್

ಕೇವಲ ಲಂಬೋರ್ಗಿನಿ ಮಾತ್ರವಲ್ಲದೆ ಇಟಲಿಯ ಮಗದೊಂದು ಐಕಾನಿಕ್ ಸೂಪರ್ ಕಾರು ತಯಾರಿಕ ಸಂಸ್ಥೆ ಫರಾರಿ ಮಾದರಿಯಿಂದಲೂ ಸ್ಪೂರ್ತಿ ಪಡೆದು ಇದನ್ನು ರಚಿಸಲಾಗಿದೆ.

ಲಂಬೋ ಶೈಲಿಯ ಟೊಯೊಟಾ ಹೈ ಏಸ್

ಆಧುನಿಕ ವಾಹನ ಮಾರುಕಟ್ಟೆಗಳಲ್ಲಿ ನೈಜ ಮಾದರಿಗಿಂತಲೂ ಕಸ್ಟಮೈಸ್ಡ್ ಅಥವಾ ಮಾರ್ಪಾಡುಗೊಳಿಸುವ ಇಂತಹ ವಾಹನಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ತಮ್ಮ ವಾಹನವು ಇತರ ವಾಹನಗಿಂತ ವಿಶಿಷ್ಟವಾಗಿ ಗುರುತಿಸಬೇಕೆಂಬ ಬಯಕೆಯೇ ಇಂತಹ ನಾವೀನ್ಯ ಸೃಷ್ಟಿಗೆ ಕಾರಣವಾಗಿದೆ.

ಲಂಬೋ ಶೈಲಿಯ ಟೊಯೊಟಾ ಹೈ ಏಸ್

ವ್ಯಾನ್ ಬದಿಯಲ್ಲಿ ಸ್ಟಿಂಗರ್ (Stinger) ಡಿಕಾಲ್ಸ್ ಎದ್ದು ಕಾಣಿಸುತ್ತಿದ್ದು, ಎಲ್‌ಇಡಿ ಡೇಲೈಟ್ ರನ್ನಿಂಗ್ ಲೈಟ್ಸ್ ಕಿಟ್, ಬ್ಲ್ಯಾಕ್ ವಿಂಡೋ, ರೇಸ್ ಸೂಚಕವಾದ ಕಪ್ಪು ಟೈಲ್ ಲೈಟ್ ಗಳು ಪ್ರಮುಖ ಆಕರ್ಷಣೆಯಾಗಿದೆ.

ಲಂಬೋ ಶೈಲಿಯ ಟೊಯೊಟಾ ಹೈ ಏಸ್

ಒಟ್ಟಿನಲ್ಲಿ ಕಪ್ಪು ವರ್ಣದ ಮಿಶ್ರಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇನ್ನು ಮೇಲ್ಪಾಗದಲ್ಲಿ ಸೂಪರ್ ಕಾರಿನಲ್ಲಿರುವುದಕ್ಕೆ ಸಮಾನವಾದ ರೂಫ್ ಲೈನ್ ಸಹ ಕಾಣಬಹುದಾಗಿದೆ.

ಲಂಬೋ ಶೈಲಿಯ ಟೊಯೊಟಾ ಹೈ ಏಸ್

ಹಾಗಿದ್ದರೂ ಈ ಲಿಮಿಟೆಡ್ ಮಾದರಿಯ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ ಎಂಬುದು ತಿಳಿದು ಬಂದಿದೆ. ಇದು 1ಕೆಡಿ-ಎಫ್‌ಟಿವಿ 3.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಲಂಬೋ ಶೈಲಿಯ ಟೊಯೊಟಾ ಹೈ ಏಸ್

ಪ್ರಸ್ತುತ ಟೊಯೊಟಾ ಏಸ್ 13 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

English summary
Lambo Styled Toyota Hi Ace Minivan
Story first published: Thursday, August 20, 2015, 9:41 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark